ರಾಜಕೀಯವಾಗಿ ಮುಗಿಸೋದಕ್ಕೆ ಐ ವಿಶ್ ಹಿಮ್ ಆಲ್ ದಿ ಬೆಸ್ಟ್: ಡಿ.ಕೆ.ಶಿವಕುಮಾರ್

Published : Feb 01, 2023, 04:01 PM IST
ರಾಜಕೀಯವಾಗಿ ಮುಗಿಸೋದಕ್ಕೆ ಐ ವಿಶ್ ಹಿಮ್ ಆಲ್ ದಿ ಬೆಸ್ಟ್: ಡಿ.ಕೆ.ಶಿವಕುಮಾರ್

ಸಾರಾಂಶ

ನನ್ನನ್ನು ರಾಜಕೀಯವಾಗಿ ಮುಗಿಸುತ್ತೇನೆ ಎಂದು ಹೇಳಿರುವ ರಮೇಶ್‌ ಜಾರಕಿಹೊಳಿ ಅವರಿಗೆ ಆಲ್‌ ದಿ ಬೆಸ್ಟ್‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಫೆ.01): ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿ ಡಿ.ಕೆ. ಶಿವಕುಮಾರ್‌ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದ ರಮೇಶ್‌ ಜಾರಕಿಹೊಳಿ ರಾಜಕೀಯವಾಗಿ ಮುಗಿಸುವುದಾಗಿ ತಿಳಿಸಿದ್ದರು. ಈ ಹೇಳಿಕೆಗೆ ಇಂದು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್‌ ಅವರು ಐ ವಿಶ್ ಹಿಮ್ ಆಲ್ ದಿ ಬೆಸ್ಟ್ ಎಂದು ತಿರುಗೇಟು ನೀಡಿದ್ದಾರೆ.

ಕಾಶ್ಮೀರದಲ್ಲಿ ಆಯೋಜಿಸಲಾಗಿದ್ದ ಭಾರತ್‌ ಜೋಡೋ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್‌ ಆಗಮಿಸಿದ ಡಿಕೆ ಶಿವಕುಮಾರ್ ಅವರು, ಮಾಧ್ಯಮಗಳೊಂದಿಗೆ ರಮೇಶ್‌ ಜಾರಕಿಹೊಳಿ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ರಾಜ್ಯದಲ್ಲಿ ಮಂತ್ರಿ ಆಗಿದ್ದವರು ರಾಜೀನಾಮೆ  ಕೊಟ್ಟರು. ಮತ್ತೆ ಮಂತ್ರಿ ಆಗುತ್ತೇನೆ ಎಂದುಕೊಂಡಿದ್ದರು. ಅದೇನೂ ಆಗಲಿಲ್ಲ. ಈಗ ಮಾನಸಿಕವಾಗಿ ಸ್ವಲ್ಪ ಆರೋಗ್ಯ ಹದಗೆಟ್ಟಿದೆ. ಇನ್ನು ಸಿಡಿಯಲ್ಲಿ ಅವರ ಆಸನಗಳು, ಮತ್ತೊಂದು ಎಲ್ಲವನ್ನೂ ಜನ ನೋಡಿದ್ದಾರೆ ಎಂದು ಹೇಳಿದರು.

ಡಿಕೆಶಿ ರಾಜಕೀಯ ಅಂತ್ಯಕ್ಕೆ ಮೊದಲ ಆಡಿಯೋ ಬಿಡುಗಡೆ- ಇನ್ನೂ 20 ಆಡಿಯೋಗಳಿವೆ: ರಮೇಶ್‌ ಜಾರಕಿಹೊಳಿ

ಆಡಿಯೋದಲ್ಲಿರುವ ಸ್ಥಳಗಳು ಎಲ್ಲಿವೆ.? : ರಮೇಶ್‌ ಜಾರಕೊಹೊಳಿ ಬಿಡುಗಡೆ ಮಾಡಿದ ಆಡಿಯೋದಲ್ಲಿ ಇರುವ ಸ್ಥಳಗಳು ಎಲ್ಲಿವೆ.? ಅದೆಲ್ಲಿವೆ ಅಂತಾ ಸ್ವಲ್ಪ ಅಡ್ರೆಸ್ ಹೇಳಲಿ. ನಾನೂ ಹೋಗಿ ನೋಡಿಕೊಂಡು ಬರ್ತೀನಿ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಆದರೆ, ಮೊನ್ನೆ ರಮೇಶ್‌ ಜಾರಕಿಹೊಳಿ ಅವರು ಬಿಡುಗಡೆ ಮಾಡಿದ್ದ ಆಡಿಯೋದಲ್ಲಿನ ವಿವರ ಇಲ್ಲಿದೆ ನೋಡಿ.. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್‌ ಅವರದ್ದು ಎನ್ನಲಾದ 18 ಸೆಕೆಂಡ್‌ಗಳ ಆಡಿಯೋದಲ್ಲಿ ನನಗೆ ದುಬೈನಲ್ಲಿ ಮನೆ ಇದೆ. ಲಂಡನ್‌ನಲ್ಲಿ ಮನೆ ಇದೆ. ದೆಹಲಿಯಲ್ಲಿ ಒಂದು ಮನೆ ತಗೊಳೋದಿದೆ. ಮುಂಬೈನಲ್ಲಿ ಒಂದು ಫ್ಲ್ಯಾಟ್ ಇದೆ. ನನ್ನ ಮನೆಗೆ ರೇಡ್ ಆದಾಗ ಅದರಲ್ಲಿ ಸೀಜ್ ಆಗಿದ್ದು 40 ರಿಂದ 50 ಕೋಟಿ ರೂಪಾಯಿ ಮಾತ್ರ ಎಂದು ಮಹಿಳೆಯೊಂದಿಗೆ ಮಾತನಾಡಲಾಗಿದೆ.  

