ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಎಲ್ಲಾ ಕಡೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗೋದು ಗ್ಯಾರೆಂಟಿ: ಸಿ.ಟಿ.ರವಿ

By Ravi JanekalFirst Published Mar 9, 2023, 3:11 PM IST
Highlights

ಇಂದು ಯಾದಗಿರಿ ಜಿಲ್ಲೆಯಲ್ಲಿ ಬಿಜೆಪಿ ಎರಡನೇ ಹಂತದ ಜನ ಸಂಕಲ್ಪ ಯಾತ್ರೆ(Janasankalpa yatre) ಮಾಜಿ ಸಿಎಂ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಶಹಾಪುರ ಹಾಗೂ ಸುರಪುರ ಕ್ಷೇತ್ರದಲ್ಲಿ ಆರಂಭವಾಗಿದೆ. 

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಮಾ.9): ಇಂದು ಯಾದಗಿರಿ ಜಿಲ್ಲೆಯಲ್ಲಿ ಬಿಜೆಪಿ ಎರಡನೇ ಹಂತದ ಜನ ಸಂಕಲ್ಪ ಯಾತ್ರೆ(Janasankalpa yatre) ಮಾಜಿ ಸಿಎಂ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಶಹಾಪುರ ಹಾಗೂ ಸುರಪುರ ಕ್ಷೇತ್ರದಲ್ಲಿ ಆರಂಭವಾಗಿದೆ. 

ಮೊದಲು ಶಹಾಪುರ ಮತಕ್ಷೇತ್ರ(Shahapur assembly constituency)ದಲ್ಲಿ ಶಹಾಪುರ ನಗರ ಹಾಗೂ  ಕೆಂಭಾವಿ(Kembhavi)ಯಲ್ಲಿ ನಡೆಯಲಿದೆ. ನಂತರ ಸುರಪುರ ಮತಕ್ಷೇತ್ರದ ಹುಣಸಗಿ ಹಾಗೂ ಕಕ್ಕೇರಾ ದಲ್ಲಿ ವಿಜಯ ಸಂಕಲ್ಪ ಯಾತ್ರೆ ಸಂಚರಿಸಲಿದೆ. ಇದಕ್ಕೂ ಯಾತ್ರೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು

ಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ!

ರಾಹುಲ್ ಗಾಂಧಿಗೆ ದೇಶದ ಬಗ್ಗೆ ನಿಯತ್ತಿಲ್ಲ: ಸಿ.ಟಿ.ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಮಾತನಾಡಿ, ದೇಶದ ಬಗ್ಗೆ ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ(Rahul gandhi)ಗೆ ಯಾವುದೇ ಅಭಿಮಾನ ಇಲ್ಲ, ಇವ್ರಿಗೆ ನೀತಿ ಮತ್ತು ನಿಯತ್ತು ಇಲ್ಲ, ಸುಮಾರು 200 ವರ್ಷಗಳ ಕಾಲ ನಮ್ಮ ದೇಶವನ್ನು ಲೂಟಿ ಹೊಡೆದವ್ರ ಬಳಿ ಸಹಾಯ ಕೇಳಿ, ನಮ್ಮ ದೇಶಕ್ಕೆ ಅಪಮಾನ ಮಾಡಿದ್ದಾರೆ. ರಾಹುಲ್ ಗಾಂಧಿಗೆ ದೇಶದ ಬಗ್ಗೆ ನಿಯತ್ತು ಇದ್ದಿದ್ರೆ ವಿದೇಶದಲ್ಲಿ ಭಾರತವನ್ನು ಟೀಕೆ ಮಾಡುತ್ತಿರಲಿಲ್ಲ. ನಮ್ಮ ದೇಶಕ್ಕೆ ವಿದೇಶಿಯರ ಬಳಿ ಸಹಾಯ ಕೇಳುವ ಪರಿಸ್ಥಿತಿ ಬಂದಿಲ್ಲ, ವಿದೇಶಿಯರ ಬಳಿ ಸಹಾಯ ಕೇಳೋದು ಅದೊಂದು ದೇಶದ್ರೋಹ ಕೆಲಸ ಎಂದರು. 

