ನನಗೆ ಲಂಚ ಕೊಡಲು ವಿಧಾನಸೌಧಕ್ಕೆ ಬರಬೇಕಿತ್ತೇ: ಸಿದ್ದು ಆರೋಪಕ್ಕೆ ತಿರುಗೇಟು ನೀಡಿದ ಸಿ.ಸಿ.ಪಾಟೀಲ್

By Govindaraj S  |  First Published Jan 6, 2023, 2:08 PM IST

ವಿಕಾಸಸೌಧದಲ್ಲಿ 10 ಲಕ್ಷ ರೂಪಾಯಿ ಸಿಕ್ಕ ವಿಚಾರವಾಗಿ ನಾನು ಯಾಕೆ ಆ ಜವಾಬ್ದಾರಿ ಹೊತ್ತಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಸಚಿವ ಸಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ. 


ಬೆಂಗಳೂರು (ಜ.06): ವಿಕಾಸಸೌಧದಲ್ಲಿ 10 ಲಕ್ಷ ರೂಪಾಯಿ ಸಿಕ್ಕ ವಿಚಾರವಾಗಿ ನಾನು ಯಾಕೆ ಆ ಜವಾಬ್ದಾರಿ ಹೊತ್ತಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಸಚಿವ ಸಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ. ನಾನು ಹೇಳಬಹುದು ಅಲ್ವಾ ವಿರೋಧ ಪಕ್ಷದವರಿಗೆ ಕೊಡೋಕೆ ಹೋಗಿರಬಹುದು ಅಂತ. ಹಣ ಕೊಡಲು ವಿಕಾಸಸೌಧ ಅಥವಾ ವಿಧಾನಸೌಧಕ್ಕೆ ಯಾಕೆ ಬರಬೇಕು ಮನೆ ಅಥವಾ ಬೇರೆ ಕಡೆ ಎಲ್ಲಾದರೂ ‌ಕೊಡಬಹುದು ಅಲ್ವಾ, ಈ ಬಗ್ಗೆ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ನಾನು ಈ  ಪ್ರಕರಣದಲ್ಲಿ ಯಾರ ಮೇಲೂ ಒತ್ತಡ ಹಾಕಿಲ್ಲ. ನಮಗೂ ಆತನಿಗೂ ಸಂಬಂಧ ಇಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿದ ಸಚಿವ ಪಾಟೀಲ್, ದುಡ್ಡು ಸಿಕ್ಕಿದ್ದು ಹೊರಗೆ, ಯಾರೋ ದುಡ್ಡು ಹಿಡಿದುಕೊಂಡು ಹೋಗುತ್ತಿದ್ದಕ್ಕೂ ನಾನು ಪ್ರೆಸ್ ಮೀಟ್ ಮಾಡಿದ್ದಕ್ಕೂ ಏನ್ ಸಂಬಂಧ..? ಚುನಾವಣಾ ಪ್ರಚಾರಕ್ಕೆ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೇ. ಸ್ಯಾಂಟ್ರೋ ರವಿ ಯಾರು ನಂಗೆ ಗೊತ್ತಿಲ್ಲ. ನಿನ್ನೆಯೇ ಅವರ ಹೆಸರನ್ನ ನಾನು ಕೇಳಿದ್ದು. ಕೆಕೆ ಗೆಸ್ಟ್ ಹೌಸ್ ಡಿಪಿಆರ್ ವ್ಯಾಪ್ತಿಗೆ ಬರುತ್ತೆ. ನನ್ನ ಕ್ಷೇತ್ರದವರು ಯಾರಾದ್ರು ಬೆಂಗಳೂರಲ್ಲಿ ಆಸ್ಪತ್ರೆಗೆ ಅಂತ ಬಂದ್ರೆ  ಅವರಿಗೆ ಎರಡು ದಿವಸಕ್ಕೆ ಕಾವೇರಿ ಗೆಸ್ಟ್ ಹೌಸ್ ಕೊಡಸಿದ್ದೇನೆ ಅಷ್ಟೇ. 

