Election Result 2022: ನಾಲ್ಕು ರಾಜ್ಯಗಳಲ್ಲಿ ಕಮಲ ಅರಳಿಸಿದ ಕನ್ನಡಿಗರು..!

Published : Mar 11, 2022, 06:34 AM IST
Election Result 2022: ನಾಲ್ಕು ರಾಜ್ಯಗಳಲ್ಲಿ ಕಮಲ ಅರಳಿಸಿದ ಕನ್ನಡಿಗರು..!

ಸಾರಾಂಶ

*  ಪಂಚ ರಾಜ್ಯಗಳ ರಣತಂತ್ರ ರೂಪಿಸಿದ್ದು ಬಿ.ಎಲ್‌.ಸಂತೋಷ್‌ *  ಉತ್ತರಾಖಂಡಕ್ಕೆ ಜೋಶಿ, ಗೋವಾಕ್ಕೆ ರವಿ, ಯುಪಿಗೆ ಶೋಭಾ ಉಸ್ತುವಾರಿ *  ಬಿಜೆಪಿ ಗೆಲುವಿನಲ್ಲಿ ಕನ್ನಡಿಗರ ಪಾತ್ರ ದೊಡ್ಡದಿದೆ   

ನವದೆಹಲಿ(ಮಾ.11):  ಉತ್ತರಪ್ರದೇಶ, ಪಂಜಾಬ್‌, ಮಣಿಪುರ, ಉತ್ತರಾಖಂಡ, ಗೋವಾ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ(Assembly Elections) ಪಂಜಾಬ್‌ ಹೊರತು ಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ(BJP) ಜಯಭೇರಿ ಬಾರಿಸಿದೆ. ಈ ಚುನಾವಣೆ ನಡೆದಿದ್ದು ಕರ್ನಾಟಕದ(Karnataka) ಹೊರಗಾದರೂ, ಈ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನಲ್ಲಿ ಕನ್ನಡಿಗರ(Kanandigas) ಪಾತ್ರ ದೊಡ್ಡದಿದೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಕರ್ನಾಟಕದ ಬಿ.ಎಲ್‌.ಸಂತೋಷ್‌, ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್‌ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರಿನ ಸಿ.ಟಿ.ರವಿ, ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಚುನಾವಣಾ ಉಸ್ತುವಾರಿ ವಹಿಸಿಕೊಂಡು ಬಿಜೆಪಿ ಗೆಲುವಿಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಹೀಗಾಗಿ ಬಿಜೆಪಿಯ ದೊಡ್ಡ ಗೆಲುವಿನಲ್ಲಿ ಕನ್ನಡಿಗರ ಪಾತ್ರವನ್ನೂ ದೊಡ್ಡದಾಗಿ ಪ್ರಶಂಸಿಸಲಾಗಿದೆ.

ಸಂತೋಷ್‌:

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಪೂರ್ಣ ರಣತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಬಿ.ಎಲ್‌.ಸಂತೋಷ್‌(BL Santosh). ಚುನಾವಣೆ ಘೋಷಣೆಗೆ ವರ್ಷಕ್ಕೆ ಮೊದಲೇ ಎಲ್ಲಾ ರಾಜ್ಯಗಳಿಗೆ ತೆರಳಿ, ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು, ಪ್ರಣಾಳಿಕೆ ರೂಪಿಸುವುದು ಸೇರಿದಂತೆ ಎಲ್ಲಾ ವಿಷಯಗಳು ಶಿಸ್ತುಬದ್ಧವಾಗಿ ರೂಪುಗೊಳ್ಳುವಂತೆ ಮಾಡಿದ್ದು ಬಿ.ಎಲ್‌.ಸಂತೋಷ್‌ ಅವರು. ಜೊತೆಗೆ ಕೇಂದ್ರ ಮತ್ತು ರಾಜ್ಯ ನಾಯಕರ ನಡುವೆ ಸಮನ್ವಯ, ಪಕ್ಷ ಮತ್ತು ಸಂಘಟನೆಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಎಲ್ಲಿಯೂ ಗೊಂದಲವಾಗದಂತೆ ನೋಡಿಕೊಂಡರು. ತೆರೆಮರೆಯಲ್ಲೇ ಗೆಲುವಿನ ರಣತಂತ್ರ ರೂಪಿಸಿ ಅದನ್ನು ಜಾರಿಯಾಗುವಂತೆ ನೋಡಿಕೊಂಡು ನಾಲ್ಕೂ ರಾಜ್ಯಗಳಲ್ಲಿ ಪಕ್ಷಕ್ಕೆ ಮರಳಿ ಅಧಿಕಾರ ಸಿಗುವಂತೆ ಮಾಡಿದ್ದಾರೆ.

