Breaking: ಬಿಜೆಪಿಯ 2ನೇ ಪಟ್ಟಿ ರಿಲೀಸ್‌, 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ!

Published : Apr 12, 2023, 11:07 PM ISTUpdated : Apr 13, 2023, 08:52 PM IST
Breaking: ಬಿಜೆಪಿಯ 2ನೇ ಪಟ್ಟಿ ರಿಲೀಸ್‌, 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ!

ಸಾರಾಂಶ

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ. ಬಾಕಿ ಇರುವ 35 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗಿದೆ.  

ಬೆಂಗಳೂರು (ಏ. 12): ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿಯ 2ನೇ ಪಟ್ಟಿ ಬಿಡುಗಡೆಯಾಗಿದ್ದು, 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಎಂಪಿ ಕುಮಾರಸ್ವಾಮಿ ಹಾಗೂ ನೆಹರು ಓಲೇಕಾರ್‌ಗೆ ಟಿಕೆಟ್‌ ಮಿಸ್‌ ಆಗಿದ್ದು, ಯಡಿಯೂರಪ್ಪ ಅವರ ಅಪ್ತ ಸಹಾಯಕ ಎನ್‌ಆರ್‌ ಸಂತೋಷ್‌ಗೆ ಟಿಕೆಟ್‌ ಮಿಸ್‌.ಗಂಗಾವತಿಗೆ ಹಾಲಿ ಶಾಸಕ ಪರಣ್ಣ ಮುನವಳ್ಳಿ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿದೆ. ನಿನ್ನೆಯಷ್ಟೇ ಬಿಜೆಪಿ ಮೊದಲನೇ ಪಟ್ಟಿ ಘೋಷಿಸಿತ್ತು. ಇದರಲ್ಲಿ ಕೊಪ್ಪಳ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿ ಘೋಷಣೆ ಮಾಡಲಾಗಿತ್ತು. 2ನೇ ಪಟ್ಟಯಲ್ಲಿ ಒಟ್ಟು ಏಳು ಮಂದಿ ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌ ಆಗಿದೆ. ಕಲಘಟಗಿ ಕ್ಷೇತ್ರದಿಂದ ನಾಗರಾಜ್‌ ಛಬ್ಬಿ ಟಿಕೆಟ್‌ ಸಂಪಾದನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಛಬ್ಬಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ್ದರು. ಇದರೊಂದಿಗೆ ಹಾಲಿ ಶಾಸಕ ಸಿಎಂ ನಿಂಬಣ್ಣನವರ್‌ಗೆ ಟಿಕೆಟ್‌ ಮಿಸ್‌ ಆಗಿದೆ. ಅದರೊಂದಿಗೆ ಕಲಘಟಗಿಯಲ್ಲಿ ಸಂತೋಷ್‌ ಲಾಡ್‌ಗೆ ಸಡ್ಡು ಹೊಡೆಯಲು ಛಬ್ಬಿ ಸನ್ನದ್ದರಾಗಿದ್ದಾರೆ.  

ನೆಹರು ಓಲೇಕಾರಗೆ ಟಿಕೆಟ್‌ ಮಿಸ್‌: ಹಾವೇರಿಯಲ್ಲಿ ಹಾಲಿ ಶಾಸಕ ನೆಹರು ಓಲೇಕಾರ ಗೆ ಟಿಕೆಟ್ ಮಿಸ್ ಆಗಿದೆ. ಸೃಜನಪಕ್ಷಪಾತ ಅಡಿಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಿತ್ತು. ಸ್ಥಳಿಯ ಬಿಜೆಪಿ‌ ಮುಖಂಡರಿಂದಲೂ ಅವರಿಗೆ ಟಿಕೆಟ್‌ ನೀಡಲು ಭಾರಿ ವಿರೋಧ ವ್ಯಕ್ತ ವಾಗಿತ್ತು. ಹಾವೇರಿ ( ಎಸ್ ಸಿ ಮೀಸಲು) ಕ್ಷೇತ್ರ ದ ಬಿಜೆಪಿ ಟಿಕೆಟ್  ಗವಿಸಿದ್ದಪ್ಪ ದ್ಯಾಮಣ್ಣವರ್‌ಗೆ ನೀಡಲಾಗಿದೆ. ಗವಿಸಿದ್ದಪ್ಪ ದ್ಯಾಮಣ್ಣವರ್ ಬ್ಯಾಡಗಿ ತಾಲೂಕಿನ ತಹಶಿಲ್ದಾರ ಆಗಿ ಕೆಲಸ ಮಾಡುತ್ತಿದ್ದರು. ತಹಶಿಲ್ಧಾರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಗೆ ಟಿಕೆಟ್ ಕೇಳಿದ್ದರು. ಆರೆಸ್ಸೆಸ್‌ ಹಿನ್ನಲೆ ಉಳ್ಳ ಗವಿಸಿದ್ದಪ್ಪ ದ್ಯಾಮಣ್ಣವರ್ ಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, 189 ಮಂದಿಗೆ ಟಿಕೆಟ್ ಘೋಷಣೆ, 52 ಹೊಸ ಮುಖ!

