
ಜೈಪುರ(ಮಾ.13): ಇತರ ವಿಚಾರ ಬಿಟ್ಟುಬಿಡಿ, ಮೋದಿಯನ್ನು ಮುಗಿಸುವುದರ ಕುರಿತು ಮಾತನಾಡಿ. ಮೋದಿಯನ್ನು ಮುಗಿಸಿದರೆ ಹಿಂದುಸ್ಥಾನಕ್ಕ ಉಳಿಗಾಲ. ಆದರೆ ಮೋದಿ ಇದ್ದರೆ, ಭಾರತ ನಿರ್ನಾಮವಾಗಲಿದೆ. ಮೋದಿಯ ದೇಶಭಕ್ತಿಯ ಅಸಲಿಯತ್ತು ನಮಗೆ ತಿಳಿದಿದೆ. ಬಿಜೆಪಿಯ ಯಾರೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ, ಜೈಲು ಸೇರಿಲ್ಲ. ಕಾಂಗ್ರೆಸ್ ನಾಯಕರು ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಇದು ಕಾಂಗ್ರೆಸ್ ಹಿರಿಯ ನಾಯಕ ಸುಖ್‌ಜಿಂದರ್ ಸಿಂಗ್ ರಾಂಧವ ವಿವಾದಾತ್ಮಕ ಮಾತುಗಳು. ಇದೀಗ ಇದೇ ಮಾತು ವಿವಾದ ಮಾತ್ರವಲ್ಲ, ಆಕ್ರೋಶಕ್ಕೂ ಕಾರಣವಾಗಿದೆ.
ರಾಜಸ್ಥಾನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬಿರುಸಿನ ಪ್ರಚಾರಕ್ಕೆ ಇಳಿದಿದೆ. ಇಂದು ಜೈಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಎಸ್‌ಎಸ್ ರಾಂಧವ, ಮೋದಿಯನ್ನು ಮುಗಿಸಬೇಕು. ಮೋದಿ ಇದ್ದರೆ ಭಾರತ ನಾಶವಾಗಲಿದೆ ಎಂದಿದ್ದಾರೆ.
PM Modi In Karnataka: ಮೈಸೂರಿನ ಒಡೆಯರು, ಸರ್‌ಎಂವಿ ಅವರನ್ನು ನೆನೆದ ಪ್ರಧಾನಿ ಮೋದಿ!
ಅದಾನಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಜಂಟಿ ಸಂಸದೀಯ ಸಮಿತಿ ತನಿಖೆಗೆ ಮುಂದಾಗುತ್ತಿಲ್ಲ. ಉದ್ಯಮಿಗಳಿಗೆ ಭಾರತವನ್ನು ಕೊಟ್ಟು ಬಿಜೆಪಿ ದೇಶವನ್ನೇ ಬರ್ಬಾದ್ ಮಾಡುತ್ತಿದೆ. ಅದಾನಿ ಬಗ್ಗೆ ಮಾತನಾಡುವುದು ಬಿಡಿ. ಮೋದಿ ಮುಗಿಸುವ ಕುರಿತು ಮಾತನಾಡಿ. ಮೋದಿ ಮುಗಿಸಿದರೆ ಭಾರತ ಉದ್ಯಮಿಗಳ ಕೈಯಿಂದ ಬಚಾವ್ ಆಗಲಿದೆ. ಆದರೆ ಮೋದಿ ಇದ್ದರೆ ಹಿಂದುಸ್ಥಾನ ನಿರ್ನಾಮವಾಗಲಿದೆ ಎಂದಿದ್ದಾರೆ.
ಮೋದಿ ಸರ್ಕಾರದಲ್ಲಿ ಭಾರತದ ನೀತಿಗಳನ್ನು ಅದಾನಿ ನಿರ್ಧರಿಸುತ್ತಿದ್ದಾರೆ. ಸಂಸದೀಯ ಜಂಟಿ ಸಮಿತಿ ತನಿಖೆಗೆ ಬಿಜೆಪಿ ಒಪ್ಪುತ್ತಿಲ್ಲ. ಇದರಲ್ಲೇ ಬಿಜೆಪಿಯ ಒಪ್ಪಂದಗಳು ಬಹಿರಂಗವಾಗಲಿದೆ ಅನ್ನೋ ಭಯ ಕಾಡುತ್ತಿದೆ. ಕಾಂಗ್ರೆಸ್ ಯಾವುದೇ ವ್ಯಕ್ತಿಯ ಹೆಸರಿನಿಂದ ಮುನ್ನಡೆಯುತ್ತಿಲ್ಲ. ಎಲ್ಲರನ್ನು ಒಳಗೊಂಡ ಪಕ್ಷವಾಗಿ ಮುನ್ನಡೆಯುತ್ತಿದೆ ಎಂದು ರಾಂಧವ ಹೇಳಿದ್ದಾರೆ.
ಮಂಡ್ಯ ಕೇಸರಿಮಯ: ರೋಡ್ ಶೋದಲ್ಲಿ ನಮೋಗೆ ಹೂವಿನ ಮಳೆ
2019ರ ಪುಲ್ವಾಮಾ ದಾಳಿಯ ತನಿಖೆ ಸರಿಯಾಗಿಲ್ಲ. ನಮ್ಮ ಯೋಧರು ಹೇಗೆ ಹುತಾತ್ಮರಾದರು ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಇದು ಕೆಲವ ಉದಾಹರಣೆ ಅಷ್ಟೇ. ಬಿಜೆಪಿಯ ಹೆಜ್ಜೆ ಹೆಜ್ಜೆಯಲ್ಲಿ ಭಾರತವನ್ನು ಸರ್ವನಾಶ ಮಾಡುತ್ತಿದೆ ಎಂದು ರಾಂಧವ ಆರೋಪಿಸಿದ್ದಾರೆ.
ರಾಂಧವ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿ ಮೋದಿಯನ್ನು ಮುಗಿಸುವ ಕುರಿತು ಮಾತನಾಡುತ್ತಿದ್ದಾರೆ. ದೇಶದ ಪ್ರಧಾನಿ ಬಗ್ಗೆ ಕಾಂಗ್ರೆಸ್ ಆಡುತ್ತಿರುವ ಮಾತುಗಳು ರೌಡಿಗಳ ಮಾತುಗಳಿಗೆ ಸಮನಾಗಿದೆ. ಈ ರೀತಿ ಮಾತುಗಳನ್ನಾಡಿ ಕಾಂಗ್ರೆಸ್ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.