ಚಿತ್ರದುರ್ಗ: ಭ್ರಷ್ಟಾಚಾರ ನಿರ್ಮೂಲನೆಗೆ ಮಾಜಿ ಸೈನಿಕರಿಂದ ಹೊಸ ರಾಜಕೀಯ ಪಕ್ಷ

By Kannadaprabha News  |  First Published Feb 13, 2023, 5:44 AM IST

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹೊಸ ರಾಜಕೀಯ ಪಕ್ಷಗಳು ತಲೆ ಎತ್ತುತ್ತಿರವುದರ ನಡುವೆಯೇ ಕೋಟೆನಾಡು ಚಿತ್ರದುರ್ಗದಲ್ಲಿ ಮಾಜಿ ಸೈನಿಕರು ಸೇರಿಕೊಂಡು ಸಾರ್ವಜನಿಕ ಆದರ್ಶ ಸೇನಾ ಎಂಬ ರಾಜಕೀಯ ಪಕ್ಷವನ್ನು ಅಸ್ಥಿತ್ವಕ್ಕೆ ತಂದಿದ್ದು, ಪಕ್ಷದ ಅಧ್ಯಕ್ಷ ಬ್ರಿಗೇಡ್‌ ಮುನಿಸ್ವಾಮಿ ಭಾನುವಾರ ಚಾಲನೆ ನೀಡಿದರು.


ಚಿತ್ರದುರ್ಗ (ಫೆ.13) : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹೊಸ ರಾಜಕೀಯ ಪಕ್ಷಗಳು ತಲೆ ಎತ್ತುತ್ತಿರವುದರ ನಡುವೆಯೇ ಕೋಟೆನಾಡು ಚಿತ್ರದುರ್ಗದಲ್ಲಿ ಮಾಜಿ ಸೈನಿಕರು ಸೇರಿಕೊಂಡು ಸಾರ್ವಜನಿಕ ಆದರ್ಶ ಸೇನಾ ಎಂಬ ರಾಜಕೀಯ ಪಕ್ಷವನ್ನು ಅಸ್ಥಿತ್ವಕ್ಕೆ ತಂದಿದ್ದು, ಪಕ್ಷದ ಅಧ್ಯಕ್ಷ ಬ್ರಿಗೇಡ್‌ ಮುನಿಸ್ವಾಮಿ ಭಾನುವಾರ ಚಾಲನೆ ನೀಡಿದರು.

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬ್ರಿಗೇಡ್‌ ಮುನಿಸ್ವಾಮಿ(Brigade Muniswamy,), ಭ್ರಷ್ಟಾಚಾರ ನಿರ್ಮೂಲನೆ(Eradication of Corruption), ಜನರಿಗೆ ವಿದ್ಯಾಭ್ಯಾಸ, ಉತ್ತಮ ಆರೋಗ್ಯ ನೀಡುವುದು ನಮ್ಮ ಪಕ್ಷದ ಮೂಲ ಉದ್ದೇಶ. ದೇಶ ಒಗ್ಗಟ್ಟಾಗಿ ಇರಬೇಕಂದ್ರೆ ಸೈನಿಕರೇ ಕಾರಣ. 27 ಸಾವಿರ ಸೈನಿಕರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂದಿಗೂ ಎದೆಗುಂದದೇ ಮತ್ತೆ ಸೈನ್ಯಕ್ಕೆ ಸೇರಿ ಯುದ್ದದಲ್ಲಿ ಪಾಲ್ಗೊಂಡು ಬರುತ್ತಿದ್ದಾರೆ. ಜಮ್ಮು ಕಾಶ್ಮೀರ ಭಾರತದ ಭಾಗವಾಗಿದೆ ಎಂದರೆ ಅದಕ್ಕೆ ನಮ್ಮ ಸೈನಿಕರೇ ಕಾರಣ ಎಂದು ಹೇಳಿದರು.

Latest Videos

undefined

 

ಪುನರ್‌ಜನ್ಮ ನೀಡಿದ ಮೊಳಕಾಲ್ಮುರನ್ನು ಎಂದಿಗೂ ಮರೆಯೋಲ್ಲ; ಶ್ರೀರಾಮುಲು

ರಾಜಕಾರಣದಲ್ಲಿ ಭ್ರಷ್ಟಾಚಾರದ ಜೊತೆಗೆ ಕುಟುಂಬ ರಾಜಕಾರಣ ಹೆಚ್ಚಾಗಿದೆ, ರಾಜಕೀಯಕ್ಕೆ ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿಯೇ ಬರುತ್ತಿದ್ದಾರೆಯೇ ಹೊರೆತು ಸಾರ್ವಜನಿಕರ ಸೇವೆ ಮಾಡುವುದಕ್ಕಲ್ಲ. ಭಾರತಕ್ಕೆ ಮಿತ್ರರಿಗಿಂತ ಶತ್ರುಗಳೇ ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಪರ್ಸೆಂಟೇಜ್‌ ಲೆಕ್ಕದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ನೋಡಿದ್ರೆ ನಾಚಿಕೆ ಆಗ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಣದಿಂದ ರಾಜಕೀಯ ಮಾಡಲ್ಲ:

