
ಶಿವಮೊಗ್ಗ (ಜೂ.7) 12 ವರ್ಷದ ಹಸುಗಳನ್ನು ಕಟುಕರಿಗೆ ಕೊಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಪ್ರವೇಶ ಮಾಡುವ ಮುನ್ನ ಗೋಮೂತ್ರದಿಂದ ಸಿಂಪಡಣೆ ಮಾಡಿ ಶುದ್ಧ ಮಾಡಿ ಒಳಹೋಗಿದ್ದಾರೆ. ಇವರ ಪ್ರಕಾರ ವಯಸ್ಸಾದ ಗೋವುಗಳಿಂದ ಗೋಮೂತ್ರ ಸಿಗುವುದಿಲ್ಲವಾ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಪ್ರಶ್ನಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಕಾಯ್ದೆಯಲ್ಲಿರುವ ಕೆಲವು ಅಂಶಗಳನ್ನು ಇಟ್ಟುಕೊಂಡು 12 ವರ್ಷದ ಹಸುಗಳನ್ನು ಕಟುಕರಿಗೆ ಕೊಡಬಹುದು ಎಂದು ಹೇಳುತ್ತಿದ್ದಾರೆ. 12 ವರ್ಷ ಆಗಿರುವ ಹಸುಗಳನ್ನು ಕಟಕರಿಗೆ ನೀಡಬೇಕು ಎಂದು ಕಾಯ್ದೆಯಲ್ಲಿ ಇಲ್ಲ ಎಂದು ಹರಿಹಾಯ್ದರು.
ಪ್ರತಾಪ್ ಸಿಂಹ ಅಣ್ಣನಂಥ ಬುದ್ಧಿವಂತ ರಾಜಕಾರಣಿ ದೇಶದಲ್ಲೇ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯ
ಅಧಿಕಾರದ ಮದ ಪಿತ್ತ ನೆತ್ತಿಗೇರಿಸಿಕೊಂಡು ಗೋವಿನ ಬಗ್ಗೆ ಇಲ್ಲ ಸಲ್ಲದ ಮಾತನಾಡಬಾರದು. ವಿದ್ಯುತ್ ದರ ಹೆಚ್ಚಳ ಮಾಡಿ ಜನ ಎಲ್ಲಿ ಚರ್ಚೆ ಮಾಡುತ್ತಾರೋ ಎಂದು ಗೋ ಹತ್ಯೆ ವಿಷಯ ಮುನ್ನೆಲೆಗೆ ತಂದಿದ್ದಾರೆ. ಗೋಹತ್ಯೆ ನಿಷೇಧ ಹಿಂದೂ ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ. ಕಾಂಗ್ರೆಸ್‌ನವರು ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಲಿ, ನಂತರ ಅವರ ಸರ್ಕಾರ ಉಳಿಯುತ್ತದೆಯೇ ನೋಡೋಣ. ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳುವುದು ಅಷ್ಟುಸಲುಭವಲ್ಲ, ಇದು ಸರ್ಕಾರಕ್ಕೆ ಶೋಭೆಯನ್ನೂ ತರುವುದಿಲ್ಲ ಎಂದು ಹೇಳಿದರು.
ಜನರ ದಾರಿ ತಪ್ಪಿಸುವ ಕೆಲಸ:
ಕಾಂಗ್ರೆಸ್(Congress) ಯಾವಾಗಲೂ ಮೊದಲು ಒಂದು ಹೇಳುತ್ತೆ, ನಂತರ ಮತ್ತೊಂದು ಮಾಡುತ್ತದೆ. ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತದೆ. ಗ್ಯಾರಂಟ್ ವಿಷಯಗಳನ್ನು ಮೊದಲ ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡುತ್ತೇವೆ ಎಂದಿದ್ದರು, ಮಾಡಿಲ್ಲ. ಈಗ ಕೊಡದೇ ಇರುವಂತೆ ನಾನಾ ರೀತಿಯ ಕಾರಣಗಳನ್ನು ಹುಡುಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಷರತುಗಳಿಲ್ಲದೇ ಕೊಟ್ಟರೆ ತುಂಬಾ ಸಂತೋಷ. ಇಲ್ಲದಿದ್ದರೆ ಬಿಜೆಪಿ ಹೋರಾಟ ನಡೆಸುತ್ತದೆ. ವಿದ್ಯುತ್ ಉಚಿತವಾಗಿ ಕೊಡುವುದಾಗಿ ಹೇಳಿ ದರ ಹೆಚ್ಚಳ ಮಾಡಿದ್ದಾರೆ. ಬಡವರ ಮೇಲೆ ಗದಾಪ್ರಹಾರ ಮಾಡುತ್ತಾರೆ ಎಂದು ಕಿಡಿಕಾರಿದರು.
ಗೋ ಹತ್ಯೆ ನಿಷೇಧ ಕಾಯ್ದೆ ವಾಪಸಾತಿಗೆ ಶ್ರೀರಾಮಸೇನೆ ವಿರೋಧ
ವಿದ್ಯುತ್ ದರ ಹೆಚ್ಚಳಕ್ಕೆ ಕುಂಟುನೆಪ ಹೇಳುವುದು ಸರಿಯಲ್ಲ. ಬಿಜೆಪಿ ಅವಧಿಯಲ್ಲಿ ದರ ಹೆಚ್ಚಳಕ್ಕೆ ಅವಕಾಶ ಇದ್ದರು ಮಾಡಿರಲಿಲ್ಲ. ಕಾಂಗ್ರೆಸ್ ಗರೀಬಿ ಹಠಾವೋ ಎಂದು ಇಂದಿರಾ ಗಾಂಧಿ ಕಾಲದಿಂದಲೂ ಹೇಳಿಕೊಂಡು ಬಂದರೆ ಹೊರತು, ಗರಿಬಿ ಹಠಾವೋ ಮಾಡಲಿಲ್ಲ. ಬಾಡಿಗೆದಾರರಿದ್ದರೆ ಬೇರೆ ಪ್ರತ್ಯೇಕ ಮೀಟರ್ ಇರುತ್ತದೆ. ಅವರಿಗೆ ಗ್ಯಾರಂಟಿ ಯೋಜನೆ ಕೊಡಬೇಕು. ಸಿದ್ದರಾಮಯ್ಯನವರು ನಾಳೆ ದಿನ 75 ವರ್ಷದವರು ಇರಲೇಬಾರದು ಎಂದು ಅದಕ್ಕೂ ಒಂದು ನಿರ್ಣಯ ಮಾಡುತ್ತಾರೆ
- ಚನ್ನಬಸಪ್ಪ, ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.