ಪಿಎಸ್‌ಐ ಅಕ್ರಮದ ಬಿಸಿ: ಬಿಜೆಪಿಯಲ್ಲಿ ಹೆಚ್ಚಿದ ಕಸಿವಿಸಿ

By Girish Goudar  |  First Published Apr 21, 2022, 9:48 AM IST

*  ಪಿಎಸ್‌ಐ ಹಗರಣದ ಬಿರುಗಾಳಿಯಲ್ಲೇ ಕಲಬುರಗಿಯಲ್ಲಿ ಬಿಜೆಪಿ ಕೋರ್‌ ಕಮಿಟಿ ಸಭೆ
*  ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪಕ್ಷ ಸಂಘಟನೆ ಚರ್ಚೆ
*  ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ ನೇತೃತ್ವ 


ಕಲಬುರಗಿ(ಏ.21):  ರಾಜ್ಯಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಕಲಬುರಗಿ ಮೂಲದ ಬಿಜೆಪಿ(BJP)ಮಹಿಳಾ ಮುಖಂಡೆಯೊಬ್ಬರ ಹೆಸರು ತಳಕು ಹಾಕಿಕೊಂಡಿರುವ ಪಿಎಸ್‌ಐ ಪರೀಕ್ಷಾ ಅಕ್ರಮ(PSI Recruitment Scam) ಬಿರುಗಾಳಿ ರೂಪದಲ್ಲಿ ಬೀಸುತ್ತಿರುವಾಗಲೇ ಕಲಬುರಗಿಯಲ್ಲಿ ಬಿಜೆಪಿ ಆಂತರಿಕ ಪಕ್ಷ ಸಂಘಟನೆ ವಿಚಾರಗಳಲ್ಲಿ ಚಿಂತನೆ ನಡೆಸಲು ಮಹತ್ವದ 2 ದಿನಗಳ ಕೋರ್‌ ಕಮಿಟಿ ಸಭೆಗಳಿಗಾಗಿ ಕಲಬುರಗಿಯನ್ನೇ ಆಯ್ಕೆ ಮಾಡಿಕೊಂಡು ಮುಂದಡಿ ಇಟ್ಟಿದೆ.
ಈಗಾಗಲೇ ಗುತ್ತಿಗೆದಾರರ ಶೇ.40 ಕಮಿಷನ್‌(40% Commission) ಆರೋಪವನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಬಿಜೆಪಿಯನ್ನು(BJP) ಟೀಕಿಸುತ್ತ ಸಾಗಿವೆ. ಏತನ್ಮಧ್ಯೆ ಪಿಎಸ್‌ಐ ಹಗರಣದಲ್ಲಿ ಬಿಜೆಪಿಯ ನಾಯಕಿ ದಿವ್ಯಾ ಹಾಗರಗಿ ಹೆಸರು ಕೇಳಿ ಬಂದಿರೋದರಿಂದಲೂ ಪ್ರತಿಪಕ್ಷಗಳು ಬಿಜೆಪಿಯನ್ನ ಇನ್ನೂ ಹೆಚ್ಚು ಕೇಂದ್ರೀಕರಿಸಿ ಟೀಕಾಸ್ತ್ರ ಪ್ರಯೋಗಿಸುತ್ತಿವೆ. ಈ ಹಂತದಲ್ಲೇ ಬಿಜೆಪಿಯ ಕಲಬುರಗಿ ಸಮಾವೇಶ ತುಂಬ ಮನ ಸೆಳೆದಿದೆ.

ಕಲ್ಯಾಣ ನಾಡಿನ ಪ್ರದೇಶದಲ್ಲಿನ ಪಕ್ಷ ಸಂಘಟನೆಯ ವಿಚಾರಗಳನ್ನೇ ಪ್ರಮುಖವಾಗಿಟ್ಟುಕೊಂಡು ಬಿಜೆಪಿ ಕಲ್ಯಾಣದ ಹೆಬ್ಬಾಗಿಲು ಕಲಬುರಗಿಯಲ್ಲಿ ಸೇರುತ್ತಿದೆ. ಈ ಸರಣಿ ಸಭೆಗಳಲ್ಲಿ ಕಲಬುರಗಿ, ಯಾದಗಿರಿ ಬೀದರ್‌ ಜಿಲ್ಲೆಗಳ ಕೋರ್‌ ಕಮೀಟಿಗಳು ಸೇರಿ ಚರ್ಚಿಸಲಿವೆ.

