ಅಭಿವೃದ್ಧಿ ರಥಕ್ಕೆ ಅಡ್ಡಿಪಡಿಸಿದರೆ ಯಾರನ್ನು ಕೇಳೋದಿಲ್ಲ: ಮಾಜಿ ಸಿಎಂ ಬೊಮ್ಮಾಯಿ‌

By Girish GoudarFirst Published May 25, 2023, 8:43 PM IST
Highlights

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊನ್ನೆ ಮೊದಲ ಸಚಿವ ಸಂಪುಟ ಸಭೆ ಅಯಿತು. ಮೊದಲ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ನೀಡಿದ್ದ ಎಲ್ಲ ಗ್ಯಾರಂಟಿಗೆ ಆದೇಶ ಮಾಡುತ್ತೇವೆ ಎಂದಿದ್ದರು. ಇವರಾದರೂ ಜನರಿಗೆ ಏನಾದರೂ ಮಾಡಲಿ ಎಂದು ನಾನು ಖುಷಿ ಆಗಿದ್ದೆ. ಆದರೆ ಸಂಪುಟ ಸಭೆಯ ಬಳಿಕ ಪತ್ರಕರ್ತರು ಪ್ರಶ್ನೆ ಕೇಳುವಾಗ ತಡಬಡಿಸಿ, ಪ್ರಶ್ನೆ ಕೇಳಿದರೆ ಹಿಂದಿನ ಇತಿಹಾಸ ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ‌ 

ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ 

ಹಾವೇರಿ(ಮೇ.25): ರಾಜ್ಯದ ಅಭಿವೃದ್ಧಿ ರಥಕ್ಕೆ ಅಡ್ಡಿಪಡಿಸಿದರೆ ಯಾರ ಅಪ್ಪನ್ನು ಕೇಳುವುದಿಲ್ಲ. ಜನರು ಮೆಚ್ಚುವ ರಾಜಕಾರಣ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ. ಇಂದು(ಗುರುವಾರ) ಶಿಗ್ಗಾಂವ ಪಟ್ಟಣದಲ್ಲಿ ಮತದಾರರಿಗೆ ಕೃತಜ್ಞತಾ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊನ್ನೆ ಮೊದಲ ಸಚಿವ ಸಂಪುಟ ಸಭೆ ಅಯಿತು. ಮೊದಲ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ನೀಡಿದ್ದ ಎಲ್ಲ ಗ್ಯಾರಂಟಿಗೆ ಆದೇಶ ಮಾಡುತ್ತೇವೆ ಎಂದಿದ್ದರು. ಇವರಾದರೂ ಜನರಿಗೆ ಏನಾದರೂ ಮಾಡಲಿ ಎಂದು ನಾನು ಖುಷಿ ಆಗಿದ್ದೆ. ಆದರೆ ಸಂಪುಟ ಸಭೆಯ ಬಳಿಕ ಪತ್ರಕರ್ತರು ಪ್ರಶ್ನೆ ಕೇಳುವಾಗ ತಡಬಡಿಸಿ, ಪ್ರಶ್ನೆ ಕೇಳಿದರೆ ಹಿಂದಿನ ಇತಿಹಾಸ ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದರು.

ಅಕಾಲಿಕ ಮಳೆಗೆ ಬೆಳೆ ಹಾನಿ; ಪರಿಹಾರಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ!

ಹಳೆಯದ್ದು ಎಲ್ಲ ಬೇಡ, ಗ್ಯಾರಂಟಿಗಳನ್ನು ಯಾವಾಗ ಮಾಡುತ್ತಿರಿ ಅಂತ ಕೇಳಿದರೆ, ಮುಂದಿನ ಸಂಪುಟ ಸಭೆಯಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇವರು ಮುಖ್ಯಮಂತ್ರಿ ಆಗುವುದಕ್ಕೆ, ಮಂತ್ರಿ ಆಗುವುದಕ್ಕೆ ಬಡಿದಾಡುತ್ತಿದ್ದಾರೆ. ಹೊಸದಾಗಿ ಮದುವೆಯಾದ ಸೊಸೆ ಕೈಯಲ್ಲಿ ಕೀಲಿ ಇರಲ್ಲವಂತೆ, ಸೊಸೆ ಕೈಯಲ್ಲಿ ಕೀಲಿನು ಇಲ್ಲ, ಜವಾಬ್ದಾರಿನೂ ಇಲ್ಲ. ಇವರ ಸಂಪುಟದ ಸಚಿವರಿಗೆ ಯಾರಿಗೂ ಖಾತೆ ಕೊಟ್ಟಿಲ್ಲ. ಕೆಲವರಿಗೆ ಸಚಿವ ಸ್ಥಾನ ಇಲ್ಲ. ಸಚಿವ ಸ್ಥಾನ ಇಲ್ಲದವರಿಗೆ ಖಾತೆ ಇಲ್ಲ ಎಂದು ವ್ಯಂಗ್ಯವಾಡಿದರು.

