ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ: ಶಾಸಕ ಕೆ.ಎಸ್‌.ಆನಂದ್‌

By Kannadaprabha News  |  First Published Jun 9, 2023, 1:59 PM IST

ನಮ್ಮ ಜನಪರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ನೀಡಿಕೆಯಿಂದ ಬಡವರ ಬದುಕಿಗೆ ಅನುಕೂಲವಾಗಲಿದೆ ಎಂದು ನೂತನ ಶಾಸಕ ಕೆ.ಎಸ್‌.ಆನಂದ್‌ ಹೇಳಿದರು.


ಕಡೂರು (ಜೂ.09): ನಮ್ಮ ಜನಪರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ನೀಡಿಕೆಯಿಂದ ಬಡವರ ಬದುಕಿಗೆ ಅನುಕೂಲವಾಗಲಿದೆ ಎಂದು ನೂತನ ಶಾಸಕ ಕೆ.ಎಸ್‌.ಆನಂದ್‌ ಹೇಳಿದರು. ಕಡೂರು ವಿಧಾನಸಭಾ ಕ್ಷೇತ್ರದ ಪಂಚನಹಳ್ಳಿಯಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಚುನಾವಣೆಗೆ ಮುನ್ನವೇ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಮೊದಲ ದಿನವೇ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ. 

ಇದರಿಂದ ಬಿಜೆಪಿಯವರಿಗೆ ತಳಮಳ ಶುರುವಾಗಿದ್ದು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಚುನಾವಣೆ ಸಂದರ್ಭ 5 ಗ್ಯಾರಂಟಿಗಳನ್ನು ಘೋಷಿಸಿದಾಗ ಇದೊಂದು ಸುಳ್ಳು ಭರವಸೆ ಎಂದು ವಿರೋಧ ಪಕ್ಷಗಳು ಟೀಕಿಸಲಾರಂಭಿಸಿದವು. ಆದರೆ ಬಡವರಿಗೆ ಸರ್ಕಾರ ಉಚಿತ ಯೋಜನೆಗಳನ್ನು ನೀಡಿದಾಗ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಮೋದಿ ಸರ್ಕಾರ ಕಾಪೊರ್‍ರೇಟ್‌ ಕಂಪನಿಗಳ ಕೋಟ್ಯಂತರ ರು.ಸಾಲ ಮನ್ನಾ ಮಾಡಿದಾಗ ಮೌನ ವಹಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.

Tap to resize

Latest Videos

undefined

ದೇಶ ಕಟ್ಟುವಲ್ಲಿ ಯುವಜನತೆ ಜವಾಬ್ದಾರಿ ದೊಡ್ಡದು: ಸಂಸದ ಬಿ.ವೈ.ರಾಘವೇಂದ್ರ

ಕ್ಷೇತ್ರದ ಜನತೆಯ ಆಶೀರ್ವಾದದಿಂದ ಅತಿ ಹೆಚ್ಚು ಮತಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ್ದೇನೆ. ಜನರು ಭರಸವೆಯಿಟ್ಟು ನೀಡಿದ ಪ್ರತಿ ಮತದ ಋುಣವನ್ನು ತೀರಿಸುತ್ತೇನೆ. ಚೌಡಿಪಾಳ್ಯ ಮತ್ತು ಬಿಟ್ಟೇನಹಳ್ಳಿ ಗ್ರಾಮಗಳಿಗೆ ಕೆಎಸ್‌ಆರ್‌ಟಿ ಬಸ್‌ ವ್ಯವಸ್ಥೆ ಮತ್ತು ಪಂಚನಹಳ್ಳಿಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಅನ್ನದಾತರಲ್ಲಿ ರಾಜಕೀಯ ಬೇಡ, ತಿಂಗಳಿಗೊಮ್ಮೆ ರೈತರ ಸಮಾವೇಶ: ಶಾಸಕ ಪ್ರದೀಪ್‌ ಈಶ್ವರ್‌

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಮಾತನಾಡಿ, ಮತದಾರರ ಜವಬ್ದಾರಿ ಮುಗಿದಿದೆ. ಇನ್ನು 5 ವರ್ಷ ಶಾಸಕ ಕೆ.ಎಸ್‌.ಆನಂದ್‌ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಜವಬ್ದಾರಿ ಮತ್ತು ಬದ್ದತೆ ತೋರಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು. ಕಡೂರು ಪುರಸಭೆ ಸದಸ್ಯ ತೋಟದಮನೆ ಮೋಹನ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಪಿ.ಜಿ.ಸಿದ್ದರಾಮಪ್ಪ, ಜಿಲ್ಲಾ ಕಾಂಗ್ರೆಸ್‌ ವಕ್ತಾರ ಪಿ.ಸಿ.ಪ್ರಸನ್ನ, ಕಡೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಮೌಳಿ, ಬೀರೂರು ಬ್ಲಾಕ್‌ ಅಧ್ಯಕ್ಷ ಕಲ್ಲೇಶ್‌, ಮುಖಂಡರಾದ ಸೋಮಶೇಖರ್‌, ಪಿ.ಎಂ.ಸೋಮಶೇಖರ್‌, ಪಿ.ಎಸ್‌.ರವಿ, ಪಿ.ಸಿ.ಶಶಿಕುಮಾರ್‌ ಮತ್ತಿತರರಿದ್ದರು.

click me!