Karnataka cabinet Expansion: ಕಾಂಗ್ರೆಸ್‌ನ 18 ಹೊಸ ಸಚಿವರ ಪಟ್ಟಿ ಲಭ್ಯ: ಲಿಂಗಾಯತರ ಕೈ ಹಿಡಿದ ಹೈಕಮಾಂಡ್

By Sathish Kumar KH  |  First Published May 25, 2023, 4:07 PM IST

ಕಳೆದ ಎರಡು ದಿನಗಳಿಂದ ಕರ್ನಾಟಕ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು ಮಾಡಿದ ಕಾಂಗ್ರೆಸ್‌ ಗುರುವಾರ ಮಧ್ಯಾಹ್ನದ ವೇಳೆ 18 ಸಚಿವರ ಪಟ್ಟಿ ಸಿದ್ಧಗೊಳಿಸಿದೆ.


ಬೆಂಗಳೂರು (ಮೇ 25):  ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಇಮದು ರಾತ್ರಿ ವೇಳೆಗೆ ಸಚಿವ ಪಟ್ಟಿ ಹೊರಬೀಳಲಿದೆ. ಈ ಪೈಕಿ ಕೆಲವು ಸಂಭವನೀಯ ಸಚಿವ ಪಟ್ಟಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ರಾಜ್ಯದ 50ಕ್ಕೂ ಅಧಿಕ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಲಭ್ಯವಾಗಿರುವ ಸಚಿವರುಗಳ ಪಟ್ಟಿಯೇ ಬಹುತೇಕ ಖಚಿತವಾಗಲಿದೆ ಎಂಬ ಸುಳಿವು ಕೂಡ ಸಿಕ್ಕಿದೆ. ಆದರೆ, ಈ ಪಟ್ಟಿಯ ಹೊರತಾಗಿ ಇಬ್ಬರ ಹೆಸರು ತೆಗೆದುಕೊಂಡಿದ್ದು, ಅವರಲ್ಲಿ ಒಬ್ಬರ ಹೆಸರನ್ನು ಆಯ್ಕೆ ಮಾಡಲು ಹಗ್ಗ- ಜಗ್ಗಾಟ ಮುಂದುವರೆದಿದೆ. 

Tap to resize

Latest Videos

ಕಾಂಗ್ರೆಸ್‌ನ 5 ಗ್ಯಾರಂಟಿಗಳೇ ಜೆಡಿಎಸ್‌ ಗೆಲುವಿನ ಅಸ್ತ್ರಗಳು: ಹೆಚ್‌.ಡಿ. ಕುಮಾರಸ್ವಾಮಿ!

ಸಂಭವನೀಯ ಸಚಿವರು..

  1. ಈಶ್ವರ ಖಂಡ್ರೆ
  2. ಲಕ್ಷ್ಮಿ ಹೆಬ್ಬಾಳಕರ್
  3. ಶಿವಾನಂದ ಪಾಟೀಲ್
  4. ದರ್ಶನಾಪುರ
  5. ರಾಯರೆಡ್ಡಿ
  6. ಡಾ. ಮಹಾದೇವಪ್ಪ
  7. ಪಿರಿಯಾಪಟ್ಟಣ ವೆಂಕಟೇಶ್
  8. ಎಸ್.ಎಸ್. ಮಲ್ಲಿಕಾರ್ಜುನ
  9. ಬೈರತಿ ಸುರೇಶ್
  10. ಕೃಷ್ಣ ಬೈರೇಗೌಡ
  11. ರಹೀಂ ಖಾನ್ 
  12. ಅಜಯ್ ಸಿಂಗ್
  13. ಪುಟ್ಟರಂಗ ಶೆಟ್ಟಿ
  14. ನರೇಂದ್ರ ಸ್ವಾಮಿ
  15. ಚಿಂತಾಮಣಿ ಸುಧಾಕರ್
  16. ಹಿರಿಯೂರು ಸುಧಾಕರ್
  17. ಎಚ್.ಕೆ. ಪಾಟೀಲ್
  18. ಚೆಲುವರಾಯಸ್ವಾಮಿ

ಹಲವು ಸೂತ್ರಗಳ ಅಳವಡಿಕೆ: ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌ ಹಲವು ಸೂತ್ರಗಳನ್ನು ಅಳವಡಿಕೆ ಮಾಡಿಕೊಂಡು ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ ಎಂಟು ಸೂತ್ರಗಳನ್ನು ಅಳವಡಿಕೆ ಮಾಡಿಕೊಂಡು ಮಂತ್ರಿಗಿರಿ ಕೊಡಲಾಗುತ್ತಿದೆ. ಈ ಸೂತ್ರಗಳಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯಲು ಕೂಡ ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. 