ಈ ರೀತ ಭಾರತ ದೇಶದ ಬಗ್ಗೆ ವಿದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಡಿದ ಮಾತು ಅವ್ರು ಭಾರತಕ್ಕೆ ಬರಲು ಯಾವುದೇ ಯೋಗ್ಯತೆ ಇಲ್ಲ. ರಾಹುಲ್ ಗಾಂಧಿ ದೇಶದ ಜನರ ಬಳಿ ಕ್ಷಮೆ ಯಾಚಿಸಬೇಕು. ಪ್ರಧಾನಿಗಳ ಬಗ್ಗೆ ಮಾತನಾಡೋಕೆ ಮುಕ್ತ ಅವಕಾಶ ಇಲ್ಲ ಅಂತ ಹೇಳುವ ರಾಹುಲ್ ಗಾಂಧಿ ಗಂಟೆಗಟ್ಟಲೆ ಪಾರ್ಲಿಮೆಂಟ್ ನಲ್ಲಿ ಮಾತಾಡ್ತಾರೆ. ಅಪಘಾನಿಸ್ತಾನದಲ್ಲಿ ಈ ರೀತಿ ಮಾತಾಡಿದ್ರೆ ಏನಾಗ್ತಿತ್ತು..? ಕಾಂಗ್ರೇಸ್ ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ. ಅದೊಂದು ಕುಟುಂಬದ ಕೈಯಲ್ಲಿರುವ ಪಾರ್ಟಿ, ಇವರ ಪ್ರಕಾರ ಇದೇ ಪ್ರಜಾಪ್ರಭುತ್ವ ಎಂದು ಕಾಂಗ್ರೇಸ್ ವಿರುದ್ಧ ಚಾಟಿ ಬೀಸಿದರು. 

ಮಲ್ಲಿಕಾರ್ಜುನ ಖರ್ಗೆ ಪವರ್‌ಲೆಸ್ ಪ್ರೆಸಿಡೆಂಟ್: ಸಿ.ಟಿ.ರವಿ

ಎಐಸಿಸಿ ಅಧ್ಯಕ್ಷ(AICC President) ಮಲ್ಲಿಕಾರ್ಜುನ ಖರ್ಗೆ(Mallikarjun kharge) ಒಬ್ಬ ನಾಮಕಾವಸ್ಥೆ ಅಧ್ಯಕ್ಷ. ಅನುಭವದಲ್ಲಿ ಮಲ್ಲಿಕಾ ಖರ್ಗೆ ಬಹಳ ಅನುಭವ ಹೊಂದಿರುವ ಹಿರಿಯರು. ಆದ್ರೆ ಮಲ್ಲಿಕಾರ್ಜುನ ಖರ್ಗೆ ಅವ್ರು ಪವರ್ ಲೇಸ್ ಪ್ರೆಸಿಡೆಂಟ್ ಆಗಿದ್ದಾರೆ. ಕಾಂಗ್ರೆಸ್ ನೀತಿ, ನಿಯತ್ತು ನೇತೃತ್ವ ಇಲ್ಲದ ಪಕ್ಷ. ಆದ್ರೆ ಬಿಜೆಪಿ ನೀತಿ, ನಿಯತ್ತು, ನೇತೃತ್ವ ಇರುವ ಪಕ್ಷವಾಗಿದೆ ಎಂದರು. ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್(Congress Guarantee Card) ಅದು ಫಾಲ್ಸ್ ಕಾರ್ಡ್. ಜನರಿಗೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಮೋಸ ಮಾಡಿದೆ. 32 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದು ಕಾಂಗ್ರೆಸ್  ದುರಾಡಳಿತಕ್ಕೆ ಹಿಡಿದ ನಿದರ್ಶನ ಎಂದು ಸಿ.ಟಿ.ರವಿ ಕುಟುಕಿದರು.

