ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರಾಜಿನಾಮೆ ನೀಡಿದ ನಂತರ ಮೊಳಕಾಲ್ಮುರು ರಾಜಕೀಯ ವಿದ್ಯಮಾನದಲ್ಲಿ ಏರಿಳಿತಗಳು ಉಂಟಾಗಿದ್ದು ಕಳೆದ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಡಾ.ಯೋಗೀಶ್ ಬಾಬು ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮೊಳಗಿನ ಅಸಮಧಾನಗಳ ಹೊರ ಹಾಕಿದರು.
ಚಿತ್ರದುರ್ಗ (ಏ.2) : ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರಾಜಿನಾಮೆ ನೀಡಿದ ನಂತರ ಮೊಳಕಾಲ್ಮುರು ರಾಜಕೀಯ ವಿದ್ಯಮಾನದಲ್ಲಿ ಏರಿಳಿತಗಳು ಉಂಟಾಗಿದ್ದು ಕಳೆದ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಡಾ.ಯೋಗೀಶ್ ಬಾಬು ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮೊಳಗಿನ ಅಸಮಧಾನಗಳ ಹೊರ ಹಾಕಿದರು.
ಎನ್.ವೈ. ಗೋಪಾಲಕೃಷ್ಣ(NY Gopalakrishna) ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ. ಮುಂದೇನು ಎಂಬ ಬಗ್ಗೆ ಸ್ಪಷ್ಟತೆಗಳು ಹೊರ ಬಂದಿಲ್ಲ. ಹಾಗಾಗಿ ಕ್ಷೇತ್ರದ ಮತದಾರರು ಗೊಂದಲದಲ್ಲಿ ಇದ್ದಾರೆ. ಪಕ್ಷ ಕಟ್ಟಿಬೆಳೆಸಿದವರು ಎಲ್ಲಿಗೆ ಹೋಗಬೇಕು ಎಂಬ ಆತಂಕ ಅವರದ್ದಾಗಿದೆ. ಎಲ್ಲರ ದೃಷ್ಟಿಹೈಕಮಾಂಡ್‌ಕಡೆ ನೆಟ್ಟಿದೆ ಎಂದರು.
undefined
ವಿಧಾನಸಭಾ ಚುನಾವಣೆ: ಆಟೋ ಮೇಲಿನ ಪೋಸ್ಟರ್ ತೆರವಿಗೆ ಪಪ್ಪಿ ಅಸಮಾಧಾನ
ಸಾಮಾನ್ಯ ಕುಟುಂಬದಿಂದ ನಾನು ಬಂದಿದ್ದು ತಳಮಟ್ಟದಲ್ಲಿ ಪಕ್ಷ ಕಟ್ಟಿದ್ದೇನೆ. ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಕಳೆದ ಬಾರಿ ಮೊಳಕಾಲ್ಮುರು ಕ್ಷೇತ್ರ(Molakalmur assembly constituency)ಕ್ಕೆ ಪಕ್ಷ ಟಿಕೆಟ್ ನೀಡಿ ಕಣಕ್ಕಿಳಿಸಿತು. ಕಾರಣಾಂತರಗಳಿಂದ ಸೋಲಬೇಕಾಯಿತು. ಕಾಂಗ್ರೆಸ್ ಇತಿಹಾಸ ಇರುವ ಪಕ್ಷ, ಯಾರಿಗೆ ಆದ್ಯತೆ ಎಂದು ಗೊತ್ತಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಪಕ್ಷಕ್ಕೆ ದುಡಿದಿದ್ದೇನೆ. ಇಂದಿಗೂ ದಣಿವು ಮಾಡಿಕೊಳ್ಳದೆ ಪಕ್ಷದ ಕೆಲಸ ಮಾಡುತ್ತಿರುವೆ ಎಂದರು.
ವಿಧಾನಸಭೆ ಚುನಾವಣೆ(Karnataka assembly election) ಸೋಲಿನ ಬಳಿಕ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕೂಡಾ ನಾವು ಗೆದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮುನ್ನಡೆ ನೀಡಿದ್ದೇವೆ. ಕೊವೀಡ್ ವೇಳೆ ಸಾಮಾಜಿಕ ಕೆಲಸ ಮಾಡಿದ್ದೇನೆ. ನಾಯಕನಹಟ್ಟಿಪಟ್ಟಣ ಪಂಚಾಯಿತಿ ಚುನಾವಣೆ ಕೂಡಾ ಗೆದ್ದಿದ್ದೇವೆ ಎಂದು ಯೋಗೇಶ್ ಬಾಬು ಸಾಧನæಗಳ ಪಟ್ಟಿಮಾಡಿದರು.
