ಕೆಸಿಆರ್ ಪತನ ಆರಂಭವಾಗಿದೆ: ತೆಲಂಗಾಣ ರ‍್ಯಾಲಿಯಲ್ಲಿ ಅಮಿತ್ ಶಾ ಗುಡುಗು

By BK Ashwin  |  First Published Aug 21, 2022, 9:07 PM IST

ತೆಲಂಗಾಣದಲ್ಲಿ ಅಮಿತ್ ಶಾ ಇಂದು ಬೃಹತ್ ರ‍್ಯಾಲಿ ನಡೆಸಿದ್ದಾರೆ. ಈ ವೇಳೆ ಕೆಸಿಆರ್‌ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವ ವಾಗ್ದಾಳಿ ನಡೆಸಿದ್ದಾರೆ. 


ತೆಲಂಗಾಣದ ಮುನುಗೋಡೆಯಲ್ಲಿ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಇಂದು ಬೃಹತ್ ರ‍್ಯಾಲಿ ನಡೆಸಿದ್ದಾರೆ. ಈ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಇನ್ನು, ರಾಜಗೋಪಾಲ್ ರೆಡ್ಡಿ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದು ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್ ಸರ್ಕಾರವನ್ನು ಬೇರು ಸಹಿತ ಕಿತ್ತೊಗೆಯಲು ನಾಂದಿಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರು ಭಾನುವಾರ ರಾಜ್ಯದ ಮುನುಗೋಡೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರ‍್ಯಾಲಿಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ನ ಹಾಲಿ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಇತ್ತೀಚೆಗಷ್ಟೇ ಕೈ ಪಕ್ಷದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಮುನುಗೋಡಿಡೆಯಲ್ಲಿ ಉಪಚುನಾವಣೆ ನಡೆಯುತ್ತಿದೆ. "ರಾಜಗೋಪಾಲ್ ರೆಡ್ಡಿ ಪಕ್ಷಕ್ಕೆ ಸೇರುತ್ತಾರೆ ಎಂದರೆ ಇದು ಕೆಸಿಆರ್ ಸರ್ಕಾರದ ಅಂತ್ಯದ ಆರಂಭ, ರಾಜಗೋಪಾಲ್ ರೆಡ್ಡಿ ಗೆದ್ದರೆ ಕೆಸಿಆರ್ ಸರ್ಕಾರ ಕಣ್ಮರೆಯಾಗುತ್ತದೆ" ಎಂದು ಅಮಿತ್ ಶಾ ಗುಡುಗಿದ್ದಾರೆ. ಅಲ್ಲದೆ, ಕೆಸಿಆರ್ ಸರ್ಕಾರವು ಪೆಟ್ರೋಲ್, ಡೀಸೆಲ್‌ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಲಿಲ್ಲ, ಇದರ ಪರಿಣಾಮವಾಗಿ ತೆಲಂಗಾಣದಲ್ಲಿ ಹಣದುಬ್ಬರದಲ್ಲಿ ತೀವ್ರ ಏರಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವರು ಆರೋಪಿಸಿದರು.

Tap to resize

Latest Videos

ಜ್ಯೂ. ಎನ್‌ಟಿಆರ್ ಜೊತೆ ಅಮಿತ್ ಶಾ ಡಿನ್ನರ್: ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?‌

ಇದರ ಜತೆಗೆ ಮಜ್ಲಿಸ್ (ಮುಸ್ಲಿಂ ರಾಜಕೀಯ ಪಕ್ಷದ) ಭಯದಿಂದ ಕೆಸಿಆರ್ ತೆಲಂಗಾಣ ವಿಮೋಚನಾ ದಿನವನ್ನು ಅಧಿಕೃತವಾಗಿ ಆಚರಿಸುತ್ತಿಲ್ಲ ಎಂದು ಅಮಿತ್‌ ಶಾ ಆರೋಪಿಸಿದ್ದು, ಮತ್ತು ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸೆಪ್ಟೆಂಬರ್ 17 ರಂದು ತೆಲಂಗಾಣ ವಿಮೋಚನಾ ದಿನವನ್ನು ಅಧಿಕೃತವಾಗಿ ಆಯೋಜಿಸುವುದಾಗಿ ಹೇಳಿದರು.

