ತಾಕತ್ತಿದ್ರೆ ಆರೆಸ್ಸೆಸ್‌ ನಿಷೇಧ ಮಾಡಿ: ಸರ್ಕಾರಕ್ಕೆ ಪುತ್ತಿಲ ಸವಾಲು

By Kannadaprabha NewsFirst Published May 26, 2023, 4:30 AM IST
Highlights

ಸಚಿವ ಪ್ರಿಯಾಂಕ್‌ ಖರ್ಗೆ ಅವರ ‘ಆರ್‌ಎಸ್‌ಎಸ್‌ ಹಾಗೂ ಬಜರಂಗದಳ ನಿಷೇಧ ಮಾಡುತ್ತೇವೆ. ಕರ್ನಾಟಕದಲ್ಲಿ ನಮ್ಮ ಜೊತೆಗೆ ಇರುವವರು ಇರಬಹುದು. ಇಲ್ಲದಿದ್ದಲ್ಲಿ ಪಾಕಿಸ್ತಾನಕ್ಕೆ ಹೋಗಬಹುದು’ ಎಂಬ ಹೇಳಿಕೆಗೆ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಕತ್ತಿದ್ದರೆ ಆರೆಸ್ಸೆಸ್‌, ಬಜರಂಗ ನಿಷೇಧಿಸಿ ನೋಡಲಿ ಎಂದು ಸವಾಲು ಹಾಕಿದ್ದಾರೆ.

ಪುತ್ತೂರು (ಮೇ.26): ಸಚಿವ ಪ್ರಿಯಾಂಕ್‌ ಖರ್ಗೆ ಅವರ ‘ಆರ್‌ಎಸ್‌ಎಸ್‌ ಹಾಗೂ ಬಜರಂಗದಳ ನಿಷೇಧ ಮಾಡುತ್ತೇವೆ. ಕರ್ನಾಟಕದಲ್ಲಿ ನಮ್ಮ ಜೊತೆಗೆ ಇರುವವರು ಇರಬಹುದು. ಇಲ್ಲದಿದ್ದಲ್ಲಿ ಪಾಕಿಸ್ತಾನಕ್ಕೆ ಹೋಗಬಹುದು’ ಎಂಬ ಹೇಳಿಕೆಗೆ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಕತ್ತಿದ್ದರೆ ಆರೆಸ್ಸೆಸ್‌, ಬಜರಂಗ ನಿಷೇಧಿಸಿ ನೋಡಲಿ ಎಂದು ಸವಾಲು ಹಾಕಿದ್ದಾರೆ.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೊಂದಲದ ಹೇಳಿಕೆ ನೀಡುವ ಬದಲು ಸರ್ಕಾರಕ್ಕೆ ತಾಕತ್ತಿದ್ದರೆ, ಆರ್‌ಎಸ್‌ಎಸ್‌ ಹಾಗೂ ಬಜರಂಗದಳವನ್ನು ನಿಷೇಧಿಸಲಿ. ಅದಕ್ಕೆ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಶಕ್ತಿ ಪ್ರದರ್ಶನದ ಮೂಲಕ ತಕ್ಕ ಉತ್ತರ ನೀಡಲಿದೆ. ಪ್ರಿಯಾಂಕ್‌ ಖರ್ಗೆ ಹೇಳಿಕೆಯನ್ನು ಹಿಂದೂ ಸಮಾಜ ಖಂಡಿಸುತ್ತದೆ ಎಂದರು.

 

ಬಿಎಸ್‌ವೈಯನ್ನು ಜೈಲಿಗೆ ಕಳಿಸಿದ್ದು ಆರೆಸ್ಸೆಸ್‌: ಸಿದ್ದರಾಮಯ್ಯ

ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆ ನಡೆಸುವ, ಕೇಸು ದಾಖಲಿಸುವ ಕೆಲಸಗಳು ನಡೆಯುತ್ತಿವೆ. ಪೊಲೀಸ್‌ ಇಲಾಖೆ ಮೇಲೆ ಒತ್ತಡ ಹೇರಿ ಹೇಳಿಕೆಗಳನ್ನು ತಿದ್ದಿಸುವ, ಸರ್ಕಾರದ ಪರ ಹೇಳಿಕೆ ನೀಡುವಂತೆ ಒತ್ತಡ ಹೇರುವ ಕೆಲಸವನ್ನು ಇಲಾಖೆ ಮಾಡುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕದ ಘನತೆಗೆ ಧಕ್ಕೆ ತರುವಂತಹ ಹಾಗೂ ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುವ ಮೂಲಕ ಶಾಂತಿ ಕದಡುವಂತಹ ಯಾವುದೇ ಸಂಘಟನೆಯಾಗಲಿ ಕಾನೂನು ಚೌಕಟ್ಟಿನಡಿ ಕ್ರಮ ಕೈಗೊಳ್ಳುತ್ತೇವೆ. ಪ್ರಣಾಳಿಕೆಯಲ್ಲಿ ಹೇಳಿರುವಂತೆ ಕ್ರಮ ಕೈಗೊಳ್ಳುತ್ತೇವೆ’ ಎನ್ನುವ ಮೂಲಕ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ ನೀಡಿದ್ದರು.

ಸಂಘ ಪರಿವಾರಕ್ಕೆ ಪರ್ಯಾಯವಾಗಿ 'ಪುತ್ತಿಲ ಪರಿವಾರ' ಅಸ್ತಿತ್ವಕ್ಕೆ, ಆರೆಸ್ಸೆಸ್ ವಿರುದ್ಧವೇ ಪುತ್ತಿಲ ಅಚ್ಚರಿಯ ನಡೆ!

ಇನ್ನೊಂದೆಡೆ ಸಚಿವ ಡಾ.ಜಿ. ಪರಮೇಶ್ವರ್‌  ಬಜರಂಗದಳ, ಆರ್‌ಎಸ್‌ಎಸ್‌ ಸೇರಿ ಯಾವುದೇ ಸಂಘಟನೆ ನಿಷೇಧದ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆಯಾಗಿಲ್ಲ. ಸಚಿವ ಸಂಪುಟ ಪೂರ್ಣಗೊಂಡ ಬಳಿಕ ಇಂತಹ ವಿಚಾರಗಳ ಪರಿಶೀಲನೆ ನಡೆಯಲಿದೆ. ಒಬ್ಬೊಬ್ಬರೆ ಹೇಳಿಕೆ ನೀಡಿದ ತಕ್ಷಣ ತೀರ್ಮಾನ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಡಾ ಜಿ ಪರಮೇಶ್ವರ  ಆರೆಸ್ಸೆಸ್ ನಿಷೇಧ ಹೇಳಿಕೆ ಹಿನ್ನೆಲೆ ಪುತ್ತಿಲ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

click me!