Karnataka Assembly Election 2023 Result: ಪಕ್ಷಾಂತರಿಗಳನ್ನು ಮನೆಯಲ್ಲೇ ಕೂರಿಸಿದ ಮತದಾರ ಪ್ರಭು

By Sathish Kumar KH  |  First Published May 13, 2023, 3:48 PM IST

ಸಮ್ಮಿಶ್ರ ಸರ್ಕಾರದಿಂದ ರೆಬೆಲ್‌ ಆಗಿ ಬಿಜೆಪಿ ಸರ್ಕಾರ ಸ್ಥಾಪನೆಗೆ ನೆರವು ನೀಡಿದ್ದ ರೆಬೆಲ್‌ ಶಾಸಕರ ಪೈಕಿ 9 ಜನರನ್ನು ಮತದಾರರೇ ಈ ಬಾರಿ ಸೋಲಿಸಿದ್ದಾರೆ.


ಬೆಂಗಳೂರು (ಮೇ 13): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನಮತವನ್ನು ಪರಿಗಣಿಸದೇ ಪಕ್ಷಾಂತರ ಮಾಡಿ, ಹೋಗಿ ಬಿಜೆಪಿ ಸರ್ಕಾರದ ರಚನೆಗೆ ಸಾಥ್‌ ನೀಡಿದ್ದ ರೆಬೆಲ್‌ ಶಾಸಕರ ಪೈಕಿ 14 ಮಂದಿ ಸೋತು ಸುಣ್ಣವಾಗಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಹಾರುತ್ತಿದ್ದ ನಾಯಕರನ್ನು ಮತದಾರರು ರಾಜಕೀಯ ಬೌಂಡಿಯಿಂದ ಆಚೆಗಟ್ಟಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯ ಫಲಿತಾಂಶ ಬರಲಿದೆ ಎಂಬುದನ್ನು ಯಾರೊಬ್ಬರೂ ಊಹಿಸಲಾಗದು. ಯಾಕೆಂದರೆ ಕಳೆದ 40 ವರ್ಷಗಳಿಂದ ಒಮ್ಮೆ ಗೆದ್ದು ಬೀಗಿದ ಪಕ್ಷವನ್ನು ಮತ್ತಮ್ಮೆ ಅಧಿಕಾರಕ್ಕೆ ಕೂರಿಸಿರುವ ಉದಾಹರಣೆಯೇ ಇಲ್ಲ. ಅಂಥದ್ದರಿಲ್ಲಿ ಪಕ್ಷಾಂತರ ಮಾಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದವರನ್ನು ಈಗ ಜನರೇ ಹೊರಗಟ್ಟಿದ್ದಾರೆ. ಕಾಂಗ್ರೆಸ್‌ನಿಂದ 12 ಹಾಗೂ ಜೆಡಿಎಸ್‌ನಿಂದ 03 ಸೇರಿದಂತೆ ಒಟ್ಟು 15 ಜನರು ಪಕ್ಷಾಂತರ ಮಾಡಿದ್ದರು. ಈ ಚುನಾವಣೆಯಲ್ಲಿ ರೆಬೆಲ್‌ ಶಾಸಕರಾಗಿದ್ದ 14 ಮಂದಿಗೆ ಟಿಕೆಟ್‌ ನೀಡಲಾಗಿತ್ತು. ಅದರಲ್ಲಿ 9 ಮಂದಿ ಸೋತ್ತಿದ್ದು, ಐವರು ಗೆಲುವು ಸಾಧಿಸಿದ್ದಾರೆ.

Tap to resize

Latest Videos

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!...

