ನಮಗೆ ಆರಡಿ ಬೇಡ, ಅವ​ರಿಗೆ ಮೂರಡಿ ಜಾಸ್ತಿ ಇರ​ಲಿ: ಡಿಕೆಶಿಗೆ ತಿರು​ಗೇಟು ಕೊಟ್ಟ ಎಚ್‌.​ಡಿ.​ರೇ​ವಣ್ಣ

Published : Mar 03, 2023, 04:20 AM IST
ನಮಗೆ ಆರಡಿ ಬೇಡ, ಅವ​ರಿಗೆ ಮೂರಡಿ ಜಾಸ್ತಿ ಇರ​ಲಿ: ಡಿಕೆಶಿಗೆ ತಿರು​ಗೇಟು ಕೊಟ್ಟ ಎಚ್‌.​ಡಿ.​ರೇ​ವಣ್ಣ

ಸಾರಾಂಶ

ಎಷ್ಟೇ ಅ​ಧಿಕಾರ ಅಂತಸ್ತಿದ್ದರೂ ಕೊನೆಗೆ ಆರಡಿ-ಮೂರಡಿ ಅಡಿಯೇ ನೆಮ್ಮದಿಯ ನಿದ್ರೆ ನೀಡುವ ಜಾಗ ಎಂಬ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹೇಳಿ​ಕೆಗೆ ಮಾಜಿ ಸಚಿವ ಎಚ್‌.​ಡಿ.​ರೇ​ವಣ್ಣ ತೀವ್ರ ಕಿಡಿ​ಕಾ​ರಿ​ದ್ದಾ​ರೆ.

ಹಾಸನ (ಮಾ.03): ಎಷ್ಟೇ ಅ​ಧಿಕಾರ ಅಂತಸ್ತಿದ್ದರೂ ಕೊನೆಗೆ ಆರಡಿ-ಮೂರಡಿ ಅಡಿಯೇ ನೆಮ್ಮದಿಯ ನಿದ್ರೆ ನೀಡುವ ಜಾಗ ಎಂಬ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹೇಳಿ​ಕೆಗೆ ಮಾಜಿ ಸಚಿವ ಎಚ್‌.​ಡಿ.​ರೇ​ವಣ್ಣ ತೀವ್ರ ಕಿಡಿ​ಕಾ​ರಿ​ದ್ದಾ​ರೆ. ನಮಗೆ ಆರಡಿ ಬೇಡ, ಇನ್ನೂ ಒಂದು ಅಡಿ ಕಡಿ​ಮೆಯೇ ಇರಲಿ. ಅವ​ರಿಗೆ ಮೂರಡಿ ಜಾಸ್ತಿ ಕೊಡ​ಲಿ ಎಂದು ತಿರು​ಗೇಟು ನೀಡಿ​ದ​ರು. ಗುರು​ವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾಡಿ, ನನಗೆ ಯೋಚನೆಗಳಿಲ್ಲ. ಮಲಗಿದ ಕೂಡಲೇ ನಿದ್ದೆ ಬರುತ್ತದೆ. ಕಾರಿನಲ್ಲೂ ನಿದ್ರೆ ಮಾಡುತ್ತೇನೆ. ಅವರು ದಪ್ಪ ಇದ್ದಾರೆ ಅವ​ರಿಗೆ ಇನ್ನೊಂದು ಮೂರಡಿ ಜಾಸ್ತಿಯೇ ಇರ​ಲಿ ಎಂದ​ರು. 