ರಾಜ್ಯದ ಯಾತ್ರೆ ಬಗ್ಗೆಯೂ ಸ್ಮರಣೆ: ಇನ್ನು ಭಾರತ್ ಜೋಡೋ ಯಾತ್ರೆ ಸಮಾರೋಪ ಕಾರ್ಯಕ್ರಮ ಬಹಳ ಉತ್ತಮವಾಗಿ ಆಯ್ತು. ನಾನು ಕಾಶ್ಮೀರಕ್ಕೆ ಹೋಗಿದ್ದೆ. ನಮ್ಮ ರಾಜ್ಯದಲ್ಲೂ ಚೆನ್ನಾಗಿ ಆಯ್ತು ಅಂತಾ ಸ್ಮರಿಸಿಕೊಳ್ತಾ ಇದ್ದರು. ಇದು ನಮ್ಮ ಎಲ್ಲಾ ಕಾರ್ಯಕರ್ತರ ಶ್ರಮವಾಗಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರತ್‌ ಜೋಡೋ ಯಾತ್ರೆ ಜೀವತುಂಬಿದೆ. ಇನ್ನು ನನಗೂ ಕಾಶ್ಮೀರದಲ್ಲಿ ಮೊದಲ ಅನುಭವವಾಗಿದೆ. ಇಲ್ಲಿ ಮಳೆಗಾಲದಲ್ಲಿ ಮಳೆ ಬರುವ ರೀತಿಯಲ್ಲಿ ಕಾಶ್ಮೀರದಲ್ಲಿ ಹಿಮ ಬೀಳ್ತಾ ಇರುತ್ತದೆ ಎಂದು ತಿಳಿಸಿದರು.

​​​​ರಾಜ್ಯಕ್ಕೆ ಬಜೆಟ್‌ ಏನೂ ಉಪಯೋಗವಿಲ್ಲ: ಇನ್ನು ಕೇಂದ್ರದಿಂದ ಮಂಡಿಸಲಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್ ಬಗ್ಗೆ ಒಂದೇ ಸಾಲಿನಲ್ಲಿ ಹೇಳುವುದಾದರೆ ಇದೊಂದು ಚುನಾವಣಾ ಬಜೆಟ್ ಅಷ್ಟೇ. ಆದರೆ, ಇದರಿಂದ ರಾಜ್ಯಕ್ಕೆ ಏನೂ ಉಪಯೋಗ ಇಲ್ಲ ಎಂದು ಹೇಳಿದರು.

10 ಸಾವಿರ ಕೋಟಿ ರೂ. ಹಗರಣಕ್ಕೆ ಸಹಕರಿಸದ ಹಿನ್ನೆಲೆ ಸಿಡಿ ಬಿಡುಗಡೆ: ಡಿಕೆಶಿ ವಿರುದ್ಧ ರಮೇಶ್‌ ಜಾರಕಿಹೊಳಿ ಆರೋಪ

ಡಿಕೆಶಿ ರಾಜಕಾರಣ ಅಂತ್ಯ: ಕಾಂಗ್ರೆಸ್‌ ಪಕ್ಷ ಹಾಳಾಗಲು ಡಿಕೆಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರೇ ಕಾರಣವಾಗಿದ್ದಾರೆ. ರಾಜ್ಯದಲ್ಲಿ ಜಾತಿ ಸಂಘರ್ಷವಾದರೆ ಅದಕ್ಕೆ ನೇರವಾಗಿ ಡಿಕೆಶಿ ಅವರೇ ಹೊಣೆಯಾಗಿದ್ದಾರೆ. ಯಾರನ್ನೂ ವೈಕ್ತಿಕವಾಗಿ ಟೀಕೆ ಮಾಡಬಾರದು. ಗ್ರಾಮೀಣ ಶಾಸಕಿ ನಮ್ಮ ನಡುವೆ ಎಲ್ಲವನ್ನೂ ಹಾಳು ಮಾಡಿದ್ದಾಳೆ. ಜೊತೆಗೆ, ರಾಜ್ಯದ ಕಾಂಗ್ರೆಸ್‌ ಪಕ್ಷವನ್ನೇ ಹಾಳು ಮಾಡಿದ್ದಾಳೆ. ಈಗ ಡಿಕೆಶಿ ಮತ್ತು ನನ್ನ ನಡುವೆ ವೈಯಕ್ತಿಕ ಯುದ್ಧ ಆರಂಭವಾಗಿದೆ. ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಆಗಿದೆ. ನಾನು ರಾಜಕೀಯ ನಿವೃತ್ತಿ ಆಗುವುದರೊಳಗೆ ಡಿಕೆಶಿ ರಾಜಕಾರಣ ಅಂತ್ಯವನ್ನೂ ಮಾಡುತ್ತೇನೆ. ನನ್ನ ಬಳಿ ಇರುವ ಸಿಡಿ ಕುರಿತ ಷಡ್ಯಂತ್ರದ ದಾಖಲೆಗಳನ್ನು ಸಿಬಿಐಗೆ ಕೊಟ್ಟರೆ ಅವರ ರಾಜಕಾರಣ ಅಂತ್ಯವಾಗುತ್ತದೆ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