ರಾಹುಲ್ ಗಾಂಧಿಗೆ ಮುಖಭಂಗ, ಸಂಸತ್ತಿನಲ್ಲಿ ಮೈಕ್ ಆಫ್ ಆರೋಪ ತಳ್ಳಿಹಾಕಿದ ಸರ್ವ ಪಕ್ಷ!

Published : Mar 13, 2023, 05:40 PM IST
ರಾಹುಲ್ ಗಾಂಧಿಗೆ ಮುಖಭಂಗ, ಸಂಸತ್ತಿನಲ್ಲಿ ಮೈಕ್ ಆಫ್ ಆರೋಪ ತಳ್ಳಿಹಾಕಿದ ಸರ್ವ ಪಕ್ಷ!

ಸಾರಾಂಶ

ಲಂಡನ್‌ನಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ಹಲವು ಆರೋಪ ಮಾಡಿದ್ದರು. ಇದರಲ್ಲಿ ಕೇಂದ್ರದ ವಿರುದ್ಧ ಯೋಜನೆ ವಿರುದ್ಧ ಮಾತನಾಡುವ ಮೈಕ್ ಆಫ್ ಮಾಡಲಾಗುತ್ತದೆ. ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ ಎಂದು ಆರೋಪಿಸಿದ್ದರು. ಆದರೆ ರಾಹುಲ್ ಗಾಂಧಿ ಈ ಆರೋಪವನ್ನು ಡಿಎಂಕೆ ಹಾಗೂ ಕಾಂಗ್ರೆಸ್ ಹೊರತು ಪಡಿಸಿ ಇನ್ನುಳಿದ ಎಲ್ಲಾ ಪಕ್ಷಗಳು ತಳ್ಳಿ ಹಾಕಿದೆ.

ನವದೆಹಲಿ(ಮಾ.13): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಲಂಡನ್‌ನಲ್ಲಿ ಆಡಿದ ಮಾತುಗಳ ಕಾವು ಇನ್ನೂ ಆರಿಲ್ಲ. ಭಾರತವನ್ನು ಅವಮಾನಿಸಿದ್ದಾರೆ ಅನ್ನೋ ಆರೋಪ, ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಪರ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮಿತ್ರ ಪಕ್ಷದ ಹಲವು ನಾಯಕರು ಬೆಂಬಲ ಸೂಚಿಸಿದ್ದರು. ಇದೀಗ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಯೋಜನೆಗಳ ವಿರುದ್ದ ಮಾತನಾಡುವಾಗ ಮೈಕ್ ಆಫ್ ಮಾಡಲಾಗುತ್ತದೆ. ಈ ಮೂಲಕ ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿ ಈ ಆರೋಪವನ್ನು ಕಾಂಗ್ರೆಸ್ ಹಾಗೂ ಡಿಎಂಕೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಪಕ್ಷಗಳು ತಳ್ಳಿ ಹಾಕಿದೆ.ಇದರ ಪರಿಣಾಮ ಸ್ಪೀಕರ್ ಕರೆದ ಬ್ಯೂಸಿನೆಸ್ ಅಡ್ವೆಸರಿ ಮೀಟಿಂಗ್‌ನಿಂದ ಕಾಂಗ್ರೆಸ್ ಹಾಗೂ ಡಿಎಂಕೆ ಹೊರನಡೆದಿದೆ.

ಲೋಕಸಭೆಯ ಕಲಾಪಗಳ ಕುರಿತು ಚರ್ಚಿಸಲು ಸ್ಪೀಕರ್ ಇಂದು ಮಧ್ಯಾಹ್ನ 1.30ಕ್ಕೆ ಸರ್ವ ಪಕ್ಷ ನಾಯಕರ ಸಭೆ ಕರೆದಿದ್ದರು. ಇದಕ್ಕೂ ಮುನ್ನ ಸರ್ವ ಪಕ್ಷ ನಾಯಕರು ರಾಹುಲ್ ಗಾಂಧಿ ಆರೋಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಕೇಂದ್ರದ ವಿರುದ್ಧ ಮಾತನಾಡುವ ನಾಯಕರ ಮೈಕ್ ಆಫ್ ಮಾಡಲಾಗುತ್ತಿದೆ ಅನ್ನೋ ಆರೋಪವನ್ನು ಎಲ್ಲಾ ಪಕ್ಷ ನಾಯಕರು ತಳ್ಳಿ ಹಾಕಿದರು. ಲಂಡನ್‌ನಲ್ಲಿ ರಾಹುಲ್ ಗಾಂಧಿ ಮಾತುಗಳನ್ನು ಬೆಂಬಲಿಸಿದ ಜೆಡಿಯು ಪಕ್ಷ ಕೂಡ ಮೈಕ್ ಆಫ್ ಆರೋಪನ್ನು ತಳ್ಳಿ ಹಾಕಿತು. 