ಜೆಡಿ​ಎಸ್‌ ಅನ್ನು ಬಿಜೆಪಿ, ಕಾಂಗ್ರೆಸ್‌ ಬಿ ಟೀಎಂ ಎನ್ನುವ ಡಿ.ಕೆ.ಶಿ ಸೋದ​ರರು ಈ ಹಿಂದೆ ಎಚ್‌.​ಡಿ.​ದೇ​ವೇ​ಗೌ​ಡರೇ, ಕುಮಾ​ರಣ್ಣ ನಿಮ್ಮ ಪಾದಕ್ಕೆ ಐದು ವರ್ಷ ಇಟ್ಟಿ​ದ್ದೇವೆ ಅಂದಿ​ದ್ದರು. ಅದ​ನ್ನೀಗ ಮರೆ​ತಿ​ದ್ದೀರಾ ಎಂದು ಪ್ರಶ್ನಿ​ಸಿ​ದ​ರು. ಇದೇ ವೇಳೆ ಟಿಕೆಟ್‌ ಹಂಚಿಕೆ ವಿಚಾರವಾಗಿ ನಾನು ಮತ್ತು ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.ಕುಮಾರಸ್ವಾಮಿ ಹೊಡೆದಾಡಿಕೊಳ್ಳುತ್ತಾರೆ ಎಂದು ಭಾವಿಸಿಕೊಂಡಿದ್ದರೆ ಅದು ಎರಡೂ ರಾಷ್ಟ್ರೀಯ ಪಕ್ಷಗಳ ಭ್ರಮೆ. 

ರೇವಣ್ಣ, ಎಚ್‌​ಡಿ​ಕೆ ನಡುವೆ ಭಿನ್ನಾಭಿಪ್ರಾಯ ಇಲ್ಲ: ಸಿ.ಎಂ.ಇಬ್ರಾಹಿಂ

ಶಾಸಕರಾದ ಎ.ಟಿ.ರಾಮಸ್ವಾಮಿ ಮತ್ತು ಕೆ.ಎಂ.ಶಿವಲಿಂಗೇಗೌಡ ಇಬ್ಬರೂ ಕಳೆದೆರಡು ವರ್ಷಗಳಿಂದಲೂ ಕಾಂಗ್ರೆಸ್‌ ಪಕ್ಷದ ಮನೆ ಬಾಗಿಲು ತಟ್ಟುತ್ತಿರುವುದು ಇಡೀ ರಾಜ್ಯಕ್ಕೆ ತಿಳಿದಿರುವ ವಿಚಾರ ಎಂದು ರೇವಣ್ಣ ಹೇಳಿದರು. ಹಾಸನ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಈವರೆಗೂ ಯಾವುದೇ ಶಕ್ತಿ ಪ್ರದರ್ಶನ ಮಾಡಿಲ್ಲ. ಹಾಸನ ಜಿಲ್ಲೆಯಲ್ಲೇ ನಾನು ಎರಡು ಕ್ಷೇತ್ರಗಳಲ್ಲಿ ಸ್ಪ​ರ್ಧಿಸುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ. ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಜೆಡಿಎಸ್‌ ವರಿಷ್ಠರಾದ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೇ ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರ ಸಭೆ ಕರೆದು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಕಾಂಗ್ರೆಸ್‌ ಕೊಟ್ಟಿದ್ದು ಕಾಲು ಮುರುಕ ಕುದುರೆ: ಮುಖ್ಯಮಂತ್ರಿಯಾಗಿ ನಾನು ಏನೂ ಕೆಲಸ ಮಾಡಲಿಲ್ಲ, ಕೊಟ್ಟಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ ಎಂದು ಹೇಳು​ತ್ತಾರೆ. ಆದರೆ ನೀವು ನೀಡಿದ್ದು ಕಾಲು ಮುರುಕ ಕುದುರೆ. ಅದನ್ನು ಏರು ಎನ್ನುವವನನ್ನು ಮನೆ ಮುರುಕ ಅಂತಾರೆ ಎಂದು ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯಗೆ ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ ತಿರು​ಗೇಟು ನೀಡಿ​ದ್ದಾ​ರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ತೃಪ್ತಿ ನನಗಿದೆ. ನನ್ನ ಇಮೇಜ್‌ ಈಗಲೂ ಹಾಳಾಗಿಲ್ಲ. ಕಾಂಗ್ರೆಸ್‌ ಜತೆಗಿನ ಹೊಂದಾಣಿಕೆಯಿಂದ ತೊಂದರೆಯಾಗಿದೆ ನಿಜ. ಕಾಂಗ್ರೆಸ್‌ ಜೊತೆಗಿನ ಹೊಂದಾಣಿಕೆಯಿಂದ ತಪ್ಪಾಯಿತು. 

