Karnataka Politics: ಸಂಪುಟ ಬಳಿಕ ಬಿಜೆಪಿ ಪ್ರಚಾರ ಸಮಿತಿ ರಚನೆ

Published : Apr 21, 2022, 04:24 AM IST
Karnataka Politics: ಸಂಪುಟ ಬಳಿಕ ಬಿಜೆಪಿ ಪ್ರಚಾರ ಸಮಿತಿ ರಚನೆ

ಸಾರಾಂಶ

*  ಮಂತ್ರಿಗಿರಿ ಕಳೆದುಕೊಂಡವರಿಗೆ ಪ್ರಚಾರದ ಹುದ್ದೆ *  ಬಿಎಸ್‌ವೈ ನೇತೃತ್ವದಲ್ಲಿ ಸಮಿತಿ ರಚನೆ ಬಗ್ಗೆ ಚರ್ಚೆ *  ಕಾಂಗ್ರೆಸ್‌ನ ಪ್ರಚಾರ ಸಮಿತಿಗೆ ಬಿಜೆಪಿ ಪ್ರಚಾರ ಸಮಿತಿ ಮೂಲಕ ಠಕ್ಕರ್‌ ಸಾಧ್ಯತೆ  

ಬೆಂಗಳೂರು(ಏ.21):  ಶೀಘ್ರದಲ್ಲೇ ನಡೆಯಲಿದೆ ಎನ್ನಲಾದ ಸಂಪುಟ(Cabinet Expansion) ಸರ್ಜರಿಯಲ್ಲಿ ಸಚಿವ ಸ್ಥಾನ ಕಳೆದುಕೊಳ್ಳಲಿರುವ ಹಲವರಿಗೆ ಮುಂಬರುವ ವಿಧಾನಸಭಾ ಚುನಾವಣೆ(Karnataka Assembly Election)ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬರಲಿರುವ ಪಕ್ಷದ ಪ್ರಚಾರ ಸಮಿತಿಯಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಹೆಚ್ಚಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಒಲವು ತೋರುತ್ತಿರುವ ಪಕ್ಷದ ವರಿಷ್ಠರು ಕಾರ್ಯವೈಖರಿ ಮತ್ತು ಜಾತಿ-ಪ್ರಾದೇಶಿಕ ಸಮೀಕರಣದ ಆಧಾರದ ಮೇಲೆ ಹಲವರನ್ನು ಸಂಪುಟದಿಂದ ಕೈಬಿಡುವ ಬಗ್ಗೆಯೂ ಆಲೋಚನೆ ಮಾಡುತ್ತಿದ್ದಾರೆ. ಇದಕ್ಕೆ ಪಕ್ಷದ ರಾಜ್ಯ ನಾಯಕರ ಒತ್ತಾಸೆಯೂ ಇದೆ. ಒಂದು ವೇಳೆ ಇದು ಅನುಷ್ಠಾನಗೊಂಡಲ್ಲಿ ಸಂಪುಟದಿಂದ ಹೊರಬರುವವರಿಗೆ ಪಕ್ಷದ ಪ್ರಚಾರ ಸಮಿತಿಯಲ್ಲಿ ಸ್ಥಾನ ಕಲ್ಪಿಸುವ ಮೂಲಕ ಗೌರವದಿಂದ ನಡೆಸಿಕೊಂಡಂತೆಯೂ ಆಗುತ್ತದೆ ಎಂಬ ಲೆಕ್ಕಾಚಾರವೂ ಇದೆ.

Karnataka Cabinet Expansion: ಸಂಪುಟ ಪುನರ್‌ರಚನೆ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು

ಈವರೆಗೆ ಸಂಪುಟದಿಂದ ಎಷ್ಟುಸಚಿವರಿಗೆ ಗೇಟ್‌ ಪಾಸ್‌ ಸಿಗಲಿದೆ ಎಂಬುದರ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಆದರೆ, ಪಕ್ಷದಲ್ಲಿ ವದಂತಿ ಮಾತ್ರ ದಟ್ಟವಾಗಿಯೇ ಇದೆ. ಈ ಬಗ್ಗೆ ಇದೇ ತಿಂಗಳ ಅಂತ್ಯದೊಳಗೆ ಪಕ್ಷದ ವರಿಷ್ಠರು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಸಂಭವವಿದೆ. ಸಭೆ ನಡೆಸಿದ ಬಳಿಕವೇ ಈ ಕುರಿತು ಸ್ಪಷ್ಟಚಿತ್ರಣ ಹೊರಬೀಳಲಿದೆ.

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌(Congress) ಈಗಾಗಲೇ ಮಾಜಿ ಸಚಿವ ಎಂ.ಬಿ.ಪಾಟೀಲ್‌(MB Patil) ನೇತೃತ್ವದಲ್ಲಿ ಪ್ರಚಾರ ಸಮಿತಿ ರಚಿಸುವ ಮೂಲಕ ಒಂದು ಹೆಜ್ಜೆ ಮುಂದಿಟ್ಟಿದೆ. ಸಂಪುಟ ಕಸರತ್ತು ಮತ್ತು ಪಕ್ಷದ ಸಂಘಟನಾ ಸ್ವರೂಪದಲ್ಲಿನ ಕೆಲವು ಬದಲಾವಣೆಗಳ ಬಳಿಕ ಪ್ರಬಲ ನಾಯಕರನ್ನು ಒಳಗೊಂಡ ಪ್ರಚಾರ ಸಮಿತಿ ರಚಿಸುವ ಉಮ್ಮೇದಿನಲ್ಲಿ ಬಿಜೆಪಿ ನಾಯಕರಿದ್ದಾರೆ.

