ಲಿಂಗಸುಗೂರು: ಕುತಂತ್ರದ ಸೋಲಿಗೆ ಸೆಡ್ಡು ಹೊಡೆಯುವರೆ ಹೂಲಗೇರಿ?

By Kannadaprabha News  |  First Published Jun 9, 2023, 11:15 PM IST

ಕಾಂಗ್ರೆಸ್‌ನಲ್ಲಿ ಬಯ್ಯಾಪುರ ಹಾಗೂ ಹೂಲಗೇರಿದು ಗುರು-ಶಿಷ್ಯರ ಸಂಬಂಧ. ಚುನಾವಣೆ ಬಳಿಕ ಸಂಬಂಧ ಹಳಸಿದ್ದು ಮುಂದೆ ಏನಾಗಲಿದೆ ಎಂಬುದು ಊಹೆಗೆ ನಿಲುಕದ್ದು.


ಲಿಂಗಸುಗೂರು(ಜೂ.09):  ಕಾಂಗ್ರೆಸ್‌ಗೆ ಕಾಂಗ್ರೆಸ್ಸೆ ಶತೃ ಎಂಬ ಮಾತು ತೀವ್ರತರ ರಾಜಕೀಯ ಚಟುವಟಕೆಗೆ ಹೆಸರಾದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ. ಕುತಂತ್ರದ ಸೋಲಿಗೆ ಸೆಡ್ಡು ಹೊಡೆದು ರಾಜಕೀಯದಲ್ಲಿ ಮುಂದುವರೆಯಲು ಮಾಜಿ ಶಾಸಕ ಡಿ.ಎಸ್‌.ಹೂಲಗೇರಿ ತೊಡೆ ತಟ್ಟಿದ್ದು, ಸೋಲಿನ ಸಿಟ್ಟು ಜಿಲ್ಲಾ ಹಿರಿಯ ಸಚಿವ ಎನ್‌.ಎಸ್‌.ಬೋಸರಾಜು ಮುಂದೆ ಪುಂಖಾನುಪುಂಖವಾಗಿ ಬಿತ್ತರಗೊಂಡಿತು.

ವಿಧಾನಸಭಾ ಚುನಾವಣೆಯಲ್ಲಿ ಅಂದು ಶಾಸಕರಾಗಿದ್ದ ಡಿ.ಎಸ್‌ ಹೂಲಗೇರಿಗೆ ಟಿಕೆಟ್‌ ಸಿಗಬಾರದೆಂದು ಕಾಂಗ್ರೆಸ್‌ ನಾಯಕರೆ ಹೂಲಗೇರಿಗೆ ತಿರು​ಗೇಟು ನೀಡಿದರು. ಟಿಕೆಟ್‌ ಸಿಗಬಾರದೆಂದು ದೆಹಲಿ, ಬೆಂಗಳೂರಿನಲ್ಲಿ ಅವರ ವಿರುದ್ಧ ಹೆಣೆದಿದ್ದ ಕುತಂತ್ರದ ಕೋಟೆ ಬೇಧಿಸಿ ಹೂಲಗೇರಿ ಟಿಕೆಟ್‌ ಗಿಟ್ಟಿಸಿಕೊಂಡ ಪರಿಗೆ ವಿರೋಧಿ ಪಾಳೆಯ ಪತರಗುಟ್ಟಿತ್ತು. ಚುಣಾವಣೆ ರಣರಂಗದಲ್ಲಿ ಟಿಕೆಟ್‌ನೊಂದಿಗೆ ಧುಮುಕಿದ ಹೂಲಗೇರಿ ಅಂದು ಟಿಕೆಟ್‌ ಸಿಗದಂತೆ ಮಾಡಿದವರು, ಚುನಾವಣೆಯಲ್ಲಿ ಅದೇ ಪಕ್ಷದಲ್ಲಿದ್ದು, ಅವರ ಗೆಲುವಿಗೆ ಚರಮಗೀತೆ ಹಾಡಿದರು.

Latest Videos

undefined

ರಾಯಚೂರು: ಕಲಬುರಗಿಗೆ ಏಮ್ಸ್ ಎಂದ ಸಚಿವ ಶರ​ಣ​ಪ್ರ​ಕಾಶ ವಿರುದ್ಧ ಗೋ ಬ್ಯಾಕ್‌ ಚಳ​ವ​ಳಿ ಎಚ್ಚ​ರಿ​ಕೆ

