ಲೋಕಸಭೆ ಚುನಾವಣೆಗೆ ಪುತ್ರನ ಸ್ಪರ್ಧೆ ಹಾವೇರಿಯಲ್ಲಿಯೇ ಖಚಿತ: ಕೆ.ಎಸ್‌.ಈಶ್ವರಪ್ಪ

By Kannadaprabha News  |  First Published Aug 27, 2023, 8:32 AM IST

ಲೋಕಸಭಾ ಚುನಾವಣೆಗೆ ಹಾವೇರಿಯಿಂದ ಸ್ಪರ್ಧೆ ಮಾಡುವ ಬಗ್ಗೆ ಪುತ್ರ ಕಾಂತೇಶ್‌ ಇಚ್ಛೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಹಾವೇರಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಓಡಾಟ ನಡೆಸಿದ್ದಾನೆ. 


ಶಿವಮೊಗ್ಗ (ಆ.27): ಲೋಕಸಭಾ ಚುನಾವಣೆಗೆ ಹಾವೇರಿಯಿಂದ ಸ್ಪರ್ಧೆ ಮಾಡುವ ಬಗ್ಗೆ ಪುತ್ರ ಕಾಂತೇಶ್‌ ಇಚ್ಛೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಹಾವೇರಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಓಡಾಟ ನಡೆಸಿದ್ದಾನೆ. ಅಲ್ಲಿರುವ ಮಠಾಧೀಶರೆಲ್ಲರೂ ಕಾಂತೇಶ್‌ಗೆ ಆಶೀರ್ವಾದ ಮಾಡುವುದಾಗಿ ಹೇಳಿದ್ದಾರೆ. ಪಕ್ಷ ಟಿಕೆಟ್‌ ನೀಡಿದರೆ ಕಾಂತೇಶ್‌ ಖಂಡಿತ ಸ್ಪರ್ಧೆ ಮಾಡುತ್ತಾನೆ. ಹಾವೇರಿಯಲ್ಲಿ ಕಾಂತೇಶ್‌ ಸ್ಪರ್ಧೆಗೆ ಬಿ.ಸಿ. ಪಾಟೀಲ್‌ ವಿರೋಧ ಮಾಡುತ್ತಿರುವ ಬಗ್ಗೆ ಗೊತ್ತಿಲ್ಲ. ಅವರು ನನ್ನ ಆತತ್ಮೀಯ ಸ್ನೇಹಿತರು, ಹಾಗೆನಾದರೂ ಇದ್ರೆ ಅವರೊಟ್ಟಿಗೆ ಚರ್ಚೆ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಕೆ.ಎಸ್‌. ಈಶ್ವರಪ್ಪ ಉತ್ತರಿಸಿದರು.

ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ: ಬಿಜೆಪಿಯ ಶಾಸಕರಾರ‍ಯರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಬಿಜೆಪಿಯನ್ನು ಖಾಲಿ ಮಾಡುತ್ತಾರೆ ಎಂಬ ಕಾಂಗ್ರೆಸ್‌ ಹೇಳಿಕೆಗೆ ಜನ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸೂರ್ಯಚಂದ್ರ ಇರುವವರೆಗೆ ಕಾಂಗ್ರೆಸ್‌ ಬಿಟ್ಟ17 ಶಾಸಕರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಇದೇ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರನ್ನು ಸೆಳೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರ ಪ್ರಯತ್ನ ಫಲಿಸುವುದಿಲ್ಲ. ಲೋಕಸಭಾ ಚುನಾವಣೆ ಬಳಿಕ ಯಾವ ಪಕ್ಷ ಬೀದಿಗೆ ಬರುತ್ತದೆ ಎಂಬುದ ಗೊತ್ತಾಗಲಿದೆ ಎಂದು ಖಾರವಾಗಿ ಹೇಳಿದರು.

