ಶಾಸಕ ಶರತ್ ಬಚ್ಚೇಗೌಡ ಓರ್ವ ಗುಳ್ಳೆನರಿ: ಎಂಟಿಬಿ ನಾಗರಾಜ್

By Gowthami K  |  First Published Apr 14, 2023, 5:16 PM IST

 ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಚಿವ ಎಂಟಿಬಿ ನಾಗರಾಜ್ ಇಂದಿನಿಂದ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿದ್ದು, ಶಾಸಕ ಶರತ್ ಬಚ್ಚೇಗೌಡ ಅವರನ್ನು ಗುಳ್ಳೆ ನರಿಗೆ ಹೋಲಿಸಿದ್ದಾರೆ.


ಬೆಂಗಳೂರು (ಏ.14): ರಾಜ್ಯ ವಿಧಾನಸಭಾ ಚುನಾವಣೆ ಕಾವು ರಂಗೇರಿದೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಎಂಟಿಬಿ ನಾಗರಾಜ್ ಇಂದಿನಿಂದ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಹೊಸಕೋಟೆ ತಾಲೂಕಿನ ದೇವಮೂಲೆ ದಳಸೆಗೆರೆ ಗ್ರಾಮದ ವಿನಾಯಕ ಸ್ವಾಮಿಗೆ ಪೂಜೆಯನ್ನು ಸಲ್ಲಿಸುವ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಶರತ್ ಬಚ್ಚೇಗೌಡ ಇದೇ ದಳಸಗೆರೆ ಗ್ರಾಮದಿಂದ ಪ್ರಚಾರ ಆರಂಭಿಸಿದ್ದರು.

ಇದೀಗ ಇದೇ ಶಕ್ತಿ ಗ್ರಾಮದಿಂದ ಎಂಟಿಬಿ ನಾಗರಾಜ್ ಕೂಡ ಪ್ರಚಾರಕ್ಕೆ ಧುಮುಕಿದ್ದಾರೆ. ಪ್ರಚಾರದ ವೇಳೆಯಲ್ಲಿ ಗ್ರಾಮದಲ್ಲಿ ಕ್ರೈನ್ ಮೂಲಕ ಬೃಹತ್ ಸೇಬು ಹಾಗೂ ಬಾಳೆ ಹಣ್ಣಿನ ಹಾರ ಹಾಕಿ ಎಂಟಿಬಿಗೆ ಅದ್ದೂರಿ ಸ್ವಾಗತ ಕೋರಲಾಯ್ತು. ಪ್ರಚಾರಕ್ಕೆ ಚಾಲನೆಯನ್ನ ನೀಡಿ ಮಾತನಾಡಿದ ಎಂಟಿಬಿ ಹೊಸಕೋಟೆಯಲ್ಲಿ ನರೇಂದ್ರ ಮೋದಿ ಅಥವಾ ಸಿಎಂ ಬಸವರಾಜ್ ಬೊಮ್ಮಾಯಿ ಬಂದು ನಿಂತರೂ ಗೆಲ್ಲುವುದು ಕಾಂಗ್ರೆಸ್ ಅಂತ ಶರತ್ ಬಚ್ಚೇಗೌಡ  ನೀಡಿರುವ ಹೇಳಿಕೆಗೆ ಟಾಂಗ್ ಕೊಟ್ಟರು. ನಾಗಲೋಕ ಎಲ್ಲಿ ಗುಳ್ಳೆ ನರಿ ಎಲ್ಲಿ, ನಾಗಲೋಕಕ್ಕೆ ಗುಳ್ಳೆನರಿ ಹೋಲಿಕೆ ಮಾಡಲು ಸಾಧ್ಯವೇ ಎಂದ ಎಂಟಿಬಿ ಶಾಸಕ ಶರತ್ ನನ್ನ ಗುಳ್ಳೆನರಿಗೆ ಹೋಲಿಸಿದರು.

