Chitradurga: ಕಾಂಗ್ರೆಸ್ ಪ್ರತಿಭಟನೆ ಅವರ ಮೂರ್ಖತನದ ಪರಮಾವಧಿ: ಸಚಿವ ಬಿ.ಸಿ ಪಾಟೀಲ್

Published : Jun 16, 2022, 06:53 PM IST
Chitradurga: ಕಾಂಗ್ರೆಸ್ ಪ್ರತಿಭಟನೆ ಅವರ ಮೂರ್ಖತನದ ಪರಮಾವಧಿ: ಸಚಿವ ಬಿ.ಸಿ ಪಾಟೀಲ್

ಸಾರಾಂಶ

ರಾಹುಲ್ ಗಾಂಧಿ ಇ.ಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಆ ಪಕ್ಷದ ಮುಖಂಡರ ಮೂರ್ಖತನದ ಪರಮಾವಧಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದರು. 

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜೂ.16): ರಾಹುಲ್ ಗಾಂಧಿ ಇ.ಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಆ ಪಕ್ಷದ ಮುಖಂಡರ ಮೂರ್ಖತನದ ಪರಮಾವಧಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಇಂದು ಮಾತನಾಡಿದ ಅವರು, ದೇಶದಲ್ಲಿ ಕಾನೂನಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯ. ಇ.ಡಿ ಕೇಸ್ ದಾಖಲಿಸಿದ್ದು ಸುಬ್ರಹ್ಮಣ್ಯ ಸ್ವಾಮಿ, ಬಿಜೆಪಿ ಅಲ್ಲ ಎಂದರು. ವಿಚಾರಣೆ ತಪ್ಪು ಅನ್ನೋದು ಕಾನೂನು, ಸಂವಿಧಾನ ವಿರೋಧಿ ನಿಲುವಾಗುತ್ತದೆ. 

ಆದರೂ ಕಾಂಗ್ರೆಸ್ಸಿಗರಿಗೆ ಯಾರು ಬುದ್ಧಿ ಹೇಳಬೇಕೋ ಎಂಬುದು ಅರ್ಥ ಆಗ್ತಿಲ್ಲ ಎಂದು ಕುಟುಕಿದ ಅವರು, ಕೊಲೆ, ದರೋಡೆ ಮಾಡಿದವರು ಗಲಾಟೆಕೋರರು. ಹೀಗೆ ವಿಚಾರಣೆ ಮಾಡಕೂಡದೆಂದರೆ ಕಾನೂನು ಸುವ್ಯವಸ್ಥೆ ಉಳಿಯುತ್ತದೆಯೇ? ಎಂದು ಪ್ರಶ್ನಿಸಿದರು‌. ತಪ್ಪು ಮಾಡಿಲ್ಲ ಎಂಬುದಾದರೆ ಅಂತವರಿಗೆ ರಕ್ಷಣೆ ಸಿಗುತ್ತದೆ. ಪ್ರತಿಭಟನೆ ಮೂಲಕ ಧಮ್ಕಿ ಹಾಕಿ ಬೆದರಿಕೆ ಒಡ್ಡುವುದು ಇವರ ಉದ್ಧಟತನ. ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆಯಿಂದ ಇಡೀ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ‌. ಜೈಲಿಗೆ ಹೋಗುವ ಕೆಲಸ ಮಾಡಿದ್ದರೆ ಜೈಲಿಗೆ ಹೋಗೇ ಹೋಗ್ತಾರೆ ಎಂದು ಬಿಸಿ ಪಾಟೀಲ್ ಕಿಡಿಕಾರಿದರು. 

ಬ್ಯಾಲಹಾಳ್ ಗ್ರಾ.ಪಂ. ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ : RTI ಕಾರ್ಯಕರ್ತನ ಆರೋಪ

ವಿಚಾರಣೆ ಮಾಡುವುದು ತಪ್ಪು ಅನ್ನುವುದಾದರೆ ದೇಶದಲ್ಲಿ ಸಂವಿಧಾನ, ಕಾನೂನು ಏಕೆ ಬೇಕು? ಇಷ್ಟು ಅರ್ಥ ಮಾಡಿಕೊಳ್ಳದಿದ್ದರೆ ಅವರಿಗೆ ಯಾರು ಬುದ್ದಿ ಹೇಳಬೇಕು. ಬ್ರಿಟಿಷರೇನಾದರೂ ಈ ರೀತಿ ಪ್ರತಿಭಟನೆ ಮಾಡಲಿಕ್ಕೆ ನಿರ್ಬಂಧ ಹೇರಿದ್ದರೆ ಹೋರಾಟನೇ ಮಾಡಲಿಕ್ಕೆ ಆಗುತ್ತಿರಲಿಲ್ಲ ಸ್ವಾತಂತ್ರ್ಯನು ಸಿಗುತ್ತಿರಲಿಲ್ಲ ಎಂಬ ಸಿದ್ದರಾಮಯ್ಯರವರ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರತಿಭಟನೆಯನ್ನು ಏನಾದರೂ ಅನ್ಯಾಯ ಆದರೆ ಮಾಡಬೇಕು, ಇ.ಡಿ ಪ್ರಕರಣ ಇತ್ತೀಚೆಗೆ ದಾಖಲಾದ ಪ್ರಕರಣವಲ್ಲ, ಇ.ಡಿ ಪ್ರಕರಣವನ್ನು ಬಿಜೆಪಿಯವರು ದಾಖಲು ಮಾಡಿಲ್ಲ. ಸುಬ್ರಮಣ್ಯಸ್ವಾಮಿಯವರು ಪ್ರಕರಣವನ್ನು ದಾಖಲು ಮಾಡಿದ್ದಾರೆ ಅದರ ವಿಚಾರಣೆ ನಡೆಯುತ್ತಿದೆ.

