ಕಾಂಗ್ರೆಸ್‌ನದು ದ್ವಿಮುಖ ನೀತಿ. ಇಷ್ಟು ದಿನ ಜನರನ್ನ ಮರಳು ಮಾಡಿದ್ದಾರೆ ಇನ್ನುಮುಂದೆ ಆಟ ನಡೆಯಲ್ಲ. ಕೈ ನಾಯಕರಿಗೆ ಸವಾಲ್ ಹಾಕಿದ ಬೊಮ್ಮಾಯಿ ಶಿಗ್ಗಾವಿ ಅಖಾಡಕ್ಕೆ ಬರುವಂತೆ ಕೈ ನಾಯಕರಿಗೆ ಪಂಥಹ್ವಾನ ಕೊಟ್ಟ ಸಿಎಂ.
ಹಾವೇರಿ (ಏ.7) : ನಾನು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತೇನೆ.ಬರುವ 5 ವರ್ಷ ನಾನು ಈ 15 ವರ್ಷಗಳಲ್ಲಿ ಮಾಡಿದಷ್ಟು ಕೆಲಸ ಮಾಡಿ ತೋರಿಸ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೇರೆ ಬೇರೆ ಕ್ಷೇತ್ರಗಳಲ್ಲಿ ಆಹ್ವಾನ ಇದ್ದರೂ ನನಗೆ ಪ್ರೀತಿ ವಿಶ್ವಾಸ, ದುಡಿಮೆ ಇರೋ ಕಡೆ ಅಂದರೆ ಇಲ್ಲಿ ಶಿಗ್ಗಾವಿ(Shiggavi assembly constituency)ಯಲ್ಲಿ ಪರೀಕ್ಷೆಗೆ ಇಳಿಯುತ್ತೇನೆ. ನನ್ನ ಸ್ಪರ್ಧೆ ಶಿಗ್ಗಾವಿ ಕ್ಷೇತ್ರದಲ್ಲೇ ಎಂದು ಬಹಿರಂಗವಾಗಿ ಘೋಷಿಸಿದರು.
undefined
ಕುಂಬಳಕಾಯಿ ಕಳ್ಳರು: ಕಾಂಗ್ರೆಸ್ಸಿಗೆ ಸಿಎಂ ಬೊಮ್ಮಾಯಿ ಚಾಟಿ
ಈ ಹಿಂದೆ ಶಿಗ್ಗಾವಿ ಕ್ಷೇತ್ರದಲ್ಲಿ ಬಹಳಷ್ಟು ಅಪಪ್ರಚಾರ ನಡೆಯುತ್ತಿತ್ತು. ಪತ್ರಿಕೆಯೊಂದರಲ್ಲಿ ವರದಿ ಬಂದಿತ್ತು. ಬೊಮ್ಮಾಯಿ ಗೆಲ್ಲಲು ಸಾಧ್ಯವಿಲ್ಲ ಅಂತಾ ಬರೆದಿದ್ದರು. ಈಗಲೂ ಏನೇನು ಪ್ರಚಾರ ಮಾಡುತ್ತಾರೆ. ಬೊಮ್ಮಾಯಿಯನ್ನ ಸೋಲಿಸಲು ದೆಹಲಿ, ಬೆಂಗಳೂರಿನಲ್ಲಿ ಕುಳಿತು ಪ್ಲ್ಯಾನ್ ಮಾಡಿದ್ದೆ ಮಾಡಿದ್ದು ನನ್ನ ಕಟ್ಟಿಹಾಕಲು ಏನೆಲ್ಲ ಕುತಂತ್ರಗಳನ್ನು ಮಾಡಿದರು. ಆದರೆ ಜನರು ನನ್ನ ಮೇಲೆ ವಿಶ್ವಾಸವಿದೆ. ಅವರು ಅಭಿವೃದ್ಧಿಪರ ಇದ್ದಾರೆ. ವಿರೋಧಿಗಳು ಏನೇ ಅಪಪ್ರಚಾರ ಮಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ವಿರೋಧಿಗಳ ತಲೆಕೆಡಿಸಿಕೊಳ್ಳುವುದಿಲ್ಲ ನನಗೆ ಕ್ಷೇತ್ರದ ಜನರ ಮೇಲೆ ವಿಶ್ವಾಸವಿದೆ. ಕ್ಷೇತ್ರದ ಜನರು ಆಶೀರ್ವಾದದಿಂದ ರಾಜ್ಯದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನೀರಾವರಿ ಯೋಜನೆ ನನ್ನ ಅಧಿಕಾರಾವಧಿಯಲ್ಲಿ ಮಾಡಿ, ನಾನೇ ಉದ್ಘಾಟನೆ ಕೆಲಸ ಮುಗಿಸಿದ್ದೇನೆ ಎಂದರು.
