ಹೆಣನ ಅವರ ಮನೆಯಲ್ಲೂ ಮೂರು ದಿನ ಇಟ್ಟುಕೊಳ್ಳಲ್ಲ. ಮನುಷ್ಯನ ಹೆಣಕ್ಕೆ ಮೂರುಕಾಸಿನ ಬೆಲೆ ಇಲ್ಲ. ಅದು ಎದ್ದು ಬಂದು ವೋಟು ಕೂಡ ಹಾಕಲ್ಲ. ಯಾರಾದರು ಹೆಣ ತಗೊಂಡು ರಾಜಕಾರಣ ಮಾಡಲು ಆಗುತ್ತದೆಯೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದರು.
ರಾಮನಗರ (ಫೆ.01): ಹೆಣನ ಅವರ ಮನೆಯಲ್ಲೂ ಮೂರು ದಿನ ಇಟ್ಟುಕೊಳ್ಳಲ್ಲ. ಮನುಷ್ಯನ ಹೆಣಕ್ಕೆ ಮೂರುಕಾಸಿನ ಬೆಲೆ ಇಲ್ಲ. ಅದು ಎದ್ದು ಬಂದು ವೋಟು ಕೂಡ ಹಾಕಲ್ಲ. ಯಾರಾದರು ಹೆಣ ತಗೊಂಡು ರಾಜಕಾರಣ ಮಾಡಲು ಆಗುತ್ತದೆಯೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದರು.
ತಾಲೂಕಿನ ಕೈಲಾಂಚ ಹೋಬಳಿ ಅಚ್ಚಲು ಗ್ರಾಮದಲ್ಲಿ ಬೂತ್ ವಿಜಯ ಸಂಕಲ್ಪ ಅಭಿಯಾನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸನ ಮನೆಯಲ್ಲಿಯೇ ಮೂರು ದಿನ ಇಟ್ಟುಕೊಳ್ಳುವುದಿಲ್ಲ ಅಂದ ಮೇಲೆ ಇನ್ಯಾರು ಇಟ್ಟುಕೊಳ್ಳುತ್ತಾರೆ. ಇದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಸಿದ್ದರಾಮಯ್ಯನವರು 100 ವರ್ಷ ಬದುಕಿರಲಿ ಎಂದು ಆಶಿಸುತ್ತೇವೆ. ನಮಗೆ ಹೆಣದ ಅವಶ್ಯಕತೆ ಇಲ್ಲ. ಅವರಿಲ್ಲದೆ ಕೇಂದ್ರದಲ್ಲಿ 4ನೇ ಹಾಗೂ ರಾಜ್ಯದಲ್ಲಿ 3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಸಿದ್ದರಾಮಯ್ಯ ಹತಾಶರಾಗಿ ಹೆಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಬೆಳಗಾವಿ ಜಿಲ್ಲೆಯ 18ಕ್ಕೆ 18 ಕ್ಷೇತ್ರ ಗೆಲ್ಲುವುದೇ ನಮ್ಮ ಗುರಿ: ಸಿ.ಟಿ.ರವಿ
ಸಿದ್ದುಗೆ ಜಿಲೆಬಿ ಕಂಡರಾಗಲ್ಲ: ಸುಳ್ಳು ಹೇಳುವುದು ಅವರ ಹುಟ್ಟು ಗುಣ, ಹಳೇ ಕಾಯಿಲೆ. ಅವರು ಅಧಿಕಾರಕ್ಕಾಗಿ ಅಹಿಂದ ರಾಜಕಾರಣ ಮಾಡಿದರು. ಅಧಿಕಾರಕ್ಕೆ ಬಂದ ಮೇಲೆ ಅಹಿಂದವನ್ನು ಹಿಂದಕ್ಕೆ ದೂಡಿದರು. ಅವರು ಅಧಿಕಾರದಲ್ಲಿದ್ದಾಗ ಜಿಲೆಬಿ ಕಂಡರೆ ಆಗಲ್ಲ ಎಂಬ ಆರೋಪ ಕೂಡ ಇತ್ತು. ಜಿಲೆಬಿ ಅಂದರೆ ತಿನ್ನುವ ಜಿಲೆಬಿ ಅಲ್ಲ. ಗೌಡ, ಲಿಂಗಾಯತ, ಬ್ರಾಹ್ಮಣ ಅನ್ನುತ್ತಾರೆ. ಅವರನ್ನೂ ಕಂಡರಾಗದ ರಾಜಕಾರಣವನ್ನು ಸಿದ್ದರಾಮಯ್ಯ ಮಾಡುತ್ತಿದ್ದರು. ಅದೇನು ಜನರನ್ನು ಪ್ರೀತಿಸುವ ರಾಜಕಾರಣವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಿಂದು ಆದವರು ರಾಮ ಮಂದಿರ ಕಟ್ಟಲು ವಿರೋಧ ಮಾಡಲ್ಲ. ಟಿಪ್ಪು ಜಯಂತಿ ಆಚರಿಸದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸುತ್ತಾರೆ. ಅವರನ್ನು ಹಿಂದೂ ಅಂತ ಹೇಳುವುದರಲ್ಲಿ ಸಂಶಯ ಉಳಿದಿಲ್ಲ. ಆದರೆ, ಅವರ ಅನುಕೂಲಕ್ಕೆ ತಕ್ಕಂತ ನಡವಳಿಕೆ ಇರಬಾರದು ಅಷ್ಟೆ. ಕುಂಕುಮ ಕಂಡರೆ ಆಗದವರು ಯಾವ ಸೀಮೆ ಹಿಂದು. ಕೇಸರಿ ಕಂಡರೆ ಅಲರ್ಜಿ ಇರುವವರು ಎಲ್ಲರನ್ನು ಪ್ರೀತಿಸುವ ಜನರಾ? ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಇದೆ. ಅದನ್ನು ದೂರ ಇಡುತ್ತಾರಾ? ನಮ್ಮ ಎಲ್ಲಾ ಸ್ವಾಮೀಜಿಗಳು ಧರಿಸುವ ಬಟ್ಟೆಯೂ ಕೇಸರಿ. ಅವರಿಗೆ ಸ್ವಾಮೀಜಿಗಳ ಆಶೀರ್ವಾದ ಬೇಕು, ಕೇಸರಿ ಕಂಡರೆ ಆಗಲ್ಲ ಎಂದರೆ ಏನರ್ಥ ಎಂದು ಸಿ.ಟಿ.ರವಿ ಪ್ರಶ್ನಿಸಿದರು.
ಸಿದ್ರಾಮುಲ್ಲಾಖಾನ್ ಅಂತ ಜನರಿಟ್ಟ ಹೆಸರು: ಸಿದ್ದರಾಮಯ್ಯ ಅವರಿಗೆ ನಾನು ಸಿದ್ರಾಮುಲ್ಲಾಖಾನ್ ಅಂತ ಹೆಸರಿಟ್ಟಿಲ್ಲ. ನಾಡಿನ ಜನರು ಅವರಿಗೆ ಇಟ್ಟಿರುವ ಹೆಸರು. ಅವರನ್ನು ಹುಲಿಯಾ ಅಂತಾರೆ ಅದೇನು ಅವರ ತಂದೆ ತಾಯಿ ಇಟ್ಟಿದ್ದರಾ. ನನ್ನನ್ನ ಹಿಂದೂ ಹುಲಿ ಅಂತಾರೆ. ನಮ್ಮಪ್ಪ ಇಟ್ಟಹೆಸರಲ್ಲ ಅದು. ಪ್ರೀತಿಯಿಂದ ಜನ ಇಟ್ಟಿರುವ ಹೆಸರು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ನವರು ಎಸ್‌ಡಿಪಿಐ ಮತ್ತು ಪಿಎಫ್‌ಐಗೆ ಬೆಂಬಲ ಕೊಟ್ಟರು. ಅವರು ಬಿಜೆಪಿ ಶಾಸಕರ ಮೇಲೆ ಕತ್ತಿ ಇಡಲಿಲ್ಲ. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಕತ್ತಿ ಇಟ್ಟರು. ದಲಿತ ಶಾಸಕನ ಮನೆಗೆ ಬೆಂಕಿ ಇಟ್ಟರು. ಡಿಜೆ ಹಳ್ಳಿ - ಕೆಜೆ ಹಳ್ಳಿ ಗ್ಯಾಂಗ್‌ಗೆ ಬೆಂಬಲ ಕೊಡುವುದು ಕಾಂಗ್ರೆಸ್‌ನ ನೀತಿಯಾಗಿದ್ದು, ಆ ನೀತಿ ಮತ್ತೆ ಜಾರಿಯಾಗಿ ವಿಸ್ತರಣೆ ಆಗಬೇಕಾ. ಅದು ಬರಬಾರದು ಎನ್ನುವುದಾದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಶುದ್ಧ ಹಿಂದೂಗಳು ವಿರೋಧ ಮಾಡಲ್ಲ: ರಾಮದೇವರ ಬೆಟ್ಟಎಂದು ನಾವು ಇಟ್ಟಹೆಸರಲ್ಲ. ರಾಮನಗರ ಎಂದು ಹೆಸರು ಬರಲು ಹಿನ್ನೆಲೆ ಏನು. ಇದನ್ನು ಉಳಿಸಬೇಕಾ, ಬೇಡವಾ. ನಮ್ಮ ಮೇಲೆ ಆರೋಪ ಮಾಡುವವರು ರಾಮಮಂದಿರ ನಿರ್ಮಾಣಕ್ಕೆ ಏಕೆ ವಿರೋಧ ಮಾಡುತ್ತಿದ್ದಾರೊ ಗೊತ್ತಿಲ್ಲ ಎಂದರು. ರಾಮ ಮಂದಿರ ನಿರ್ಮಾಣಕ್ಕೆ ಶುದ್ಧ ಹಿಂದೂಗಳು ಯಾರೂ ವಿರೋಧ ಮಾಡುವುದಿಲ್ಲ. ಆದರೆ, ಇವರಾರಯಕೆ ವಿರೋಧ ಮಾಡುತ್ತಿದ್ದಾರೊ ಗೊತ್ತಿಲ್ಲ. ಇಲ್ಲಿಯವರೆಗೆ ರಾಮಮಂದಿರ ಕಟ್ಟಬೇಡಿ ಅಂತ ಯಾರಾದರು ಅವರನ್ನು ಕಟ್ಟು ಹಾಕಿದ್ದರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ವರ್ಗಗಳ ಹಿತರಕ್ಷಣೆ ಬಿಜೆಪಿಯ ಆದ್ಯತೆ: ಸಿ.ಟಿ.ರವಿ
ಇಲ್ಲಿ ಅವರೇ ಅಧಿಕಾರದಲ್ಲಿದ್ದವರು. ರಾಮದೇವರ ಬೆಟ್ಟಅಭಿವೃದ್ಧಿ ಮಾಡಿ ತೋರಿಸಬೇಕಿತ್ತು. ನಾವೂ ಹಿಂದೂಗಳು ಅಂತ ಹೇಳಿಕೊಳ್ಳುವವರು ಇಷ್ಟು ದಿನ ಏನು ಮಾಡುತ್ತಿದ್ದರು ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದರು. ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಚ್ ಸಿಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ವರದರಾಜುಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಿವಮಾದು, ಮಾಜಿ ಅಧ್ಯಕ್ಷ ಮುರಳೀಧರ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಜಿಲ್ಲಾ ಪ್ರಭಾರಿ ವಿಜಯ ಕುಮಾರ್, ಮುಖಂಡರಾದ ಗೌತಮ ಗೌಡ, ರುದ್ರದೇವರು, ಚಂದ್ರಶೇಖರ್ ರೆಡ್ಡಿ ಇತರರಿದ್ದರು.