
ಹಾಸನ (ಡಿ.2): ಬಿಜೆಪಿ-ಜೆಡಿಎಸ್ ಸ್ನೇಹಿತರು ಹಿಂದಿನಿಂದಲೂ ಟೀಕೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ನಾನು ಅವರ ಟೀಕೆಗಳಿಗೆ ಉತ್ತರಿಸಿದ್ದೇನೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಪಕ್ಷದ ಮುಖಂಡತ್ವದಲ್ಲಿ ಸಮಾವೇಶ ನಡೆಯುತ್ತಿರುವ ಹಿನ್ನೆಲೆ ಇಂದು ಹಾಸನಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರು ಮಾಡಿದ್ದ ಎಲ್ಲ ಟೀಕೆಗಳು ಈಗ ಸತ್ತೋಗಿ ನಮ್ಮ ಮತದಾರರು ಮೂರು ಎಲೆಕ್ಷನ್‌ಗಳಲ್ಲೂ ಏನೂ ತೀರ್ಪು ಕೊಡಬೇಕಿತ್ತು ಅದನ್ನು ಕೊಟ್ಟಿದ್ದಾರೆ. ಅವರು ಎಷ್ಟೇ ಟೀಕೆ ಮಾಡಲಿ ನಮಗೆ ಮತದಾರರೇ ದೇವರುಗಳು. ಅವರ ಕೊಟ್ಟ ತೀರ್ಪಿಗೆ ತಲೆಗೆ ಬಾಗುತ್ತೇವೆ ಎಂದರು.
ಪಟ್ಟಣ ಯುದ್ಧ ಸೋತ ಮಗನಿಗೆ ಪಟ್ಟ ಕಟ್ಟಲು ದಳಪತಿ ಪ್ಲಾನ್!
ನಮ್ಮ ಹಿತೈಷಿಗಳು, ಸ್ವಾಭಿಮಾನಿಗಳ ಒಕ್ಕೂಟಗಳು ಸಿಎಂ ಕೆಲಸ ಮೆಚ್ಚಿ ಸಿಎಂ ಜೊತೆ ಇದ್ದೇವೆ ಎಂದು ಗುರುತಿಸಿಕೊಂಡಿದ್ದಾರೆ, ಬೆಂಬಲ ನೀಡಿದ್ದಾರೆ. ಒಬ್ಬ ಇರಲಿ, ಒಂದು ಲಕ್ಷ ಜನ ಇರಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದು ಜನಕಲ್ಯಾಣ ಸಮಾವೇಶ, ಜನತೆಗೋಸ್ಕರ, ಜನರ ಕಲ್ಯಾಣಕ್ಕಾಗಿ ಸಮಾವೇಶ ಮಾಡುತ್ತಿದ್ದೇವೆ. ಇಪ್ಪತ್ತೈದು ವರ್ಷಗಳಿಂದ ಹಾಸನದಲ್ಲಿ ಕಾಂಗ್ರೆಸ್ ಸಂಸದ ಇರಲಿಲ್ಲ. ಈಗ ಲೋಕಸಭಾ ಸದಸ್ಯರನ್ನು ಕೊಟ್ಟಿದ್ದಾರೆ. ಮುಂದೆ ಲೋಕಲ್ ಎಲೆಕ್ಷನ್ ಬರ್ತಿದೆ. 2028 ಕ್ಕೆ ವಿಧಾನ ಸಭೆ ಚುನಾವಣೆ ಬರುತ್ತೆ. ಎಲ್ಲ ಚುನಾವಣೆಗಳಲ್ಲೂ ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ ಎಂದರು.
ರಾಜ್ಯ 'ಕೈ' ಸರ್ಕಾರ ಬೀಳಿಸಲು ಬಿಜೆಪಿಗೆ ನೆರವಾಗಿ: ಜೆಡಿಎಸ್ ಕಾರ್ಯಕರ್ತರಿಗೆ ಹೆಚ್‌ಡಿಕೆ ಕರೆ
ಲೋಕಸಭಾ ಚುನಾವಣೆ ವೇಳೆ ಹಾಸನದ ಬಹಳಷ್ಟು ಕುಟುಂಬಗಳು ನೋವು ಕಂಡಿದ್ದಾರೆ. ಇಡೀ ದೇಶದಾದ್ಯಂತ ಚರ್ಚೆ ನಡೆದಿದೆ. ನೋವು ಅನುಭವಿಸಿದವರಿಗೆ ಅವರಿಗೆ ಧೈರ್ಯ ಹೇಳಲು ಸಮಾವೇಶ ಹಮ್ಮಿಕೊಂಡಿದ್ದೇನೆ. ಇದು ನನ್ನ ಅಧ್ಯಕ್ಷತೆಯಲ್ಲಿ ನಡೆಯುತ್ತಿರವು ಕಾರ್ಯಕ್ರಮವಾಗಿದೆ ಎಂದರು ಇದೇ ವೇಳೆ 'ಯಾವ ಉದ್ದೇಶಕ್ಕಾಗಿ ಸಮಾವೇಶ ಮಾಡುತ್ತೀದ್ದೀರಿ' ಎಂಬ ಆರ್ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಅವರು, 'ಪಾಪ, ಆರ್ ಅಶೋಕ್ ಸಮಾವೇಶದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನೀವು(ಬಿಜೆಪಿ) ಭಾವನೆಗಳ ಮೇಲೆ ರಾಜಕಾರಣ ಮಾಡ್ತೀರಾ, ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ನೀವ್ಯಾಕೆ ಪ್ರಧಾನಮಂತ್ರಿಗಳನ್ನ ಕರೆಸಿ ಸಮಾರಂಭ ಮಾಡಿದ್ರಿ? ನೀವು ಚುನಾವಣೆಗೆ ಮುಂಚೆ ಬೇಕಾದಷ್ಟು ಕಾರ್ಯಕ್ರಮ ಮಾಡಲಿಲ್ಲವೇ? ಈ ನಮ್ಮ ಸ್ವಾಭಿಮಾನ ಸಮಾವೇಶ ಪ್ರಶ್ನೆ ಮಾಡ್ತೀರಾ? ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.