ಅವನು ಯಾವ ಪಿಹೆಚ್‌ಡಿ ಮಾಡಿದ್ದಾರೆ? ಸೂಲಿಬೆಲೆ ಪಠ್ಯ ತೆಗೆಯುತ್ತೇವೆ; ಜೂನಿಯರ್ ಖರ್ಗೆ!

By Suvarna NewsFirst Published Jun 9, 2023, 12:21 PM IST
Highlights

ಚಕ್ರವರ್ತಿ ಸೂಲೆಬೆಲೆಗೆ ಜೈಲು ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ವ್ಯಾಟ್ಸ್ಆ್ಯಪ್ ಯೂನಿವರ್ಸಿಟಿಯಲ್ಲಿ ಓದಿದ ಚಕ್ರವರ್ತಿ ಸೂಲೆಬೆಲೆ ಪಠ್ಯವನ್ನು ನಮ್ಮ ಮಕ್ಕಳು ಓದುವದು ಬೇಡ. ಅದನ್ನು ತೆಗೆಯುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ವಾರ್ನಿಂಗ್ ಮಾಡಿದ್ದಾರೆ.
 

ಬೆಂಗಳೂರು(ಜೂ.09):ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೆ ಚಕ್ರವರ್ತಿ ಸೂಲೆಬೆಲೆ ಟಾರ್ಗೆಟ್ ಮಾಡಿದೆ. ಈಗಾಗಲೇ ಎಂಬಿ ಪಾಟೀಲ್ ಜೈಲಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಪ್ರಿಯಾಂಕ್ ಖರ್ಗೆ  ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿ ಅವಧಿಯ ಪಠ್ಯ ಪರಿಷ್ಕರಣೆ ವಿಚಾರ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಚಕ್ರವರ್ತಿ ಸೂಲೆಬೆಲೆ ಬರೆದಿರುವ ಪಠ್ಯ ತೆಗೆಯುತ್ತೇವೆ. ಅವನು ಯಾವ ಪಿಹೆಚ್‌ಡಿ ಮಾಡಿದ್ದಾರೆ. ಇವರೆಲ್ಲಾ ವ್ಯಾಟ್ಸ್ಆ್ಯಪ್ ಯೂನಿವರ್ಸಿಟಿಯಲ್ಲಿ ಓದೋರು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನಾನು ಚಕ್ರವರ್ತಿ ಸೂಲೆಬೆಲೆ ಬರೆದಿರುವ ಪಠ್ಯವನ್ನು ಓದಿಲ್ಲ. ಆದರೂ ಸೂಲಿಬೆಲೆ ಬರೆದಿರುವ ಪಠ್ಯವನ್ನು ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಸೂಲೆಬೆಲೆ ಬರೆದಿರುವ ಲೇಖನವನ್ನು ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ದ ಜ್ಯೂನಿಯರ್ ಖರ್ಗೆ ಹರಿಹಾಯ್ದಿದ್ದಾರೆ. 

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತಾಡಿದ್ರೆ ಜೈಲು ಖಚಿತ, ಗ್ಯಾರೆಂಟಿ ಮಾರ್ಗಸೂಚಿ ಪ್ರಕಟ!

