ಸಿಂಧನೂರು (ಫೆ.13) : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 50 ರಿಂದ 60 ಸ್ಥಾನ ಗೆಲ್ಲುವುದೇ ಕಷ್ಟಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಸಕ್ರ್ಯೂಟ್ ಹೌಸ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಬಿಜೆಪಿ ಪಕ್ಷದ ಬಿ ಟೀಮ್ ಎಂದು ಕುಮಾರಸ್ವಾಮಿ(HD Kumaraswamy) ಸುಳ್ಳು ಹೇಳುತ್ತಿದ್ದಾರೆ. 2006ರಲ್ಲಿ ಕೋಮುವಾದಿ, ಮನುವಾದಿ ಬಿಜೆಪಿ(BJP)ಯೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿದ್ದು ಇದೇ ಕುಮಾರಸ್ವಾಮಿ. 20 ತಿಂಗಳ ಅಧಿಕಾರದ ಹೆಸರಿನಲ್ಲಿ ಯಡಿಯೂರಪ್ಪನವರಿಗೆ ದ್ರೋಹ ಬಗೆದಿದ್ದಾರೆ. ಆದ್ದರಿಂದ ಕುಮಾರಸ್ವಾಮಿಗೆ ಕಾಂಗ್ರೆಸ್ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ. ಈಗಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿದೆ. ಶೇ.40 ಫರ್ಸಟೆಂಜ್ ಸರ್ಕಾರ ಬೊಮ್ಮಾಯಿ(CM Basavaraj Bommai) ಅವರದ್ದು ಎಂದು ಗುತ್ತಿಗೆದಾರರ ಅಸೋಸಿಯೇಷನ್ ಅಧ್ಯಕ್ಷ ಕೆಂಪಯ್ಯ(Kempanna) ಅವರೆ ಪ್ರಧಾನಿ ಮೋದಿಗೆ(PM Narendra Modi) ಪತ್ರ ಬರೆದಿದ್ದಾರೆ. ಸಂತೋಷ್ ಕೊಲೆಗೂ ಇದೇ ಬೊಮ್ಮಾಯಿ ಸರ್ಕಾರ ಕಾರಣವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಶಿವಲಿಂಗೇಗೌಡ ಸೇರ್ಪಡೆ ಪಕ್ಕಾ! ಖಚಿತಪಡಿಸಿದ ಸಿದ್ದರಾಮಯ್ಯ
ರಾಹುಲ್ ಗಾಂಧಿ(Rahul gandhi) ಈಗಾಗಲೇ ಎಐಸಿಸಿ(AICC)ಯಿಂದ ಮೂರು ಬಾರಿ ಎಲ್ಲ ವಿಧಾನಸಭಾ ಕ್ಷೇತ್ರಗಳ ಸರ್ವೆ ಮಾಡಿಸಿದ್ದು, ಯಾರು ಗೆಲ್ಲುತ್ತಾರೋ ಅಂಥವರಿಗೆ ಹೈಕಮಾಂಡ್ ಟಿಕೆಟ್ ನೀಡಲು ನಿರ್ಧರಿಸಿದೆ. ರಾಜ್ಯದಲ್ಲಿ ಕನಿಷ್ಟ130 ರಿಂದ 150 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ. ಇನ್ನೂ 15 ದಿನಗಳಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಿ ಗೊಂದಲಗಳ ನಿವಾರಣೆ ಮಾಡಲಾಗುವುದು ಎಂದರು.
ನನ್ನ ಬಗ್ಗೆ ಬಿಜೆಪಿಗೆ ಭಯವಿದೆ. ನಾನು ಬಾದಾಮಿ, ಕೋಲಾರ, ವರುಣಾ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತೇನೆ. ಬಾದಾಮಿ ಕ್ಷೇತ್ರ ದೂರ ಆಗುತ್ತದೆನ್ನುವ ಕಾರಣದಿಂದ ಕೆ.ಎಚ್.ಮುನಿಯಪ್ಪ ಸೇರಿದಂತೆ ಅಪಾರ ಕಾರ್ಯಕರ್ತರ ಒತ್ತಾಸೆ ಮೇರೆಗೆ ಬೆಂಗಳೂರಿಗೆ ಸಮೀಪದಲ್ಲಿರುವ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.