ದಾವಣಗೆರೆಯಲ್ಲಿ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌: ಬಿಜೆಪಿಯ 2ನೇ ಪಟ್ಟಿಯಲ್ಲಿ ದಾವಣಗೆರೆಯಲ್ಲಿ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌ ಆಗಿದೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಎಸ್ ಎ ರವೀಂದ್ರನಾಥ್ ಬದಲಿಗೆ ಲೋಕಿಕೆರೆ  ನಾಗರಾಜ್ ಗೆ ಟಿಕೆಟ್‌ ನೀಡಲಾಗಿದ್ದರೆ. ಮಾಯಕೊಂಡದಲ್ಲಿ ಪ್ರೋ. ಲಿಂಗಣ್ಣ ಬದಲಿಗೆ ಮಾಜಿ ಶಾಸಕ ಬಸವರಾಜ್ ನಾಯಕ್ ಗೆ ಟಿಕೆಟ್ ನೀಡಲಾಗಿದೆ.

ಭಟ್ಕಳದಲ್ಲಿ ಶುರುವಾಯ್ತು ತಳಮಳ, ಜೆಡಿಎಸ್‌ನಿಂದ ಹಿರಿಯ ವಕೀಲ ನಾಗೇಂದ್ರ ನಾಯ್ಕ್‌ ಅಭ್ಯರ್ಥಿ!

ಬಾಕಿ ಉಳಿದಿರುವ ಕ್ಷೇತ್ರಗಳು (12): ಹೆಬ್ಬಾಳ, ಮಹದೇವಪುರ, ಗೋವಿಂದರಾಜನಗರ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌, ಶಿವಮೊಗ್ಗ, ರೋಣ, ಕೊಪ್ಪಳ, ಕೃಷ್ಣರಾಜ, ನಾಗಠಾಣ, ಸೇಡಂ, ಮಾನ್ವಿ, ಹಗರಿಬೊಮ್ಮನಹಳ್ಳಿ

2ನೇ ಪಟ್ಟಿಯಲ್ಲಿ ಘೋಷಣೆಯಾದ ಅಭ್ಯರ್ಥಿಗಳು:

ಕಲಘಟಗಿ-ನಾಗರಾಜ್ ಛಬ್ಬಿ
ಚನ್ನಗಿರಿ-ಶಿವಕುಮಾರ್
ದೇವರ ಹಿಪ್ಪರಗಿ-ಸೋಮನಗೌಡ ಪಾಟೀಲ್‌
ಬಸವನನ ಬಾಗೇವಾಡಿ-ಎಸ್‌ಕೆ ಬೆಳ್ಳುಬ್ಬಿ
ಇಂಡಿ-ಕಾಸಾಗೌಡ ಬೀರಾದಾರ್‌
ಗುರುಮಿಟ್ಕಲ್‌-ಲಲಿತಾ ಆನಾಪುರ
ಬೀದರ್‌-ಈಶ್ವರ್‌ ಸಿಂಗ್‌ ಠಾಕೂರ್‌
ಭಾಲ್ಕಿ-ಪ್ರಕಾಶ್‌ ಖಂಡ್ರೆ
ಗಂಗಾವತಿ-ಪರಣ್ಣ ಮನವಳ್ಳಿ
ಹಾನಗಲ್‌-ಶಿವರಾಜ್‌ ಸಜ್ಜನರ್‌
ಹಾವೇರಿ-ಗವಿಸಿದ್ಧಪ್ಪ ದ್ಯಾಮನವರ್‌
ಹರಪನಹಳ್ಳಿ-ಕರುಣಾಕರ್‌ ರೆಡ್ಡಿ
ದಾವಣಗೆರೆ ಉತ್ತರ-ಲೋಕಿಕೆರೆ ನಾಗರಾಜ್‌
ದಾವಣಗೆರೆ ದಕ್ಷಿಣ-ಅಜಯ್‌ ಕುಮಾರ್‌
ಮಾಯಕೊಂಡ-ಬಸವರಾಜ್‌ ನಾಯ್ಕ್‌
ಬೈಂದೂರು-ಗುರುರಾಜ್‌ ಗಟ್ಟಿಹೊಳೆ
ಮೂಡಿಗೆರೆ-ದೀಪಕ್‌ ದೊಡ್ಡಯ್ಯ
ಗುಬ್ಬಿ-ಎಸ್‌ಡಿ ದಿಲೀಪ್‌ ಕುಮಾರ್‌
ಶಿಡ್ಲಘಟ್ಟ-ರಾಮಚಂದ್ರ ಗೌಡ
ಕೋಲಾರ ಗೋಲ್ಡ್‌ ಫೀಲ್ಡ್‌-ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ-ಚಿದಾನಂದ
ಅರಸೀಕೆರೆ-ಬಿವಿ ಬಸವರಾಜು
ಹೆಗ್ಗಡದೇವನಕೋಟೆ-ಕೃಷ್ಣಾ ನಾಯ್ಕ್‌

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