Tap to resize

Latest Videos

PSI Recruitment Scam: ಬಗೆದಷ್ಟು ಬಯಲಾಗುತ್ತಿರುವ ಅಕ್ರಮ; ಯಾರೆಲ್ಲಾ ಶಾಮೀಲು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ, ಭಗವಂತ ಖೂಬಾ, ಉನ್ನತ ಶಿಕ್ಷಣ ಸಚಿವ ಡಾ. ಸಿಎನ್‌ ಅಶ್ವಥ್‌ನಾರಾಯಣ, ವಿಜಯೇಂದ್ರ, ಲಕ್ಷ್ಮಣ ಸವದಿ, ನಿರ್ಮಲ್‌ ಕುಮಾರ ಸುರಾನಾ ಸೇರಿದಂತೆ ಬಿಜೆಪಿ ಸಂಘಟನೆಯ ಪ್ರಮಖರು 2 ದಿನಗಳ ಸರಣಿ ಸಭೆ, ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕಲಬುರಗಿ(Kalaburagi) ಕೇಂದ್ರವಾಗಿರುವಂತೆ ಬಿಜೆಪಿ 2 ದಿನಗಳ ಪಕ್ಷದ ಆಂತರಿಕ ಸಂಘಟನೆ ಬಲಗೊಳಿಸುವ ದಿಶೆಯಲ್ಲಿ ಕಲಬುರಗಿ, ಯಾದಗಿರಿ, ಬೀದರ್‌ ಜಿಲ್ಲೆಗಳ ಪ್ರಮುಖರು ಕೋರ್‌ ಕಮೀಟಿ ಸದಸ್ಯರ ಸಭೆಗಳು, ಪಕ್ಷದ ಬೂತ್‌ ಕಮೀಟಿ ಮೇಲ್ಪಟ್ಟು ಇರುವ ಪ್ರಮುಖರ ಸಭೆಗಳು ನಡೆಯಲಿವೆ. ಇದೆಲ್ಲದಕ್ಕೂ ಸಿಎಂ ನೇತೃತ್ವ ಇರಲಿದೆ. ಈ ಸರಣಿ ಸಭೆಗಳ ಮೂಲಕ ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಬಿಜೆಪಿ ಮುಂದಾಗಿದೆ.

ಸೇಡಂ ರಸ್ತೆಯಲ್ಲಿರುವ ಗೀತಾ ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಕೋರ್‌ ಕಮಿಟಿ ಪ್ರಾರಂಭಗೊಳ್ಳಲಿವೆ. ಮಹತ್ವದ ಕಾರ್ಯ ಯೋಜನೆಗಳ ಬಗ್ಗೆ ಚರ್ಚೆ ಈ ಸಭೆಗಳಲ್ಲಿ ನಡೆಯುವ ಸಾಧ್ಯತೆಗಳಿವೆ. ಕಲಬುರಗಿ, ಬೀದರ್‌, ಯಾದಗಿರಿ, ಮೂರು ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಸಂಸದರು, ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಪಕ್ಷದ ಸಂಘಟನೆ, ಕಾರ್ಯಕರ್ತರ ಕುಂದುಕೊರತೆ ಸೇರಿ ಅನೇಕ ಮಹತ್ವದ ಕಾರ್ಯ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.

ಏ.22ರ ಶುಕ್ರವಾರವೂ ಕಲಬುರಗಿಯಲ್ಲಿ ಇಎಂ ಬೊಮ್ಮಾಯಿ ಮೊದಲ್ಗೊಂಡು ಪ್ರಮುಖರು ಪಾಲ್ಗೊಳ್ಳುವ ಪಕ್ಷದ ಪ್ರಮುಖ 2000 ಕಾರ್ಯಕರ್ತರ ಸಮಾವೇಶ ಕಲಬುರಗಿ ನಗರದಲ್ಲಿ ನಡೆಯಲಿದೆ. ಇದಕ್ಕಾಗಿ ಪಂಡಿತ ರಂಗ ಮಂದಿರ ಸಿದ್ಧಗೊಂಡಿದೆ.