ಹಣ ಖರ್ಚು ಮಾಡಿ ನಾವು ರಾಜಕೀಯ ಮಾಡೋದಿಲ್ಲ. ಸೈನ್ಯ ಸೇರುವವರಿಗೆ ಯಾವುದೇ ಧರ್ಮ ಜಾತಿಯ ಬೇಧ ಇಲ್ಲ. ಆದರೆ ರಾಜಕಾರಣದಲ್ಲಿ ಜಾತಿ, ಧರ್ಮಗಳೇ ಪ್ರಾಧಾನ್ಯವಾಗಿವೆ. ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟು ಹಾಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ತಾರೆ. ದೇಶದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತ ಕೆಲಸವನ್ನು ಯಾವ ಪಕ್ಷಗಳು ಮಾಡಬಾರದು. ಜನ ಅಸಲಿ ಯಾರು, ನಕಲಿ ಯಾರು ಎಂದು ಮನವರಿಕೆಮಾಡಿಕೊಂಡು ಮತ ಹಾಕಬೇಕು. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ್‌ ಜಗತಾಪ್‌ ಮಾತನಾಡಿ, ಪಕ್ಷÜ ಸ್ಥಾಪನೆಗೆ ಕಡಿಮೆ ಜನ ಇದ್ದೇವೆ. ಆದರೆ ಮುಂದೆ ನಮ್ಮ ಪಕ್ಷ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಾ ಜನರಿಗೆ ಹತ್ತಿರವಾಗಬೇಕು. ದೇಶ ಉದ್ದಾರ ಮಾಡುವ ಬದಲು ಜನರನ್ನು ಹೇಗೆ ಮೋಸಗೊಳಿಸಬೇಕು ಎಂಬುದು ರಾಜಕಾರಣಿಗಳ ಉದ್ದೇಶವಾಗಿದೆ. ರಾಜಕಾರಣಿಗಳು ನಮ್ಮ ಕಣ್ಮುಂದೆ ನಡೆಸುವ ಅಕ್ರಮಗಳನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದು ಅಪರಾಧ ಎಂದು ಹೇಳಿದರು.

ಭ್ರಷ್ಟಮುಕ್ತ ಕರ್ನಾಟಕದ ಗುರಿ:

ಭ್ರಷ್ಟಮುಕ್ತ ಕರ್ನಾಟಕ ಮಾಡುವುದು ನಮ್ಮ ಮೊದಲ ಗುರಿ. ಪುಡಾರಿಗಳೆಲ್ಲಾ ರಾಜಕೀಯಕ್ಕೆ ಬಂದರೆ ಪವಿತ್ರವಾದ ವಿಧಾನಸೌಧ ಏನಾಗುತ್ತದೆ ಎಂಬುದನ್ನು ನೆನಸಿಕೊಂಡರೆ ಆತಂಕವಾಗುತ್ತದೆ. ಪವಿತ್ರವಾದ ಕ್ಷೇತ್ರಕ್ಕೆ ನಿಷ್ಕಲ್ಮಶÜ ವ್ಯಕ್ತಿ ಹಾಗೂ ವ್ಯಕ್ತಿತ್ವಗಳು ಬರಬೇಕು. ಆದರೆ ಇಂದು ನೀತಿಯಿಲ್ಲ ರಾಜಕಾರಣ ಮಾಡುತ್ತಿರುವುದನ್ನು ನೋಡಿದರೆ ನೋವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ಕೋಟೆನಾಡು ಚಿತ್ರದುರ್ಗ ಐತಿಹಾಸಿಕ ನಗರ. ಹಾಗಾಗಿ ಇಲ್ಲಿಂದಲೇ ನಮ್ಮ ಪಕ್ಷದ ಚಟುವಟಿಕೆ ಶುರುವಾಗಲಿ ಎಂದ ರಣಕಹಣೆ ಮೊಳಗಿಸಿದ್ದೇವೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದ್ರು ಯಾರೂ ಪ್ರಶ್ನೆ ಮಾಡ್ತಿಲ್ಲ. ಸಾಮಾಜಿಕವಾಗಿ ತಳಮಟ್ಟದ ಜನರ ಧ್ವನಿ ಆಗಬೇಕು ಎಂದು ಈ ಪಕ್ಷ ಕಟ್ಟಿಮುಂದುವರೆಯುತ್ತಿದ್ದೇವೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ಚಿತ್ರದುರ್ಗದ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮ, ಮಾದರಿಯಾದ ಹಳೆ ವಿದ್ಯಾರ್ಥಿಗಳ ಕಾರ್ಯ

ನಿವೃತ್ತ ಸೈನಿಕರಾದ ಜೈರುದ್ದೀನ್‌, ಜ್ಞಾನ ಪ್ರಕಾಶ್‌, ವೆಂಕಟೇಶ್‌ ರೆಡ್ಡಿ, ಪ್ರದೀಪ್‌, ಬಸವರಾಜ…, ಗೋವಿಂದ ರೆಡ್ಡಿ, ಸಣ್ಣ ಸೂರಯ್ಯ, ಶ್ವೇತಾ ಮಹೇಶ್‌, ಪದ್ಮಜಾ ಇದ್ದರು.

click me!