ಬಿಜೆಪಿ ಪಕ್ಷದಲ್ಲಿದ್ದುಕೊಂಡೇ ಪಕ್ಷ ಹಾಗೂ ಪಕ್ಷದ ಮುಖಂಡರ ವಿರುದ್ಧ ಹೇಳಿಕೆ ನೀಡುತ್ತಿರುವ ವಿಧಾನ ಪರಿಷತ್ ಸದಸ್ಯ ಆಯನೂರ್ ಮಂಜುನಾಥ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯಾಧ್ಯಕ್ಷರಿಗೆ ಪತ್ರ ರವಾನೆ.
ಶಿವಮೊಗ್ಗ (ಏ.14): ಬಿಜೆಪಿ ಪಕ್ಷದಲ್ಲಿದ್ದುಕೊಂಡೇ ಪಕ್ಷ ಹಾಗೂ ಪಕ್ಷದ ಮುಖಂಡರ ವಿರುದ್ಧ ಹೇಳಿಕೆ ನೀಡುತ್ತಿರುವ ವಿಧಾನ ಪರಿಷತ್ ಸದಸ್ಯ ಆಯನೂರ್ ಮಂಜುನಾಥ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರು ರಾಜ್ಯಾದ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಶಿವಮೊಗ್ಗದಲ್ಲಿ ಚುನಾವಣೆ ವೇಳೆ ಕೋಮು ಗಲಭೆ ಆರಂಭವಾಗುತ್ತದೆ. ಇದಕ್ಕೆ ಬಿಜೆಪಿ ಹಾಗೂ ಬಿಜೆಪಿ ನಾಯಕರು ಕಾರಣವಾಗುತ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ಸದಸ್ಯರಾಗಿ ಇದ್ದುಕೊಂಡೇ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಜೊತೆಗೆ, ಪಕ್ಷ ಮತ್ತು ನಾಯಕರ ವಿರುದ್ಧವೇ ಮಾಧ್ಯಮಗಳ ಮುಂದೆ ಸುದ್ದಿಗೋಷ್ಠಿ ಮಾಡುತ್ತಿದ್ದಾರೆ. ಜೊತೆಗೆ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಕೊಡುವುದಾಗಿ ಹೇಳಿದ್ದಾರೆ. ಹೀಗೆ, ಬಿಜೆಪಿ ವಿರುದ್ಧವಾಗಿ ಮಾತನಾಡುತ್ತಿರುವ ಆಯನೂರು ಮಂಜುನಾಥ್ ವಿರುದ್ಧ ಶಿಸ್ತಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಅವರು, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ಪತ್ರವನ್ನು ಬರೆದಿದ್ದಾರೆ.
undefined
ಸದ್ಯದಲ್ಲೇ ಯಾವುದಾದ್ರೂ ದೇವಸ್ಥಾನ ಮಲಿನವಾಗ್ಬಹುದು! ಆಯನೂರು ಮಂಜುನಾಥ್ ಬಾಂಬ್!
ನಾಲ್ಕು ತಿಂಗಳಿಂದ ಬಿಜೆಪಿ ವಿರೋಧಿ ಚಟುವಟಿಕೆ: ಕಳೆದ ಮೂರು ನಾಲ್ಕು ತಿಂಗಳುಗಳಿಂದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರಿಗೆ ಬಿಜೆಪಿ ಟಿಕೆಟ್ ನೀಡಿದಂತೆ ಬಹಿರಂಗ ವಾಗ್ದಾಳಿ ಮತ್ತು ಫ್ಲೆಕ್ಸ್ ಗ ಳ ಮೂಲಕ ಬಿಜೆಪಿಗೆ ಮುಜುಗರವನ್ನುಂಟು ಮಾಡುತ್ತಿರುವ ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘರಾಜ್ ರವರು ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷ ಜಗದೀಶ್ ನೀಡಿದ ಮನವಿಯನ್ನು ರಾಜ್ಯಾಧ್ಯಕ್ಷರಿಗೆ ಕಳುಹಿಸಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಪತ್ರ ರವಾನೆ ಮಾಡಿದ್ದಾರೆ.
