ಸಿದ್ದರಾಮಯ್ಯ ಕ್ಷೇತ್ರ ಹುಡುಕಿಕೊಳ್ಳಲಿ; ಕಟೀಲ್‌ರವರೇ ನಿಮ್ಮ ಪಿಟೀಲನ್ನು ಬಿಜೆಪಿ ಕಚೇರಿಯಲ್ಲಿ ನುಡಿಸಿ: ಇಬ್ರಾಹಿಂ

By BK Ashwin  |  First Published Jan 22, 2023, 2:58 PM IST

ಕಟೀಲ್‌ರವರೆ ನಿಮ್ಮ ಪಿಟೀಲನ್ನು ಬಿಜೆಪಿ ಕಚೇರಿಯಲ್ಲಿ ನುಡಿಸಿ, ಹೊರಗೆ ಬಂದು ಪಿಟೀಲು ನುಡಿಸಿದ್ರೆ ಪಿಟೀಲು ಸಮೇತ ಜನ ನಿಮ್ಮನ್ನು ಹೊರ ಹಾಕ್ತಾರೆ ಎಂದು ನಳಿನ್ ಕುಮಾರ್ ಕಟೀಲ್‌ ವಿರುದ್ದ ಸಿ.ಎಂ ಇಬ್ರಾಹಿಂ ಕಿಡಿ ಕಾರಿದ್ದಾರೆ.


ಬೆಂಗಳೂರು (ಜನವರಿ 22, 2023): ಜೆಡಿಎಸ್ ವಿರುದ್ದ ಸಿದ್ದರಾಮಯ್ಯ ವಾಗ್ಧಾಳಿ ವಿಚಾರವಾಗಿ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾಜಿ ಸಿಎಂ ವಿರುದ್ಧ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯನವ್ರು ಮೊದಲು ಕ್ಷೇತ್ರ ಹುಡುಕಿಕೊಳ್ಳಲಿ. ಅನ್ಯರ ಡೊಂಕು ನಿಮಗ್ಯಾಕೆ,ನಿಮ್ಮ ಡೊಂಕು ತಿದ್ದಿಕೊಳ್ಳಿ ಎಂದು ಬಸವಣ್ಣ ಹೇಳಿದ್ದಾರೆ. ಜೆಡಿಎಸ್‌ಗೆ 80 ಸೀಟು ಬರುತ್ತೆ ಅಂತ ಸರ್ವೇ ಹೇಳುತ್ತಿದೆ. ನಾವು ಯಾವುದೇ ಸರ್ವೇ ಮಾಡಿಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌‌ನವರು ಎಸಿ ಬಸ್‌ನಲ್ಲಿ ಪ್ರವಾಸ ಮಾಡ್ತಿದ್ದಾರೆ. ಹೋದ ಜಿಲ್ಲೆಯಲ್ಲಿ ಚಿಕನ್ ತಿಂದು ವಾಪಸ್ ಆಗ್ತಿದ್ದಾರೆ ಎಂದೂ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. 

ಇನ್ನು, ಕಾಂಗ್ರೆಸ್‌ನವರು (Congress) ಕರೆದು ತಂದ ಜನಕ್ಕೆ ಭಾಷಣ (Speech) ಮಾಡ್ತಿದ್ದಾರೆ,ನಾವು ಬಂದ ಜನಕ್ಕೆ ಭಾಷಣ ಮಾಡ್ತಿದ್ದೇವೆ. ಕುಮಾರಸ್ವಾಮಿ (Kumaraswamy) ಯಾತ್ರೆಗೆ (Yatra) ಜನರ ಬೆಂಬಲ ಸಿಗುತ್ತಿದೆ. ನಮ್ಮ ಯಾತ್ರೆಯಲ್ಲಿ ಯಾರನ್ನೂ ಬೈಯ್ಯುವ ಚಿಂತೆಯಿಲ್ಲ. ನಾಡಿನ ಜನರ (State People) ಚಿಂತೆ ನಮಗಿದೆ, ಜನರ ಸಹಕಾರ ಏನಿದೆ ಅಂತ ಟಿವಿಯಲ್ಲಿ ನೋಡ್ತಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮಕ್ಕೂ ನಮಗೂ ಏನು ವ್ಯತ್ಯಾಸವಿದೆ ಅಂತ ಜನ ನೋಡ್ತಿದ್ದಾರೆ. ನಿರುದ್ಯೋಗಿ ರಾಜಕಾರಣಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ನಮಗೆ ಬಹುಮತ ಬರಲಿದೆ ಎಂದೂ ಜೆಡಿಎಸ್‌ ರಾಜ್ಯಾಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ಇದನ್ನು ಓದಿ: ದೊಡ್ಡಗೌಡರ ಕ್ಷಮೆ ಕೇಳದಿದ್ರೆ ಕಟೀಲ್ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ಸಿಎಂ ಇಬ್ರಾಹಿಂ

