ಬಂಡೆ ಒಡೆಯುತ್ತೇನೆ, ಹುಲಿಯನ್ನ ಕಾಡಿಗೆ ಅಟ್ಟುತ್ತೇನೆ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಸವಾಲು

By Sathish Kumar KH  |  First Published Feb 12, 2023, 8:21 PM IST

ಅಮೇರಿಕಾದ ಜನ ಮೋದಿಗೆ ಜೈಕಾರ ಹಾಕುತ್ತಾರೆ
ಸಿದ್ದರಾಮಣ್ಣಗೆ ವರುಣಾ ಕ್ಷೇತ್ರದ ಜನರು ದಿಕ್ಕಾರ ಹಾಕ್ತಾರಲ್ಲ
ಟಿಪ್ಪು ಸುಲ್ತಾನ್ ಆರಾಧನೆ ಮಾಡುವವರು ವಿಧಾನಸಭೆಗೆ ಹೋಗಬೇಕಾ?


ಶಿವಮೊಗ್ಗ (ಫೆ.12): ಮುಂಬರುವ ವಿಧಾನಸಭಾ ಚುನಾವನೆಯಲ್ಲಿ ರಾಜ್ಯದಲ್ಲಿ 150 ಸ್ಥಾನ ಗಳಿಸಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈ ವೇಳೆ ಬಂಡೆ ಒಡೆಯುತ್ತೇನೆ, ಹುಲಿಯನನ್ನ ಕಾಡಿಗೆ ಅಟ್ಟುತ್ತೇನೆ. ಈ ಮೂಲಕ ಸಿದ್ದರಾಮಯ್ಯ ಮನೆಗೆ ಹೋಗ್ತಾರೆ. ಜೊತೆಗೆ ರಾಹುಲ್ ಗಾಂಧಿಯವರು ಇಟಲಿಗೆ ಹೋಗುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸವಾಲು ಹಾಕಿದ್ದಾರೆ.

ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದಲ್ಲಿ ನಡೆದ ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ದಿವಾಳಿಯಾಗಿದೆ. ಕಾಂಗ್ರೆಸ್ ನಾಯಕರಿಗೆ ತಳಮಟ್ಟದಲ್ಲಿ ಕೆಲಸ ಕಾರ್ಯಕರ್ತರು ಇಲ್ಲ. ಇನ್ನು ಮುಖ್ಯವಾಗಿ ರಾಹುಲ್ ಗಾಂಧಿಗೆ ಕ್ಷೇತ್ರವಿಲ್ಲ. ಹೀಗಾಗಿ, ಕೇರಳದ ವೈನಾಡುಗೆ ಬರುತ್ತಾರೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಕ್ಷೇತ್ರವಿಲ್ಲ. ಅಮೇರಿಕಾದ ಜನ ಮೋದಿಗೆ ಜೈಕಾರ ಹಾಕ್ತಾರೆ. ಆದರೆ, ಸಿದ್ದರಾಮಣ್ಣಗೆ ವರುಣಾ ಕ್ಷೇತ್ರದ ಜನರು ದಿಕ್ಕಾರ ಹಾಕ್ತಾರಲ್ಲ ಎಂದು ಲೇವಡಿ ಮಾಡಿದರು. 

Tap to resize

Latest Videos

ಸಿ.ಟಿ.ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ?: ಸಿದ್ದರಾಮಯ್ಯ ಗರಂ

ಟಿಪ್ಪು ಬೇಕಾ- ಶಿವಪ್ಪ ನಾಯಕ ಬೇಕಾ.?: ಕಾಂಗ್ರೆಸ್ ಮುಕ್ತ ಭಾರತವಲ್ಲ. ಈಗ ಕರ್ನಾಟಕ  ಕಾಂಗ್ರೆಸ್ ಮುಕ್ತ ರಾಜ್ಯವಾಗುತ್ತದೆ.  ಬಂಡೆ ಒಡೆಯುತ್ತೇನೆ, ಹುಲಿಯನ್ನ ಕಾಡಿಗೆ ಅಟ್ಟುತ್ತೇನೆ.  ಇನ್ನು ರಾಜ್ಯದಲ್ಲಿ ಟಿಪ್ಪು ಬೇಕಾ? ಶಿವಪ್ಪನಾಯಕ ಬೇಕಾ? ಎಂಬುದನ್ನು ನೀವು ತೀರ್ಮಾನಿಸಿ. ಟಿಪ್ಪು ಸುಲ್ತಾನ್ ಆರಾಧನೆ ಮಾಡುವವರು ವಿಧಾನ ಸಭೆಗೆ ಹೋಗಬೇಕಾ? ಟಿಪ್ಪು ಸಿನಿಮಾ ಮಾಡಿದವರು ಹೋದರು. ಟಿಪ್ಪು ಖಡ್ಗವನ್ನು ತಂದವರು ವಿದೇಶಕ್ಕೆ ಹೋದರು. ಕರ್ನಾಟಕದಲ್ಲಿ ಜನಬೆಂಬಲ ಇರುವ ನಾಯಕ ಯಡಿಯೂರಪ್ಪ ಮಾತ್ರ. ಸಿದ್ದರಾಮಯ್ಯ ಅಲ್ಲ ಎಂದು ದೇಹಲಿಯ ನಿರ್ದಶನ ಉಲ್ಲೇಖ ಮಾಡಿದರು.

