ಬೆಳಗಾವಿಯಲ್ಲಿ ಕರ್ನಾಟಕ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಜಾರಕಿಹೊಳಿ ಬ್ರದರ್ಸ್ ವಿರುದ್ಧ ಗುಡುಗಿದ್ದಾರೆ.
ಬೆಳಗಾವಿ, (ಆಗಸ್ಟ್.21): ಜಾರಕಿಹೊಳಿ ಸಹೋದರರಿಗೆ ಸರ್ಕಾರ ಬದಲಿಸುವ ಶಕ್ತಿ ಇದೆ. ಆದ್ರೆ, ಸರ್ಕಾರಿ ಶಾಲೆಗಳನ್ನು ಕಟ್ಟುವ ಶಕ್ತಿ ಇಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಇಂದು(ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಪೃಥ್ವಿ ರೆಡ್ಡಿ, ಬೆಳಗಾವಿಯಲ್ಲಿ ದೊಡ್ಡ ದೊಡ್ಡ ರಾಜಕೀಯ ನಾಯಕರಿದ್ದಾರೆ. ಇಡೀ ರಾಜ್ಯ ಅಲ್ಲಾಡಿಸುವ ಶಕ್ತಿ ಇದೆ. ಆದರೆ ಅಭಿವೃದ್ಧಿ ಮಾಡಿಲ್ಲ ಎಂದು ಜಾರಕಿಹೊಳಿ ಬ್ರದರ್ಸ್ ವಿರುದ್ಧ ಕಿಡಿಕಾರಿದರು.
Belagavi: ಸ್ವಪಕ್ಷದಲ್ಲಾದ ಪಿತೂರಿ ಗುಟ್ಟು ಬಿಚ್ಚಿಟ್ಟ ಜಾರಕಿಹೊಳಿ ಸಂದೇಶ ರವಾನಿಸಿದ್ದು ಯಾರಿಗೆ?
2023ರಲ್ಲಿ ನಾವೇ ಸರ್ಕಾರ ರಚನೆ ಮಾಡ್ತೇವೆ. ಉತ್ತರ ಕರ್ನಾಟಕ ಜನ ಬೇರೆ ರಾಜ್ಯ ಯೋಚನೆ ಮಾಡಬೇಕಿಲ್ಲ. ಬೆಂಗಳೂರು ಬಿಟ್ಟರೇ ರಾಜ್ಯದಲ್ಲಿ ಬೇರೆ ಗ್ರೋಥ್ ಎಂಜಿನ್ ಇಲ್ಲ. ಉತ್ತರ ಕರ್ನಾಟಕ ಶಾಸಕರು ಬೆಂಗಳೂರಿಗೆ ಹೋಗಿ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಾರೆ. ಹೀಗಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಆಗ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಮನೀಷ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಸಿಬಿಐ ತನಿಖೆ ಸ್ವಾಗತಿಸುತ್ತೇನೆ. ನ್ಯೂಯಾರ್ಕ್ ಟೈಮ್ಸ್ ನಲ್ಲಿ ದೆಹಲಿ ಶಿಕ್ಷ ಣ ಕ್ರಾಂತಿ ಬಗ್ಗೆ ಫುಲ್ ಪೇಜ್ ಆರ್ಟಿಕಲ್ ಬಂದಿದೆ. ಶಿಕ್ಷಣ ಕ್ರಾಂತಿ ತಂದ ವ್ಯಕ್ತಿ ಮೇಲೆ ಸಿಬಿಐ ರೇಡ್ ಮಾಡಿದ್ದಾರೆ ಎಂದು ಮೋದಿ ಸರ್ಕಾರಕ್ಕೆ ಟಾಂಗ್ ಕೊಟ್ಟರು.
ಹಾಲಿ, ಮಾಜಿ ಶಾಸಕರು ಆಪ್ ಸಂಪರ್ಕದಲ್ಲಿ ಇದ್ದಾರೆ. ಆದ್ರೆ ಡಿ.ಕೆ.ಶಿವಕುಮಾರ್, ಈಶ್ವರಪ್ಪ ಅಂತವರನ್ನು ಪಕ್ಷಕ್ಕೆ ಸೇರಿಸಲ್ಲ. ಯಡಿಯೂರಪ್ಪ ಭ್ರಷ್ಟರು ಎಂದು ಅವರ ಪಕ್ಷದವರೇ ಸಿಎಂ ಸ್ಥಾನದಿಂದ ತಗೆದ್ರು. ಈಗ ವೋಟ್ ಬ್ಯಾಂಕ್‌ಗಾಗಿ ಯಡಿಯೂರಪ್ಪಗೆ ಸ್ಥಾನಮಾನ ನೀಡಿದ್ದಾರೆ ಎಂದು ಹೇಳಿದರು.