32 ರೋಡ್‌ಶೋ, 20ಸಭೆ: ಮೊದಲ ಟಾಸ್ಕಲ್ಲೇ ಗೆದ್ದು ತೋರಿಸಿದ ವಿಜಯೇಂದ್ರ

By Kannadaprabha News  |  First Published Jun 6, 2024, 11:14 AM IST

ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಜವಾಬ್ದಾರಿ ಹೊತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಲೋಕಸಭೆ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಸ ಕೈಗೊಂಡು ಅಧಿಕ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.


ಬೆಂಗಳೂರು (ಜೂ.06): ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಜವಾಬ್ದಾರಿ ಹೊತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಲೋಕಸಭೆ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರವಾಸ ಕೈಗೊಂಡು ಅಧಿಕ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಚುನಾವಣೆಯನ್ನು ಎದುರಿಸಿರುವ ವಿಜಯೇಂದ್ರ ಸಮರ್ಥವಾಗಿಯೇ ನಿಭಾಯಿಸಿ, ರಾಜ್ಯದಲ್ಲಿ ಅಧಿಕ ಸ್ಥಾನಗಳನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದು, ತಮ್ಮ ಸಾಮರ್ಥ್ಯ ಏನೆಂಬುದನ್ನು ಟೀಕಾಕಾರರಿಗೆ ತೋರಿಸಿಕೊಟ್ಟಿದ್ದಾರೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ. ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂಬ ನಿಟ್ಟಿನಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ವಿಜಯೇಂದ್ರ ಸನ್ನದ್ದರಾದರು. 

ಇದರತ್ತ ಕಾರ್ಯೋನ್ಮುಖರಾದ ವಿಜಯೇಂದ್ರ ಪ್ರವಾಸಗಳ ರೂಪರೇಷೆ ತಯಾರಿಸಿ ರಾಜ್ಯಾದ್ಯಂತ ತೆರಳಲು ಮುಂದಾದರು. ಅದರಂತೆ 12,223 ಕಿ.ಮೀ. ಸಂಚರಿಸಿ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಬಿಜೆಪಿಗೆ ಅಧಿಕ ಸ್ಥಾನ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಬಳಿಕ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್, ರಾಜ್ಯದ ಹೊಣೆಯನ್ನು ಶಾಸಕ ಬಿ. ವೈ.ವಿಜಯೇಂದ್ರ ಹೆಗಲಿಗೆ ವಹಿಸಿತ್ತು. ರಾಜ್ಯದ ಜವಾಬ್ದಾರಿಯನ್ನು ಹೊತ್ತ ಬಳಿಕ ವಿಜಯೇಂದ್ರ ತಮ್ಮದೇ ಆದ ಪಡೆಯನ್ನು ರಚಿಸಿಕೊಂಡರು. ತಮ್ಮ ತಂಡದೊಂದಿಗೆ ಕಾರ್ಯಪ್ರವೃತ್ತರಾದ ವಿಜಯೇಂದ್ರ ರಾಜ್ಯದಲಿ 17 ಸಾನ ಗೆಲಿಸಿಕೊಂಡು ಬಂದರು.

Tap to resize

Latest Videos

undefined

ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ: ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ

32 ರೋಡ್‌ಶೋ, 20ಸಭೆ: ಲೋಕಸಭೆಚುನಾವಣೆ ಪ್ರಚಾರದ ವೇಳೆ ವಿಜಯೇಂದ್ರ 38 ಸಾರ್ವಜನಿಕ ಸಭೆಗಳು, 32 ರೋಡ್ ಶೋಗಳು ಮತ್ತು 20 ಆಂತರಿಕ ಸಭೆಗಳನ್ನು ನಡೆಸಿದರು. ಹಿರಿಯರು-ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರವಾಸ ಕೈಗೊಂಡರು. ನಳಿನ್ ಕುಮಾರ್ ಕಟೀಲ್ ಅವರ ಅವಧಿ ಮುಕ್ತಾಯ ಬಳಿಕ ಲೋಕಸಭಾ ಚುನಾವಣೆಗಾಗಿ ಸಮರ್ಥ ನಾಯಕನನ್ನು ಬಿಜೆಪಿ ಹೈಕಮಾಂಡ್ ಹುಡುಕುತ್ತಿತ್ತು. ಈ ಹಿಂದೆ ಹಲವು ಉಪಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿದ ಕಾರಣಕ್ಕಾಗಿ ವಿಜಯೇಂದ್ರ ಅವರಿಗೆ ಬಿಜೆಪಿ ಸಾರಥಿ ಪಟ್ಟವನ್ನು ನೀಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡಿದ ಆರಂಭದಲ್ಲೇ ಬಿಜೆಪಿ ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನು ವಿಜಯೇಂದ್ರ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಮೆಚ್ಚುಗೆ ವ್ಯಕವಾಗಿದೆ.

click me!