ವಿಚಾರಣೆ ಮಾಡಬಾರದು ಅಂದರೆ ಹೇಗೆ? ದೇಶದಲ್ಲಿ ಕಾನೂನು ಸುವ್ಯವಸ್ಥೆ ಉಳಿಯುತ್ತಾ? ಅವರು ತಪ್ಪು ಮಾಡಿಲ್ಲ ಅಂದರೆ ಪ್ರಕರಣದಿಂದ ಹೊರಬರುತ್ತಾರೆ. ತಪ್ಪು ಮಾಡಿದರೆ ಶಿಕ್ಷೆಯಾಗುತ್ತೆ. ಕಾನೂನು ಪ್ರಕಾರ ಕ್ರಮಕೈಗೊಳ್ಳುವುದನ್ನು ಪ್ರತಿಭಟನೆ ಮೂಲಕ ಧಮ್ಕಿ ಹಾಕಿದರೆ ಸರಿಯಲ್ಲ. ರಾಜ್ಯದಲ್ಲಿ ಬುಲ್ಡೋಜಾರ್ ಸಂಸ್ಕೃತಿ ಕಾಲಿಟ್ಟಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಂತಹ ಬುಲ್ಡೋಜಾರ್ ಸಂಸ್ಕೃತಿ ಏನು ಆಗಿಲ್ಲ ಎಂದರು. ಇದರೊಟ್ಟಿಗೆ ಬಿತ್ತನೆ ಬೀಜಕ್ಕೆ ಸರ್ಕಾರ ಏನು ನಿಗದಿ ಪಡಿಸಿದೆ (ಶೇಂಗಾ ಬೀಜದ ದರಕ್ಕೆ ಸಂಬಂಧಿಸಿದಂತೆ) ಆ ದರವನ್ನೇ ಕೊಡಬೇಕಾಗುತ್ತದೆ. ಸಾಮಾನ್ಯ ಬೀಜದ ದರಕ್ಕೂ ಸರ್ಕಾರದಿಂದ ವಿತರಣೆಯಾಗುವ ಬೀಜಕ್ಕೂ ವ್ಯತ್ಯಾಸವಿರುತ್ತದೆ. ಪ್ರತಿಭಟನೆ ಮಾಡುವುದು ತಪ್ಪು ಎಂದರು. 

ಇಡಿ ವಿಚಾರಣೆಯ ನೋವು ಕಾಂಗ್ರೆಸ್‌ನವರಿಗೂ ಗೊತ್ತಾಗಲಿ: ಶ್ರೀರಾಮುಲು

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ, 2012ರಲ್ಲಿ ಸುಬ್ರಮಣ್ಯಸ್ವಾಮಿರವರು ಇ.ಡಿ ಪ್ರಕರಣವನ್ನು ದಾಖಲು ಮಾಡುತ್ತಾರೆ. ಆ ಸಮಯದಲ್ಲಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ರವರ ನೇತೃತ್ವದಲ್ಲಿ ಸರ್ಕಾರ ಅಧಿಕಾರದಲ್ಲಿರುತ್ತದೆ.  ಇ.ಡಿ ಯವರು ಪ್ರಧಾನಮಂತ್ರಿಯವರನ್ನು, ಅಧಿಕಾರದಲ್ಲಿರುವರ ಮಾತನ್ನೇ ಕೇಳುತ್ತಾರೆ ಅನ್ನುವುದಾದರೆ ಮನಮೋಹನ್ ಸಿಂಗ್ ರವರೇ ಹೇಳುಬಹುದಾಗಿತಲ್ವಾ? ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ  ಮೇಲಿನ ಪ್ರಕರಣವನ್ನು ತೆಗೆದುಕೊಳ್ಳಬಾರದು ಅಂತ ಹೇಳಬಹುದಿತಲ್ವಾ? ಇ.ಡಿ ಯು ಒಂದು ಸ್ವಾತಂತ್ರ್ಯ ಸಂಸ್ಥೆ ಯಾವುದೇ ವ್ಯಕ್ತಿಯ ಮಾತಿನ ಮೇಲೆ ನಡೆಯುವ ಸಂಸ್ಥೆಯಲ್ಲ. ಈಗ ಕಾಂಗ್ರೆಸ್ ನವರು ಇ.ಡಿಯವರು ಬಿಜೆಪಿಯವರ ಮಾತನ್ನು ಕೇಳಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುವುದು ಸರಿಯಲ್ಲ‌ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