Assembly election: ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ: ನಟ ಅಹಿಂಸಾ ಚೇತನ್‌ ಟೀಕೆ

By Sathish Kumar KHFirst Published Feb 6, 2023, 6:00 PM IST
Highlights

ಸರ್ಕಾರ ಇಂಗ್ಲೀಷ್ ಮಾತಾಡೋರ ಪರ ಇದೆ, ಬಡವರ ಪರವಿಲ್ಲ
ಬ್ರಾಹ್ಮಣತ್ವದ ಹೇಳಿಕೆ ಪಂಥೀಯ ಮತ್ತು ಮೂಢನಂಬಿಕೆಯ ಅಸಂಬದ್ಧತೆ!
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ನಟ ಚೇತನ್

ಬೆಂಗಳೂರು (ಫೆ.06):  ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಳೆಯ ಕರ್ನಾಟಕ ಸಂಪ್ರದಾಯದ ಬ್ರಾಹ್ಮಣರನ್ನು ಪೂಜಿಸುತ್ತೇವೆ ಮತ್ತು ಅವರ ಕಾಲಿಗೆ ಬೀಳುತ್ತೇವೆ ಎಂದು ಹೇಳಿರುವುದು ಪಂಥೀಯ ಮತ್ತು ಮೂಢನಂಬಿಕೆಯ ಅಸಂಬದ್ಧತೆ ಆಗಿದೆ. ನಮಗೆ ಬ್ರಾಹ್ಮಣರು ಸಮಸ್ಯೆಯಲ್ಲ, ಬ್ರಾಹ್ಮಣ್ಯವು ದೊಡ್ಡ ಸಮಸ್ಯೆಯಾಗಿದೆ. ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷವಾಗಿದೆ ಎಂದು ನಟ ಅಹಿಂಸಾ ಚೇತನ್‌ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. 

ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಲ್ಲಾದ್‌ ಜೋಶಿ ಅವರನ್ನು ಸಿಎಂ ಮಾಡುವ ಹಾಗೂ 8 ಮಂದಿಯನ್ನು ಉಪಮುಖ್ಯಮಂತ್ರಿ ಮಾಡುವ ಪ್ಲ್ಯಾನ್‌ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಮುಂದುವರೆದು ಪ್ರಹ್ಲಾದ್‌ ಜೋಶಿ ಅವರು ನಾವು ಪೂಜಿಸುವ, ಕಾಲಿಗೆ ಬೀಳುವ ಹಳೆಯ ಬ್ರಾಹ್ಮಣರಲ್ಲ. ಗಾಂಧೀಜಿಯನ್ನು ಕೊಲೆ ಮಾಡಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ. ಹೀಗಾಗಿ, ಪ್ರಹ್ಲಾದ್‌ ಜೋಶಿ ಅವರು ಜೆಡಿಎಸ್‌ ಪಂಚರತ್ನ ಯಾತ್ರೆಯ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

Assembly election: ಬಿಜೆಪಿ ಮುಂದಿನ ಮುಖ್ಯಮಂತ್ರಿಯೂ ಬಸವರಾಜ ಬೊಮ್ಮಾಯಿ: ಸಚಿವ ಶ್ರೀರಾಮುಲು

ಫೇಸ್‌ಬುಕ್‌ನಲ್ಲಿರುವ ಬರೆದುಕೊಂಡಿರುವ ಮಾಹಿತಿ: ಇದಕ್ಕೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿ ಬರೆದುಕೊಂಡಿರುವ ನಟ ಅಹಿಂಸಾ ಚೇತನ್‌ ಅವರು, "ಎಚ್‌ ಡಿ ಕುಮಾರಸ್ವಾಮಿ ಹೇಳುತ್ತಾರೆ, ಪ್ರಲ್ಹಾದ್ ಜೋಶಿಯು ಗಾಂಧಿಯನ್ನು ಕೊಂದ ಪೇಶ್ವೆ ಬ್ರಾಹ್ಮಣ ಸಂಪ್ರದಾಯದಿಂದ ಬಂದವರು. ಜೋಶಿ ‘ಹಳೆಯ ಕರ್ನಾಟಕದ ಸಂಪ್ರದಾಯದ’ ಬ್ರಾಹ್ಮಣರಲ್ಲ. ನಾವು ‘ಹಳೆಯ ಕರ್ನಾಟಕ ಸಂಪ್ರದಾಯದ’ ಬ್ರಾಹ್ಮಣರನ್ನು ಪೂಜಿಸುತ್ತೇವೆ ಮತ್ತು ಅವರ ಕಾಲಿಗೆ ಬೀಳುತ್ತೇವೆ. ಇದು ಎಂತಹ ಪಂಥೀಯ ಮತ್ತು ಮೂಢನಂಬಿಕೆಯ ಅಸಂಬದ್ಧತೆ! ನಮಗೆ ಬ್ರಾಹ್ಮಣರು ಸಮಸ್ಯೆಯಲ್ಲ — ಬ್ರಾಹ್ಮಣ್ಯವು ದೊಡ್ಡ ಸಮಸ್ಯೆ. ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ" ಎಂದು ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ನಟ ಚೇತನ್‌, ಇಂದು ನಾನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರೊಂದಿಗೆ ಕೈ ಜೋಡಿಸಿದ್ದೇನೆ. ನಮ್ಮ ಕರ್ನಾಟಕ ಸಾರಿಗೆ ನೌಕರರು ಏಪ್ರಿಲ್ 2021 ರಿಂದ ನ್ಯಾಯಯುತ ಬೇಡಿಕೆಗಳೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಅವರನ್ನು  ಸಾಂಸ್ಥಿಕವಾಗಿ ಗುರಿಪಡಿಸಲಾಗಿದೆ, ಅವರನ್ನು  ಉದ್ಯೋಗಗಳಿಂದ ತೆಗೆದುಹಾಕಲಾಗಿದೆ, ಬದುಕುವ ವೇತನದಿಂದ ಅವರನ್ನು ವಂಚಿತರನ್ನಾಗಿ ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  

