ಕಾಂಗ್ರೆಸ್, ರಾಹುಲ್ ಗಾಂಧಿ ಕಪಟ ನಾಟಕ ನಿಲ್ಲಿಸಲಿ: ಮಾಜಿ ಸಂಸದ ಉಮೇಶ್ ಜಾಧವ್

By Kannadaprabha News  |  First Published Dec 28, 2024, 10:48 AM IST

ಕಾಂಗ್ರೆಸ್ ಪಕ್ಷವು ನಿರಂತರವಾಗಿ ಅಂಬೇಡ್ಕ‌ರ್ ಅವರಿಗೆ ಹೇಗೆ ಅಗೌರವ, ಅವಮಾನ ಮಾಡಿದೆಯೋ ಅದೇ ರೀತಿ ಈಗ ಅವರ ಹೆಸರಿನ ಮೇಲೆ ರಾಜಕೀಯ ಮಾಡುತ್ತಿದೆ. ಡಾ. ಅಂಬೇಡ್ಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರಿಗೆ ಸದನವನ್ನುದ್ದೇಶಿಸಿ ಮಾತನಾಡಲು ಅವಕಾಶ ಕೊಡಲಿಲ್ಲ: ಮಾಜಿ ಸಂಸದ ಡಾ. ಉಮೇಶ್ ಜಾಧವ್ 


ಕಲಬುರಗಿ(ಡಿ.28):  ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ಸಂವಿಧಾನ ಶಿಲ್ಪಿಡಾ. ಬಾಬಾಸಾಹೇಬ್ ಅಂಬೇ ಡ್ಕರ್‌ ಅವರಿಗೆ ಅಗೌರವವನ್ನು ತೋರಿಸಿ ಕೊಂಡು ಬಂದಿದೆ. ಆ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ಸಿನ ಅಂಬೇಡ್ಕರ್‌ ವಿರೋಧದ ಕುರಿತು ವಿವರವಾಗಿ ಬಹಿರಂಗಪಡಿಸಿದ್ದರಿಂದ ತನ್ನ ಲೋಪವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಅಮಿತ್ ಶಾ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ರಾಹುಲ್‌ ಗಾಂಧಿ ಅವರು ಇಂತಹ ಕಪಟ ನಾಟಕ ನಿಲ್ಲಿಸಬೇಕು ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ನಿರಂತರವಾಗಿ ಅಂಬೇಡ್ಕ‌ರ್ ಅವರಿಗೆ ಹೇಗೆ ಅಗೌರವ, ಅವಮಾನ ಮಾಡಿದೆಯೋ ಅದೇ ರೀತಿ ಈಗ ಅವರ ಹೆಸರಿನ ಮೇಲೆ ರಾಜಕೀಯ ಮಾಡುತ್ತಿದೆ. ಡಾ. ಅಂಬೇಡ್ಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರಿಗೆ ಸದನವನ್ನುದ್ದೇಶಿಸಿ ಮಾತನಾಡಲು ಅವಕಾಶ ಕೊಡಲಿಲ್ಲ. ಆಗ ಅಂಬೇಡ್ಕರ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ ಎಂದರು. 

Tap to resize

Latest Videos

undefined

ಕಲಬುರಗಿ: ಅತ್ತೆ ಬೇಗ ಸಾಯಲೆಂದು ಘತ್ತರಗಿ ಭಾಗ್ಯವಂತಿ ದೇವಿಗೆ ಹರಕೆ ಹೊತ್ತ ಸೊಸೆ!

ಈ ಸರ್ಕಾರ ಮುಸ್ಲಿಂರನ್ನು ರಕ್ಷಿಸುವುದರಲ್ಲಿ ತೋರುತ್ತಿರುವ ಕಾಳಜಿಯನ್ನು ಒಮ್ಮೆ ನೋಡಿ, ಮುಸ್ಲಿಂರನ್ನು ರಕ್ಷಿಸುವು ದರಲ್ಲಿ ಪ್ರಧಾನಿಯವರು ವಿಪರೀತ ಕಾಳಜಿ ತೋರಿಸುತ್ತಾರೆ. ಹೌದು, ಈ ದೇಶದ ಮುಸ್ಲಿಂರಿಗೆ ಸರಿಯಾದ ರಕ್ಷಣೆ ನೀಡಲೇ ಬೇಕು. ಆದಾಗ್ಯೂ ಭಾರತದಲ್ಲಿಮುಸ್ಲಿಂರು ಮಾತ್ರ ರಕ್ಷಣೆಗೆ ಅರ್ಹರಾಗಿರುವರೇ? ಎಂದು ತಮ ರಾಜೀನಾಮೆ ಪತ್ರದಲ್ಲಿ ಬಾಬಾಸಾಹೇಬ್ ಅವರು ದಾಖಲಿಸಿದ್ದಾರೆ ಎಂದರು. 

