Assembly election: ಈ ಮಹಾನುಭಾವ ಜೆಡಿಎಸ್‌ ಮುಗಿಸಲು ಹೊರಟಿದ್ದ: ಕುಮಾರಸ್ವಾಮಿ ಆಕ್ರೋಶ

By Sathish Kumar KHFirst Published Feb 12, 2023, 5:03 PM IST
Highlights

ಕಳೆದ ಮೂರು ವರ್ಷದಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಾವುಟ ಹಿಡಿದರೆ ಜನ ಬರಲ್ಲ. ಹಾಗಾಗಿ ನನಗೆ ಎಲ್ಲರನ್ನು ಒಂದು ಗೂಡಿಸಲು ಅವಕಾಶ ಕೊಡಿ ಎಂದು ಹೇಳುತ್ತಿದ್ದ ಈ ಮಹಾನುಭಾವ ಜೆಡಿಎಸ್ ಮುಗಿಸಲು ಹೊರಟಿದ್ದರು.

ಹಾಸನ (ಫೆ.12): ಕಳೆದ ಮೂರು ವರ್ಷದಿಂದ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಾವುಟ ಹಿಡಿದರೆ ಜನ ಬರಲ್ಲ. ಹಾಗಾಗಿ ನನಗೆ ಎಲ್ಲರನ್ನು ಒಂದು ಗೂಡಿಸಲು ಅವಕಾಶ ಕೊಡಿ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದ್ದರು. ನಾವು ಕಾದು ಕಾದು ಕುಳಿತಿದ್ದೇವೆ. ಆದರೆ, ಈ ಮಹಾನುಭಾವ ಜೆಡಿಎಸ್ ಮುಗಿಸಲು ಹೊರಟಿದ್ದು, ಈಗ ನಾವು ಆಯೋಜನೆ ಮಾಡಿರುವ ಸಭೆಗೆ ಹೋಗದಂತೆ ಹಣ ಕೊಟ್ಟು ತಡೆಯುತ್ತಿರುವುದು ರಾಜ್ಯ ಚುನಾವಣೆಯಲ್ಲಿಯೇ ಮೊದಲ ಘಟನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ಅರಸೀಕೆರೆಯಲ್ಲಿ ನಡೆಯುತ್ತಿರುವ ಜೆಡಿಎಸ್‌ ಪುನಶ್ಚೇತನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್‌ ಬಾವುಟ ಹಿಡಿದರೆ, ದೇವೇಗೌಡರ ಹೆಸರು ಹೇಳಿದರೆ ಜನರು ಸಮಾವೇಶಕ್ಕೆ ಬರುವುದಿಲ್ಲ. ಚುನಾವಣೆ ವೇಳೆ ಮತವನ್ನೂ ಹಾಕುವುದಿಲ್ಲ ಎಂದು ಹೇಳಿ ನಮ್ಮ ದಿಕ್ಕು ತಪ್ಪಿಸಿದ್ದರು. ನಾವು ಕಾದು ಕಾದು ಕುಳಿತಾಗ ಜನರೇ ಬಂದು ಸಮಾವೇಶ ಮಾಡುವಂತೆ ಕರೆದಿದ್ದಾರೆ. ಇಲ್ಲಿ ಸಮಾವೇಶ ಆಯೋಜನೆ ಮಾಡಿದಾಗ ಜನರು ಬರಲು ಸಿದ್ಧರಿದ್ದರೂ ಅವರಿಗೆ ಹಣನ್ನು ಕೊಟ್ಟು ತಡೆಯಲು ಮುಂದಾಗಿದ್ದಾರೆ. ಇಂತಹ ಚಿತ್ರಣವನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದರು.

Latest Videos

ಪಾಪ, ಎಚ್‌ಡಿಕೆಗೆ ವಯಸ್ಸಾಗಿದೆ ನಿವೃತ್ತಿ ಆದರೆ ಆಗಲಿ ಬಿಡಿ: ಸಿದ್ದರಾಮಯ್ಯ

ಹಣವನ್ನು ಹಂಚಿ ಸಭೆಗೆ ಹೋಗುವುದನ್ನು ತಡೆದರು: ನಾನು ಉತ್ತರ ಕರ್ನಾಟಕದಲ್ಲಿ ಪಂಚರತ್ನ ಯಾತ್ರೆಯಲ್ಲಿದ್ದಾಗ ಅಲ್ಲಿಗೂ ಬಂದು ಜನರು ಭೇಟಿ ಮಾಡಿ ಸಮಾವೇಶ ಮಾಡುವುದಕ್ಕೆ ಅನುಮತಿ ಪಡೆದು ಈ ಬೃಹತ್ ಸಮಾವೇಶ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಹೊಗದಂತೆ ಹಣ ಹಂಚಿದ್ದು ಈ ರಾಜ್ಯದಲ್ಲಿಯೇ ಮೊದಲು ಆಗಿದೆ. ಆದರೆ, ನಮ್ಮ ಕೊನೆಯುಸಿರು ಇರೊವರೆಗೆ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ತರಲ್ಲ. ನನಗೆ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದ್ದರೂ ನಿತ್ಯ18 ಗಂಟೆ ಹೋರಾಟ ಮಾಡುತ್ತಿದ್ದೇನೆ. ಇದಕ್ಕೆ ಜನರ ಪ್ರೀತಿ ವಿಶ್ವಾಸ ಕಾರಣ. ನಾನು ಅರಸೀಕೆರೆ ಜನತೆ ಮಾತ್ರ ಅಲ್ಲ ನಾಡಿನ ಜನತೆಗೆ ಹೇಳುತ್ತೇನೆ ಎಂದು ಹೇಳಿದರು.

