ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಆಯೋಗ, ಜಿಲ್ಲಾಡಳಿತ ಮತ್ತು ರಾಜಕೀಯ ಪಕ್ಷಗಳು ಪೂರ್ವ ತಮ್ಮ ತಮ್ಮ ಕರ್ತವ್ಯಗಳ ಪೂರ್ವ ಸಿದ್ಧತೆಗಳ ವೇಗವನ್ನು ಇನ್ನಷ್ಟುಹೆಚ್ಚಿಸಿವೆ, ಇದರ ನಡುವೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಹುಡುಕಾಟವು ಕೊನೆಗೊಳ್ಳದ ಕಾರಣಕ್ಕೆ ಕಣದಲ್ಲಿ ಸ್ಪಷ್ಟಚಿತ್ರಣಸಿಗದಂತಾಗಿದೆ.
ರಾಮಕೃಷ್ಣ ದಾಸರಿ
ರಾಯಚೂರು (ಮಾ.31) : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಆಯೋಗ, ಜಿಲ್ಲಾಡಳಿತ ಮತ್ತು ರಾಜಕೀಯ ಪಕ್ಷಗಳು ಪೂರ್ವ ತಮ್ಮ ತಮ್ಮ ಕರ್ತವ್ಯಗಳ ಪೂರ್ವ ಸಿದ್ಧತೆಗಳ ವೇಗವನ್ನು ಇನ್ನಷ್ಟುಹೆಚ್ಚಿಸಿವೆ, ಇದರ ನಡುವೆ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಹುಡುಕಾಟವು ಕೊನೆಗೊಳ್ಳದ ಕಾರಣಕ್ಕೆ ಕಣದಲ್ಲಿ ಸ್ಪಷ್ಟಚಿತ್ರಣಸಿಗದಂತಾಗಿದೆ.
ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ, ಪ್ರಾದೇಶಿಕಗಳಿಂದ ಸಮರ್ಥ ಅಭ್ಯರ್ಥಿಗಳ ಆಯ್ಕೆಯು ವಿಳಂಬವಾಗುತ್ತಲೆಯೇ ಬರುತ್ತಿರುವುದರಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ, ಪ್ರಚಾರಕ್ಕೆ ಹಿನ್ನಡೆ ಉಂಟಾಗುತ್ತಿದೆ. ಕಣದಲ್ಲಿ ಹಾಲಿ ಶಾಸಕರು, ಪರಾಭವಗೊಂಡ ಅಭ್ಯರ್ಥಿಗಳ ಜೊತೆಗೆ ರಾಜಕೀಯ ಪ್ರಭಾವ, ಧರ್ಮ, ಜಾತಿ ಹಾಗೂ ಹಣದ ಬಲದಡಿ ಮುಖಂಡರು ಟಿಕೆಟ್ಗಾಗಿ ಕಸರತ್ತು ನಡೆಸಿದ್ದು, ಏಳರಲ್ಲಿ ಯಾವ ಕ್ಷೇತ್ರದಲ್ಲಿಯೂ ಯಾರು, ಯಾವ ಪಕ್ಷಗಳಿಂದ ಸ್ಪರ್ಧಿಸುತ್ತಾರೆ ಎನ್ನುವ ಗೊಂದಲ ನಿರ್ಮಾಣಗೊಂಡಿದೆ.
ರಾಯಚೂರು: ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್
ಏಳರಲ್ಲಿ ಐದು ಕ್ಷೇತ್ರ ಮೀಸಲು:
ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಮೀಸಲು ಕ್ಷೇತ್ರಗಳಾಗಿರುವುದು ವಿಶೇಷವಾಗಿದೆ. ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ ಮತ್ತು ಮಸ್ಕಿ ಕ್ಷೇತ್ರಗಳು ಪರಿಶಿಷ್ಟಪಂಗಡಕ್ಕೆ ಮೀಸಲಾಗಿದ್ದರೆ, ಲಿಂಗಸುಗೂರು ಕ್ಷೇತ್ರ ಪರಿಶಿಷ್ಟಜಾತಿಗೆ ಮೀಸಲಾಗಿದೆ ಇನ್ನುಳಿದ ಎರಡು ಕ್ಷೇತ್ರಗಳಾದ ರಾಯಚೂರು ನಗರ ಮತ್ತು ಸಿಂಧನೂರು ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಕಳೆದ ಚುನಾವಣೆಯಲ್ಲಿ ಒಟ್ಟು ಏಳು ಜನ ಶಾಸಕರಲ್ಲಿ ಕಾಂಗ್ರೆಸ್ 3, ಬಿಜೆಪಿ ಮತ್ತು ಜೆಡಿಎಸ್ ತಲಾ ಇಬ್ಬರು ಶಾಸಕರಿದ್ದಾರೆ. ಇದರಲ್ಲಿ ರಾಯಚೂರು ಗ್ರಾಮೀಣ, ಲಿಂಗಸುಗೂರು ಮತ್ತು ಮಸ್ಕಿಯಲ್ಲಿ ಕಾಂಗ್ರೆಸ್, ರಾಯಚೂರು ನಗರ ಮತ್ತು ದೇವದುರ್ಗದಲ್ಲಿ ಬಿಜೆಪಿ ಹಾಗೂ ಮಾನ್ವಿ-ಸಿಂಧನೂರು ಕ್ಷೇತ್ರಗಳಲ್ಲಿ ಜೆಡಿಎಸ್ನಿಂದ ಶಾಸಕರು ಆಯ್ಕೆಯಾಗಿದ್ದರು.
