ಬಡ ಸೈನಿಕರು, ಶ್ರೀಮಂತ ಸೈನಿಕರ ವರ್ಗ ಸೃಷ್ಟಿ ಎಂದ ರಾಹುಲ್‌ ವಿರುದ್ಧ ದೂರು

By Suvarna News  |  First Published May 16, 2024, 6:55 AM IST

‘ನರೇಂದ್ರ ಮೋದಿ ಸರ್ಕಾರ ಎರಡು ರೀತಿಯ ಸೇನೆಯನ್ನು ಸೃಷ್ಟಿಸಿದೆ. ಒಂದು ಬಡ ಕುಟುಂಬ ಮತ್ತು ಮೀಸಲಾತಿಯಿಂದ ಬಂದವರು. ಇನ್ನೊಂದು ವರ್ಗ ಶ್ರೀಮಂತ ಹಿನ್ನಲೆಯಿಂದ ಬಂದವರು’ ಎಂದು ಸೇನೆ ಕುರಿತಾಗಿ ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದೆ.


ನವದೆಹಲಿ (ಮೇ.16): ‘ನರೇಂದ್ರ ಮೋದಿ ಸರ್ಕಾರ ಎರಡು ರೀತಿಯ ಸೇನೆಯನ್ನು ಸೃಷ್ಟಿಸಿದೆ. ಒಂದು ಬಡ ಕುಟುಂಬ ಮತ್ತು ಮೀಸಲಾತಿಯಿಂದ ಬಂದವರು. ಇನ್ನೊಂದು ವರ್ಗ ಶ್ರೀಮಂತ ಹಿನ್ನಲೆಯಿಂದ ಬಂದವರು’ ಎಂದು ಸೇನೆ ಕುರಿತಾಗಿ ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದೆ.

ಇತ್ತೀಚಿಗೆ ರಾಯಬರೇಲಿಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಗಾಂಧಿ, ಅಗ್ನಿಪಥ್‌ ಯೋಜನೆಯಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಈ ರೀತಿ ಹೇಳಿಕೆಯನ್ನು ನೀಡಿದ್ದರು. 

Tap to resize

Latest Videos

Watch Video ಸ್ಲೋವಾಕ್ ಪ್ರಧಾನಿ ಮೇಲೆ ಗುಂಡಿನ ದಾಳಿ, ತೀವ್ರ ಗಾಯಗೊಂಡ ರಾಬರ್ಟ್ ಆಸ್ಪತ್ರೆ ದಾಖಲು!

ಇದನ್ನು ವಿರೋಧಿಸಿ ಕೇಂದ್ರ ಸಚಿವರಾದ ಎಸ್‌.ಜೈ.ಶಂಕರ್, ಅರ್ಜುನ್ ಮೇಘವಾಲ್, ರಾಜೀವ್ ಚಂದ್ರಶೇಖರ್ ಚುನಾವಣಾ ಆಯೋಗಕ್ಕೆ ರಾಹುಲ್ ವಿರುದ್ಧ ದೂರು ಸಲ್ಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ‘ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ. ನಮ್ಮ ಸೇನೆಯ ಮೇಲೆ ಅವರು ದಾಳಿ ಮಾಡುತ್ತಿದ್ದಾರೆ. ಈ ರೀತಿ ವಿವಾದಗಳನ್ನು ಸೃಷ್ಟಿಸಲು ಮತ್ತು ನಮ್ಮ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್‌.ಜೈ.ಶಂಕರ್ ಕಿಡಿಕಾರಿದರು.

click me!