Tap to resize

Latest Videos

ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ: ಸಿಎಂ ಬೊಮ್ಮಾಯಿ

ಹಣ ಕೊಡೋದು ಇದ್ದಿದ್ದರೆ ಆತ ವಿಧಾನಸೌಧಕ್ಕೇ ಬರಬೇಕಿತ್ತಾ ಎಂದು ನಿನ್ನೆಯೇ ಅಂದಿದ್ದೆ. ನಮಗೂ ಆತನಿಗೂ ಸಂಬಂಧ ಇಲ್ಲ.  ಆತನನ್ನು ಬಂಧಿಸಲಾಗಿದೆ, ವಿಚಾರಣೆ ನಡೆಯುತ್ತಿದೆ. ಆತ ಆ ಹಣಕ್ಕೆ ಸೂಕ್ತ ದಾಖಲಾತಿ ಕೊಡದಿದ್ರೆ ಕ್ರಮ‌ ಆಗಲಿದೆ. ನಾನು ಇದರ ಹೊಣೆ ಯಾಕೆ ಹೊತ್ತುಕೊಳ್ಳಲಿ? ನಾನು ಪ್ರಕರಣದಲ್ಲಿ ಯಾರ ಮೇಲೂ ಒತ್ತಡ ಹಾಕಿಲ್ಲ. 24 ಗಂಟೆ ಕಸ್ಟಡಿಯಲ್ಲಿದ್ದರೆ ಆಟೋಮ್ಯಾಟಿಕ್ ಸಸ್ಪೆಂಡ್ ಆಗುತ್ತದೆ. ದುಡ್ಡು ಸಿಕ್ಕಿದ್ದು ವಿಧಾನಸೌಧದ ಕ್ಯಾಂಪಸ್ ಹೊರಗೆ. ನಾನು ವಿಕಾಸಸೌಧದಲ್ಲಿ ಇದ್ದಿದ್ದು, ಹಣ ಸಿಕ್ಕಿದ್ದು ಒಂದೇ ಸಮಯ ಅಂತಾದರೆ ನಾನು ವಿಧಾನಸೌಧಕ್ಕೆ ಬರಲೇ ಬಾರದಾ? ಎಂದು ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗೊಷ್ಠಿ: ಬೆಂಗಳೂರು - ಮೈಸೂರು ಹೆದ್ದಾರಿ ಕಾಮಗಾರಿಯನ್ನ ಕೇಂದ್ರ ಸಚಿವರ ಜೊತೆ ವೀಕ್ಷಣೆ ಮಾಡಿದ್ದೇವೆ. ಬಹುತೇಕ ಮುಂದಿನ ತಿಂಗಳಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟನೆ ಮಾಡ್ತೀವಿ. ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಯಿಂದ ಉದ್ಘಾಟನೆ ಮಾಡಿಸಬೇಕು ಎಂದು ಚಿಂತನೆ ಇದೆ ಎಂದು ಸಿಸಿ.ಪಾಟೀಲ್ ವಿಕಾಸಸೌಧದಲ್ಲಿ ನಡೆದ ಸುದ್ದಿಗೊಷ್ಠಿ ಹೇಳಿದರು. ಪಂಚಮಸಾಲಿ ಮೀಸಲಾತಿ ಬಗ್ಗೆ ಸ್ವಾಮೀಜಿ ಡೆಡ್ ಲೈನ್ ನೀಡಿದ ವಿಚಾರವಾಗಿ ಜಯಮೃತುಂಜಯ ಹೋರಾಟವನ್ನ ನಾನು ಮೆಚ್ಚುತ್ತೇನೆ. ಅವರ ಪಾದಯಾತ್ರೆಗೆ ನಾವು ಸಹಕಾರ ಕೊಟ್ಟಿದ್ದೇವು. ಅಂದಿನ ಗೃಹ ಸಚಿವರು ಇಂದಿನ ಮುಖ್ಯಮಂತ್ರಿಗಳು ಸಹ ಅವರ ಪಾದಯಾತ್ರೆಗೆ ಸಹಕಾರ ಕೊಟ್ಟಿದ್ದರು. 