ಅವನು ಯಾವ Phd ಮಾಡಿದ್ದಾರೆ? ಬಾಡಿಗೆ ಭಾಷಣಕಾರರ ಲೇಖನ, ಸಾಹಿತ್ಯವನ್ನು ನಮ್ಮ ಮಕ್ಕಳು ಯಾಕೆ ಓದಬೇಕು? ಕರ್ನಾಟಕ ಸಾಹಿತ್ಯಕ್ಕ ಅಷ್ಟು ಬರಬಂದಿದೆಯಾ? ಇವರೆಲ್ಲಾ ವ್ಯಾಟ್ಸ್ಆ್ಯಪ್ ವಿಶ್ವವಿದ್ಯಾಲಯದಲ್ಲಿ ಓದುವವರು.  ಈ ಯುನಿವರ್ಸಿಟಿಯಲ್ಲಿ ಓದುವ ವಿಸಿಗಳು ನಮ್ಮ ಪಠ್ಯ ಓದೋಕೆ, ಪಠ್ಯ ರಚನೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ಈ ಹಿಂದಿನ ಪಠ್ಯ ಪರಿಷ್ಕರಣೆ ಸಮಿತಿ ಹಾಗೂ ಬಿಜೆಪಿಯನ್ನು ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ‌ ಭವಿಷ್ಯ ಏನಾಗಬೇಕು? ಎಂದು ಯೋಜಿಸಿದ್ದೀರಾ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಭಗತ್ ಸಿಂಗ್, ಸುಖದೇವ ಬರೆದುವ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ ಅನ್ನೋ ಮಾತಿಗೆ ಪ್ರತಿಕ್ರಿಯೆ ನೀಡಿದ ಖರ್ಗೆ, ಭಗತ್ ಸಿಂಗ್ ಬಗ್ಗೆ ಅಪಾರವಾದ ಗೌರವ ಇದೆ. ಅವರ ನಿಜವಾದ ಇತಿಹಾಸ ನಾವು ಹೇಳುತ್ತೇವೆ. ನಾನು ನಾಸ್ತಿಕ ಏಕೆ ಆಗಿದ್ದೇನೆ ಅಂತ ಭಗತ್ ಸಿಂಗ್ ಪುಸ್ತಕ ಇದೆ. ಅದನ್ನ ಚಕ್ರವರ್ತಿ ಸೂಲಿಬೆಲೆ ಓದಿದರೆ ಸಾಕು. ಇತಿಹಾಸವನ್ನು ತಿರುಚದೇ ನೈಜವಾಗಿ ಇರುವ ಪಾಠವನ್ನು ನಾವು ಸೇರಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಎಂ ಬಿ ಪಾಟೀಲರ ಮಾತಿಗೆ ಬಿಜೆಪಿ ಕೆಂಡ...ಉತ್ತರ ನಾನಲ್ಲ.. ಸಮಾಜ ಕೊಡುತ್ತೆ ಅಂದಿದ್ದೇಕೆ ಚಕ್ರವರ್ತಿ..?

ಚಕ್ರವರ್ತಿ ಸೂಲಿಬೆಲೆ‌ಗಿಂತ ಒಳ್ಳೆ ಸಾಹಿತಿಗಳು ನಮ್ಮಲ್ಲಿ ಇಲ್ಲವೇ? ಚಕ್ರವರ್ತಿ ಸೂಲಿಬೆಲೆ ಕಟ್ಟು ಕತೆಗಳನ್ನು ಹೇಳುತ್ತಾರೆ. ಬದಲಾಗಿ ವಾಸ್ತವ ಹೇಳೋ ವ್ಯಕ್ತಿ ಅಲ್ಲ. 
ಅವರು ಬರೆದಿರೋ ಪಠ್ಯ ನಾನು ಯಾಕೆ ಓದಲಿ, ನನಗೆ ಓದೋಕೆ ಸಾಕಷ್ಟು ಇದೆ. ಚಕ್ರವರ್ತಿ ಸೂಲಿಬೆಲೆ ಪಾಠ ನಮ್ಮ ಜನರಿಗೆ, ನಮ್ಮ ಮಕ್ಕಳಿಗೆ ಅಗತ್ಯ ಇಲ್ಲ. ಯಾವುದು ಕೇಸರಿಕರಣ ಇದೆ. ಯಾವುದು ಸತ್ಯ ಇಲ್ಲ ಅದೆಲ್ಲವನ್ನು ತೆಗೆಯುತ್ತೇವೆ. ಸಾಹಿತಿಗಳ ಹಿನ್ನಲೆ ಇಲ್ಲದೆ ಬರೆದವರ ಪಠ್ಯ ಯಾಕೆ ಓದಬೇಕು. ಹಿಂದಿನ ಬಿಜೆಪಿ ಸರ್ಕಾರಕ್ಕೆ ಆಪ್ತರು ಅನ್ನೋ ಕಾರಣಕ್ಕೆ ಪಠ್ಯ ಹಾಕುವುದು ಎಷ್ಟು ಸರಿ,  ನಿಮ್ಮ ಮಕ್ಕಳು ವಾಟ್ಸ್ ಅಪ್ ಯೂನಿವರ್ಸಿಟಿ ಓದಬೇಕಾ..? ಒಳ್ಳೆ ಯೂನಿವರ್ಸಿಟಿ ಓದಬೇಕಾ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

click me!