ಮೊನ್ನೆ ನಡೆದ ಅಸೆಂಬ್ಲಿಯಲ್ಲಿ ನಾನು ಸಿದ್ದರಾಮಯ್ಯನವರಿಗೆ ಮಂತ್ರಿಗಳಿಗೆ ಖಾತೆ ನೀಡಿ ಕೇಳಿದೆ. ನೀವು ಚಿಂತೆ ಮಾಡಬೇಡಿ ಅಂತ ಹೇಳಿದರು. ನನಗೆ ಚಿಂತೆ ಇಲ್ಲ. ನಿಮ್ಮ ಸಚಿವರು ಮಾತನಾಡಿ ಅಂದರು, ಅದಕ್ಕೆ ಕೇಳಿದೆ ಎಂದಿದ್ದೆ. ಸಚಿವರನ್ನಾಗಿ ಸುಮ್ಮನೆ ಕೂರಿಸಿದ್ದಾರೆ. ಮುಖ್ಯಮಂತ್ರಿ ಆದವರು ಈ ರಾಜ್ಯದ ಮಾಲಿಕರಲ್ಲ. ಕೊಟ್ಟಿರುವ ಜವಾಬ್ದಾರಿಯನ್ನು ಈ ರಾಜ್ಯದ ಜನರ ಒಳಿತಿಗಾಗಿ ಕೆಲಸ ಮಾಡಬೇಕು ಎಂದರು.

ನಾವು ಮಂಜೂರು ಮಾಡಿರುವ ಕೆಲಸಗಳನ್ನು ಬಡ ಜನರಿಗೆ ಮಾಡಲಾಗಿದೆ. ಅವುಗಳನ್ನು ಮಾಡಲೇಬೇಕು. ಶ್ರೀ ಸಾಮಾನ್ಯ ಜನರ ಒಳಿತಿಗಾಗಿ ಮಾಡಿದ ಕೆಲಸಗಳನ್ನು ನಿಲ್ಲಿಸಲು ಸಾಧ್ಯವೇ? ಕಾಲೇಜ್, ರಸ್ತೆ, ಕೈಗಾರಿಕೆಗಳ ಕಾಮಗಾರಿಗಳನ್ನು ನಿಲ್ಲಿಸಲು ಸಾಧ್ಯವೇ? ಯಾರೋ ಒಬ್ಬರು ಇದು ನಮ್ಮ ಸರ್ಕಾರ ಅಂತ ಹೇಳಿದರೆ, ಅದು ಸಾಧ್ಯ ವಿಲ್ಲ. ಇದು ಇಡೀ ರಾಜ್ಯದ ಜನರ ಸರ್ಕಾರ ಎಂದರು.

ಸರ್ಕಾರವನ್ನು ಯಾರದ್ದೋ ಒಂದು ಸಮುದಾಯದ ಸರ್ಕಾರ ಆಗಲು ಬಿಡುವುದಿಲ್ಲ. ಇದು ಯಾವುದೋ ಒಂದು ಪಕ್ಷ  ಹಾಗೂ ವ್ಯಕ್ತಿಯ ಸರ್ಕಾರ ಅಲ್ಲ. ಕೇವಲ ಆಡಳಿತ ಪಕ್ಷದ ಶಾಸಕರು ಟ್ಯಾಕ್ಸ್ ಕಟ್ಟಲ್ಲ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಟ್ಯಾಕ್ಸ್ ಕಟ್ಟುತ್ತಾನೆ ಎಂದರು.