Tap to resize

Latest Videos

undefined

ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ 130 ಕೋಟಿ ಜನ ಮೆಚ್ಚಿದ ನಾಯಕ. ನಾನೊಬ್ಬ ಜನಪ್ರತಿನಿಧಿ ಅನ್ನೋದು ಇದ್ದಿದ್ರೆ ಅವರು ಈ ಮಾತು ಹೇಳ್ತಿರಲಿಲ್ಲ. ಇದಕ್ಕೆಲ್ಲ ಈ ಭಾರಿಯ ಚುನಾವಣೆಯಲ್ಲಿ ಜನರು ಅವರಿಗೆ ಬುದ್ದಿ‌ ಕಲಿಸುತ್ತಾರೆ ಎಂದು ಎಂಟಿಬಿ ಹೇಳಿದ್ದಾರೆ.

ರಾಜಕೀಯ ನಿವೃತ್ತಿ ಬಗ್ಗೆ ಸಚಿವ ಎಂಟಿಬಿ ಮಾತು:
ಇನ್ನೂ ಆರು ತಿಂಗಳಿಂದ ಹಿಂದೆಯೇ ರಾಜಕೀಯ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೆ. ಈಗಾಗಲೇ ಆರು ಚುನಾವಣೆಗಳನ್ನು ನಾನು ಎದುರಿಸಿದ್ದೇನೆ. ನನನ್ನ ಎಂಎಲ್ಎ, ಮಂತ್ರಿ, ಎಂಎಲ್ಸಿ ಯಾಗಿ ನೀವು ಮಾಡಿದ್ದೀರಿ. 19 ವರ್ಷ ನಾನು ಹೊಸಕೋಟೆ ಮತದಾರರ‌ ಜೊತೆ ಪ್ರೀತಿ ವಿಶ್ವಾಸದಿಂದ ಕಳೆದಿದ್ದೇನೆ. ಹೈಕಮಾಂಡ್ ಗೆ ಸಹ ನಾನು ರಾಜಕೀಯ ನಿವೃತ್ತಿ ಬಗ್ಗೆ ಹೇಳಿದ್ದೆ. ಇದಕ್ಕೆ ರಾಜ್ಯ ನಾಯಕರು ಒಪ್ಪಿದ್ರು ಆದ್ರೆ ಕೇಂದ್ರ ನಾಯಕರು ಈ ಭಾರಿ ನಿಲ್ಲಿ ಎಂದರು ಎಂದು ಮಗನಿಗೆ ಟಿಕೆಟ್ ಸಿಕ್ಕದೆ ಇರೋ ಬಗ್ಗೆ ಸ್ಪಷ್ಟನೆ ನೀಡಿದ್ರು.

ಅರವಿಂದ ಲಿಂಬಾವಳಿ ಸೇರಿ ಹಲವರಿಗೆ ಟಿಕೆಟ್ ನಿರಾಕರಣೆ, ರೊಚ್ಚಿಗೆದ್ದ ಭೋವಿ ಸಮಾಜ!

ಜೊತೆಗೆ ನಿತೀಶ್ ಗೆ ಮತ್ತೊಮ್ಮೆ ಒಳ್ಳೆ ಅವಕಾಶ‌ ನೀಡೋಣ ಅಂತ ಹೇಳಿದ್ದಾರೆ. ಹೀಗಾಗಿ ನಾನು ನಿಂತಿದ್ದೇನೆ ಇದೇ ನನ್ನ ಕೊನೆಯ ಚುನಾವಣೆ ಎಂದು ಎಂಟಿಬಿ ಘೋಷಿಸಿದ್ರು. ಅಲ್ಲದೆ ಮುಂದೆ ಅರ್ಧದಲ್ಲಿ ಚುನಾವಣೆ ಬಂದ್ರೂ ಯಾವಾಗ ಚುನಾವಣೆ ಬಂದ್ರೂ ನಿತೀಶ್ ಪುರುಷೋತ್ತಮ್ ಅಭ್ಯರ್ಥಿಯಾಗ್ತಾರೆ ಎಂದು ಮಗನ ಟಿಕೆಟ್ ಮುಂದಿನ ಚುನಾವಣೆಯಲ್ಲಿ ಎಂದು ತಿಳಿಸಿದರು.

ಜಾರಕಿಹೊಳಿ‌ ವಿರುದ್ಧ ರೆಬಲ್, ಕಾಂಗ್ರೆಸ್ ಸೇರಲು 3 ಶರತ್ತು ಇಟ್ಟ ಲಕ್ಷ್ಮಣ ಸವದಿ!

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!