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇತ್ತು. ಟಿಕೆಟ್‌ ತಡ​ವಾಗಿ ಪಡೆದರು ಮಾಜಿ ಶಾಸಕ ಹೂಲಗೇರಿ ಚುನಾವಣೆಯಲ್ಲಿ ಗೆಲ್ಲಲ್ಲು ತೀವ್ರ ಕಸರತ್ತು ನಡೆಸಿದರು. ಅಲ್ಲದೇ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಜೊತೆಗೆ ಮತದಾರರ ಮೇಲೆ ಈ ಚುನಾವಣೆಯಲ್ಲಿ ಅತ್ಯಂತ ಪ್ರಭಾವ ಬೀರಿದ್ದು ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳು. ಜೊತೆಗೆ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇತ್ತು ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶಗಳು ಇದ್ದವು. ಆದರೆ, ಹೂಲಗೇರಿ ಯಾರನ್ನು ದೊಡ್ಡವರು ಎಂದು ನಂಬಿದ್ದನೋ ಅವರೇ ಕಾಂಗ್ರೆಸ್‌ ಅಭ್ಯರ್ಥಿಗೆ ಬೆನ್ನಿಗೆ ಚೂರಿ ಹಾಕಿದರು. ಅಲ್ಲದೆ ತಮ್ಮದೆ ಕೆಲವರನ್ನು ಜನಾರ್ಧನರೆಡ್ಡಿ ಪಕ್ಷಕ್ಕೆ ಸೇರಿಸಿದರು. ಫುಟ್‌ಬಾಲ್‌ ಪಕ್ಷದಲ್ಲಿ ವಿಪರೀತ ಮೇಯ್ದವರಿಗೆ ರಾತೋರಾತ್ರಿ ಬಿಜೆಪಿ ಬೆಂಬಲಿಸುವಂತೆ ಫರ್ಮಾನು ಹೊರಡಿಸಿದರು ಎಂಬುದು ಸೋತ ಅಭ್ಯರ್ಥಿ ಹೂಲಗೇರಿ ಅಳಲು.

ಚುನಾವಣೆ ಸೋಲಿನಿಂದ ಧೃತಿಗೆಡದ ಕಾಂಗ್ರೆಸ್‌ನ ಹೂಲಗೇರಿ, ಮೊನ್ನೆ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಣ್ಣ ನೀರಾವರಿ, ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಿರಿಯ ಕಾಂಗ್ರೆಸ್ಸಿಗ ಎನ್‌.ಎಸ್‌.ಬೋಸರಾಜುಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಚುನಾವಣೆಯಲ್ಲಿ ಸೋಲಿಗೆ ತಮ್ಮದೆ ಪಕ್ಷದ ಮುಖಂಡರು ಎಂದು ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ವಿರುದ್ಧ ನೇರ ಟೀಕಾಪ್ರಹಾರ ನಡೆಸಿದರು.

ಕೋವಿಡ್ ಪರಿಹಾರ ಹಣ ಅತ್ತೆ ಪಾಲಾಗದಂತೆ ಸೊಸೆ ಹೋರಾಟ, ರಿಮ್ಸ್ ಆಸ್ಪತ್ರೆ ಡೀನ್ ವಿರುದ್ಧ ಪ್ರತಿಭಟನೆ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟಜಾತಿಗೆ ಮೀಸಲಾದ ಲಿಂಗಸುಗೂರು ಕ್ಷೇತ್ರದಲ್ಲಿ 55 ಸಾವಿರಕ್ಕೂ ಅಧಿಕ ಮತಗಳ ಪಡೆದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಎಸ್‌.ಹೂಲಗೇರಿಗೆ ನಿಗಮ ಮಂಡಳಿ ನೀಡಬೇಕೆಂದು ಕಾಂಗ್ರೆಸ್‌ ಒಂದು ಗುಂಪು ಹೈಕಮಾಂಡ್‌ ಮುಂದೆ ಪ್ರಬಲ ಪ್ರತಿಪಾದನೆ ಮಾಡುತ್ತಿದೆ. ಇತ್ತ ಸ್ವಪಕ್ಷದಲ್ಲಿಯ ವಿರೋಧದ ಮಧ್ಯೆ ಹೂಲಗೇರಿಗೆ ಈಗಿರುವ ಕಾಂಗ್ರೆಸ್‌ ಸರ್ಕಾರ ನಿಗಮ ಮಂಡಳಿ ನೀಡಿತೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ರಾಜಕೀಯ ಎಲ್ಲಾ ಐಲುಗಳ ಬಲ್ಲ ಮಾಜಿ ಶಾಸಕ ಅಮರೇಗೌಡ ಪಾಟೀಲ್‌ ಬಯ್ಯಾಪುರ ಕಾಂಗ್ರೆಸ್‌ನಲ್ಲಿ ಅತ್ಯಂತ ಹಿಡಿತ ಹೊಂದಿರುವ ಜನನಾಯಕ ಇದರ ಜೊತೆಗೆ ಲಿಂಗಸುಗೂರು ಕ್ಷೇತ್ರದಲ್ಲಿ ಅವರ ಬೇರುಗಳು ಇವೆ. ಕಾಂಗ್ರೆಸ್‌ನಲ್ಲಿ ಬಯ್ಯಾಪುರ ಹಾಗೂ ಹೂಲಗೇರಿದು ಗುರು-ಶಿಷ್ಯರ ಸಂಬಂಧ. ಚುನಾವಣೆ ಬಳಿಕ ಸಂಬಂಧ ಹಳಸಿದ್ದು ಮುಂದೆ ಏನಾಗಲಿದೆ ಎಂಬುದು ಊಹೆಗೆ ನಿಲುಕದ್ದು.

click me!