ಅಕ್ಕಿ, ಕರೆಂಟು ನನಗೂ ನಿಮಗೂ ಸಿಗುತ್ತದೆ ಎಂದಿದ್ದರು. ಈಗ ಕಂಡಿಷನ್ ಇದ್ದಾವೆ. ಇವಾಗ ಅವರ ಬಣ್ಣ ಏನು ಎಂದು ಗೊತ್ತಾಗುತ್ತಿದೆ. ಅದಕ್ಕೆ ಅಂದೆ ನಾನು ಹೇಳಿದ್ದೆ. ಮೇ ಹತ್ತರ ವರೆಗೂ ಗ್ಯಾರಂಟಿ, ಆಮೇಲೆ ಗಳಗಂಟಿ ಅಂತ. ಇವಾಗ ಶುರುವಾಗಿದೆ. ಇನ್ನು ಸ್ವಲ್ಪ ದಿನ ಮಹಿಳೆಯರು ಕಾರ್ಡ್ ಹಿಡಿದುಕೊಂಡು ರಸ್ತೆಗೆ ಬರುತ್ತಾರೆ. ಆಮೇಲೆ ಗೊತ್ತಾಗುತ್ತದೆ. ಆಸ್ಪತ್ರೆ, ರಸ್ತೆ, ನೀರಿನ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಿದ್ದಾರೆ. ಯಾಕಂದರೆ ಕಾರ್ಡ್ ಗಳಿಗೆ ದುಡ್ಡು ಕೊಡಲು ಹಣ ಹೊಂದಿಸಬೇಕಾಗಿದೆ ಎಂದು ಬೊಮ್ಮಾಯಿ ಟಾಂಗ್ ಕೊಟ್ಟರು.

ಕಾಂಗ್ರೆಸ್ ಸರ್ಕಾರಕ್ಕೆ ಬೊಮ್ಮಾಯಿ ಎಚ್ಚರಿಕೆ

ನನ್ನನ್ನು ಅಷ್ಟು ಸುಲಭವಾಗಿ ತಿಳಿದುಕೊಳ್ಳಬೇಡಿ. ಇವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದುಕೊಂಡರೆ ಅದು ನಿಮ್ಮ ಭ್ರಮೆ. ಯಾವುದೇ ಹಂತಕ್ಕೂ, ಯಾವುದೇ ಮಟ್ಟಕ್ಕೂ ಬರುವುದಕ್ಕೆ ನಾನು ತಯಾರಿದ್ದೇನೆ. ನಾನು ಯಾವುದು ಭೇದ-ಭಾವ ಮಾಡುವುದಿಲ್ಲ. ಅಭಿವೃದ್ಧಿ ರಥಕ್ಕೆ ಅಡ್ಡಿಪಡಿಸಿದರೆ ಯಾರ ಅಪ್ಪನ್ನು ಕೇಳುವುದಿಲ್ಲ. ರಾಜಕಾರಣ ಮಾಡಿ, ಓಪನ್ ಆಗಿ ಆಹ್ವಾನ ಕೊಡುತ್ತೇನೆ. ಜನರು ಮೆಚ್ಚುವ ರಾಜಕಾರಣ ಮಾಡಿ. ಅದನ್ನು ಬಿಟ್ಟು ಅಡ್ಡಾಗಲು ಹಾಕುವ ರಾಜಕಾರಣ ಮಾಡಬೇಡಿ. ಇದು ನಿಮಗೂ, ನಮಗೂ, ನಿಮ್ಮ ಸರ್ಕಾರಕ್ಕೂ ಒಳ್ಳೆಯದಲ್ಲ ಎಂದರು.