ಕೆಸಿಆರ್ ಸರ್ಕಾರದ ಬಗ್ಗೆ ಜನರಿಗೆ ಅಸಮಾಧಾನ: ಬಿಜೆಪಿ
ಈ ಮಧ್ಯೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ಸಹ "ಜನರು ಕೆಸಿಆರ್ ಸರ್ಕಾರದ ಬಗ್ಗೆ ಅತೃಪ್ತರಾಗಿದ್ದಾರೆ" ಎಂದು ಹೇಳಿದರು. ಹಾಗೂ, "ರಾಜ್ಯದಾದ್ಯಂತ ದೌರ್ಜನ್ಯಗಳು ಮತ್ತು ಹಿಂಸಾಚಾರಗಳು ನಡೆಯುತ್ತಿವೆ ಹಾಗೂ ಅಂತಹ ವಾತಾವರಣದಲ್ಲಿ ಜನರು ಭಯಭೀತರಾಗಿದ್ದಾರೆ. ಅವರು ಬಿಜೆಪಿ ತರುವ ಬದಲಾವಣೆಯನ್ನು ಮಾತ್ರ  ಬಯಸುತ್ತಾರೆ" ಎಂದೂ ತರುಣ್ ಚುಗ್ ಹೇಳಿದರು.

ಇನ್ನು, ಮುನುಗೋಡೆ ಉಪಚುನಾವಣೆಯಿಂದ ತೆಲಂಗಾಣ ರಾಜಕೀಯ ಪಲ್ಲಟವಾಗಲಿದೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಕೆ.ಲಕ್ಷ್ಮಣ್ ಅವರು, ‘ಜನರು ಟಿಆರ್‌ಎಸ್ ಪಕ್ಷದ ಪ್ರಾಬಲ್ಯದಿಂದ ಬೇಸತ್ತಿದ್ದು, ತೆಲಂಗಾಣ ಬದಲಾಗಬೇಕು ಎಂದು ಬಯಸಿದ್ದಾರೆ. ಬಿಜೆಪಿಯಿಂದ ಮಾತ್ರ ಇದನ್ನು ಸಾಧಿಸಲು ಸಾಧ್ಯ’ ಎಂದು ಹೇಳಿಕೆ ನೀಡಿದ್ದಾರೆ. ಹಾಗೂ, "ಜನರು ಕಾಂಗ್ರೆಸ್ ಪರ್ಯಾಯ ಎಂದು ನಂಬಿದ್ದರು, ಆದರೆ ಕೇಂದ್ರ ಮಟ್ಟದಲ್ಲಿ ರಾಜಕೀಯವನ್ನು ವೀಕ್ಷಿಸಿದ ನಂತರ, ಕಾಂಗ್ರೆಸ್ ಅಡಿಯಲ್ಲಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಅನ್ನು ವಿರೋಧಿಸಲು ಬಿಜೆಪಿಯೊಂದಿಗೆ ಒಂದಾಗಿವೆ" ಎಂದು ಸಹ ಕೆ. ಲಕ್ಷ್ಮಣ್ ಹೇಳಿಕೊಂಡಿದ್ದಾರೆ. 

ಮೋದಿಯ ಉತ್ತರಾಧಿಕಾರಿ ರೇಸಲ್ಲಿ 3 ನಾಯಕರು: ಭಾರತೀಯರ ಆಯ್ಕೆ ಯಾರು..?

ಮುಂಬರುವ ಮುನುಗೋಡೆ ಉಪಚುನಾವಣೆಗೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪ್ರಚಾರವನ್ನು ಪ್ರಾರಂಭಿಸಲು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಮುನುಗೋಡೆಗೆ ತೆರಳಿದ್ದ ಒಂದು ದಿನದ ನಂತರ ಬಿಜೆಪಿ ರ‍್ಯಾಲಿಯನ್ನು ನಡೆಸುತ್ತಿದೆ. ಇನ್ನೊಂದೆಡೆ, ತೆಲುಗು ಖ್ಯಾತ ನಟ ಹಾಗೂ ಟಿಡಿಪಿ ಸಂಸ್ಥಾಪಕ ಎನ್‌.ಟಿ. ರಾಮರಾವ್‌ ಅವರ ಮೊಮ್ಮಗ ಜೂನಿಯರ್‌ ಎನ್‌ಟಿಆರ್‌ ಅವರನ್ನು ಅಮಿತ್ ಶಾ ಇಂದು ರಾತ್ರಿ ಔತಣಕೂಟದಲ್ಲಿ ಭೇಟಿಯಾಗುತ್ತಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. 

click me!