
ಮುಂಬೈ: ಇಂಡಿಯಾ ಕೂಟದ ಮುಂಬೈ ಸಭೆ ನಿಮಿತ್ತ ಬುಧವಾರ ಬೆಳಗ್ಗೆ ಪೋಸ್ಟರ್ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರ ಫೋಟೋ ಕೈಬಿಟ್ಟಿತ್ತು. ಈ ಮೂಲಕ ಇಂಡಿಯಾ ಕೂಟಕ್ಕೆ ರಾಹುಲ್ ಗಾಂಧಿ ಅವರೇ ನಾಯಕ ಎಂಬಂತೆ ಬಿಂಬಿಸಿತ್ತು. ಕಾಂಗ್ರೆಸ್ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಫೋಟೋ ಕೈಬಿಟ್ಟಿರುವುದು, ಆಪ್ ಮತ್ತು ಕಾಂಗ್ರೆಸ್ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಹುಟ್ಟು ಹಾಕಿತ್ತು. ಇದು ವಿವಾದಕ್ಕೀಡಾಗುತ್ತಿದ್ದಂತೆ ಸಂಜೆ ಈ ತಪ್ಪು ಸರಿ ಮಾಡಿರುವ ಕಾಂಗ್ರೆಸ್, ರಾಹುಲ್ ಫೋಟೋ ಕೈಬಿಟ್ಟು ಕೇಜ್ರಿವಾಲ್ ಫೋಟೋವನ್ನು ಪೋಸ್ಟರ್‌ನಲ್ಲಿ ಸೇರಿಸಿದೆ. ಜತೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇಂಡಿಯಾ ಕೂಟದ ಎಲ್ಲ ಮುಖ್ಯಮಂತ್ರಿಗಳ ಫೋಟೋಗಳನ್ನೂ ಸೇರಿಸಿದೆ.
ಕೇಜ್ರಿವಾಲ್ ಫೋಟೋ ಕೈಬಿಟ್ಟ ಬಳಿಕ, ಇಂಡಿಯಾ ಮೈತ್ರಿಕೂಟದೊಳಗೆ ಮತ್ತೆ ಭಿನ್ನಮತದ ಹೊಗೆ ಮತ್ತೆ ಕಾಣಿಸಿಕೊಂಡಿದೆ. ದಿಲ್ಲಿಯಲ್ಲಿ ವೈರಿಗಳಾಗಿರುವ ಆಪ್ (AAP) ಮತ್ತು ಕಾಂಗ್ರೆಸ್ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಹುಟ್ಟು ಹಾಕಿತ್ತು. ಪೋಸ್ಟರ್‌ನಲ್ಲಿ ರಾಹುಲ್ ಮುಂಚೂಣಿ ನಾಯಕರಾಗಿ ಕಾಣಿಸಿಕೊಂಡಿದ್ದು ಅವರ ಜೊತೆಗೆ ನಿತೀಶ್ ಕುಮಾರ್, ಶರದ್ ಪವಾರ್, ಅಖಿಲೇಶ್ ಯಾದವ್ (Akhilesh Yadav), ಒಮರ್ ಅಬ್ದುಲ್ಲಾ, ಹೇಮಂತ್ ಸೊರೇನ್, ಮಮತಾ ಬ್ಯಾನರ್ಜಿ, ಸೀತಾರಾಂ ಯೆಚೂರಿ ಮೊದಲಾದವರ ಫೋಟೋ ಹಾಕಲಾಗಿತ್ತು. ಈ ಬಗ್ಗೆ ಬಿಜೆಪಿ ಕುಹಕವಾಡಿತ್ತು.
ಇಂಡಿಯಾ ಕೂಟಕ್ಕೆ ಅಶೋಕ ಚಕ್ರ ಇಲ್ಲದ ತ್ರಿವರ್ಣ ಧ್ವಜ, ಸಂಚಾಲಕನಾಗುವ ಆಸೆಯಿಲ್ಲ ಎಂದ ನಿತೀಶ್
ಕಾಂಗ್ರೆಸ್ ಮೊದಲು ಬಿಡುಗಡೆ ಮಾಡಿದ ಪೋಸ್ಟರ್‌ನಲ್ಲಿ INDIA Alliance Poster) ರಾಹುಲ್ ಮುಂಚೂಣಿ ನಾಯಕರಾಗಿ ಕಾಣಿಸಿಕೊಂಡಿದ್ದು ಅವರ ಜೊತೆಗೆ ನಿತೀಶ್ ಕುಮಾರ್, ಶರದ್ ಪವಾರ್, ಅಖಿಲೇಶ್ ಯಾದವ್, ಒಮರ್ ಅಬ್ದುಲ್ಲಾ, ಹೇಮಂತ್ ಸೊರೇನ್, ಮಮತಾ ಬ್ಯಾನರ್ಜಿ, ಸೀತಾರಾಂ ಯೆಚೂರಿ ಮೊದಲಾದವರ ಫೋಟೋ ಹಾಕಲಾಗಿತ್ತು. ಆದರೆ ಕೇಜ್ರಿವಾಲ್ ಫೋಟೋ ನಿಗೂಢವಾಗಿ ನಾಪತ್ತೆಯಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಅವರಿಗೆ ಯಾವುದೇ ಯೋಜನೆ ಇಲ್ಲ, ಕೇವಲ ಪ್ರಧಾನಿಯಾಗುವ ಗುರಿ ಇದೆ. ಬುಧವಾರ ಬಿಡುಗಡೆ ಮಾಡಿರುವ ಫೋಟೋ ನೋಡಿದರೆ ರಾಹುಲ್‌ಗೆ ನಾಯಕತ್ವ ನೀಡಿದಂತೆ ಕಾಣುತ್ತಿದೆ. ಆದರೆ ಅದರಲ್ಲಿ ಅಚ್ಚರಿಯ ರೀತಿಯಲ್ಲಿ ಕೇಜ್ರಿವಾಲ್ ಫೋಟೋ ಕಾಣೆಯಾಗಿದೆ. ಇಂದು ಆಪ್ ಕೇಜ್ರಿವಾಲ್ ಅವರನ್ನೇ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದೆ, ಮತ್ತೊಂದೆಡೆ ಜೆಡಿಯು ನಿತೀಶ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಇದನ್ನೆಲ್ಲಾ ನೋಡಿದರೆ, ಇದು ತ್ರಿವಳಿ ತಲಾಖ್‌ನತ್ತ ಹೆಜ್ಜೆ ಇಡುವಂತಿದೆ ಮತ್ತು ಅವರ ಯೋಜನೆಯ ಹಿಂದಿನ ಉದ್ದೇಶವನ್ನು ತೋರಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ: ಗೆಹ್ಲೋಟ್ ಘೋಷಣೆ
ಇಂಡಿಯಾ ಕೂಟದಿಂದ ಕೇಜ್ರಿ ಪ್ರಧಾನಿ ಅಭ್ಯರ್ಥಿ ಆಗಲಿ: ಆಪ್ ನಾಯಕಿ
ಮತ್ತೊಂದೆಡೆ ಆಮ್‌ಆದ್ಮಿ ಪಕ್ಷದ ನಾಯಕಿಯೊಬ್ಬರು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲು ಅರವಿಂದ್ ಕೇಜ್ರಿವಾಲ್ ಸೂಕ್ತರಾಗಿದ್ದಾರೆ ಎಂದು ಹೇಳಿದ್ದಾರೆ. ಇದು ಕೂಟದಲ್ಲಿ ಸಂಚಲನ ಮೂಡಿಸುತ್ತಿದ್ದಂತೆಯೇ ಇದು ಪಕ್ಷದ ಹೇಳಿಕೆ ಅಲ್ಲ ಎಂದು ಆಪ್ ಹಿರಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.
ಇಂಡಿಯಾ ಕೂಟದ ಬಗೆ ಬುಧವಾರ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಕಕ್ಕರ್, ‘ಪಕ್ಷದ ವಕ್ತಾರಳಾಗಿ ನಾನು ಕೇಜ್ರಿವಾಲ್ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಸೂಚಿಸಲು ಬಯಸುತ್ತೇನೆ. ಏಕೆಂದರೆ ಅವರು ಇಡೀ ದೇಶಕ್ಕೆ ಅಭಿವೃದ್ಧಿಯ ಹೊಸ ಮಾದರಿಯನ್ನು ನೀಡಿದ್ದಾರೆ. ಈ ಮಾದರಿ ಜನರಿಗೆ ಲಾಭ ತಂದಿದೆ’ ಎಂದಿದ್ದಾರೆ.
ಪಕ್ಷದ ಮತ್ತೊಬ್ಬ ನಾಯಕ ಗೋಪಾಲ್ ರಾಯ್ ಕೂಡಾ, ‘ಪಕ್ಷದ ಪ್ರತಿ ಕಾರ್ಯಕರ್ತನೂ ಕೇಜ್ರಿವಾಲ್ ಪ್ರಧಾನಿಯಾಗಲಿ ಎಂದು ಬಯಸುತ್ತಾನೆ. ಆದರೆ ಈ ಕುರಿತ ಅಂತಿಮ ನಿರ್ಧಾರವನ್ನು ಇಂಡಿಯಾ ಮೈತ್ರಿಕೂಟ ಒಂದಾಗಿ ತೆಗೆದುಕೊಳ್ಳಬೇಕಿದೆ’ ಎಂದಿದ್ದಾರೆ.
ಇಂಡಿಯಾ ಮೈತ್ರಿಕೂಟದ ಸಭೆಗೂ ಮುನ್ನ ವ್ಯಕ್ತವಾದ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗುತ್ತಲೇ ಎಚ್ಚೆತ್ತುಕೊಂಡ ಆಪ್ ಹಿರಿಯ ನಾಯಕಿ ಆತಿಶಿ ಹಾಗೂ ಮುಖಂಡ ರಾಘವ ಛಡ್ಡಾ, ‘ಅರವಿಂದ್ ಕೇಜ್ರಿವಾಲ್ ಪ್ರಧಾನಿ ಹುದ್ದೆಯ ಮೇಲೆ ಯಾವುದೇ ಕಣ್ಣಿಟ್ಟಿಲ್ಲ. ಪ್ರಿಯಾಂಕಾ ಹೇಳಿಕೆ ವೈಯಕ್ತಿಕ’ ಎನ್ನುವ ಮೂಲಕ ವಿವಾದ ತಣ್ಣಗಾಗಿಸುವ ಯತ್ನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.