40 ವರ್ಷಗಳಿಂದ ಯಾವ ಪಕ್ಷಕ್ಕೂ 2 ಬಾರಿ ಅವಕಾಶ ಸಿಕ್ಕಿಲ್ಲ: ಕರ್ನಾಟಕ ರಾಜ್ಯದಲ್ಲಿ ಕಳದೆ 40 ವರ್ಷಗಳಿಂದ ಯಾವುದೇ ಒಂದು ಪಕ್ಷಕ್ಕೆ ಎರಡು ಬಾರಿ ಸರ್ಕಾರ ರಚನೆ ಮಾಡುವಂತಹ ಅಧಿಕಾರವನ್ನು ಕರ್ನಾಟಕದ ಮತದಾರರು ನೀಡಿಲ್ಲ. ಈ ಬಾರಿಯೂ ಕೂಡ ರಾಜ್ಯ ಮತದಾರರು ಕಳೆದ ಬಾರಿ ಅಧಿಕಾರ ಹಿಡಿದಿದ್ದ ಬಿಜೆಪಿ ಸರ್ಕಾರವನ್ನು ಮಕಾಡೆ ಮಲಗುವಂತೆ ಮಾಡಿದ್ದಾರೆ. ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ಗೆ ಈ ಬಾರಿ ಭಾರಿ ಪ್ರಮಾಣದಲ್ಲಿ ಬಹುಮತವನ್ನು ನೀಡಿದ್ದಾರೆ. ಈ ಮೂಲಕ 136 ಸ್ಥಾನಗಳನ್ನು ಬರುವಂತೆ ಮಾಡಿದ್ದಾರೆ. ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರದಲಿದೆ. 1883ರಿಂದ ಈವರೆಗೆ ಕಾಂಗ್ರೆಸ್‌, ಜನತಾಪಾರ್ಟಿ, ಜನತಾದಳ ಹಾಗೂ ಬಿಜೆಪಿ ಪ್ರತಿಬಾರಿ ಸರ್ಕಾರ ರಚನೆ ಮಾಡಿಕೊಂಡು ಬರುತ್ತಿವೆ. ಇನ್ನು ಜನತಾಪಾರ್ಟಿ ಹಾಗೂ ಜನತಾದಳ (ಸೆಕ್ಯೂಲರ್) ಪಾರ್ಟಿಗಳು ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರವನ್ನು ರಚನೆ ಮಾಡಿದ್ದವು. 

  • ರೆಬೆಲ್‌ (ಬಿಜೆಪಿ) ಶಾಸಕರ ಸೋಲು- ಗೆಲುವು:
  • ಮಹೇಶ ಕುಮಟಳ್ಳಿ (ಅಥಣಿ)        - ಸೋಲು
  • ಶ್ರೀಮಂತಗೌಡ ಪಾಟೀಲ (ಕಾಗವಾಡ)    - ಸೋಲು
  • ಶಿವರಾಮ ಹೆಬ್ಬಾರ್ (ಯಲ್ಲಾಪುರ)    - ಸೋಲು
  • ಬಿ.ಸಿ.ಪಾಟೀಲ್ (ಹಿರೇಕೆರೂರು)        - ಸೋಲು
  • ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ (ವಿಜಯನಗರ)    - ಸೋಲು
  • ಡಾ.ಕೆ. ಸುಧಾಕರ್ (ಚಿಕ್ಕಬಳ್ಳಾಪುರ)    - ಸೋಲು
  • ಎಂಟಿಬಿ ನಾಗರಾಜ್ (ಹೊಸಕೋಟೆ)    - ಸೋಲು
  • ಕೆ.ಸಿ. ನಾರಾಯಣಗೌಡ (ಕೃಷ್ಣರಾಜಪೇಟೆ)    - ಸೋಲು
  • ಪ್ರತಾಪ್‌ಗೌಡ ಪಾಟೀಲ್‌ (ಮಸ್ಕಿ)     - ಸೋಲು
  • ರಮೇಶ ಜಾರಕಿಹೊಳಿ (ಗೋಕಾಕ)    - ಗೆಲುವು 
  • ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್)    - ಗೆಲುವು
  • ಬೈರತಿ ಬಸವರಾಜ್ (ಕೆಆರ್ ಪುರಂ)    - ಗೆಲುವು
  • ಎಸ್ ಟಿ ಸೋಮಶೇಖರ್ (ಯಶವಂತಪುರ)     - ಗೆಲುವು
  • ಮುನಿರತ್ನ (ರಾಜರಾಜೇಶ್ವರಿ ನಗರ)    - ಗೆಲುವು

Karnataka election results 2023: ರಾಮನಗರದಲ್ಲಿಯೂ ರಾಜಕೀಯ ನೆಲೆ ಕಾಣದ ನಿಖಿಲ್‌ ಕುಮಾರಸ್ವಾಮಿ

ಶಿವರಾಮ್‌ ಹೆಬ್ಬಾರ್‌ ಗೆಲುವು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಂಕೋಲಾಗೆ ಹೋಗಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಸಮಾವೇಶದ ಮೂಲಕ ಪ್ರಚಾರ ಮಾಡಿದ್ದರು. ಇನ್ನು ಸಮ್ಮಿಶ್ರ ಸರ್ಕಾರದಿಂದ ರೆಬೆಲ್‌ ಆಗಿ ಬಂದವರ ಪೈಕಿ ಸಚಿವರಾಗಿ ಅಧಿಕಾರ ಅನುಭವಿಸಿದ ಶಿವರಾಮ್‌ ಹೆಬ್ಬಾರ್‌ ಅವರು ಈ ಬಾರಿಯೂ ಗೆಲುವು ಸಾಧಿಸಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಹೆಬ್ಬಾರ್‌ ಅವರನ್ನು ಈ ಬಾರಿಯೂ ಕೈ ಹಿಡಿದಿದ್ದಾರೆ.

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

click me!