ಹಾಸನ ಸಿದ್ದು ಸಮಾವೇಶ ಡಿಕೆಶಿ ನಿಯಂತ್ರಣಕ್ಕೆ: ರ್‍ಯಾಲಿ ಹೆಸರೇ ಬದಲು!

By Kannadaprabha News  |  First Published Dec 3, 2024, 7:26 AM IST

ಪಕ್ಷದ ಅಡಿಯಲ್ಲಿ ಸಮಾವೇಶ ನಡೆಯಲಿದೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಸಿಎಂ. ಜನರ ಹಿತಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂತಹ ಜನಕಲ್ಯಾಣ ಸಮಾವೇಶಗಳನ್ನು ಇತರ ಜಿಲ್ಲೆಗಳಲ್ಲಿಯೂ ಆಯೋಜಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್


ಹಾಸನ/ತುಮಕೂರು(ಡಿ.03): ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಅವರ ಬೆಂಬಲಿಗರು ಡಿ.5ರಂದು ಹಾಸನದಲ್ಲಿ ನಡೆಸಲು ಉದ್ದೇಶಿಸಿದ್ದ ಸಮಾವೇಶ ಇದೀಗ ಹೊಸ ಸ್ವರೂಪ ಪಡೆದುಕೊಂಡಿದೆ. ಕಾರ್ಯಕ್ರಮದ ಸ್ವರೂಪದ ಕುರಿತು ಭಿನ್ನಾಭಿಪ್ರಾಯ ವ್ಯಕ್ತವಾದ ಬೆನ್ನಲ್ಲೇ ಪ್ರಕರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿತ್ತು. ಇದೀಗ ಸಮಾವೇಶ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿಯಂತ್ರಣಕ್ಕೆ ಬಂದಿದೆ. 

ಸೋಮವಾರ ಹಾಸನಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್, ಸಮಾವೇಶ ನಡೆಯಲಿರುವ ಸಳ, ಸಿದ್ಧತೆಗಳ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಪಕ್ಷದ ಅಡಿಯಲ್ಲಿ ಸಮಾವೇಶ ನಡೆಯಲಿದೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಸಿಎಂ. ಜನರ ಹಿತಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಂತಹ ಜನಕಲ್ಯಾಣ ಸಮಾವೇಶಗಳನ್ನು ಇತರ ಜಿಲ್ಲೆಗಳಲ್ಲಿಯೂ ಆಯೋಜಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು. 

Tap to resize

Latest Videos

undefined

ಒಕ್ಕಲಿಗ ದ್ರೋಹಿ ಡಿ.ಕೆ.ಶಿವಕುಮಾರ್, ಪೆನ್ನು ಪೇಪರ್ ಹಿಡಿದು ಭಿಕ್ಷೆ ಬೇಡಿದ್ದು ಮರೆತೋಯ್ತಾ? ಕೆಣಕಿದ ಜೆಡಿಎಸ್!

ಹೆಸರೇ ಬದಲು!: 

ಮೊದಲಿಗೆ 'ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ'ದ ಹೆಸರಲ್ಲಿ ಶೋಷಿತ ವರ್ಗಗಳ ಒಕ್ಕೂಟ ಕಾರ್ಯಕ್ರಮಕ್ಕೆ ನಿರ್ಧರಿಸಿತ್ತು. ಆದರೆ ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಹೈಕಮಾಂಡ್, ಶೋಷಿತ ವರ್ಗಗಳ ಒಕ್ಕೂಟ ಹಾಗೂ ಪಕ್ಷದ ಜಂಟಿ ಆಶ್ರಯದಲ್ಲಿ ಸಮಾವೇಶ ನಡೆಸಲು ಸೂಚಿಸಿದೆ ಎನ್ನಲಾಗಿದೆ. ಅದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದ ರೂಪುರೇಷೆಯನ್ನೇ ಬದಲಿಸಿ ಇದು 'ಸ್ವಾಭಿಮಾನಿ ಸಮಾವೇಶ ಅಲ್ಲ, ಜನ ಕಲ್ಯಾಣ ಸಮಾವೇಶ' ಎಂದು ಸ್ಪಷ್ಟಪಡಿಸಿದ್ದಾರೆ. 

ಎಲ್ಲ ಜಿಲ್ಲೆಗಳಿಂದಲೂ ಆಗಮನ: 

ಹಾಸನ ಜಿಲ್ಲೆಯನ್ನು ಕೇಂದ್ರೀಕರಿಸಿ ಸಮಾವೇಶ ಮಾಡುತ್ತಿದ್ದೇವೆ. ಆದರೆ, ಸಮಾವೇಶದಲ್ಲಿ ಕೇವಲ ಆರು ಜಿಲ್ಲೆಗಳ ಕಾರ್ಯಕರ್ತರು ಮಾತ್ರ ಪಾಲ್ಗೊಳ್ಳುವುದಿಲ್ಲ. ಇತರ ಜಿಲ್ಲೆಗಳ ಕಾರ್ಯಕರ್ತರೂ ಪಾಲ್ಗೊಳ್ಳುತ್ತಾರೆ. ಎಷ್ಟು ಜನ ಸೇರುತ್ತಾರೆ ಎಂದು ಲೆಕ್ಕ ಹಾಕುವ ಶಕ್ತಿ ನನಗಿಲ್ಲ. ಹಾಸನ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ನಾವು ಒಂದೇ ಒಂದನ್ನು ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಕಾಂಗ್ರೆಸ್ ಮಯವಾಗಿಸುವ ನಿಟ್ಟಿನಲ್ಲಿ ಹಾಸನದಲ್ಲಿ ಈ ಸಮಾವೇಶ ಆಯೋ ಜಿಸಿದ್ದು, ಈ ಸಮಾವೇಶ ಹಾಸನ ಕೇಂದ್ರೀ ಕೃತವಾಗಲಿದೆ ಎಂದು ಹೇಳಿದರು. 