ಯಾರ ನೇತೃತ್ವ?:

ಇದುವರೆಗೆ ಪ್ರಚಾರ ಸಮಿತಿಯನ್ನು ಯಾರ ನೇತೃತ್ವದಲ್ಲಿ ರಚಿಸಬೇಕು ಎಂಬುದರ ಬಗ್ಗೆ ನಿರ್ಧಾರವಾಗಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ನೇತೃತ್ವದಲ್ಲಿ ಪ್ರಚಾರ ಸಮಿತಿ ರಚಿಸುವ ಬಗ್ಗೆ ಪಕ್ಷದ ಆಂತರಿಕ ಸಭೆಗಳಲ್ಲಿ ಪ್ರಸ್ತಾಪವಾಗಿದೆ. ಒಂದು ವೇಳೆ ಅವರು ಅಲ್ಲದಿದ್ದರೂ ಬೇರೊಬ್ಬ ಹಿರಿಯ ನಾಯಕರನ್ನು ಜಾತಿ ಸಮೀಕರಣದ ಆಧಾರದ ಮೇಲೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸುವ ನಿರೀಕ್ಷೆಯಿದೆ. ಆಗ ಆ ಸಮಿತಿಯಲ್ಲಿ ಸಚಿವ ಸ್ಥಾನ ಕಳೆದುಕೊಳ್ಳುವವರಿಗೆ ಸ್ಥಾನ ನೀಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ದಿಲ್ಲಿ ಸಭೆ ಬಳಿಕ ಸಂಪುಟ ಕಸರತ್ತು, ವಿಸ್ತರಣೆಯೋ? ಪುನಾರಚನೆಯೋ?: ಬೊಮ್ಮಾಯಿ ಹೇಳಿದ್ದಿಷ್ಟು

ಸಚಿವ ಸ್ಥಾನ ಕಳೆದುಕೊಳ್ಳುವ ಕಿರಿಯ ಸಚಿವರಿಗೆ ಪಕ್ಷದ ಸಂಘಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಸ್ಥಾನ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಆದರೆ, ಹಿರಿಯ ಸಚಿವರನ್ನು ಕೈಬಿಟ್ಟರೆ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡುವುದು ಸರಿಯಾಗಲಿಕ್ಕಿಲ್ಲ ಎಂಬ ಕಾರಣಕ್ಕಾಗಿ ಪ್ರಚಾರ ಸಮಿತಿಯಲ್ಲಿ ಜಾಗ ನೀಡಲು ಉದ್ದೇಶಿಸಿಲಾಗಿದೆ ಎನ್ನಲಾಗಿದೆ.

ಏನಿದು ಲೆಕ್ಕಾಚಾರ?

- ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆಗೆ ಬಿಜೆಪಿ ವರಿಷ್ಠರ ಒಲವು
- ಕಾರ‍್ಯವೈಖರಿ, ಜಾತಿ, ಪ್ರಾದೇಶಿಕ ಸಮೀಕರಣದಂತೆ ಹಲವರಿಗೆ ಕೊಕ್‌ ಸಾಧ್ಯತೆ
- ಸಂಪುಟದಿಂದ ಹೊರಬರುವವರನ್ನು ಗೌರವಯುತವಾಗಿ ನಡೆಸಿಕೊಳ್ಳಲು ಚಿಂತನೆ
- ಅದಕ್ಕಾಗಿ ಪ್ರಚಾರ ಸಮಿತಿ ರಚಿಸಲು ಚಿಂತನೆ: ಅದರ ನೇತೃತ್ವ ಯಡಿಯೂರಪ್ಪಗೆ?
- ಬಿಎಸ್‌ವೈಗೆ ನೀಡದಿದ್ದರೆ ಜಾತಿ ಸಮೀಕರಣದ ಮೇಲೆ ಇನ್ನೊಬ್ಬ ಹಿರಿಯಗೆ ಚುಕ್ಕಾಣಿ
- ಈ ತಿಂಗಳ ಅಂತ್ಯದೊಳಗೆ ವರಿಷ್ಠರು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ
- ಕಾಂಗ್ರೆಸ್‌ನ ಪ್ರಚಾರ ಸಮಿತಿಗೆ ಬಿಜೆಪಿ ಪ್ರಚಾರ ಸಮಿತಿ ಮೂಲಕ ಠಕ್ಕರ್‌ ಸಾಧ್ಯತೆ
- ಸಚಿವ ಸ್ಥಾನ ಕಳೆದುಕೊಳ್ಳುವ ಕಿರಿಯರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿಕೆ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!