ನಿದ್ದೆಯಲ್ಲೇ ಇರುವ ಮಾಜಿ ಸಿಎಂ ಕುಮಾರಣ್ಣ: ಇನ್ನು ರಾಜ್ಯದ ಆಡಳಿತದ ವೇಳೆ ನಿದ್ದೆಯಲ್ಲೇ ಇರುವ ಮಾಜಿ ಸಿಎಂ ಕುಮಾರಣ್ಣ, ನಿದ್ದೆ ಬಂದ ಹಾಗೆ ಮಾಡುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಿದ್ದೆಯೇ ಇಲ್ಲದೆ ಕೆಲಸ ಮಾಡುವ ಸಿಎಂ ಯಡಿಯೂರಪ್ಪ ಇವರ ನಡುವೆ ವ್ಯತ್ಯಾಸವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನೈತಿಕ ಸಂಬಂಧ ಮೂಲಕ ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಕುಮಾರಣ್ಣ ವಿಧಾನಸೌಧದಿಂದ ಆಡಳಿತ ನಡೆಸಲಿಲ್ಲ. ತಾಜ್ ಹೋಟೆಲ್ ನಿಂದ ಆಡಳಿತ ನಡೆಸಿದರು. ಸಮ್ಮಿಶ್ರ ಸರ್ಕಾರದ ದುರಾಡಳಿತ ವಿರುದ್ಧ 17 ಶಾಸಕರು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ತಂದರು.

ಪಾಪ, ಎಚ್‌ಡಿಕೆಗೆ ವಯಸ್ಸಾಗಿದೆ ನಿವೃತ್ತಿ ಆದರೆ ಆಗಲಿ ಬಿಡಿ: ಸಿದ್ದರಾಮಯ್ಯ

ಯಡಿಯೂರಪ್ಪ ತಮ್ಮ ಶಿಷ್ಯ ಬೊಮ್ಮಾಯಿ: ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ನೆರೆ ಹಾವಳಿ ಉಂಟಾಯಿತು. ಈ ವೇಳೆ ಮನೆ ಬಿದ್ದವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಿದರು. ಕೋವಿಡ್ ಸಂದರ್ಭದಲ್ಲಿ ಅಸ್ಪತ್ರೆ , ವೈದ್ಯರು, ದಾದಿಯರು, ವೆಂಟಿಲೇಟರ್ ಇರಲಿಲ್ಲ . ಈ ಎಲ್ಲಾ ಸಮಸ್ಯೆ ಎದುರಿಸಿ ಸೌಲಭ್ಯ ಕಲ್ಪಿಸಿದರು. ಸಿದ್ದರಾಮಯ್ಯ ನವರಿಗೆ ಸವಾಲ್ ಹಾಕುತ್ತೇನೆ. ಅಭಿವೃದ್ಧಿ ಪರ ರಾಜಕಾರಣ ಮಾಡಿ. ಯಡಿಯೂರಪ್ಪ ತಮ್ಮ ಶಿಷ್ಯ ಬೊಮ್ಮಾಯಿ ಮೂಲಕ ಕಲ್ಯಾಣ ಕರ್ನಾಟಕ ಮಾಡುವ ಗುರಿ ಹೊಂದಿದ್ದಾರೆ ಎಂದರು.

ಡಿಕೆಶಿ, ಖರ್ಗೆ, ಸಿದ್ದರಾಮಯ್ಯ ಮೂರು ಬಣ: ರಾಜ್ಯದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ. 50 ಸಾವಿರ ಮನೆಗಳಿಗೆ ಹಕ್ಕುಪತ್ರ ನೀಡಿ ಕಂದಾಯ ಗ್ರಾಮ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ನವರು ಪ್ಯಾಂಟ್- ಶರ್ಟ್‌ಗೆ ಹೋಲಿಸಿದ್ದಾರೆ. ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜೊತೆಗೆ ಖರ್ಗೆ ಬಣ ಕೂಡ ಸೇರಿ ಮೂರಾಗಿದೆ. ಖರ್ಗೆ ಮತ್ತು ಪರಮೇಶ್ವರ್ ಅವರನ್ನು ಸೋಲಿಸಿದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನವರೇ ಸೋಲಿಸುತ್ತಾರೆ ಎಂದು ಹೇಳಿದರು. 

click me!