  • ಸಚಿವ ಸ್ಥಾನ ನೀಡಲು ಕಾಂಗ್ರೆಸ್‌ ಹೈಕಮಾಂಡ್‌ ಅಷ್ಟ ಸೂತ್ರಗಳು: 
  • ಪರಿಷತ್‌ನಿಂದ ಒಬ್ಬರಿಗೆ ಮಾತ್ರ ಸಚಿವ ಸ್ಥಾನ
  • ಲಿಂಗಾಯತ ಸಮುದಾಯಕ್ಕೆ ಹೆಚ್ಚಿನವರಿಗೆ ಮಂತ್ರಿಗಿರಿ
  • ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ವರ್ಗಕ್ಕೂ ಭಾರಿ ಬಂಪರ್
  • ಹಲವು ಹಿರಿಯ ನಾಕರಿಗೆ ಸಂಪುಟದಿಂದ ಕೋಕ್‌
  • ಸಚಿವ ಸಂಪುಟದಲ್ಲಿ ಒಬ್ಬ ಶಾಸಕಿಗೆ ಮಾತ್ರ ಸ್ಥಾನ
  • ಒಕ್ಕಲಿಗ ಸಮುದಾಯದ ಯುವ ಶಾಸಕರಿಗೆ ಮಂತ್ರಿಗಿರಿ
  • ಗಂಭೀರ ಆರೋಪ ಎದುರಿಸುವ ಶಾಸಕರಿಗೆ ಮಂತ್ರಿಗಿರಿ ಇಲ್ಲ
  • ಹೋರಾಟದಲ್ಲಿ ನಿರಾಸಕ್ತಿ ತೋರಿದವರಿಗೂ ಒಲಿಯಲ್ಲ ಸಚಿವ ಸ್ಥಾನ

ಕಾಂಗ್ರೆಸ್‌ ಹಿರಿಯ ಶಾಸಕರಿಗೆ ಮಂತ್ರಿಗಿರಿ ಇಲ್ಲ: ಹೈಕಮಾಂಡ್‌ ಅಷ್ಟ ಸೂತ್ರ ಪಾಲನೆ

ಕೊನೇ ಚುನಾವಣೆ ಎಂದವರಿಗೆ ಕೊಕ್: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಇದೇ ನನ್ನ ಕೊನೆಯ ಚುನಾವಣೆ ನನ್ನನ್ನು ಗೆಲ್ಲಿಸಿ ಎಂದು ಹೇಳಿಕೊಂಡಿರುವ ಹಿರಿಯ ಶಾಸಕರಿಗೆ ಸಚಿವ ಸ್ಥಾನದಿಂದ ಕೈಬಿಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್‌ನಿಂದ ಸಚಿವ ಸ್ಥಾನವನ್ನು ಪಡೆದುಕೊಂಡು ಅಧಿಕಾರವನ್ನು ಅನುಭವಿಸಿ, ಅಭಿವೃದ್ಧಿಯನ್ನೂ ಮಾಡಿದ ನಂತರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದರೆ ಕಾಂಗ್ರೆಸ್‌ ಪಕ್ಷಕ್ಕೆ ಭಾರಿ ನಷ್ಟ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯ ಮೇಲೆಯೂ ಕಣ್ಣಿಟ್ಟಿರುವ ಹೈಕಮಾಂಡ್‌ ನಾಯಕರು ಹಿರಿಯ ಶಾಸಕರನ್ನು ಸಚಿವ ಸ್ಥಾನದಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

click me!