ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಿಎಂ ಕೂಡಾ ಅವರನ್ನೇ ಮಾಡಿಕೊಂಡು ಹೋಗುತ್ತೇವೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಬಳ್ಳಾರಿ (ಫೆ.06): ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ಪ್ಲಾನ್ ಮಾಡಿಕೊಂಡಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಿಎಂ ಕೂಡಾ ಅವರನ್ನೇ ಮಾಡಿಕೊಂಡು ಹೋಗುತ್ತೇವೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಯಾವುದೇ ದಾಖಲೆ ಬಿಚ್ಚಿಡೋದು ಬೇಕಾಗಿಲ್ಲ. ಪ್ರಸ್ತುತ ಪ್ರಹ್ಲಾದ್ ಜೋಶಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಪಾರ್ಲಿಮೆಂಟ್ ಅಫೇರ್ಸ್ ಮಂತ್ರಿಯಾಗಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಿಎಂ ಕೂಡಾ ಅವರನ್ನೇ ಮಾಡಲಾಗುತ್ತದೆ. ಜನರ ದಿಕ್ಕನ್ನು ತಪ್ಪಿಸುವ ಉದ್ದೇಶದಿಂದಲೇ ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಮತದಾರರು ಬುದ್ಧಿವಂತರಿದ್ದು ನಿಮ್ಮ ಮಾತಿನಿಂದ ದಿಕ್ಕು ತಪ್ಪುವುದಿಲ್ಲ ಎಂದು ಹೇಳಿದ್ದಾರೆ.
undefined
ಬ್ರಾಹ್ಮಣ ಪ್ರಹ್ಲಾದ್ ಜೋಶಿ ಸಿಎಂ- 8 ಮಂದಿ ಡೆಪ್ಯೂಟಿ ಸಿಎಂ: ಬಿಜೆಪಿಯಲ್ಲಿ ಪ್ರಳಯ ಸೃಷ್ಟಿಸಿದ ಕುಮಾರಸ್ವಾಮಿ
ಅಮಿತ್ ಶಾ ಬಳ್ಳಾರಿಗೆ ಆಗಮನ: ರಾಜ್ಯಕ್ಕೆ ಇದೇ ತಿಂಗಳು ಫೆ.21ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬಳ್ಳಾರಿಗೆ ಆಗಮಿಸಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಕಾರ್ಯಕ್ರಮಗಳಿಗಾಗಿ ಹಲವು ನಾಯಕರು ಬರುತ್ತಾರೆ. ಆದರೆ, ಎಲ್ಲ ಕಾರ್ಯಕ್ರಮಗಳೂ ಸರ್ಕಾರಿ ಕಾರ್ಯಕ್ರಮಗಳೇ ಆಗಬೇಕು ಎಂದೇನಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಕ್ಕೂ ಬರಲಿದ್ದಾರೆ ಎಂದು ಹೇಳಿದರು.
ರಾಜಕೀಯದ ಹೊರತಾಗಿ ಲಾಡ್ ನನ್ನ ಸ್ನೇಹಿತ:ಸಂತೋಷ್ ಲಾಡ್ ಹಾಗೂ ನಾನು ರಾಜಕೀಯ ಹೊರತುಪಡಿಸಿಯೂ ಸ್ನೇಹಿತರು. ಜಾತ್ರೆಗೆ ಹೊದಾಗ ಸಂತೋಷ್ ಲಾಡ್ ಸಿಕ್ಕರು. ಸ್ನೇಹ ಮನೋಭವನೆಯಿಂದ ಅಪ್ಪಿಕೊಂಡಿದ್ದಾರೆ. ರಾಜಕೀಯದಿಂದ ಅಥವಾ ಬೇರೆ ಯಾವುದೇ ಉದ್ದೇಶಕ್ಕೆ ಅಪ್ಪಿಕೊಂಡಿಲ್ಲ. ಸಂಡೂರಿಗೆ ಶ್ರೀರಾಮುಲು ಹೋಗ್ತಾರೆ ಅನ್ನೋದಕ್ಕೆ ಅಪ್ಪಿಕೊಂಡಿದ್ದಾರೆ ಎನ್ನುವದು ಸುಳ್ಳು ಸದ್ದಿಯಾಗಿದೆ. ನನ್ನ ಸ್ಪರ್ಧೆ ವಿಚಾರ ಬಂದಾಗ ಪಾರ್ಟಿ ತೀರ್ಮಾನ ಅಂತಿಮವಾಗಿರುತ್ತದೆ. ಅವರವರು ಅವರವರ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಪ್ಲಾನ್ ಮಾಡ್ತಾರೆ ಎಂದರು.
ಸಂಡೂರಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ಎಂದ ಶಾಸಕ ನಾಗೇಂದ್ರ: ಬಳ್ಳಾರಿ (ಫೆ.06): ಸಾರಿಗೆ ಸಚಿವ ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಅಥವಾ ಸಂಡೂರಿನಲ್ಲಿ ಸ್ಪರ್ಧೆ ಸುಳಿವು ಸಿಕ್ಕಿದೆ. ಆದರೆ, ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಭಲವಾಗಿದೆ ಎಂದು ಪರೋಕ್ಷವಾಗಿ ಶ್ರೀರಾಮುಲುಗೆ ಶಾಸಕ ನಾಗೇಂದ್ರ ಟಾಂಗ್ ನೀಡಿದ್ದಾರೆ. ಅವರೆಡೂ ಕ್ಷೇತ್ರದಲ್ಲಿ ಯಾರೇ ಬಂದರೂ ಕಾಂಗ್ರೆಸ್ ಮಾತ್ರ ಗೆಲ್ಲುತ್ತದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಟವಾಗಿದೆ. ಬಿಜೆಪಿಯ ದುರಾಡಳಿತಕ್ಕೆ 2023 ರಲ್ಲಿ ಜನ ಬುದ್ದಿ ಕಲಿಸಲಿದ್ದಾರೆ. ಕಾಂಗ್ರೆಸ್ 150 ಸ್ಥಾನ ಗೆದ್ದು ಬಹುಮತ ಪಡೆಯಲಿದೆ ಎಂದರು.
ಬ್ರಾಹ್ಮಣ ಸಿಎಂ ವಿಚಾರ: ಕುಮಾರಣ್ಣಗೆ ನಮ್ಮ ಪಕ್ಷದ ಚಿಂತೆ ಬೇಡ: ಸಿಎಂ
ಜನಾರ್ಧನರೆಡ್ಡಿ ಕಾಂಗ್ರೆಸ್‌ಗೆ ಬೆಂಬಲಿಸುವುದಾದರೆ ಸ್ವಾಗತ: 2008ರಲ್ಲಿ ಜನಾರ್ದನರೆಡ್ಡಿ ಅವರ ತಂತ್ರಗಾರಿಕೆಯಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಬಿಜೆಪಿ ಪಕ್ಷ ಜನಾರ್ದನರೆಡ್ಡಿ ಅವರ ಮನಸು ನೋಯಿಸವಂತೆ ನಡೆದುಕೊಂಡಿದೆ. ನಾನು ರೆಡ್ಡಿ ಅವರಿಂದಲೇ ರಾಜಕೀಯಕ್ಕೆ ಬಂದಿದ್ದೇನೆ. ಅವರು ಕಾಂಗ್ರೆಸ್ ಗೆ ಬೆಂಬಲ ಕೊಡುವುದಾದರೆ ಖಂಡಿತ ಸ್ವೀಕಾರ ಮಾಡುತ್ತೇವೆ. ಆದರೆ, ಅವರು ದಿಢೀರನೆ ಪಕ್ಷವನ್ನು ಕಟ್ಟಿ ಚುನಾವಣಾ ಕಾರ್ಯ ಆನಾನು ಅವರನ್ನು ಪಕ್ಷ ಕಟ್ಟಿದ ಮೇಲೆ ಭೇಟಿ ಮಾಡಿಲ್ಲ ಎಂದು ಹೇಳಿದರು.