ಅಲ್ಲದೆ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಯಾರು ಅಂತ ಹೇಳಿ ಮಿಸ್ಟರ್ ಸುರ್ಜೇವಾಲಾ ಅಂತ ಕಾಂಗ್ರೆಸ್‌ ನಾಯಕನನ್ನು ಪ್ರಶ್ನೆ ಮಾಡಿದ್ದಾರೆ. ಡಿಕೆಶಿನಾ,ಸಿದ್ದರಾಮಯ್ಯನಾ ಅಂತ ಹೇಳಿ ಸುರ್ಜೆವಾಲಾ ಅವ್ರೇ. ಜೆಡಿಎಸ್‌ನಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿ ಅಂತ ನಾವು ಹೇಳ್ತಿದ್ದೇವೆ, ನೀವು ಹೇಳಿ ನೋಡೋಣ. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಅಂತ ಹೇಳಿದ ದಿನ ಕಾಂಗ್ರೆಸ್ ಒಡೆದು ಹೋಗುತ್ತೆ ಎಂದೂ ಸಿ.ಎಂ. ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಜೆಡಿಎಸ್‌ ರಾಜ್ಯಾದ್ಯಕ್ಷರು, ಬಿಜೆಪಿಯಲ್ಲಿ ಮುಖ್ಯಮಂತ್ರಿ ಕ್ಯಾಂಡಿಡೇಟ್ ಯಾರಿದ್ದಾರೆ..? ರಾಜ್ಯ ನಾಯಕರು ಮೋದಿ ಹೇಳಿದ ಹಾಗೆ ಕೇಳಬೇಕು. ನಾವು ಮೋದಿ, ಅಮಿತ್ ಶಾ ಹೇಳಿದ ಹಾಗೆ ಕೇಳಲ್ಲ ಅಂತ ರಾಜ್ಯ ನಾಯಕರು ಯಾರಾದ್ರೂ ಹೇಳಿದ್ದಾರಾ. ಪಂಚಾಯಿತಿ ಅಧ್ಯಕ್ಷ ಕೊಡುವ ಹಕ್ಕು ಪತ್ರವನ್ನು ಮೋದಿ ಕೈನಲ್ಲಿ ಕೊಡಿಸಿದ್ದಾರೆ. ನಾಚಿಕೆ ಆಗಲ್ವಾ ನಿಮಗೆ ಎಂದೂ ಸಿ.ಎಂ. ಇಬ್ರಾಹಿಂ ಟೀಕೆ ಮಾಡಿದ್ದಾರೆ. 

ಇದನ್ನೂ ಓದಿ: ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ: ಸಿ.ಎಂ.ಇಬ್ರಾಹಿಂ

 ಈ ಮಧ್ಯೆ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧವೂ ಟೀಕಿಸಿದ ಸಿ.ಎಂ. ಇಬ್ರಾಹಿಂ, ಕಟೀಲ್‌ರವರೆ ನಿಮ್ಮ ಪಿಟೀಲನ್ನು ಬಿಜೆಪಿ ಕಚೇರಿಯಲ್ಲಿ ನುಡಿಸಿ, ಹೊರಗೆ ಬಂದು ಪಿಟೀಲು ನುಡಿಸಿದ್ರೆ ಪಿಟೀಲು ಸಮೇತ ಜನ ನಿಮ್ಮನ್ನು ಹೊರ ಹಾಕ್ತಾರೆ ಎಂದು ನಳಿನ್ ಕುಮಾರ್ ಕಟೀಲ್‌ ವಿರುದ್ದ ಸಿ.ಎಂ ಇಬ್ರಾಹಿಂ ಕಿಡಿ ಕಾರಿದ್ದಾರೆ.

ಹಾಗೆ, ಸಿದ್ದರಾಮಯ್ಯ ನೋಡುದ್ರೆ ಅಯ್ಯೋ ಅನ್ಸುತ್ತೆ, ಸಿದ್ದರಾಮಯ್ಯ ಬೆಳ್ಸಿದ್ದು ನಾವೇ. ಗಣೇಶ್ ಬೀಡಿ, ಬೇರೆ ಬೀಡಿ ತರಹ ಸಿದ್ದರಾಮಯ್ಯ ಬೀಡಿ ಬರುತ್ತೇನೋ. ಸಿದ್ದರಾಮಯ್ಯ ಕೋಲಾರದಲ್ಲಿ 1600 ಚೇರ್ ಹಾಕಿ ಸಭೆ ಮಾಡಿದ್ದಾರೆ. ಸಿಎಂ ಆಗಿದ್ದವರು ಬಂದಾಗ ಇಷ್ಟು ಜನ‌ ಬಂದಿರೋದು ನೋಡಿ ಅಯ್ಯೋ ಪಾಪ ಅನಿಸುತ್ತದೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡ್ತಾರಾ ಅಂತ ನೀವೆ ಇನ್ನೊಮ್ಮೆ ಪ್ರಶ್ನೆ ಮಾಡಿ ಎಂದೂ ಬೆಂಗಳೂರಿನಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. 

ಇದನ್ನೂ ಓದಿ: Mandya: ಇಬ್ರಾಹಿಂರಿಂದಲೇ ಜೆಡಿಎಸ್‌ ಅವನತಿ: ಸಿ.ಪಿ.ಯೋಗೇಶ್ವರ್‌

click me!