ದೆಹಲಿ ಏರ್‌ಪೋರ್ಟ್‌ನಲ್ಲಿ ಚಂದ್ರಬಾಬು ನಾಯ್ಡು ಭೇಟಿ ಮಾಡಿದ ಇಂಡಿಯಾ ಕೂಟದ ಸ್ಟಾಲಿನ್

By Anusha Kb  |  First Published Jun 6, 2024, 12:00 PM IST

ಇಂಡಿಯಾ ಕೂಟದ ಭಾಗವಾಗಿರುವ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರು ದೆಹಲಿಯಲ್ಲಿ ಟಿಡಿಪಿ ನಾಯಕ ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದು, ಈ ಭೇಟಿ ತೀವ್ರ ಕುತೂಹಲ ಸೃಷ್ಟಿಸಿದೆ.


ನವದೆಹಲಿ: ಕೇಂದ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮುಂದಾಗಿದೆ., ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಎನ್‌ಡಿಎ ಮೈತ್ರಿ ಪಕ್ಷಗಳಾದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಗಳು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿವೆ. ಇತ್ತ ಇಂಡಿಯಾ ಕೂಟ ಸರ್ಕಾರ ರಚನೆಯಿಂದ ಹಿಂದೆ ಸರಿದಿದೆ. ಹೀಗಿರುವಾಗ ಇಂಡಿಯಾ ಕೂಟದ ಭಾಗವಾಗಿರುವ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರು ದೆಹಲಿಯಲ್ಲಿ ಟಿಡಿಪಿ ನಾಯಕ ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದು, ಈ ಭೇಟಿ ತೀವ್ರ ಕುತೂಹಲ ಸೃಷ್ಟಿಸಿದೆ.

ದೆಹಲಿ ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಈ ಎರಡು ಪ್ರಾದೇಶಿಕ ಪಕ್ಷಗಳ ನಾಯಕರು ಪರಸ್ಪರ ಭೇಟಿಯಾಗಿದ್ದಾರೆ. ಫೋಟೋ ಸಮೇತ ಈ ವಿಚಾರವನ್ನು ಎಂ.ಕೆ. ಸ್ಟಾಲಿನ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನ್ನು ಚಂದ್ರಬಾಬು ನಾಯ್ಡು ಅವರಿಗೆ ಟ್ಯಾಗ್ ಮಾಡಿರುವ ಸ್ಟಾಲಿನ್,  ತಲೈವರ್ ಕಲೈಗ್ನಾರ್ ಅಂದರೆ ಕರುಣಾನಿಧಿಯವರ ಧೀರ್ಘಕಾಲದ ಸ್ನೇಹಿತ ಚಂದ್ರಬಾಬು ನಾಯ್ಡುಗಾರು ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದೆ. ನಾನು ಅವರಿಗೆ ಅವರ ಗೆಲುವಿಗೆ ಶುಭಾಶಯ ತಿಳಿಸಿದೆ. 

Tap to resize

Latest Videos

ನಾಡಿದ್ದು ಮೋದಿ 3.0 ಪ್ರಮಾಣ?: ಬಿಜೆಪಿಗೆ ಟಿಡಿಪಿ, ಜೆಡಿಯು ಬೆಂಬಲ ಘೋಷಣೆ

ಜೊತೆಗೆ ಸಹೋದರ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶದ ನಡುವಿನ ಬಾಂಧವ್ಯವನ್ನು ಬಲಪಡಿಸಲು ನಾವು ಸಹಕರಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದೇವೆ. ಅವರು ಕೇಂದ್ರ ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಜೊತೆಗೆ ದಕ್ಷಿಣದ ರಾಜ್ಯಗಳ ಪರವಾಗಿ ಮಾತನಾಡುತ್ತಾರೆ ದಕ್ಷಿಣದ ಹಕ್ಕುಗಳ ರಕ್ಷಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿರುವ ಎಂ.ಕೆ. ಸ್ಟಾಲಿನ್ ಅವರು ಟ್ವಿಟ್ ಮಾಡಿದ್ದಾರೆ. ನಿನ್ನೆ ರಾತ್ರಿ ಈ ಭೇಟಿ ನಡೆದಿದ್ದು, ಇದೀಗ ಸ್ಟಾಲಿನ್ ಅವರ ಈ ಫೋಸ್ಟ್ ಟ್ವಿಟ್ಟರ್‌ನಲ್ಲಿ ಸಖತ್ ವೈರಲ್ ಆಗಿದ್ದು,  ಒಂದು ಮಿಲಿಯನ್‌ಗೂ ಅಧಿಕ ಮಂದಿ ಈ ಪೋಸ್ಟ್ ವೀಕ್ಷಿಸಿ ಪ್ರಸಕ್ತ ರಾಜಕೀಯ ಸ್ಥಿತಿ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. 

ನನ್ನ ತಂದೆ ಕುಪ್ಪುಸ್ವಾಮಿ, ಕರುಣಾನಿಧಿಯಾಗಿದ್ದರೆ ಗೆಲ್ಲುತ್ತಿದ್ದೆ;ಸೋಲು ಅಣಕಿಸಿದವರಿಗೆ ಅಣ್ಣಾಮಲೈ ತಿರುಗೇಟು!

 

Met Thiru garu, a longtime friend of Thalaivar Kalaignar, at Delhi Airport. I conveyed my best wishes to him and expressed hope that we will collaborate to strengthen the ties between the brotherly states of Tamil Nadu and Andhra Pradesh. I am confident that he will play a… pic.twitter.com/IElYek4hQi

— M.K.Stalin (@mkstalin)

 

click me!