ಸಾರಿಗೆ ನೌಕರರ ಎಲ್ಲಾ ಬೇಡಿಕೆಗಳನ್ನ ಈಡೇರಿಸಬೇಕು: ಸಾರಿಗೆ ನೌಕರರು ನ್ಯಾಯತವಾಗಿ ಬಹಳ ದೊಡ್ಡ ಹೋರಾಟ ಮಾಡ್ತಿದಾರೆ. ಅವರ ಹತ್ತಿರ ಬಹಳಷ್ಟು ಶಕ್ತಿ ಇದೆ, ಆದರೆ ಸರ್ಕಾರ ಇವರ ಮೇಲೆ ದಾಳಿ ಮಾಡ್ತಾ ಇದೆ. ಅವರ ಪ್ರಜಾಪ್ರಭುತ್ವ ಕಿತ್ತುಕೊಂಡಿದೆ. ಯಡಿಯೂರಪ್ಪ ಸರ್ಕಾರ ಮತ್ತು ಈಗಿರುವ ಸರ್ಕಾರ ಇವರ ಮೇಲೆ ಸುಮ್ನೆ ಪ್ರಕರಣಗಳನ್ನ ದಾಖಲು ಮಾಡಿದೆ. ಸಾರಿಗೆ ನೌಕರರ ಎಲ್ಲಾ ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು. ಈ ಸರ್ಕಾರ ಜನವಿರೋಧಿ, ಬಡವರ ವಿರೋಧಿ ಸರ್ಕಾರ ಆಗಿದೆ. ಸರ್ಕಾರ ದಾಳಿ ಮಾಡಿದ್ರಿಂದ ಈ ತರಹದ ಸಮಸ್ಯೆಗಳು ನೌಕರರು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಬ್ರಾಹ್ಮಣ ಪ್ರಹ್ಲಾದ್‌ ಜೋಶಿ ಸಿಎಂ- 8 ಮಂದಿ ಡೆಪ್ಯೂಟಿ ಸಿಎಂ: ಬಿಜೆಪಿಯಲ್ಲಿ ಪ್ರಳಯ ಸೃಷ್ಟಿಸಿದ ಕುಮಾರಸ್ವಾಮಿ

ಶ್ರೀರಾಮುಲು ಪ್ರಜಾಪ್ರಭುತ್ವವನ್ನು ಕಲಿಯಬೇಕು: ಈ ಸರ್ಕಾರ ಇಂಗ್ಲೀಷ್ ಮಾತಾಡೋರ ಪರ ಇದೆ. ಬಡವರ ಪರ ನಿಂತುಕೊಳ್ಳುತ್ತಿಲ್ಲ. ನಿರ್ಮಲಾ ಸೀತಾರಾಮನ್ ಇರುವವರಿಗೆ ಕೊಡ್ತಿದ್ದಾರೆ ಆದ್ರೆ ಯಾವ ಬಜೆಟ್ ಕೂಡ ಬಡವರಿಗೆ ಕೊಡ್ತಿಲ್ಲ. ಎಲ್ಲಾ ರಾಜಕೀಯ ನೌಕರರು ಬಣ್ಣ ಬಣ್ಣದ ಮಾತುಗಳನ್ನ ಆಡ್ತಾರೆ ಆದರೆ ನೌಕರರ ಸಮಸ್ಯೆಗೆ ಕ್ಯಾರೇ ಅಂತಿಲ್ಲ. ಸಾರಿಗೆ ನೌಕರರು ತಮ್ಮ ಹಕ್ಕನ್ನ ಕೇಳಿದಾರೆ. ಸರ್ಕಾರ ಬೇಗನೆ ಈಡೇರಿಸಲಿ ಇಲ್ಲವಾದಲ್ಲಿ ಉಗ್ರ ಹೋರಾಟ ಖಚಿತ. ಸಿ ಎಂ ಬೊಮ್ಮಾಯಿ ಮತ್ತು ಶ್ರೀರಾಮುಲು ಪ್ರಜಾಪ್ರಭುತ್ವವನ್ನ ಸಾರ್ವಜನಿಕರಿಂದ ನೋಡಿ ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

click me!