ಇವತ್ತು ಪ್ರೀತಿ ವಿಶ್ವಾಸ ಒಂದಾಗಿದೆ. ಪ್ರೀತಿ ನನ್ನ ಮೇಲಿತ್ತು ವಿಶ್ವಾಸ ಅಲ್ಲಿತ್ತು. ನನಗೆ ಬೇರೆ ಬೇರೆ ಕ್ಷೇತ್ರದಲ್ಲಿ ಆಹ್ವಾನ ಇದ್ದರೂ, ನನಗೆ ಎಲ್ಲಿ ದುಡಿಮೆ ಇದೆಯೋ ಅಲ್ಲೆ ನನ್ನ ಪರೀಕ್ಷೆ ಆಗಬೇಕು ಅಂತಾ ಶಿಗ್ಗಾವಿ ಯಿಂದಲೇ ನನ್ನ ಸ್ಪರ್ಧಿಸುತ್ತಿದ್ದೇನೆ. ಕೆಲವರು ಕ್ಷೇತ್ರ ಹುಡುಕುತ್ತಿದ್ದಾರೆ, ಕ್ಷೇತ್ರ ಅಭಿವೃದ್ಧಿ ಮಾಡದವರು ರಾಜ್ಯ ಅಭಿವೃದ್ಧಿ ಮಾಡುತ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
ಬಿಜೆಪಿ ಒಂದು ಸಮುದ್ರ
ಬಿಜೆಪಿ ಒಂದು ಸಮುದ್ರ ಇದ್ದಹಾಗೆ. ಇಲ್ಲಿ ಹೊಳೆಗಳು ಉಳಿದಿಲ್ಲ, ಸಣ್ಣ ಹಳ್ಳಗಳು ಉಳಿದಾವು. ಎಲ್ಲಾ ನೀರು ಸಮುದ್ರಕ್ಕೆ ಸೇರಲೇಬೇಕು. ಚುನಾವಣೆಯಲ್ಲಿ ಸಮುದ್ರ ಮಂಥನ ಆಗುತ್ತದೆ. ಏನೇ ವಿಷ ಬಂದ್ರು ಜನರಿಗೆ ಅಮೃತ ಕೊಡುತ್ತೇವೆ ವಿರೋದ ಪಕ್ಷಗಳು ಏನೇ ಅಪಪ್ರಚಾರ ಮಾಡಲಿ. ನಾನು ಮೀಸಲಾತಿ ನಿರ್ಣಯ ಮಾಡಿದ ಮೇಲೆ ವಿರೋದ ಪಕ್ಷಗಳು ತಲೆಮೇಲೆ ಕೈ ಇಟ್ಟುಕೊಂಡು ಕುಳಿತಿದ್ದಾರೆ ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇನೆ, ಆ ಸಾಹಸ ನಿಮ್ಮ ಬಸವರಾಜ್ ಬೊಮ್ಮಾಯಿ ಮಾಡಿದ್ದಾನೆ. ಇದರ ಪರವಾಗಿ ನೀವು ಇದೀರೋ ಇಲ್ಲವೋ ಹೇಳಿ ಎಂದರು.
ನನ್ನನ್ನು ಬಿಜೆಪಿ ಪಕ್ಷ ಕರೆದಿಲ್ಲ, ಬೊಮ್ಮಾಯಿ ಮಾಮ ಕರೆದಿದ್ದಾರೆ: ಸುದೀಪ್
ಕಾಂಗ್ರೆಸ್‌ನದು ದ್ವಿಮುಖ ನೀತಿ. ಇಷ್ಟು ದಿನ ಜನರನ್ನ ಮರಳು ಮಾಡಿದ್ದಾರೆ ಇನ್ನುಮುಂದೆ ಆಟ ನಡೆಯಲ್ಲ. ಕೈ ನಾಯಕರಿಗೆ ಸವಾಲ್ ಹಾಕಿದ ಬೊಮ್ಮಾಯಿ ಶಿಗ್ಗಾವಿ ಅಖಾಡಕ್ಕೆ ಬರುವಂತೆ ಕೈ ನಾಯಕರಿಗೆ ಪಂಥಹ್ವಾನ ಕೊಟ್ಟ ಸಿಎಂ. ನನಗೆ ಅವಿರೋದ ಆಯ್ಕೆ ಬೇಡ, ನನಗೆ ಕುಸ್ತಿ ಬೇಕು. ಕಣಕ್ಕೆ ಯಾರು ಬರುತ್ತಿರೊ ಬನ್ನಿ. ಅಂದಾಗಲೇ ಯಾರ ಶಕ್ತಿ ಎಷ್ಟು ಅಂತಾ ಗೊತ್ತಾಗುತ್ತದೆ ಸೆಡ್ಡು ಹೊಡೆದೆ ಬಿಡೋದು, ಕುಸ್ತಿ ಪಟ್ಟುಗಳು ಪ್ರ್ಯಾಕ್ಟೀಸ್ ಮಾಡಕೊಂಡೆ ಬನ್ನಿ. ಹೆಚ್ಚು ಬಹುಮತದಿಂದ ಆರಿಸಿ ತರುವ ಪ್ರಯತ್ನ ಮಾಡೋಣ ಎಂದರು.