ಟಿಕೆಟ್ ಫೈನಲ್ ಕಗ್ಗಂಟು:
ಈ ವೇಳೆಗೆ ಕನಿಷ್ಠ ಪ್ರಮಾಣದಲ್ಲಿ ಆದರು ಯಾವ ಪಕ್ಷವು ಯಾರಿಗೆ ಟಿಕೆಟ್ ನೀಡಿದೆ ಎನ್ನುವ ಸ್ಪಷ್ಟತೆ ಇರಬೇಕಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಟಿಕೆಟ್ ಫೈನಲ್ ಕಗ್ಗಂಟಾಗಿ ಮಾರ್ಪಟ್ಟಿದೆ. ರಾಯಚೂರು ನಗರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕನ ಜೊತೆಗೆ ಕಾಂಗ್ರೆಸ್, ಜೆಡಿಎಸ್ನಿಂದ ಅಭ್ಯರ್ಥಿಗಳು ಫೈನಲ್ ಆಗಿಲ್ಲ. ರಾಯಚೂರು ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಬಸನಗೌಡ ದದ್ದಲ್ ಮತ್ತು ಜೆಡಿಎಸ್ನಿಂದ ಸಣ್ಣ ನರಸಿಂಹ ನಾಯಕ ಅವರಿಗೆ ಟಿಕೆಟ್ ಖಚಿತಗೊಂಡಿದೆ. ಇನ್ನು ಮಾನ್ವಿಯಲ್ಲಿ ಜೆಡಿಎಸ್ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಟಿಕೆಟ್ ಖಚಿತವಾಗಿದ್ದು, ಕಾಂಗ್ರೆಸ್-ಬಿಜೆಪಿಯಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂದು ಗೊತ್ತಿಲ್ಲ.
ರಾಯಚೂರಿನ ಸಿಂಧನೂರು ಕ್ಷೇತ್ರದಲ್ಲಿ ಅರ್ಥವಾಗದ ರಾಜಕಾರಣ, ಕೆಆರ್‌ಪಿಪಿ ಟಫ್ ಫೈಟ್!
ದೇವದುರ್ಗ ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ.ಶಿವನಗೌಡ ನಾಯಕ(MLA Shivanagowda Nayak) ವಿರುದ್ಧ ಜೆಡಿಎಸ್ನಿಂದ ಕರೆಮ್ಮ ಜಿ.ನಾಯಕ(Karemma Nayak) ಅವರು ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ಟಿಕೆಟ್(Congress Tiket) ಇನ್ನೂ ಹಂತಿಮವಾಗಿಲ್ಲ. ಸಿಂಧನೂರಿನಲ್ಲಿ ಜೆಡಿಎಸ್ ಹಾಲಿ ಶಾಸಕ ವೆಂಕಟರಾವ್ ನಾಡಗೌಡ(Venkatarao Nadagowda) ಅವರಿಗೆ ಟಿಕೆಟ್ ಘೋಷಣೆಯಾಗಿದ್ದು, ಕಾಂಗ್ರೆಸ್ನಲ್ಲಿ ಇಬ್ಬರ ನಡುವೆ ಟಿಕೆಟ್ ಪೈಪೋಟಿ ಸಾಗಿದೆ. ಬಿಜೆಪಿ(BJP)ಯಿಂದ ಟಿಕೆಟ್ ಹಂತಿಮಗೊಂಡಿಲ್ಲ. ಲಿಂಗಸುಗೂರಿನಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಡಿ.ಎಸ್.ಹೂಲಗೇರಿ(DS Hulaggeri MLA) ಅವರ ಹೆಸರನ್ನು ಪಕ್ಷದ ಮೊದಲ ಪಟ್ಟಿಯಲ್ಲಿ ಕೈಬಿಡಲಾಗಿದ್ದು, ಕೊನೆ ಕ್ಷಣದವರೆಗೂ ಟಿಕೆಟ್ ಯಾರ ಕೈ ಸೇರಲಿದೆ ಎನ್ನುವ ಕುತೂಹಲವಿದೆ. ಮಸ್ಕಿಯಲ್ಲಿ ಕಾಂಗ್ರೆಸ್ ಹಾಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಟಿಕೆಟ್ ಖಚಿತಗೊಂಡಿದ್ದು, ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.