ಲಂಡನ್‌ನಲ್ಲಿ ಭಾರತ ಪ್ರಜಾಪ್ರಭುತ್ವ ಪ್ರಶ್ನಿಸಿ ಬಸವೇಶ್ವರರಿಗೆ ಅವಮಾನ, ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ!

ಎಲ್ಲಾ ಪಕ್ಷಗಳು ರಾಹುಲ್ ಗಾಂಧಿ ಆರೋಪವನ್ನು ವಿರೋಧಿಸಿತು. ಸಂಸತ್ತಿನಲ್ಲಿ ಮೈಕ್ ಆಫ್ ಮಾಡುವುದಿಲ್ಲ. ಇದು ಆಧಾರರಹಿತ ಸುಳ್ಳು ಆರೋಪ ಎಂದು ಸರ್ವ ಪಕ್ಷ ನಾಯಕರು ಹೇಳಿದ್ದಾರೆ. ಡಿಎಂಕೆ ಹಾಗೂ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಆರೋಪ ಸರಿಯಾಗಿದೆ ಎಂದು ವಾದಿಸಿತು. ಇಷ್ಟೇ ಅಲ್ಲ ಸ್ಪೀಕರ್ ಕರೆದಿದ್ದ ಬ್ಯೂಸಿನೆಸ್ ಅಡ್ವೈಸರಿ ಸಭೆಯಿಂದ ಕಾಂಗ್ರೆಸ್ ಹಾಗೂ ಡಿಎಂಕೆ ಹೊರನಡೆಯಿತು.

ಸಭೆಯಿಂದ ಹೊರನಡೆದ ಕಾಂಗ್ರೆಸ್ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ, ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ. ನಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಮತ್ತೆ ಅದೇ ಆರೋಪವನ್ನು ಮಾಡಿದರು. ಇದೀಗ ರಾಹುಲ್ ಗಾಂಧಿ ಆರೋಪವನ್ನು ಕಾಂಗ್ರೆಸ್ ಮಿತ್ರಪಕ್ಷಗಳೇ ವಿರೋಧಿಸಿದೆ. ಇದು ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ತಂದಿದೆ. 

ಅಮೆರಿಕ, ಯುರೋಪಿಯನ್‌ ದೇಶಗಳು ಭಾರತದ ರಕ್ಷಣೆಗೆ ಬರಬೇಕು: ರಾಹುಲ್‌ ವಿವಾದ; ಬಿಜೆಪಿ ಆಕ್ರೋಶ

ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕರ, ವಿಶೇಷವಾಗಿ ನನ್ನ ಮೈಕ್ ಆಫ್ ಮಾಡಲಾಗುತ್ತದೆ ಅನ್ನೋ ಆರೋಪ ಇದೇ ಮೊದಲಲ್ಲ. ಭಾರತ್ ಜೋಡೋ ಯಾತ್ರೆಯಲ್ಲೂ ರಾಹುಲ್ ಗಾಂಧಿ ಇದೇ ಆರೋಪ ಮಾಡಿದ್ದರು. ನಾನು ಮಾತನಾಡಲು ನಿಂತರೆ ಬಿಜೆಪಿ ನಾಯಕರ ಕಣ್ಣುಗಳಲ್ಲಿ ಭಯ ಆವರಿಸುತ್ತದೆ. ಯಾವುದೇ ಪ್ರಕರಣದ ಕುರಿತು ಮಾತನಾಡಲು ಆರಂಭಿಸಿದಾಗ ಮೈಕ್ ಆಫ್ ಮಾಡಲಾಗುತ್ತದೆ. ನಮ್ಮ  ಧ್ವನಿಯನ್ನು ಹತ್ತಿಕ್ಕಲಾಗುತ್ತದೆ ಎಂದು ಯಾತ್ರೆಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ ವಿದೇಶಿ ನೆಲದಲ್ಲಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!