ಪ್ರಿಯಾಂಕ್‌ ಖರ್ಗೆ ತಾನೊಬ್ಬನೆ ಕರ್ನಾಟಕವನ್ನ ರಕ್ಷಣೆ ಮಾಡೋ ಹಾಗೆ ಮಾತಾಡ್ತಿದ್ದಾನೆ: ಸಂಸದ ಜಾಧವ್‌

By Kannadaprabha News  |  First Published Aug 31, 2023, 1:27 PM IST

ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಸಂಸದ ಉಮೇಶ ಜಾಧವ್‌ ತಿರುಗೇಟು ನೀಡಿದ್ದು ನಾನ್ಯಾಕೆ ಅವರ ಹೆಸರು ಹೇಳಲಿ? ಜಿಲ್ಲಾ ಉಸ್ತುವಾರಿ ಮಂತ್ರಿ ಅಂತ ಹೇಳಿಲ್ವಾ? ಪ್ರಿಯಾಂಕ್‌ ಖರ್ಗೆ ತಾನೊಬ್ಬನೆ ಕರ್ನಾಟಕವನ್ನ ರಕ್ಷಣೆ ಮಾಡೋನು ಅನ್ನೋ ಹಾಗೆ ಮಾತಾಡ್ತಿದ್ದಾನೆಂದು ಗುಡುಗಿದ್ದಾರೆ.


ಕಲಬುರಗಿ(ಆ.31):  ಕಲಬುರಗಿಯಲ್ಲೀಗ ಜನ ನಾಯಕರ ನಡುವೆ ಮಾತಿನ ಸಮರ ಶುರುವಾಗಿದೆ. ಮೊನ್ನೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದ ಡಾ. ಉಮೇಶ ಜಾದವ್‌ ಬಗ್ಗೆ ಹಾಗೂ ಬಿಜೆಪಿ ಚಿತ್ತಾಪುರ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಬಗ್ಗೆ ಹರಿಹಾಯ್ದಿದ್ದರು. ನಿನ್ನೆ ಸಂಸದ ಡಾ. ಉಮೇಶ ಜಾಧವ್‌ ಖರ್ಗೆ ಮಾತಿಗೆ ಮಾರುತ್ತರ ನೀಡುವ ಮೂಲಕ ಮಾತಿನ ಸಮರ ಹಾಗೇ ಮುಂದುವರಿಸಿದ್ದಾರೆ.

ಜಿಲ್ಲೆಯಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ ಎಂದು ಪ್ರಿಯಾಂಕ್‌ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಉಮೇಶ ಜಾಧವ್‌ ಮಾತಿಗೆ ತಿರುಗೇಟು ನೀಡಿದ್ದ ಸಚಿವ ಖರ್ಗೆ, ನನ್ನ ಹೆಸರು ಪ್ರಿಯಾಂಕ್‌ ಖರ್ಗೆ.. ನನ್ನ ಹೆಸರೇಳಲು ಜಾಧವ್‌ ಯಾಕೆ ಹಿಂದೇಟು ಹಾಕುತ್ತಿದ್ದಾರೆ.. ಧೈರ್ಯವಾಗಿ ನನ್ನ ಹೆಸರು ಹೇಳಲಿ ಎಂದು ಗುಡುಗಿದ್ದರು.

Latest Videos

undefined

ಪರವಾನಗಿ ಇಲ್ಲದೆ ಬ್ಯಾನರ್‌: ಸಚಿವ ಪ್ರಿಯಾಂಕ್‌ಗೆ 5000 ರು. ದಂಡ

ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಸಂಸದ ಉಮೇಶ ಜಾಧವ್‌ ತಿರುಗೇಟು ನೀಡಿದ್ದು ನಾನ್ಯಾಕೆ ಅವರ ಹೆಸರು ಹೇಳಲಿ? ಜಿಲ್ಲಾ ಉಸ್ತುವಾರಿ ಮಂತ್ರಿ ಅಂತ ಹೇಳಿಲ್ವಾ ? ಪ್ರಿಯಾಂಕ್‌ ಖರ್ಗೆ ತಾನೊಬ್ಬನೆ ಕರ್ನಾಟಕವನ್ನ ರಕ್ಷಣೆ ಮಾಡೋನು ಅನ್ನೋ ಹಾಗೆ ಮಾತಾಡ್ತಿದ್ದಾನೆಂದು ಗುಡುಗಿದ್ದಾರೆ.

