ಈಶಾನ್ಯದ ಎರಡು ರಾಜ್ಯಗಳಲ್ಲಿ ಪುನಃ ಅಧಿಕಾರವನ್ನು ಹಿಡಿಯುವ ಮೂಲಕ ಬಿಜೆಪಿ ರಾಷ್ಟ್ರದ ಉದ್ದಗಲಕ್ಕೂ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ. ಆದರೆ, ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ದಯನೀಯ ಸ್ಥಿತಿ ತಲುಪಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ (ಮಾ.3) : ಈಶಾನ್ಯದ ಎರಡು ರಾಜ್ಯಗಳಲ್ಲಿ ಪುನಃ ಅಧಿಕಾರವನ್ನು ಹಿಡಿಯುವ ಮೂಲಕ ಬಿಜೆಪಿ ರಾಷ್ಟ್ರದ ಉದ್ದಗಲಕ್ಕೂ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ. ಆದರೆ, ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ದಯನೀಯ ಸ್ಥಿತಿ ತಲುಪಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತ್ರಿಪುರ ಮತ್ತು ನಾಗಾಲ್ಯಾಂಡ್(Tripura, Nagaland) ರಾಜ್ಯಗಳಲ್ಲಿ ಪಕ್ಷ ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಕುವೆಂಪು ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಒಂದು ಕಾಲದಲ್ಲಿ ಈ ಭಾಗದ ರಾಜ್ಯಗಳು ಕೈ ತಪ್ಪುವ ಆತಂಕವಿದ್ದ ಈಶಾನ್ಯದ ಮೂರು ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ತ್ರಿಪುರ ಮತ್ತು ನಾಗಾಲ್ಯಾಂಡ್ ಈ ಎರಡೂ ರಾಜ್ಯಗಳಲ್ಲಿ ಪಕ್ಷ ಆಡಳಿತದ ಚುಕ್ಕಾಣಿಯನ್ನು ಹಿಡಿದಿದೆ. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಖಾತೆಯನ್ನೇ ತೆರೆಯದೇ ಅನಾಥ ಸ್ಥಿತಿ ತಲುಪಿದೆ ಎಂದು ಟೀಕಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯಕ್ ಮಾತನಾಡಿ, ತ್ರಿಪುರಾದಲ್ಲಿ ಪಕ್ಷಕ್ಕೆ 60 ಸ್ಥಾನಗಳಲ್ಲಿ 33 ಸ್ಥಾನ ದೊರೆತಿದ್ದು ಸ್ಪಷ್ಟಬಹುಮತ ಬಂದಿದೆ. ನಾಗಾಲ್ಯಾಂಡಿನಲ್ಲಿ ಮಿತ್ರ ಪಕ್ಷಗಳ ಜೊತೆ 60ರಲ್ಲಿ 37 ಶಾಸಕರು ಚುನಾಯಿತರಾಗಿದ್ದಾರೆ ಎಂದರು.
ಮುಖಂಡರಾದ ನವೀನ್ ಹೆದ್ದೂರು, ಸಂದೇಶ್ ಜವಳಿ, ಕಾಸರವಳ್ಳಿ ಶ್ರೀನಿವಾಸ್, ಚಂದವಳ್ಳಿ ಸೋಮಶೇಕರ್, ಕುಕ್ಕೆ ಪ್ರಶಾಂತ್, ಮಧುರಾಜ ಹೆಗ್ಡೆ, ರಕ್ಷಿತ್ ಮೇಗರವಳ್ಳಿ, ಜೆ.ಮಂಜುನಾಥ ಶೆಟ್ಟಿ,ಎಸಿಸಿ ಕೃಷ್ಣಮೂರ್ತಿ ಮುಂತಾದವರು ಇದ್ದರು.
ಬೊಮ್ಮಾಯಿ ಯಾರೆಂದು ಕೇಳಿದರೆ 40% ಕಮಿಷನ್ ಸರ್ಕಾರದ ಸಿಎಂ ಎನ್ನುತ್ತಿದ್ದಾರೆ: ರಣದೀಪ್ ಸಿಂಗ್ ಸುರ್ಜೇವಾಲ