ನಮ್ಮ ಪಕ್ಷದ ಅಭ್ಯರ್ಥಿ ಸೋತಿದ್ದು ಸಂತಸವಾಗಿದೆ, ಜೆಡಿಎಸ್‌ MLC ಅಚ್ಚರಿ ಹೇಳಿ

By Suvarna News  |  First Published Jun 16, 2022, 6:55 PM IST

* ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು
* ಭದ್ರಕೋಟೆ ಕಳೆದುಕೊಂಡ ಜೆಡಿಎಸ್‌ಗೆ ಮುಖಭಂಗ
* ತಮ್ಮ ಪಕ್ಷದ ಅಭ್ಯರ್ಥಿ ಸೋತಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಜೆಡಿಎಸ್ MLC


ಮೈಸೂರು, (ಜೂನ್.16): ದಕ್ಷಿಣ ಪದವೀಧರ ಕ್ಷೇತ್ರದ (South Graduates constituency) ಕಾಂಗ್ರೆಸ್​ ಅಭ್ಯರ್ಥಿ ಮಧು ಜಿ.ಮಾದೇಗೌಡ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ ಭದ್ರಕೋಟೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಗೆದ್ದು ಬೀಗಿದೆ. ಇದರಿಂದ ದಳಪತಿಗಳಿಗೆ ಭಾರೀ ಮುಖಂಭವಾಗಿದೆ. ಇನ್ನು ತಮ್ಮ ಪಕ್ಷ ಸೋಲಿಗೆ ಜೆಡಿಎಸ್‌ ವಿಧಾನಪರಿಷತ್ ಸದಸ್ಯರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ/

ಹೌದು.... ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್‌ಗೆ ಸೋಲಾಗಿರುವುದು ಸಂತಸ ತಂದಿದೆ ಎಂದು ಹೇಳುವ ಮೂಲಕ ಹಿರಿಯ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Tap to resize

Latest Videos

ದಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿ ಗೆದ್ದ ಕಾಂಗ್ರೆಸ್

ಈ ಕ್ಷೇತ್ರಕ್ಕೆ ಸಂಬಂಧವೇ ಇರದ ವ್ಯಕ್ತಿಯನ್ನು ಜೆಡಿಎಸ್ ಅಭ್ಯರ್ಥಿ ಮಾಡಿದ್ದಕ್ಕೆ ಜೆಡಿಎಸ್‌ಗೆ ಸೋಲಾಗಿದೆ. ಜೆಡಿಎಸ್ ಸೋಲು ನನಗೆ ಅತೀವ ಸಂತಸ ತಂದಿದೆ ಎಂದು ಮರಿತಿಬ್ಬೇಗೌಡ ತಮ್ಮ ಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು.

ಮತದಾರರು ಪ್ರಬುದ್ಧತೆ ಪ್ರದರ್ಶಿಸಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಬಿಜೆಪಿಗೆ ಸೋಲಾಗಿದೆ. ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಮಹಾತ್ಮರ ಪಠ್ಯ ಕೈ ಬಿಟ್ಟಿದ್ದಕ್ಕೆ ಮತದಾರರು ಆಕ್ರೋಶಗೊಂಡು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್​ ಅಭ್ಯರ್ಥಿ ಮಧು ಜಿ.ಮಾದೇಗೌಡ ಟ್ಟು 45,275 ಮತಗಳು ಪಡೆದುಕೊಂಡಿದ್ದು, 12,205 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಗೆಲುವಿಗೆ ನಿಗದಿತ 46,083 ಮತಗಳ ನಿಗದಿತ ಕೋಟ ತಲುಪಲು 808 ಮತಗಳ ಕೊರತೆ ಎದುರಾಗಿತ್ತು. ಪ್ರತಿಸ್ಪರ್ಧಿ ಬಿಜೆಪಿಯ ರವಿಶಂಕರ್​ ಎಲಿಮಿನೇಟ್​ ಮಾಡಿ ಅಲ್ಲಿಂದ 808 ಮತ ಪಡೆಯಲಾಗಿದೆ. ಆ ಮೂಲಕ ನಿಗದಿತ ಕೋಟ ತಲುಪಿದ ಮಧು ಜಿ.ಮಾದೇಗೌಡ ಜಯ ಎಂದು ಘೋಷಣೆ ಮಾಡಲಾಯ್ತು.  

ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ, ಬಹಿರಂಗವಾಗಿ ಘೋಷಿಸಿದ ಜೆಡಿಎಸ್ MLC

ಕ್ಷಿಣ ಪದವೀಧರ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಗೆಲುವು ಇದಾಗಿದ್ದು, 2ನೇ ಬಾರಿ ಬಿಜೆಪಿ ಅಭ್ಯರ್ಥಿ ರವಿಶಂಕರ್ ಸೋಲು ಕಂಡಿದ್ದಾರೆ. ಇನ್ನು ಜೆಡಿಎಸ್ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದೆ.  ಜೆಡಿಎಸ್ ಬಿಜೆಪಿಗೆ ಬಂಡಾಯ ಮುಳುವಾಗಿದ್ದು, ಜೆಡಿಎಸ್ ಬಿಜೆಪಿ ಒಳ ಜಗಳದ ಲಾಭವನ್ನ ಕಾಂಗ್ರೆಸ್ ಪಡೆದುಕೊಂಡಿದೆ.

ಬಹಿರಂಗವಾಗಿಯೇ ಬೆಂಬಲಿಸಿದ ಜೆಡಿಎಸ್‌ MLC
ಹೌದು.....ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ ಮಾದೇಗೌಡ ಅವರಿಗೆ ಬೆಂಬಲ ನೀಡುವುದಾಗಿ ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಬಹಿರಂಗವಾಗಿಯೇ ಹೇಳಿದ್ದು, ಜೆಡಿಎಸ್ ಅಭ್ಯರ್ಥಿಗೆ ಬಿಗ್ ಶಾಕ್ ಕೊಟ್ಟಿದ್ದರು.

ಆಪ್ತ ಕೀಲಾರ ಜಯರಾಮು ಅವರಿಗೆ ಜೆಡಿಎಸ್‌ ವರಿಷ್ಠರು ಟಿಕೆಟ್‌ ನಿಕಾಕರಿಸಿದ ಕಾರಣ ಮರಿತಿಬ್ಬೇಗೌಡ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಜೆಡಿಎಸ್‌ ಅಭ್ಯರ್ಥಿ ಎಚ್‌.ಕೆ.ರಾಮು ಅವರ ಪರ ಪ್ರಚಾರ ಮಾಡುವುದಿಲ್ಲ ಎಂದಿದ್ದರು.
 

click me!