Election Result 2022: ಹೊಸ ಆಡಳಿತ ಪದ್ಧತಿಗೆ ಸಿಕ್ಕ ಜನಾದೇಶ: ರಾಜೀವ್‌ ಚಂದ್ರಶೇಖರ್‌

ಪ್ರಹ್ಲಾದ್‌ ಜೋಶಿ:

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕೇಂದ್ರ ಸಂಸದೀಯ ಖಾತೆ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಅವರಿಗೆ ಈ ಬಾರಿ ಉತ್ತರಾಖಂಡದ ಹೊಣೆ ವಹಿಸಲಾಗಿತ್ತು. ಸತತ 2ನೇ ಭಾರಿ ಯಾವುದೇ ಪಕ್ಷ ಅಧಿಕಾರಕ್ಕೆ ಬರದ ಹಿನ್ನೆಲೆ ಹೊಂದಿದ್ದ ರಾಜ್ಯದಲ್ಲಿ ಮರಳಿ ಪಕ್ಷವನ್ನು ಗೆಲ್ಲಿಸುವ ಹೊಣೆ ನೀಡಲಾಗಿತ್ತು. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ ಸ್ಥಳೀಯ ನಾಯಕರ ಸಹಯೋಗದಲ್ಲಿ ಕಾರ್ಯತಂತ್ರ ರೂಪಿಸಲು ಆರಂಭಿಸಿದ ಜೋಶಿ, ಗೆಲುವಿಗೆ ಬೇಕಾದ ಸಿದ್ಧತೆ ನಡೆಸಿ ಅದು ಕಾರ್ಯರೂಪಕ್ಕೆ ಬರುವಂತೆ ನೋಡಿಕೊಂಡರು. ಹಲವು ರಾಜ್ಯಗಳಲ್ಲಿ ಭಾಗಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಜನರನ್ನು ತಲುಪುವುದನ್ನು ಖಾತ್ರಿ ಪಡಿಸಿಕೊಂಡರು. ಅದರ ಫಲವೆಂಬಂತೆ ಇದೀಗ ದಾಖಲೆಯ 2ನೇ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.

Election Result 2022 ಬಿಜೆಪಿ ಬಾಪ್‌, ಪಂಜಾಬ್‌ಗೆ ಆಪ್‌

ಸಿ.ಟಿ.ರವಿ:

ಗೋವಾದಲ್ಲಿ ಬಿಜೆಪಿ ಉಸ್ತುವಾರಿಯಾಗಿರುವ ಸಿ.ಟಿ.ರವಿ(CT Ravi) ಕೂಡಾ ನೆರೆಯ ರಾಜ್ಯದ ರಾಜಕೀಯ ಅರಿತು, ಅಲ್ಲಿ ಆಡಳಿತ ವಿರೋಧಿ ಅಲೆ ಎದುರಾಗದಂತೆ ನೋಡಿಕೊಂಡಿದ್ದೂ ಅಲ್ಲದೆ, ಕೇಂದ್ರ ಸರ್ಕಾರ(Central Government) ಜನಪರ ಕಾರ್ಯಕ್ರಮಗಳು ಜನರನ್ನು ತಲುಪುವಂತೆ ನೋಡಿಕೊಂಡರು. ಈ ಮೂಲಕ ರಾಜ್ಯದಲ್ಲಿ ಮರಳಿ ಪಕ್ಷಕ್ಕೆ ಅಧಿಕಾರ ಗಿಟ್ಟಿಸಿಕೊಟ್ಟಿದ್ದಾರೆ.

ಶೋಭಾ ಕರಂದ್ಲಾಜೆ:

ಇನ್ನೊಂದೆಡೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಅವರಿಗೆ ಲಕ್ನೋ, ಅಯೋಧ್ಯೆ ಸೇರಿ ಅವಧ್‌ ಪ್ರಾಂತ್ಯದ ಹಲವು ಜಿಲ್ಲೆಗಳಲ್ಲಿ 82 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ವಹಿಸಲಾಗಿತ್ತು.ಅಲ್ಲಿನ ಪ್ರತಿ ಮಂಡಲಕ್ಕೆ ಹೋಗಿ ಮುಖಂಡರನ್ನು ಭೇಟಿ ಮಾಡಿ, ಚರ್ಚಿಸಿ ಪಕ್ಷದ ಅಭ್ಯರ್ಥಿಯ ಗೆಲುವಿನ ತಂತ್ರಗಾರಿಕೆ ರೂಪಿಸಿದ್ದ ಶೋಭಾ, ಪಕ್ಷಕ್ಕೆ ಜಯವನ್ನು ಖಾತರಿಡಪಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