ವಿಧಾನ ಪರಿಷತ್ ಸ್ಥಾನಕ್ಕೂ ರಾಜಿನಾಮೆ ಕೊಡ್ತಿಲ್ಲ: ನಗರದ ಪ್ರಮುಖ ವೃತ್ತಗಳಲ್ಲಿ ನಮ್ಮ ಪಕ್ಷದ ವಿರುದ್ಧ ಹಾಗೂ ನಾಯಕರುಗಳ ವಿರುದ್ಧ ಅವಹೇಳನಕಾರಿ ಪೈಕ್ಸ್ ಗಳನ್ನು ಹಾಕಿ ಪಕ್ಷಕ್ಕೆ ಹಾನಿ ಮಾಡಿದ್ದಾರೆ. ಪಕ್ಷಕ್ಕೆ ಅದರದ್ದೆ ಆದ ಒಂದು ರೀತಿಯ ನಿಯಮವಿದೆ. ಇದನ್ನು ಮೀರಿ ಪತ್ರಿಕಾ ಗೋಷ್ಠಿ ಮಾಡಿ ತುಂಬಾ ಉದ್ದಟತನದ ಮಾತುಗಳನ್ನು ಆಡುವುದರ ಮೂಲಕ ಪಕ್ಷಕ್ಕೆ ಕೆಟ್ಟ ಹೆಸರು ಬರುವಂತೆ ಹುನ್ನಾರ ಮಾಡಿದ್ದಾರೆ. ನಾನು ವಿಧಾನಪರಿಷತ್ತು ಸ್ಥಾನಕ್ಕೆ ರಾಜಿನಾಮ ಕೊಡುತ್ತೇನೆಂದು ಹೇಳಿ ಪಕ್ಷ ದ್ರೋಹಿಯಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ತೊಡೆ ತಟ್ಟಿ ಹೇಳ್ತೇನೆ ಅಪ್ಪ-ಮಗ ಅಖಾಡಕ್ಕೆ ಬರಲಿ: ಈಶ್ವರಪ್ಪಗೆ ಸವಾಲೊಡ್ಡಿದ ಆಯನೂರು ಮಂಜನಾಥ್
ಶಿವಮೊಗ್ಗ ನಗರ ಅಧ್ಯಕ್ಷರಿಂದ ಜಿಲ್ಲಾಧ್ಯಕ್ಷರಿಗೂ ಪತ್ರ: ನಗರದಲ್ಲಿ ನಡೆದ ಕೋಮುಗಲಭೆಗಳಿಗೆ ಹಾಗೂ 144 ಸೆಕ್ಷನ್ ಹಾಕಲು ಬಿಜೆಪಿಯೇ ಕಾರಣ, ಬಿಜೆಪಿ ನಾಯಕರ ಕಾರಣವೆಂದು ಹೇಳುವ ಮೂಲಕ ಮುಸಲ್ಮಾನರಂತ ಮಾತನಾಡಿ ಸುನ್ನತ್ ಮಾಡಿಸಿಕೊಂಡವರಂತೆ ಮಾತನಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರುಗಳಿಗೆ ಅಪಮಾನ ಮಾಡುವ ರೀತಿಯ ಅವರ ನಡವಳಿಕೆ ಆಕ್ಷಮ್ಯ ಅಪರಾಧವಾಗಿದೆ. ಕೋರ್ ಕಮಿಟಿಯ ಒಟ್ಟು ನಿರ್ಣಯದಂತೆ ಈ ಪಕ್ಷ ದ್ರೋಹಿ ಅಯನೂರು ಮಂಜುನಾಥ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವುದಕ್ಕೆ ಸಂಪೂರ್ಣ ನಗರ ಸಮಿತಿಯು ಆಗ್ರಹಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ರಾಜ್ಯಾಧ್ಯಕ್ಷರಿಗೆ ಪತ್ರವನ್ನು ಕಳುಹಿಸಿದ್ದಾರೆ.