
ತುಮಕೂರು/ಚಿತ್ರದುರ್ಗ (ಜ.06): ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಿಪೋರ್ಟ್ ಕಾರ್ಡ್ ರಾಜಕೀಯ ಆರಂಭಿಸಿದ್ದಾರೆ. ಹಾಗೆಯೇ ಕರ್ನಾಟಕದಲ್ಲೂ ರಿಪೋರ್ಟ್ ಕಾರ್ಡ್ ಆಧಾರದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ. ಈಗಾಗಲೇ ನಮ್ಮ ರಿಪೋರ್ಟ್ ಕಾರ್ಡ್ ಸಿದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು. ನಗರದ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ತುಮಕೂರು ಮತ್ತು ಮಧುಗಿರಿ ಸಂಘಟನಾತ್ಮಕ ಜಿಲ್ಲೆಗಳ ಶಕ್ತಿ ಕೇಂದ್ರಗಳ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆ ಹಾಗೂ ಚಿತ್ರದುರ್ಗ ಜಿಲ್ಲೆಯ ಮುರುಘಾಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಎಸ್ಸಿ, ಎಸ್ಟಿ, ಒಬಿಸಿ ಕಾರ್ಯಕರ್ತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದವರಿಗೆ ತಿಳಿವಳಿಕೆ ಬಹಳ ಕಡಿಮೆ. ಬರೀ ಟೀಕೆ ಮಾಡುವುದರಲ್ಲೇ ಕಾಲ ಹರಣ ಮಾಡುತ್ತಾ, ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್‌ನ ಇನ್ನೊಂದು ಹೆಸರು ಭ್ರಷ್ಟಾಚಾರ, ಕಮಿಷನ್ ಹಾಗೂ ಜಾತಿವಾದ ಎಂದು ವ್ಯಂಗ್ಯವಾಡಿದರು. ಬಹಿರಂಗ ಚರ್ಚೆಗೆ ಬರಲಿ: ದೇಶ ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್‌ನವರು ಬಹಿರಂಗ ಚರ್ಚೆಗೆ ಬರಲಿ. ಅವರ ಒಂದೊಂದು ಮಾತಿಗೂ ಉತ್ತರ ಕೊಡುತ್ತೇವೆ. ಭಾರತ ಕೊರೋನಾ ಸಂಕಷ್ಟಪರಿಸ್ಥಿತಿಯನ್ನು ಗೆದ್ದಿದ್ದು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಲಸಿಕೆ ಮೂಲಕ ಸುರಕ್ಷಾ ಕವಚವನ್ನು ಹೊಂದಿದೆ. ಆದರೆ, ಪೋಲಿಯೋ ಲಸಿಕೆ ಸೇರಿದಂತೆ ಬೇರೆ ಲಸಿಕೆಗಳನ್ನು ಕಂಡು ಹಿಡಿಯಲು ಎಷ್ಟುವರ್ಷ ಬೇಕಾಯಿತು ಎಂಬುದು ಕಾಂಗ್ರೆಸ್‌ಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ: ಸಿಎಂ ಬೊಮ್ಮಾಯಿ
ದಲಿತರ ಜತೆಗಿದೆ: ಬಿಜೆಪಿ ಹಿಂದುಳಿದವರು, ದಲಿತ ಸಮುದಾಯದ ಜತೆಗಿದೆ. ಸಾಮಾಜಿಕ ನ್ಯಾಯಕ್ಕೆ ಮೋದಿ ಸರ್ಕಾರ ಅಗ್ರಪಂಕ್ತಿ ಒದಗಿಸಿದೆ. 12 ಮಂದಿ ದಲಿತ ಸಚಿವರು ಮೋದಿ ಸಂಪುಟದಲ್ಲಿದ್ದಾರೆ. 27 ಮಂದಿ ಓಬಿಸಿ ಮಂತ್ರಿಗಳಿದ್ದಾರೆ. ಬುಡಕಟ್ಟು ಜನಾಂಗದ 8 ಜನ ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಿಂತ ಸಾಮಾಜಿಕ ನ್ಯಾಯದ ಪ್ರತಿಪಾದನೆ ಬೇಕಾ? ಬಿಜೆಪಿ ಸರ್ಕಾರದ ಅವಧಿಯಲ್ಲೇ ದಲಿತ ಸಮುದಾಯಕ್ಕೆ ಸೇರಿದ ರಾಮನಾಥ್ ಕೋವಿಂದ್ ಹಾಗೂ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ರಾಷ್ಟ್ರಪತಿಗಳಾಗಿದ್ದಾರೆ. ಆದರೆ ಕಾಂಗ್ರೆಸ್ ಅನಾದಿ ಕಾಲದಿಂದಲೂ ಎಸ್ಸಿ,ಎಸ್ಟಿ, ಒಬಿಸಿ ವಿರುದ್ಧ ಕೆಲಸ ಮಾಡಿದೆ. ಅಂಬೇಡ್ಕರ್‌ಗೆ ಭಾರತ ರತ್ನ ಪ್ರಶಸ್ತಿ ಕೊಡಲು ಬಿಜೆಪಿಯೇ ಬರಬೇಕಾಯಿತು ಎಂದರು.