PSI Recruitment Scam: ಸರ್ಕಾರಿ ಅಧಿಕಾರಿಯೇ ಕಿಂಗ್‌ಪಿನ್? ಎಕ್ಸ್‌ಕ್ಲೂಸಿವ್ ಸುದ್ದಿ

ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಪ್ರಗತಿ ವಿಗತಿಗಳ ವಿಚಾರದಲ್ಲಿ ಸಭೆಯಲ್ಲಿ ಚರ್ಚೆಗಲು ನಡೆಯೋ ಸಾಧ್ಯತೆಗಳಿವೆ. ಕೋರ್‌ ಕಮೀಟಿ ಸಭೆಗಾಗಿ ಕಲಬುರಗಿ ನಗರದ ಪ್ರಮುಖ ಬೀದಿಗಳಲ್ಲಿ ಬೀಜೇಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಡೆ ಸ್ವಾಗತ ಕಮಾನುಗಳನ್ನು ಹಾಕಲಾಗಿದೆ. ಇದಲ್ಲದೆ 2 ದಿನಗಳ ಸಭೆ ಯಶಸ್ಸಿಗೆ ಇಡೀ ಕಲ್ಯಾಣದ ಬಿಜೆಪಿ ಕಲಬುರಗಿಯಲ್ಲಿ ಸಿದ್ಧತೆಯಲ್ಲಿ ತೊಡಗಿದೆ.

ದಿವ್ಯಾ ಶರಣಾಗುವ ನಿರೀಕ್ಷೆ ಹುಸಿ

ಬಿಜೆಪಿ ನಾಯಕಿ ದಿವ್ಯಾ ಹಾಗರಗಿ(Divya Hagaragi) ಒಡೆತನದ ಶಾಲೆಯೊಂದರಲ್ಲಿ ನಡೆದ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮವಾಗಿದ್ದು, ಇದರ ಹಿಂದಿನ ಸೂತ್ರದಾರೆ ದಿವ್ಯಾ ಎಂಬ ಆರೋಪಗಳು ಬಲವಾಗಿದ್ದು ಸಿಐಡಿ(CID) ಇವರ ಬಂಧನಕ್ಕೆ ಜಾಲ ಬೀಸಿದೆ. ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆಯೇ ದಿವ್ಯಾ ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದಾರೆ. ಈ ಹಂತದಲ್ಲಿ ದಿವ್ಯಾ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ಶರಣಾಗುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ.

ಏತನ್ಮದ್ಯೆ ಕಾಂಗ್ರೆಸ್‌(Congress) ಈ ವಿಚಾರವನ್ನು ಮುಂದಿಟ್ಟುಕೊಂಡು ಕಲಬುರಗಿಗೆ ಬರುತ್ತಿರುವ ಸಿಎಂ ಅವರಿಗೆ ಘೇರಾವ್‌ ಹಾಕಲು ಮುಂದಾಗಿದೆ. ಈಗಾಗಲೇ ಈ ಕುರಿತಂತೆ ಕೆಪಿಸಿಸಿ ಉಪಾಧ್ಯಕ್ಷ ಶರಣಪ್ರಕಾಶ ಪಾಟೀಲ್‌ ಹೇಳಿಕೆ ನೀಡಿದ್ದಾರೆ. ಇದಲ್ಲದೆ ಸಿಎಂ ಬರೋದ್ರೊಳಗೆ ದಿವ್ಯಾ ಬಂಧನವಾಗದೆ ಹೋದಲ್ಲಿ ಹೋರಾಟ ನಿಶ್ಚಿತ ಎಂದೂ ಹೇಳಿದ್ದಾರೆ. ದಿವ್ಯಾ ಹಾಗರಗಿ ಬಂಧನಕ್ಕೆ ಮುಂದಾಗಿರುವ ಸಿಐಡಿಗೆ ಅವರು ಬುಧವಾರವೂ ಸಿಕ್ಕಿಲ್ಲ. ಬಿಜೆಪಿ ಕೋರ್‌ ಕಮೀಟಿ ಸಭೆಗು ಮುನ್ನ ಏನೆಲ್ಲಾ ಬೆಳವಣಿಗೆ ನಡೆಯುವವೋ ಕಾದು ನೋಡಬೇಕಿದೆ.
 

click me!