ಈ ಕಾರಣಕ್ಕಾಗಿ ಅಂಬೇಡ್ಕರ್ ಅವರ ಪತ್ರವನ್ನು ಕಾಂಗ್ರೆಸ್ ಸಾರ್ವಜನಿಕರಿಂದ ಮರೆಮಾಚಿದೆ. ನೆಹರೂ ಅವರ ವರ್ಚಸ್ಸಿಗೆ ಅತಿದೊಡ್ಡ ಕಳಂಕ ಮೆತ್ತುತ್ತಿತ್ತು ಎಂಬ ಭಯ ಕಾಂಗ್ರೆಸ್ಸಿಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರಿಗೆ ಭಾರತರತ್ನ, ಪದ್ಮ ಭೂಷಣ ಅಥವಾ ಪದಶ್ರೀ ಪ್ರಶಸ್ತಿಗಳನ್ನು ನೀಡಲಿಲ್ಲ. ಅಷ್ಟೇ ಅಲ್ಲದೇ ಅಂಬೇಡ್ಕರ್ ಅವರಿಗೆ ಚುನಾವಣೆಯಲ್ಲಿ ಸೋಲಿಸಿದ ಸಾಧು ಬಾಕದ್ರೋಳಕರ್‌ ಅವರಿಗೆ 1970ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಿತು. ಇದು ಕಾಂಗ್ರೆಸ್ಸಿನ ಅಸಹನೆಗೆ ಹಿಡಿದ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬ್ ಅವರ ಸ್ಮಾರಕಗಳನ್ನು ನಿರ್ಮಿಸಲಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾಸಾಹೇಬ್ ಅವರಿಗೆ ಸಂಬಂಧಿಸಿದ ಜಾಗಗಳನ್ನು ಪಂಚತೀರ್ಥಗಳನ್ನಾಗಿ ಅಭಿವೃದ್ಧಿಪಡಿಸಿದರು. ತಮ್ಮ ಸರ್ಕಾರಿ ಯೋಜನೆಗಳಲ್ಲಿ ಬಾಬಾಸಾಹೇಬ್ ಅವರ ಚಿಂತನೆಯನ್ನು ಬಿಜೆಪಿ ಸರ್ಕಾರ ಅಳವಡಿಸಿ ಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಅಂಬೇಡ್ಕರ್ ಸೆಂಟರ್‌ ಪೂರ್ಣಗೊಳಿಸಿ ಉದ್ಘಾಟಿಸಿದರು. ಅದೇ ರೀತಿ ಲಂಡನ್‌ನಲ್ಲಿ ಅಂಬೇಡ್ಕರ್ ಅವರು ವಾಸವಾಗಿದ್ದ ಮನೆ, ನಾಗಪುರದ ದೀಕ್ಷಾ ಭೂಮಿ, ಮುಂಬಯಿನ ಚೈತ್ಯ ಭೂಮಿಗಳನ್ನು ಮೋದಿ ಸರ್ಕಾರ ಸ್ಮಾರಕಗೆ ಳನ್ನಾಗಿ ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು. 

ಕಾಂಗ್ರೆಸ್ ಪಕ್ಷವು ಬಾಬಾಸಾಹೇಬರ ನೆನಪನ್ನು ಶಾಶ್ವತಗೊಳಿಸುವ ಬದಲು ಅಡೆತಡೆಗಳನ್ನು ನಿರ್ಮಿಸಿದೆ. ದೇಶಾದ್ಯಂತ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ನೆಹರೂ, ಇಂದಿರಾಗಾಂಧಿ, ಸಂಜಯಗಾಂಧಿ, ರಾಜೀವಗಾಂಧಿ ಅವರ ಹೆಸರಿನಲ್ಲಿ ಸಾವಿರಾರು ಸ್ಮಾರಕಗಳು, ಆಸ್ಪತ್ರೆಗಳು, ರಸ್ತೆಗಳನ್ನು ನಿರ್ಮಿಸಿದೆ ಎಂದು ಟೀಕಿಸಿದ ಅವರು, ಅಮಿತ್ ಶಾ ಅವರ ಸುದೀರ್ಘ ಭಾಷಣದ ಒಂದು ಸಣ್ಣ ತುಣಕನ್ನು ತಿರುಚಿ ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ ಎಂದು ದೂರಿದರು. 

ಕಲಬುರಗಿ: ಅಫಜಲಪುರದ ಗೊಬ್ಬೂರ ಗ್ರಾಮದ ಬಳಿ ಸರಣಿ ಅಪಘಾತ, ಮೂವರ ದುರ್ಮರಣ

ಆದಾಗ್ಯೂ, ದೇಶದ ಜನರು ಬುದ್ದಿವಂತರಿದ್ದಾರೆ. ಕಾಂಗ್ರೆಸ್ಸಿನ ಶಡ್ಯಂತ್ರವನ್ನು ಅರಿತುಕೊಳ್ಳುವಷ್ಟು ಬುದ್ಧಿವಂತರಿದ್ದಾರೆ. ಹಾಗಾಗಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸುವರು ಎಂದು ಅವರು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋತಿ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಶಾಸಕ ಬಸವರಾಜ್ ಮತ್ತಿಮೂಡ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಅಂಬಾರಾಯ್ ಅಷ್ಟಗಿ, ಹಣಮಂತರಾಯ್ ಮಲಾಜಿ, ಧರ್ಮಣ್ಣ ಇಟಗಾ ಉಪಸ್ಥಿತರಿದ್ದರು.

click me!