ನಾನು ಸಚಿವನಾಗಿ ಸಹಕಾರ ಕೊಟ್ಟಿದ್ದೆ. ಬಸವರಾಜ ಬೊಮ್ಮಾಯಿ‌ ಮುಖ್ಯಮಂತ್ರಿಯಾದ ಮೇಲೆ ಜಯಪ್ರಕಾಶ್ ಹೆಗ್ಡೆ ಅವರ ನೇತೃತ್ವದಲ್ಲಿ ಆಯೋಗ ನೇಮಕ ಮಾಡಿದ್ರು. ಜಯಪ್ರಕಾಶ್ ಹೆಗ್ಡೆ ಅವರು ಅಧ್ಯಯನ ನಡೆಸಿ ಮಧ್ಯಂತರ ವರದಿಯನ್ನ ಸಲ್ಲಿಕೆ ಮಾಡಿದ್ರು. ಅವರು ವರದಿ ನೀಡುವಿಕೆಯಲ್ಲಿ ವಿಳಂಬವಾಗಿದೆ ಅದನ್ನ ನಾವು ಒಪ್ಪಿಕೊಳ್ಳುತ್ತೇವೆ. ಕೋವಿಡ್ ಕಾರಣ ವಿಳಂಬವಾಗಿದೆ. ತದನಂತರ ಬೆಳಗಾವಿಯಲ್ಲಿ ಮಧ್ಯಂತರ ವರದಿಯನ್ನ ನೀಡಿದ್ರು. ಯಾರಿಗೂ ಅನ್ಯಾಯವಾಗದಂತೆ ಪಂಚಮಸಾಲಿ ಸಮುದಾಯಕ್ಕೆ 2Dಯನ್ನ ನೀಡಲಾಗಿದೆ. ಸಮುದಾಯದ ನಾಯಕರ ಜೊತೆ ಸಿಎಂ ಮನವರಿಕೆ ಮಾತುಗಳನ್ನ ಹೇಳಿದ್ದಾರೆ. 

ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರು: ಕೇಂದ್ರ ಸಚಿವ ಗಡ್ಕರಿ ಭೇಟಿಯಾಗಿ ಮನವಿ ಸಲ್ಲಿಸಿದ ಶರವಣ

ಸ್ವಾಮೀಜಿಗೆ ಎಲ್ಲೋ ಒಂದು ಕಡೆ ವಿಳಂಬವಾಗಿತ್ತೆ ಅನ್ನೋ ಭಾವನೆ ಬಂದಿರಬಹುದು. ಕೋಡ್ ಆಫ್ ಕಂಡ್ಕಟ್ ಬಂದು ಎಲ್ಲೋ ವಿಳಂಬವಾಗುತ್ತೆ ಅಂದುಕೊಂಡಿರಬೇಕು. ಇದ್ರ ಬಗ್ಗೆ ಚರ್ಚೆ ಮಾಡಬೇಕಿತ್ತು ಆದ್ರೆ ಸಿದ್ದೇಶ್ವರ ಶ್ರೀಗಳ ನಿಧನರಾದರು. ಜಯಮೃತುಂಜಯ ಸ್ವಾಮೀಜಿ ಅವರ ಡೆಡ್ ಲೈನ್ ಸರಿ ಅಲ್ಲ. ಬನ್ನಿ ನಮ್ಮ ಜೊತೆ ಚರ್ಚೆ ಮಾಡಿ ಎಂದು ಆಹ್ವಾನ ಕೊಟ್ಟರು. ನಿಮ್ಮ ಹೆಜ್ಜೆ ಸರಿಯಲ್ಲ. ಡೆಡ್ ಲೈನ್ ನೀಡೋದು ಸರಿಯಲ್ಲ. ಮುಖ್ಯಮಂತ್ರಿಗಳು ಜೊತೆ ಸಮಯ ನಿಗದಿ ಮಾಡಿ ಚರ್ಚೆ ಮಾಡೋಣ. 24 ಗಂಟೆ ಡೆಡ್ ಲೈನ್ ವಾಪಸ್ ಪಡೆಯಬೇಕು. ನೀವು ಯಾವತ್ತು ಹೇಳ್ತೋರೋ ಅವತ್ತು ಮುಖ್ಯಮಂತ್ರಿಗಳೊಡನೆ ಸಭೆ ಮಾಡೋಣ, ಒಟ್ಟಾರೇ ನಾವು ಸಿಹಿ ಸುದ್ದಿ ಕೊಡ್ತೀವಿ ಎಂದು ಸಚಿವ ಪಾಟೀಲ್ ತಿಳಿಸಿದರು.

click me!