ಹಾಸನದಲ್ಲೇ ಏಕೆ?: 

ಹಾಸನದಲ್ಲಿಯೇ ಏಕೆ ಸಮಾವೇಶ ಮಾಡುತ್ತಿದ್ದೇವೆ ಎಂದರೆ, ನಮಗೆ ಇಲ್ಲಿ ಇರುವುದು ಒಬ್ಬನೇ ಒಬ್ಬ ಎಂಎಲ್‌ಎ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಕೆ.ಆ‌ರ್.ಪೇಟೆ ಕ್ಷೇತ್ರ ಬಿಟ್ಟರೆ ಐದಾರು ಜನ ಗೆದ್ದಿದ್ದಾರೆ. ಮೈಸೂರಿನಲ್ಲಿ ಒಂದೆರಡು ಸೀಟ್ ಬಿಟ್ಟರೆ ಇನ್ನೆಲ್ಲಾ ಗೆದ್ದಿದ್ದೇವೆ. ಚಾಮರಾಜನಗರ, ಕೊಡಗು ಫುಲ್ ಗೆದ್ದಿದ್ದೇವೆ. ರಾಮನಗರ ಒಂದು ಖಾಲಿ ಇತ್ತು, ಈಗ ಅದೂ ತುಂಬಿ ಹೋಯ್ತು. ಈ ಭಾಗದಲ್ಲಿ ನಮ್ಮ ಮನೆ ತುಂಬಿಸಬೇಕಲ್ಲ. ಅದಕ್ಕೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಜೆಪಿ-ಜೆಡಿಎಸ್ ಸ್ನೇಹಿತರು ಹಿಂದಿನಿಂದಲೂ ಟೀಕೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ನಾನು ಅವರ ಟೀಕೆಗಳಿಗೆ ಉತ್ತರಿಸಿದ್ದೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

ಸ್ವಾಭಿಮಾನ ಕಹಳೆ ಮೊಳಗಿಸಿದ ಸಿಎಂ ಸಿದ್ದರಾಮಯ್ಯಗೆ ಪಕ್ಷದಲ್ಲೇ ಶಾಕ್! ಶಕ್ತಿ-ಯುಕ್ತಿ-ಕುಸ್ತಿಯ ಅಸಲಿ ರಹಸ್ಯ

ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಮುಖಂಡತ್ವದಲ್ಲಿ ಸಮಾವೇಶ ನಡೆಯುತ್ತಿರುವ ಹಿನ್ನೆಲೆ ಇಂದು ಹಾಸನಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಮಾಡಿದ್ದ ಎಲ್ಲ ಟೀಕೆಗಳು ಈಗ ಸತ್ತೋಗಿ ನಮ್ಮ ಮತದಾರರು ಮೂರು ಎಲೆಕ್ಷನ್‌ಗಳಲ್ಲೂ ಏನೂ ತೀರ್ಪು ಕೊಡಬೇಕಿತ್ತು ಅದನ್ನು ಕೊಟ್ಟಿದ್ದಾರೆ. ಅವರು ಎಷ್ಟೇ ಟೀಕೆ ಮಾಡಲಿ ನಮಗೆ ಮತದಾರರೇ ದೇವರುಗಳು. ಅವರ ಕೊಟ್ಟ ತೀರ್ಪಿಗೆ ತಲೆಗೆ ಬಾಗುತ್ತೇವೆ ಎಂದರು.

ನಮ್ಮ ಹಿತೈಷಿಗಳು, ಸ್ವಾಭಿಮಾನಿಗಳ ಒಕ್ಕೂಟಗಳು ಸಿಎಂ ಕೆಲಸ ಮೆಚ್ಚಿ ಸಿಎಂ ಜೊತೆ ಇದ್ದೇವೆ ಎಂದು ಗುರುತಿಸಿಕೊಂಡಿದ್ದಾರೆ, ಬೆಂಬಲ ನೀಡಿದ್ದಾರೆ. ಒಬ್ಬ ಇರಲಿ, ಒಂದು ಲಕ್ಷ ಜನ ಇರಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದು ಜನಕಲ್ಯಾಣ ಸಮಾವೇಶ, ಜನತೆಗೋಸ್ಕರ, ಜನರ ಕಲ್ಯಾಣಕ್ಕಾಗಿ ಸಮಾವೇಶ ಮಾಡುತ್ತಿದ್ದೇವೆ. ಇಪ್ಪತ್ತೈದು ವರ್ಷಗಳಿಂದ ಹಾಸನದಲ್ಲಿ ಕಾಂಗ್ರೆಸ್ ಸಂಸದ ಇರಲಿಲ್ಲ. ಈಗ ಲೋಕಸಭಾ ಸದಸ್ಯರನ್ನು ಕೊಟ್ಟಿದ್ದಾರೆ. ಮುಂದೆ ಲೋಕಲ್ ಎಲೆಕ್ಷನ್ ಬರ್ತಿದೆ. 2028 ಕ್ಕೆ ವಿಧಾನ ಸಭೆ ಚುನಾವಣೆ ಬರುತ್ತೆ. ಎಲ್ಲ ಚುನಾವಣೆಗಳಲ್ಲೂ ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ ಎಂದರು.

click me!