Latest Videos

undefined

ಪ್ರಧಾನಿ ಮೋದಿ ಬಂದಾಗ ರಸ್ತೇಲಿ ಬಿಜೆಪಿಗರು: ಕಾಂಗ್ರೆಸ್‌, ಕಮಲ ಫೈಟ್‌

ವಿಶ್ವದಲ್ಲೆ ಅತ್ಯಂತ ದೊಡ್ಡ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳನ್ನು ಮೋದಿಯವರು ಬೆಂಗಳೂರಿಗೆ ಬಂದು ಅಭಿನಂದಿಸಿ, ಅವರ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಸ್ಕೃತಿ, ಸಂಸ್ಕಾರ ಜೊತೆಗೆ ಇಲ್ಲಿನ ವೈಜ್ಞಾನಿಕ ಸಾಧನೆಯನ್ನು ಇಡೀ ವಿಶ್ವವೇ ಮೆಚ್ಚಿದೆ. ಮೊಸರಲ್ಲಿ ಕಲ್ಲುಹುಡುಕುವ ರಾಜಕಾರಣವನ್ನು ಕೆಲವರು ಮಾಡುತ್ತಿದ್ದಾರೆ. ಈ ಸಾಧನೆ ಬಿಜೆಪಿಯದ್ದಲ್ಲ, ಇದು ರಾಷ್ಟ್ರದ ಸಾಧನೆ. ವಿಜ್ಞಾನಿಗಳಿಗೆ ಅಭಿನಂದಿಸಿ ಸಿಹಿ ಹಂಚಿದರೆ, ಸಿಹಿಗೆ ಯಾಕೆ ದುಡ್ಡು ಖರ್ಚುಮಾಡಿದಿರಿ ಎಂದು ಕೇಳುವ ಮುಟ್ಟಾಳರು ಕೆಲವರಿದ್ದಾರೆ. .1700 ಕೋಟಿ ಖರ್ಚು ಮಾಡಿದ ರಷ್ಯಾ ಯಶಸ್ಸು ಕಾಣಲಿಲ್ಲ. .650 ಕೋಟಿ ಖರ್ಚು ಮಾಡಿದ ನಾವು ಚಂದ್ರಯಾನದಲ್ಲಿ ಯಶಸ್ಸು ಕಂಡಿದ್ದೇವೆ ಕುಟುಕಿದರು.

ಈಶ್ವರಪ್ಪ, ಕಾಂತೇಶ ನಡೆಯಿಂದ ಕಾರ್ಯಕರ್ತರಲ್ಲಿ ಗೊಂದಲ: ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪನವರ ಪುತ್ರ ಕಾಂತೇಶಗೆ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷ ಯಾವುದೇ ಸಂದೇಶ ಕೊಟ್ಟಿಲ್ಲ. ಆದರೂ ಅವರು ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ರೀತಿ ಸಂಚರಿಸುತ್ತಿದ್ದಾರೆ. ಈ ರೀತಿ ಮಾಡಿದರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಕಿಡಿಕಾರಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್‌. ಈಶ್ವರನವರಿಗೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಸೂಚನೆ ಕೊಟ್ಟಿದ್ದರೆ ಕ್ಷೇತ್ರದಲ್ಲಿ ಓಡಾಡಲಿ. ಆದರೆ, ಅಂಥ ಯಾವುದೇ ಸಂದೇಶ ಪಕ್ಷದಿಂದ ಬಂದಿಲ್ಲ. ಹೀಗಾಗಿ ಈಶ್ವರಪ್ಪನವರ ಪುತ್ರ ಕ್ಷೇತ್ರದಲ್ಲಿ ಮಾಡುತ್ತಿರುವ ರೀತಿ ಸರಿಯಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ವಿರೋಧ ಮಾಡಿದವರನ್ನು ಕಟ್ಟಿಕೊಂಡು ಕಾಂತೇಶ ಕ್ಷೇತ್ರದಲ್ಲಿ ಓಡಾಡುತ್ತಿರುವುದು ಸರಿಯಲ್ಲ. ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಳಹಷ್ಟುಆಕಾಂಕ್ಷಿಗಳು ಇದ್ದಾರೆ. ಚುನಾವಣೆ ಎದುರಿಸುವ ಶಕ್ತಿ, ಸಾಮರ್ಥ್ಯ ಇರುವಂತಹರು ಬಹಳಷ್ಟುಜನ ಇದ್ದಾರೆ. ಇಂಥ ಸಂದರ್ಭದಲ್ಲಿ ಅವರ ನಡೆ ಸರಿಯಲ್ಲ ಎಂದರು.

ಸ್ವಾಗತಕ್ಕೆ ಬರಬೇಡಿ ಎಂದು ಸಿಎಂ ಸಿದ್ದುಗೆ ನಾನೇ ಹೇಳಿದ್ದೆ: ಮೋದಿ

ನಮ್ಮಿಂದ ಗೊಂದಲವಾಗಿಲ್ಲ: ಪಕ್ಷದಲ್ಲಿ ನಾವು ಗೊಂದಲ ಮಾಡಿಲ್ಲ, ಅಶಿಸ್ತನ್ನೂ ತೋರಿಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತ್ಯಾಗ ಮಾಡಿ ಬಂದವರು. ಆದರೆ, ಈಶ್ವರಪ್ಪನವರು ನಾವು ಬಂದಿದ್ದರಿಂದ ಅಶಿಸ್ತು ಮೂಡಿದೆ ಎಂದಿದ್ದಾರೆ. ನಮಗೆ ಈಶ್ವರಪ್ಪರಿಂದ ಮಾನಸಿಕವಾಗಿ ನೋವಾಗಿದೆ. ಪಕ್ಷದ ವರಿಷ್ಠರಾದರೂ ಈಶ್ವರಪ್ಪ ಅವರಿಗೆ ಬುದ್ದಿ ಹೇಳಬಹುದಿತ್ತು. ಆದರೆ ಯಾರೂ ಹೇಳಲಿಲ್ಲ, ಅದೂ ನಮಗೆ ಬಹಳಷ್ಟುಬೇಸರವಾಗಿದೆ ಎಂದರು.

click me!