ಮೊಳಕಾಲ್ಮುರು ತಾಲೂಕಿನಲ್ಲಿ ಕಾಂಗ್ರೆಸ್ ಅತ್ಯುತ್ತಮ ಸಂಘಟನೆ ಹೊಂದಿರುವ ಕಾರಣದಿಂದಲೇ ಸಚಿವ ಶ್ರೀರಾಮುಲು(Sriramulu B) ಬೇರೆಡೆಗೆ ಪಲಾಯನ ಮಾಡಲು ಸಾಧ್ಯವಾಗಿದೆ. ಇಲ್ಲದಿದ್ದರೆ ಅವರು ಇಲ್ಲಿಯೇ ಉಳಿದುಕೊಳ್ಳುತ್ತಿದ್ದರು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮೊಳಕಾಲ್ಮುರು ಕ್ಷೇತ್ರದಲ್ಲಿ 3 ದಿನ ಹಾದು ಹೋಗಿದೆ. ಅದ್ಧೂರಿಯಾಗಿ ಕಾರ್ಯಕ್ರಮ ನಾವು ನಡೆಸಿದ್ದೇವೆ. ಈ ವೇಳೆ ಡಿ.ಕೆ.ಶಿವಕುಮಾರ್ ಅವರು ತಿಪ್ಪೇಸ್ವಾಮಿ ಹಾಗೂ ನನ್ನ ಕೈ ಎತ್ತಿ ಹಿಡಿದು ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಅಂದಿದ್ದರು. ಈಗ ತಿಪ್ಪೇಸ್ವಾಮಿ ಬಿಜೆಪಿಗೆ ಹೋಗಿದ್ದು, ಈಗ ನಾನೊಬ್ಬನೇ ಉಳಿದಿದ್ದೇನೆ. ಪಕ್ಷ ನನಗೆ ಟಿಕೆಟ್ ನೀಡುವ ಭರವಸೆ ಇದೆ ಎಂದರು.
ಕ್ಷೇತ್ರದ ಮತದಾರರು ಯಾರು ಕೂಡಾ ಗೊಂದಲಕ್ಕೆ ಒಳಗಾಗುವುದು ಬೇಡ. ಅರ್ಜಿ ಹಾಕಿದ ಯಾರಿಗಾದರೂ ಟಿಕೆಚ್ ನೀಡಲಿ. ಇಲ್ಲಿ ಸೀನಿಯರ್ಸ್, ಜ್ಯೂನಿಯರ್ಸ್ ಎಂಬ ಅಭಿಪ್ರಾಯ ಬರೋಲ್ಲ. ತಳ ಮಟ್ಟದಿಂದ ನಾವು ಪಕ್ಷಕ್ಕೆ ದುಡಿದಿದ್ದೇನೆæ. ನಮಗೆ ಟಿಕೆಚ್ ತಪ್ಪುವ ಭೀತಿ ಇಲ್ಲ, ಹಾಗೊಂದು ವೇಳೆ ಟಿಕೆಟ್ ತಪ್ಪಿದರೆ ನನ್ನ ನಿಲುವು ಏನೆಂದು ಆವಾಗ ತಿಳಿಸುವುದಾಗಿ ಡಾ.ಯೋಗೀಶ್ ಬಾಬು ಹೇಳಿದರು. ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಂಜಿನಪ್ಪ, ನಾಗರಾಜ್ ಇದ್ದರು.
ಮೊಳಕಾಲ್ಮುರು ಟಿಕೆಟ್ ಕೊಟ್ಟರೆ ಅಲ್ಲೇ ಸ್ಪರ್ಧೆ
ಚಿತ್ರದುರ್ಗ: ಕಾಂಗ್ರೆಸ್ ಹೈಕಮಾಂಡ್ ಅವಕಾಶ ಮಾಡಿಕೊಟ್ಟರೆ ಮೊಳಕಾಲ್ಮು್ಮರು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 30 ವರ್ಷ ಶಾಸಕನಾಗಿ ಸಾಕಷ್ಟುಕೆಲಸ ಮಾಡಿದ್ದೇನೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದಲ್ಲೂ ಶಾಸಕನಾಗಿ ಕೆಲಸ ಮಾಡಿದ್ದೇನೆ ಎಂದ ಅವರು, ಕೆಲ ಕಾರಣದಿಂದ ಬಿಜೆಪಿ ತೊರದಿದ್ದೇನೆ. ನನ್ನ ರಾಜೀನಾಮೆ ಅಂಗೀಕಾರವಾಗಿದೆ. ಕೆಲವು ನೋವುಗಳನ್ನು ಕಾಂಗ್ರೆಸ್ ವರಿಷ್ಠರ ಮುಂದೆ ಹೇಳಿಕೊಂಡಿದ್ದೇನೆ. ಈಗ ಮೊಳಕಾಲ್ಮೂರು ಕ್ಷೇತ್ರಕ್ಕೆ ಮರಳಿ ಬಂದಿದ್ದೇನೆ. ಕ್ಷೇತ್ರದ ಜನರು ಇಲ್ಲಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದರು.
Chitradurga: ರಂಗೇರಿದ ಹೊಳಲ್ಕೆರೆ ಚುನಾವಣಾ ಅಖಾಡ: ಮಾಜಿ ಸಚಿವ ಎಚ್.ಆಂಜನೇಯಗೆ ಅದ್ದೂರಿ ಸ್ವಾಗತ
ಎರಡನೇ ಪಟ್ಟಿಬಿಡುಗಡೆ ಆಗುವ ವೇಳೆ ನನಗೆ ಟಿಕೆಟ್ ಸಾಧ್ಯತೆ ಇದೆ. ಭಾನುವಾರ ಇಲ್ಲವೇ ಸೊಮವಾರ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ. ಕೆಲವರು ಗೋಬ್ಯಾಕ್ ಗೋಪಾಲಕೃಷ್ಣ ಎಂದು ಹೇಳುತ್ತಿದ್ದಾರೆ. ನಾನು ರಾಜಕೀಯ ಪದಾರ್ಪಣೆ ವೇಳೆ ಅವರಿನ್ನೂ ಹುಡುಗರು ಎಂದು ಪ್ರಶ್ನೆಯೊಂದಕ್ಕೆ ಗೋಪಾಲಕೃಷ್ಣ ಉತ್ತರಿಸಿದರು.