ಸ್ಲೋವಾಕ್ ದೇಶದ ಪ್ರಧಾನಿ ಮೇಲೆ ಗುಂಡಿನ ದಾಳಿ ನಡೆದಿದೆ. ಹೊಟ್ಟೆಯ ಕೆಳಬಾಗಕ್ಕೆ ಗುಂಡು ತಗಲಿದ್ದು ತೀವ್ರಗಾಯಗೊಂಡಿದ್ದಾರೆ. ಗುಂಡಿನ ಚಕಮಕಿ ನಡುವೆ ಪ್ರಧಾನಿ ಅಂಗರಕ್ಷಕರು ರಾಬರ್ಟ್ ಫಿಕೋ ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ.
ಹ್ಯಾಂಡ್ಲೋವಾ(ಮೇ.15) ಸ್ಲೋವಾಕ್ ದೇಶದ ಪ್ರಧಾನಿ ರಾಬರ್ಟ್ ಫಿಕೋ ಹತ್ಯೆಗೆ ಸಂಚು ರೂಪಿಸಿ ದಾಳಿ ನಡೆಸಿದ ಘಟನೆ ಹ್ಯಾಂಡ್ಲೋವಾ ನಗರದಲ್ಲಿ ನಡೆದಿದೆ. ರಾಬರ್ಟ್ ಫಿಕೋ ಮೇಲೆ ಸತತ ಗುಂಡಿನ ದಾಳಿ ನಡೆಸಲಾಗಿದೆ. ಹೊಟ್ಟೆಯ ಕೆಳಭಾಗಕ್ಕೆ ಗುಂಡು ತಗುಲಿದೆ. ಗುಂಡಿನ ಚಕಮಕಿ ಆರಂಭಗೊಳ್ಳುತ್ತಿದ್ದಂತೆ ತೀವ್ರಗಾಯಗೊಂಡಿದ್ದ ರಾಬರ್ಟ್ ಫಿಕೋವನ್ನು ರಕ್ಷಿಸಿ ಪ್ರಧಾನಿ ಬುಲೆಟ್ ಪ್ರೂಫ್ ಕಾರಿನಲ್ಲಿ ಕೂರಿಸಿ ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಘಟನೆ ವಿಡಿಯೋ ಬಹಿರಂಗವಾಗಿದ್ದು, ಭೀಕರತೆ ಸ್ಪಷ್ಟ ಚಿತ್ರಣ ಲಭ್ಯವಾಗಿದೆ.
ಆಸ್ಪತ್ರೆ ದಾಖಲಾಗಿರುವ ರಾಬರ್ಟ್ ಫಿಕೋ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇತ್ತ ಗುಂಡಿನ ದಾಳಿ ನಡೆಸಿದ ಆಪರಿಚಿತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಆರಂಭಗೊಂಡಿದ್ದು, ಸ್ಲೋವಾಕ್ ದೇಶದಲ್ಲಿ ತುರ್ತು ಪರಿಸ್ಥಿತಿ ಆತಂಕ ಎದುರಾಗಿದೆ. ಕಲ್ಚರಲ್ ಹೌಸ್‌ನಲ್ಲಿ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಆಗಮಿಸಿದ್ದ ರಾಬರ್ಟ್ ಫಿಕೋ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಕಾರಿನಿಂದ ಇಳಿದು ಸಭೆಗೆ ಆಗಮಿಸಿದ ಬೆನ್ನಲ್ಲೇ ದಾಳಿ ನಡೆಸಲಾಗಿದೆ. ಇತರ ನಾಯಕರು, ಪೊಲೀಸರು ಹಾಗೂ ಪ್ರಧಾನಿ ಅಂಗ ರಕ್ಷಕರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.
ಮಹಿಳೆಯ ಎಳೆದೊಯ್ದು ಕಾರು ಪಾರ್ಕಿಂಗ್‌ನಲ್ಲಿ ಅತ್ಯಾಚಾರ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ದಾಖಲು!
ತಕ್ಷಣೇ ಕಾರ್ಯಪ್ರವೃತ್ತರಾದ ಅಂಗ ರಕ್ಷಕರು ಹಾಗೂ ಪೊಲೀಸರು ಪ್ರಧಾನಿ ರಾಬರ್ಟ್ ಫಿಕೋವನ್ನು ಗುಂಡಿನ ಚಮಕಿಯಿಂದ ರಕ್ಷಿಸಿದ್ದಾರೆ. ಅಷ್ಟರಲ್ಲೇ ನಾಲ್ಕು ಗುಂಡುಗಳು ಪ್ರಧಾನಿ ಹೊಟ್ಟೆ ಸೀಳಿದೆ. ಪ್ರಧಾನಿ ರಾಬರ್ಟ್ ಫಿಕೋ ಅವರನ್ನು ಬುಲೆಟ್‌ಪ್ರೂಫ್ ಕಾರಿಗೆ ಎತ್ತಿಕೊಂಡು ಹೋದ ಅಂಗರ ರಕ್ಷರು ತಕ್ಷಣವೇ ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಲಿಕಾಪ್ಟರ್ ಮೂಲಕ ಬೈಸ್ಟ್ರಿಕಾಗೆ ಸ್ಥಳಾಂತರಿಸಲಾಗಿದೆ.
ಇತ್ತ ಗುಂಡಿನ ದಾಳಿ ನಡೆಸಿದ ಅಪರಿಚಿತನನ್ನು ಪೊಲೀಸರು ಹಾಗೂ ಪ್ರಧಾನಿ ಭದ್ರತಾ ಸಿಬ್ಬಂದಿ ಹಿಡಿದಿದ್ದಾರೆ. ಸ್ಲೋವಾಕ್ ಪ್ರಧಾನಿ ಮೇಲೆ ನಡೆದಿರುವ ಗುಂಡಿನ ದಾಳಿಯನ್ನು ಹಲವು ಯೂರೋಪಿಯನ್ ರಾಷ್ಟ್ರಗಳು ಖಂಡಿಸಿದೆ. ಈ ಘಟನೆ ಅತ್ಯಂತ ಆತಂಕಕಾರಿಯಾಗಿದೆ. ಶೀಘ್ರವೇ ಪ್ರಧಾನಿ ರಾಬರ್ಟ್ ಫಿಕೋ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಪೂಂಛ್ ವಾಯುಸೇನೆ ಮೇಲೆ ಭಯೋತ್ಪಾದಕ ದಾಳಿ, ಇಬ್ಬರು ಉಗ್ರರ ರೇಖಾಚಿತ್ರ ಬಿಡುಗಡೆ!
ಆಸ್ಪತ್ರೆಯಲ್ಲಿ ಚಿತಿತ್ಸೆ ಪಡೆಯುತ್ತಿರುವ ರಾಬರ್ಟ್‌ಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಮುಂದಿನ ಕೆಲ ಗಂಟೆ ಅತ್ಯಂತ ಮಹತ್ವದದ್ದು ಎಂದು ಆಸ್ಪತ್ಪೆ ಮೂಲಗಳು ಹೇಳಿವೆ. ಇತ್ತ ಸ್ಲೋವಾಕ್‌ನಲ್ಲಿ ಎಲ್ಲೆಡೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
