ದೇವೇಗೌಡ-ಹೆಚ್‌ಡಿಕೆ ನಡೆಯಿಂದ ಬೇಸತ್ತ ಮತ್ತೊಬ್ಬ ಜೆಡಿಎಸ್‌ ನಾಯಕ ಕಾಂಗ್ರೆಸ್‌ ತೆಕ್ಕೆಗೆ..?

By Suvarna NewsFirst Published Oct 19, 2020, 10:31 AM IST
Highlights

ಮಧು ಬಂಗಾರಪ್ಪ ಜೊತೆ ಚರ್ಚೆ ನಡೆಸಿದ ಡಿ.ಕೆ. ಶಿವಕುಮಾರ್| ಸತತ ಮೂರು ಸೋಲುಗಳಿಂದ ಕಂಗೆಟ್ಟ ಮಧು ಬಂಗಾರಪ್ಪ| ಜೆಡಿಎಸ್‌ನಲ್ಲೇ ಇದ್ದರೆ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವುದು ಕಂಗೆಟ್ಟ ಮಧು ಬಂಗಾರಪ್ಪಗೆ ಕಷ್ಟವಾಗಬಹುದು| ಸೋಲಿನಿಂದ ಕಂಗೆಟ್ಟ ಮಧು ಬಂಗಾರಪ್ಪಗೂ ಗೆಲುವಿನ ಟಾನಿಕ್ ಬೇಕಿದೆ| 

ಬೆಂಗಳೂರು(ಅ.19): ಜೆಡಿಎಸ್‌ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವ ಹೊಂದಿದ ಮಧು ಬಂಗಾರಪ್ಪ ಬಳಿಕ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ.

ಶಿವಮೊಗ್ಗದಲ್ಲಿ ಅಣ್ಣ ಕುಮಾರ್ ಬಂಗಾರಪ್ಪ ದಿನೇ ದಿನೆ ಪ್ರಬಲರಾಗುತ್ತಿದ್ದಾರೆ. ಅಣ್ಣನ ಎದುರು ಪ್ರಾಬಲ್ಯ ವೃದ್ಧಿಸಿಕೊಳ್ಳಲು ಮಧು ಬಂಗಾರಪ್ಪ ಕಾಂಗ್ರೆಸ್ ಸೇರಬಯಸಿದ್ದಾರೆ. ಇನ್ನು ಕಾಂಗ್ರೆಸ್ ಕೂಡಾ ಶಿವಮೊಗ್ಗ ಭಾಗದಲ್ಲಿ ಶಕ್ತಿ ವೃದ್ಧಿಸಿಕೊಳ್ಳುವ ಸಕಲ ಪ್ರಯತ್ನ ನಡೆಸುತ್ತಿದೆ. ಈ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಹೀಗಾಗಿ ಕಾಂಗ್ರೆಸ್‌ ತನ್ನ ಶಕ್ತಿಯನ್ನ ವೃದ್ಧಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. 

ಬೆಂಕಿ ಕೆಂಡವಾದ ಮಧು ಬಂಗಾರಪ್ಪ: HDK, HDD ವಿರುದ್ಧ ವಾಗ್ದಾಳಿ

ಈ ಸಂಬಂಧ ಈಗಾಗಲೇ ಮಧು ಬಂಗಾರಪ್ಪ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್‌.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ನಡೆಯಿಂದ ಮಧು ಬಂಗಾರಪ್ಪ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಈಗಾಗಲೇ ಸತತ ಮೂರು ಸೋಲುಗಳಿಂದ ಮಧು ಬಂಗಾರಪ್ಪ ಕಂಗೆಟ್ಟಿದ್ದಾರೆ. ಹೀಗೆ ಜೆಡಿಎಸ್‌ನಲ್ಲೇ ಇದ್ದರೆ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟವಾಗಬಹುದು. ಸೋಲಿನಿಂದ ಕಂಗೆಟ್ಟ ಮಧು ಬಂಗಾರಪ್ಪಗೂ ಗೆಲುವಿನ ಟಾನಿಕ್ ಬೇಕಿದೆ. ಹೀಗಾಗಿಯೇ ಮಧು ಬಂಗಾರಪ್ಪಗೂ ಕಾಂಗ್ರೆಸ್ ನತ್ತ ಚಿತ್ತ ಹರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ. 
 

click me!