ಕುಕ್ಕರ್ ಬಾಂಬ್ ಬ್ಲಾಸ್ಟ್ ಡಿಕೆಶಿ ಬ್ರದರ್ಸ್, ಕೈ ಅಧಿಕಾರಕ್ಕೆ ಬಂದ್ರೆ ಕುಕ್ಕರ್ ಬ್ಲಾಸ್ಟ್ ಗ್ಯಾರೆಂಟಿ: ಸಿ.ಟಿ.ರವಿ ವಾಗ್ದಾಳಿ

ರಾಜ್ಯದಲ್ಲಿ ಕಾಂಗ್ರೆಸ್  ಅಧಿಕಾರಕ್ಕೆ ಬಂದ್ರೆ ದುರಾಡಳಿತದ ದಿನಗಳ ಬರಲಿವೆ. ರಾಜ್ಯದ ಊರು ಊರುಗಳಲ್ಲಿ ಕುಕ್ಕರ್ ಬಾಂಬ್(Coocker bomb) ಬ್ಲಾಸ್ಟ್ ಆಗೋದು ಗ್ಯಾರೆಂಟಿ. ಈ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡುವವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shivakumar) ಅವರ ಬ್ರದರ್ಸ್, ನಮ್ಮ ಬ್ರದರ್ಸ್ ಅಲ್ಲ. ಆಗ ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ ಡಿಕೆಶಿ ಅವ್ರು ನಮ್ಮ ಬ್ರದರ್ಸ್ ಬಹಳ ಇನೊಸೆಂಟ್ ಅಂತ ಹೇಳ್ತಾರೆ ಅಂತ ಬಿಜೆಪಿ ನಾಯಕ ಸಿ.ಟಿ.ರವಿ ಡಿಕೆಶಿ ವಿರುದ್ಧ ಕಟು ಟೀಕೆ ಮಾಡಿದರು. 

ಬೆಂಗಳೂರು - ಮೈಸೂರು ದಶಪಥ ಕ್ರೆಡಿಟ್‌ ವಾರ್‌: ಜೆಡಿಎಸ್‌ ಆಯ್ತು, ಈಗ ಕಾಂಗ್ರೆಸ್‌ ಸರದಿ!

ಮಾಡಾಳು ಭ್ರಷ್ಟಾಚಾರ ಪಕ್ಷಕ್ಕೆ ಮುಜುಗರ: ಸಿ.ಟಿ.ರವಿ

ರಾಜ್ಯದಲ್ಲಿ ಬಹಳಷ್ಟು ಚರ್ಚೆಯಲ್ಲಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷ(Madaluu virupakshappa) ಅವರ ಭ್ರಷ್ಟಾಚಾರ(Curruption) ಪ್ರಕರಣದ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರತಿಕ್ರಿಯಿಸಿ, ಶಾಸಕ ಮಾಡಳು ವಿರೂಪಾಕ್ಷಪ್ಪ ಭ್ರಷ್ಟಾಚಾರ ಕೇಸ್ ಬಿಜೆಪಿ ಪಕ್ಷ(BJP Party)ಕ್ಕೆ ಮುಜುಗರ ಉಂಟಾಗಿರುವುದು ಸತ್ಯ. ಈ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡುತ್ತದೆ. ಯಾರು ಯಾರನ್ನಯ ರಕ್ಷಿಸುವ ಅಥವಾ ಟಾರ್ಗೆಟ್ ಮಾಡುವ ಕೆಲಸ ಮಾಡಲ್ಲ. ಕಾಂಗ್ರೇಸ್ ನಾಯಕರ ಮೇಲೆ ದಾಳಿ ಆಗಿದ್ರೆ ಐಟಿ, ಈಡಿ ನಂತರ ಈಗ ಲೋಕಾಯುಕ್ತ ಛೂ ಬಿಟ್ಟಿದ್ದಾರೆ ಅಂತ ಹೇಳ್ತಿದ್ರು. ಹಾಗಾಗಿ ಯಾರೇ ತಪ್ಪು ಶಿಕ್ಷೆ ಅನುಭವಿಸ್ತಾರೆ. ಆರೋಪಿಗಳ ಪರ ಜೈಕಾರ ಹಾಕುವುದು ಕಾಂಗ್ರೇಸ್, ಡಿಕೆಶಿ ಸಂಸ್ಕೃತಿ. ಅದನ್ನು ನಾವು ಅನುಸರಿಸಬಾರದು. ಈ ರೀತಿ ಸಂಭ್ರಮಿಸೋದು, ವೈಭವಿಕರಿಸೋದು ಸರಿಯಲ್ಲ.  ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕ್ರಮ ಕೈಗೊಳ್ಳೋದು ಪಕ್ಷ ನಿರ್ಧಾರ ಮಾಡುತ್ತದೆ ಎಂದು ಸಿ.ಟಿ.ರವಿ ಹೇಳಿದರು.

click me!