ತುಂಗ-ಕೃಷ್ಣ ಬಿ ಸ್ಕೀಮ್(Tunga-Krishna B Scheme Project) ಯೋಜನೆ ಕುರಿತು ಸುಪ್ರಿಂ ಕೋರ್ಟ್‌ನಲ್ಲಿದೆ ವ್ಯಾಜ್ಯ ನಡೆಯುತ್ತಿದೆ. ನಮ್ಮ ನೀರು ಆಂಧ್ರಕ್ಕೆ ಹರಿದು ಹೋಗುತ್ತಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಧಮ್, ತಾಕತ್ತು ತೋರುತ್ತಿಲ್ಲ. ಪ್ರಧಾನಿ ಮೋದಿಯೂ ಕ್ಯಾರೆ ಎನ್ನುತ್ತಿಲ್ಲ. ಬದಲಿಗೆ ಮಲತಾಯಿ ಧೋರಣೆ ನೀತಿ ಅನುರಿಸುತ್ತಿದ್ದಾರೆ. ಈ ಬಿಜೆಪಿ ಸರ್ಕಾರಕ್ಕೆ ಇಚ್ಚಾಶಕ್ತಿ ಕೊರತೆ ಇಲ್ಲ. ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ(Hampanagowda badarli), ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ(Basanagowda r turvihal), ರಾಯಚೂರು ಗ್ರಾಮೀಣ ಶಾಸಕ ದದ್ದಲ ಬಸನಗೌಡ(Daddal Basanagowda), ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಥೋಡ್, ಶರಣಗೌಡ ಬಯ್ಯಾಪುರ ಸೇರಿ ಅನೇಕರು ಇದ್ದರು.
ಸಿಂಧನೂರಿನ ನಗರದ ಯಲಮಂಚಾಲಿ ವಾಸುದೇವರಾವ್ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ನಡೆದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ಮೊಮ್ಮಗನ ವಿವಾಹ ಮಹೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ನೂತನ ವಧು ವರನಿಗೆ ಅಕ್ಷತೆ ಹಾಕಿ ಶುಭಹಾರೈಸಿದರು.
ಬಾದರ್ಲಿ ನೇತೃತ್ವದಲ್ಲಿ ಸಿದ್ದರಾಮಯ್ಯಗೆ ಭವ್ಯ ಸ್ವಾಗತ
ನಗರಕ್ಕೆ ಭಾನುವಾರ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರನ್ನು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಇಲ್ಲಿನ ಎಪಿಎಂಸಿ ಗಣೇಶ ದೇವಸ್ಥಾನದ ಹತ್ತಿರ ಜೆಸಿಬಿ ಮೂಲಕ ಬೃಹತ್ಕಾರದ ಹೂವಿನ ಹಾರವನ್ನು ಹಾಕಿ, ಪಟಾಕಿ ಸಿಡಿಸಿ, ಜೈಕಾರ ಹಾಕುವ ಮೂಲಕ ಭವ್ಯವಾಗಿ ಸ್ವಾಗತಿಸಿಕೊಳ್ಳಲಾಯಿತು.
ರಾಯಚೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ 2 ಎಕರೆ ಹೊಲ ಗಿಫ್ಟ್: ಗ್ರಾ.ಪಂ. ಸದಸ್ಯನ ಆಹ್ವಾನ
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶಿವಕುಮಾರ್ ಜವಳಿ, ಮುಖಂಡರಾದ ಖಾಜಾಹುಸೇನ್ ರೌಡಕುಂದಾ, ವೆಂಕಟೇಶ ರಾಗಲಪರ್ವಿ, ಎಚ್.ಎನ್.ಬಡಿಗೇರ್, ಶರಣಯ್ಯಸ್ವಾಮಿ ಕೋಟೆ, ಯೂನೂಸ್‌ಪಾಷಾ ದಢೇಸುಗೂರು, ಹಬೀಬ್ ಖಾಜಿ, ಸುರೇಂದ್ರ ರಾಗಲಪರ್ವಿ, ಮೂಕಪ್ಪ ವೆಂಕಟೇಶ್ವರಕ್ಯಾಂಪ್, ಅಮರೇಶ ಗಿರಿಜಾಲಿ, ವೀರರಾಜು ಬೂದಿಹಾಳ ಕ್ಯಾಂಪ್, ದಾದಾಪೀರ್ ದಢೇಸುಗೂರು, ಮಲ್ಲಯ್ಯ ಮ್ಯಾಕಲ್, ರಾಮಣ್ಣ ಬೆಳಗುರ್ಕಿ, ಹಂಪಮ್ಮ ವಲ್ಕಂದಿನ್ನಿ, ಸಿದ್ದನಗೌಡ ಯದ್ದಲದೊಡ್ಡಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.