ಕಲಬುರಗಿ ಖರ್ಗೆ ಕಾಂಗ್ರೆಸ್‌ ಲಿಮಿಟೆಡ್‌ ಆಗಿದೆ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಜಾಧವ್‌ ಸಂವಿಧಾನದ ಬಗ್ಗೆ ಮಾತಾಡುವ ಪ್ರಿಯಾಂಕ್‌ ಖರ್ಗೆ ಅದರಂತೆ ನಡೆದುಕೊಳ್ಳಲಿ, ಬಿಜೆಪಿ ಯಾವತ್ತೂ ದ್ವೇಷ ರಾಜಕಾರಣ ಮಾಡಿಲ್ಲ. ಮುಂದೆಯೂ ಮಾಡಲ್ಲ. ಕಲಬುರಗಿಯಲ್ಲಿ ಖರ್ಗೆ ಕಾಂಗ್ರೆಸ್‌ ಲಿಮಿಟೆಡ್‌ ಕಂಪೆನಿ ಆಗಿದೆ. ಇಲ್ಲಿ ಬೇರೆಯವರಿಗೆ ಅವಕಾಶವೇ ಇಲ್ಲದಂತಾಗಿದೆ.

ನಾನು ಕಾಂಗ್ರೆಸ್‌ ಬಿಡುವಾಗ ಪ್ರಿಯಾಂಕ್‌ ಖರ್ಗೆಯೆ ಕಾರಣ ಅಂತಾ ಹೇಳಿದ್ದೆ, ಅವರಿಂದಾನೆ ಬಿಟ್ಟಿದ್ದೆನೆ. ಯಾರಾದ್ರು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ, ಆದ್ರೆ ಪ್ರಿಯಾಂಕ್‌ ಖರ್ಗೆ ಅವರು ಒದ್ದು ಒಳಗೆ ಹಾಕಿ ಅಂತಾರೆ, ಒದ್ದು ಒಳಗಡೆ ಹಾಕೋಕೆ ಇದೆನು ಅವರಪ್ಪನದ್ದು ಜಾಗೀರಾ? ಅವರಪ್ಪನ ನೋಡಿ ಕಲಿಯಲಿ ಹೇಗೆ ಮಾತಾಡಬೇಕು ಅನ್ನೋದನ್ನ ಪ್ರಿಯಾಂಕ್‌ ಖರ್ಗೆಗೆ ಸಂಸದ ಜಾಧವ್‌ ತಿರುಗೇಟು ನೀಡಿದ್ದಾರೆ.

ಚಿತ್ತಾಪುರದ ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮಣಿಕಂಠ ರಾಠೋಡ್‌ ಹೋರಾಟ ಮಾಡುತ್ತಿದ್ದಾರೆ. ಆದರೆ, ಮಣಿಕಂಠ ಪ್ರತಿಭಟನೆ ತಡೆಯಲು ಆತನನ್ನು ಅರೆಸ್ಟ್‌ ಮಾಡಿಸಿದ್ದಾರೆಂದು ಆರೋಪಿಸಿದ ಜಾಧವ್‌ ಬೆಳ್ಳಂ ಬೆಳಗ್ಗೆಯೇ ಮಣಿಕಂಠ ಮನೆಗೆ ಹೋಗಿ ಆತನ ಬಂಧನ ಮಾಡಿದ್ದಾರೆ. ಅಷ್ಟೇ ಅಲ್ಲ, ಮಣಿಕಂಠ ಮೇಲೆ ಬಹಳಷ್ಟುಸುಳ್ಳು ಕೇಸ್‌ ದಾಖಲಿಸಲಾಗಿದೆ. ತಮ್ಮ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳ ವಿರುದ್ಧ ರಾಠೋಡ್‌ ಕಾನೂನು ಹೋರಾಟ ಮಾಡುತ್ತಿದ್ದಾರೆ. ಜಿಲ್ಲಾ, ನಗರ ಪೊಲೀಸರು ಪ್ರಿಯಾಂಕ್‌ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆಂದು ಕುಟುಕಿದ್ದಾರೆ.