ಬೊಮ್ಮಾಯಿ‌ ಭಾವುಕ ನುಡಿ

ಕ್ಷೇತ್ರದ ಜನರ ಜೊತೆ ಕಳೆಯಲು ಅವಕಾಶ ಸಿಕ್ಕಿದೆ. ನಿಮ್ಮ ಜೊತೆ ಕಾಲ ಕಳೆಯುವುದಕ್ಕೆ ಆಗಿರಲಿಲ್ಲ. ಅದಕ್ಕೆ ದೇವರು ಸ್ವಲ್ಪ ವಿಶ್ರಾಂತಿ ಕೊಟ್ಟಿದ್ದಾನೆ. ಅಂತಹ ಶಕ್ತಿ ನಿಮ್ಮಲ್ಲಿ ಇದೆ. ಅಲ್ಲಿ ಬೇಡ, ಇಲ್ಲಿಗೆ ಬನ್ನಿ ಎಂದು ಕರೆಯಿಸಿಕೊಂಡಿದ್ದೀರಿ. ನಿಮಗೆ ಬೇಸರ ಆಗುವ ಹಾಗೆಯೇ ನಿಮ್ಮ ಊರು, ಕೆರೆಗಳಲ್ಲಿ ಓಡಾಡುತ್ತೇನೆ. ನಿಮ್ಮನ್ನು ನೀವು ಈ ಚುನಾವಣೆಯಲ್ಲಿ ಗೆಲ್ಲಿಸಿಕೊಂಡಿದ್ದೀರಿ ಎಂದು ಭಾವುಕವಾಗಿ ಬೊಮ್ಮಾಯಿ‌ ನುಡಿದರು.

ತಿಂಗಳಲ್ಲಿ ರಾಜ್ಯದ ರಾಜಕಾರಣ ಬದಲಾಗಲಿದೆ: ಬಸವರಾಜ ಬೊಮ್ಮಾಯಿ

ಹಾವೇರಿ: (ಶಿಗ್ಗಾವಿ) ನನ್ನ ಉಸಿರು ಇರುವವರೆಗೂ ಶಿಗ್ಗಾವಿ ಕೇತ್ರದ ಜನರೊಂದಿಗೆ ಇರುತ್ತೇನೆ, ನನ್ನ ಜೀವನದ ಕೊನೆ ಉಸಿರಿನವರೆಗೂ ಕ್ಷೇತ್ರದ ಸೇವೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸದಾ ಶಿಗ್ಗಾವಿ ಕ್ಷೇತ್ರದ ಜನರ ಸೇವೆಯಲ್ಲಿ ನನ್ನ ಜೀವನವನ್ನು ಸವೆಸುತ್ತೇನೆಂದು ಶಿಗ್ಗಾವಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹಾವೇರಿ: ಶಿಥಿಲಾವಸ್ಥೆಯಲ್ಲಿ 2565 ಶಾಲಾ ಕೊಠಡಿಗಳು; ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ!

ಸ್ವಲ್ಪ ಕಾಯಿರಿ

ಮುಂದಿನ 5 ತಿಂಗಳಲ್ಲಿ ರಾಜ್ಯ ರಾಜ್ಯಕಾರಣದ ಚಿತ್ರಣ ಬದಲಾಗಲಿದೆ, ಸರ್ಕಾರ ಹೋಗುತ್ತಿರುವ ರೀತಿ ನೋಡಿದರೆ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಂತಿದೆ. ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಲು ಈಗಲೇ ಶುರು ಮಾಡಿದ್ದಾರೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆತೆ ಧಕ್ಕೆ ಬರುವಂತಹ ಸಂಘಟನೆಗಳಿಗೆ ಬ್ಯಾನ್ ಮಾಡುವ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮೊದಲು SDPI ಬ್ಯಾನ್ ಮಾಡಲಿ ಆಮೇಲೆ ಉಳಿದಿದ್ದನ್ನು ಮಾತನಾಡುತ್ತೇನೆ ಎಂದು ಉತ್ತರಿಸಿದರು.

25 ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸ

ವಿಧಾಸಭಾ ಫಲಿತಾಂಶದ ನಂತರ ಸುಮ್ಮನೆ ಕುಳಿತಿಲ್ಲ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ  25ಕ್ಕೂ  ಹೆಚ್ಚು ಸೀಟುಗಳನ್ನು ಕರ್ನಾಟಕದಲ್ಲಿ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿ ಆಗಬೇಕಿದೆ ಎಂದು ಬೊಮ್ಮಾಯಿ ಹೇಳಿದರು.

click me!