ಎಲ್ಲಾ ಸಮುದಾಯಗಳ ಸಮಾವೇಶಗಳು ಬಿಜೆಪಿ ಧ್ವಜದ ಅಡಿಯಲ್ಲೇ ನಡೆಯಬೇಕು. ಕರ್ನಾಟಕದಲ್ಲಿ ಬಿಜೆಪಿ ವಿಚಾರಧಾರೆ ಶಕ್ತಿಶಾಲಿಯಾಗಬೇಕು. ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿಕೊಂಡು ಹೋಗುವ ಪಕ್ಷ ಬಿಜೆಪಿ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟನೆ ಮಾಡುವ ಕಾರ್ಯದಲ್ಲಿ ಕಾರ್ಯೋನ್ಮುಖರಾಗಬೇಕು. ಅಶಕ್ತರಿಗೆ ನೆರವಾಗಬೇಕು. ಈ ಮೂಲಕ ಬಿಜೆಪಿಯ ಆಶಯಗಳನ್ನು ಜನರಿಗೆ ಮುಟ್ಟಿಸಬೇಕು. ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯ ವಿಚಾರಧಾರೆಗಳು ಮತ್ತಷ್ಟುಶಕ್ತಿಶಾಲಿಯಾಗಬೇಕು. ಈ ನಿಟ್ಟಿನಲ್ಲಿ ಶಕ್ತಿ ಕೇಂದ್ರಗಳು, ಬೂತ್‌ಗಳು ಸಕ್ರಿಯವಾಗಬೇಕು ಎಂದರು.
PSI Recruitment Scam: ಕಿಂಗ್‌ಪಿನ್ ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಬೇಲ್
ಸಿದ್ದು ಹೇಳಿಕೆ ಕೇಳಿ ದುಃಖವಾಯ್ತು: ಮುಖ್ಯಮಂತ್ರಿ ಬೊಮ್ಮಾಯಿ ಮೋದಿ ಮುಂದೆ ನಾಯಿಮರಿಯಂತೆ ನಿಲ್ಲುತ್ತಾರೆಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆ ಕೇಳಿ ದುಃಖವಾಯಿತು. ಈ ರೀತಿಯ ಹೇಳಿಕೆ ಮೂಲಕ ಸಿದ್ದರಾಮಯ್ಯ ಅವರು ಕರ್ನಾಟಕದ ರಾಜಕಾರಣವನ್ನು ಕೆಳಮಟ್ಟಕ್ಕೆ ತಂದಿದ್ದಾರೆ. ಅವರು ಅಂಥ ಹೇಳಿಕೆ ಹೇಗೆ ನೀಡಲು ಸಾಧ್ಯ ಎಂದು ಜೆ.ಪಿ.ನಡ್ಡಾ ಇದೇ ವೇಳೆ ಟಾಂಗ್ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.