ಡಾ. ಜಾಧವ್‌ ಬಣ್ಣ ಬಯಲಾಗಿದೆ:

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವಷ್ಟುಸಂಸದ ಡಾ. ಉಮೇಶ ಜಾಧವ್‌ ದೊಡ್ಡವರಲ್ಲ, ಮತ್ತು ಬಣ್ಣ ಬದಲಾಯಿಸುವ ಬಗ್ಗೆ ಅವರು ಮಾತನಾಡಬಾರದು. ಏಕೆಂದರೆ ಉಮೇಶ ಜಾಧವ್‌ ಅವರೇ ತಾವು ಯಾವುದು ರೀತಿಯಲ್ಲಿ ಬಣ್ಣ ಬದಲಾಯಿಸಿದ್ರಿ ಕಾಂಗ್ರೆಸ್‌ನವರಿಗೆ ಗೊತ್ತು. ಈಗ ಬಿಜೆಪಿಯವರಿಗೆ ಗೊತ್ತಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಲೇವಡಿ ಮಾಡಿದ್ದಾರೆ.

ನಾನು ಕಳೆದ ಬಾರಿ ನಮ್ಮ ಸರ್ಕಾರದಲ್ಲಿ ಸಚಿವನಾಗಿದಾಗ ಜಿಲ್ಲೆಗೆ ಸಾಕಷ್ಟುಅನುದಾನ ತಂದಿದ್ದೇನೆ, ವಿಶೇಷವಾಗಿ ಚಿಂಚೋಳಿ ಮತಕ್ಷೇತ್ರಕ್ಕೆ ಸಹ ನೀಡಿದ್ದೇನೆ. ಈಗ ಸಹ ಸಚಿವನಾಗಿ ಬದಲಾವಣೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಅದಕ್ಕೆ ನಾನು ಮಾತನಾಡುತ್ತೇನೆ, ನಮ್ಮ ಜಿಲ್ಲೆಗೆ ಸಂಸದರ ಕೊಡುಗೆ ಏನು ಹೇಳಲಿ ಎಂದು ಸವಾಲು ಹಾಕಿದರು.

ಚಂದ್ರಯಾನ ಚಂದ್ರನ ತಲುಪಿದರೂ ವಿಪಕ್ಷ ನಾಯಕ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

ನಮ್ಮ ಸರ್ಕಾರ ಕೇಂದ್ರದಲ್ಲಿ ಇರುವಾಗ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ತಂದ ಯೋಜನೆಗಳನ್ನು ಉಳಿಸಿಕೊಳ್ಳುವ ಯೋಗ್ಯತೆ ನಿಮಗಿಲ್ಲ, ಕೇಂದ್ರ ಸರ್ಕಾರದಿಂದ ಯಾವ ಯೋಜನೆಯಲ್ಲಿ ಎಷ್ಟುಅನುದಾನ ಬಂದಿದೆ ಜನರಿಗೆ ತೋರಿಸಲಿ ಎಂದು ಸಂಸದ ಉಮೇಶ ಜಾಧವ್‌ ವಿರುದ್ಧ ಕೀಡಿಕಾರಿದರು.

ನಾನು ಮಲ್ಲಿಕಾರ್ಜುನ ಖರ್ಗೆ ಅಲ್ಲ, ಆಗಲಿಕ್ಕೂ ಸಾಧ್ಯವಿಲ್ಲ, ನಾನು ಪ್ರಿಯಾಂಕ್‌ ಖರ್ಗೆ, ಯಾರು ಕಾನೂನು ಉಲ್ಲಂಘನೆ ಮಾಡಿದವರಿಗೆ ಒದ್ದು ಒಳಗೆ ಹಾಕಿ ಎಂದು ಹೇಳದೆ ಮತ್ತೇನು ಮಾಡಬೇಕು? ಜೈಲಿಗೆ ಕಳುಹಿಸಬಾರದಾ? ಅಂತವರಿಗೆ ಮೆರವಣಿಗೆ ಮಾಡಿ ಪಕ್ಷದ ಟಿಕೆಟ್‌ ನೀಡಿವುದು ಬಿಜೆಪಿ ಪಕ್ಷದಲ್ಲಿ ಕಾಂಗ್ರೆಸ್‌ನಲ್ಲಿ ಅಲ್ಲ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

click me!