ಸಚಿವ ನಾರಾಯಣಗೌಡ ಕಾಂಗ್ರೆಸ್‌ ಅಭ್ಯರ್ಥಿ ಆಗ್ತಾರಾ?: ಎಚ್‌.ಡಿ.ರೇವಣ್ಣ ಜೆಡಿಎಸ್‌ ಅಭ್ಯರ್ಥಿಯಾಗುವ ಕುರಿತೂ ಗಾಳಿ ಸುದ್ದಿ

ನಾವು ರಾಜಕೀಯವಾಗಿ ಟ್ರ್ಯಾಪ್‌ ಆಗಿದ್ದೇವೆ. ಕಾಂಗ್ರೆಸ್‌ಗೆ ನಮ್ಮಿಂದ ಅನುಕೂಲವಾಗಿದೆಯೇ ಹೊರತು, ನಮಗೆ ಅನುಕೂಲವಾಗಿಲ್ಲ. ನಾನು ಸಿಎಂ ಆದ ಮೇಲೆ ತುಂಬಾ ಹಿಂಸೆ ಆಯಿತು. ತಾಜ್‌ ಹೋಟೆಲ್‌ನಲ್ಲಿದ್ದರೂ ಶಕ್ತಿಭವನದಲ್ಲಿ ಬೆಳಗ್ಗೆ 8 ರಿಂದಲೇ ಸಭೆ ನಡೆಸುತ್ತಿದ್ದೆ. ನನ್ನ ಗುರಿ ರೈತರ ಸಾಲ ಮನ್ನಾ ಮಾಡುವುದಾಗಿತ್ತು. ಬಳಿಕ ಸಚಿವ ಸ್ಥಾನದ ಸಂಖ್ಯೆಬಲದಲ್ಲಿ ಗೊಂದಲ, ಶಿಷ್ಟಾಚಾರ ಬಿಟ್ಟು ಅಧಿಕಾರಿಗಳ ವರ್ಗಾವಣೆ ಆಯಿತು. ಶಾಸಕಾಂಗ ಪಕ್ಷದ ಸಭೆ ಎಂದು ಕೆ.ಜೆ.ಜಾಜ್‌ರ್‍ ಅವರ ಹೋಟೆಲ್‌ಗೆ ಕರೆದರು, ಆದರೆ ಒಳಗೆ ಬಾ ಎನ್ನಲಿಲ್ಲ. ಸಿಎಂ ಆದವನು ಸುಮಾರು 15 ರಿಂದ 20 ನಿಮಿಷ ಹೊರಗೆ ಅಬ್ಬೇಪಾರಿಯಂತೆ ನಿಂತಿದ್ದೆ. ನೀವು ಹೇಗೆ ನಡೆಸಿಕೊಂಡಿದ್ದೀರಿ ಎಂಬುದು ಗೊತ್ತಿಲ್ಲವೇ ಎಂದು ಕುಮಾರಸ್ವಾಮಿ ಕಿಡಿ​ಕಾ​ರಿ​ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Omar Abdullah: ಆ ವಿಶೇಷ ಸ್ಥಾನಮಾನ ತೆಗೆಯದೇ ಇದ್ದಿದ್ದರೆ, POK ಜನ ಭಾರತಕ್ಕೆ ಸೇರಲು ಹೋರಾಡುತ್ತಿದ್ದರು!
'ಇದಕ್ಕೇ ಭಂಡರು ಅಂತಾರೆ..' ಆರ್‌ಎಸ್‌ಎಸ್‌ ಮುಂದೆಯೂ ನೋಂದಣಿ ಆಗೋಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಕಾಶಪ್ಪನವರ್ ಕಿಡಿ