ಸೋಲು- ಗೆಲುವು ಇದ್ದರೂ ವಿಶ್ವಾಸಕ್ಕೆ ಕೊರತೆಯಾಗಿಲ್ಲ: ನಮ್ಮ ತಂದೆ ಪಕ್ಷ ಹಾಗೂ ರೈತರ ಬಗ್ಗೆ ಚಿಂತನೆ ಮಾಡುತ್ತಾರೆ. ಅವರ ಭಾವನೆಗಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ನಮ್ಮ ತಂದೆಯವರನ್ನ ಗೆಲ್ಲಿಸಿದಿರಿ, ಸೋಲಿಸಿದಿರಿ. ಆದರೆ ಪ್ರೀತಿ- ವಿಶ್ವಾಸ ಮಾತ್ರ ಎಂದಿಗೂ ಕೊರತೆ ಮಾಡಿಲ್ಲ. ಹಾಸನಾಂಬೆಯ ಶಕ್ತಿಯಿಂದ ನಾನು ಕುಮಾರಸ್ವಾಮಿಯಾಗಿ ಗುರುತಿಸಿಕೊಂಡಿದ್ದೇನೆ. 2004 ರ ಚುನಾವಣೆಯಲ್ಲಿ ಗಂಡಸಿ ಕ್ಷೇತ್ರದಲ್ಲಿ ರೇವಣ್ಣ, ದೇವೇಗೌಡರ ಸಹಕಾರದಲ್ಲಿ ಕೇವಲ 14 ಮತಗಳ ಅಂತರದ ಸೋಲಾಯಿತು. ಆ ವ್ಯಕ್ತಿಗೆ ನಾನು ಮುಖ್ಯಮಂತ್ರಿ ಆದಾಗ ಅವರು ಮುಂದಿನ ಶಾಸಕರಾಗಲು ಅವರ ಶಕ್ತಿಯನ್ನು ಧಾರೆ ಎರೆದಿದ್ದಾರೆ. ಅವರು ಕಾಂಟ್ರಾಕ್ಟ್ ಮಾಡಲು, ಎಷ್ಟು ಅವಕಾಶ ಕೊಟ್ಟೆವು. ರಾಮನಗರದಲ್ಲಿ ಕೆಲಸ ಮಾಡಿದಾಗಲು ನಾವು ಮಾತನಾಡಲಿಲ್ಲ ಎಂದು ಮಾಹಿತಿ ನೀಡಿದರು.

ಎಚ್‌.ಡಿ.ಕುಮಾರಸ್ವಾಮಿಯಿಂದ ಜಾತಿಗಳ ನಡುವೆ ವಿಷಬೀಜ: ಸಚಿವ ಶ್ರೀರಾಮುಲು

ಚುನಾವಣೆ ಗೆಲ್ಲಲು ಕಾಲು ಹಿಡಿಯುತ್ತಾರೆ: ಒಂದೊಂದು ಚುನಾವಣೆಯಲ್ಲಿ ಅವರು ಯಾವ ರೀತಿಯಲ್ಲಿ ನಡೆದುಕೊಂಡರು ಎಂದು ಗೊತ್ತಿದೆ. ಚುನಾವಣೆ ಗೆಲ್ಲಲು ಯಾರ ಕಾಲು ಬೇಕಿದ್ದರೂ ಹಿಡಿಯುತ್ತಾರೆ. ಏನು ಬೇಕಿದ್ದರೂ ಮಾಡುತ್ತಾರೆ. ಅವರೇ ಹೇಳಿದ ಹಾಗೆ ನೆನ್ನೆಯು ರೇವಣ್ಣ, ಶಿವಲಿಂಗೇಗೌಡ ಅವರಿಗೆ ದುಡುಕದಂತೆ ಹೇಳಿದಾರೆ. ಇದು ರೇವಣ್ಣ ಅವರ ದೊಡ್ಡತನ ತೋರಿಸುತ್ತದೆ. ನಾನೇ ಈ ಬಗ್ಗೆ ಕೇಳಿದಾಗ ಅಣ್ಣ, ಅರಸೀಕೆರೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಅಂದಿದ್ದರು. ರಾಜಕೀಯ ಮಾಡಲಿ ತೊಂದರೆ ಇಲ್ಲ. ಹಾಗಿದ್ದರೆ ಇವರಿಗೆ ದೇವೇಗೌಡರು, ರೇವಣ್ಣ ಶಕ್ತಿ ತುಂಬಿಲ್ಲವೆ ಎಂದು ಕಿಡಿಕಾರಿದರು.

ದೇವೇಗೌಡರ ಹೆಸರು ಹೇಳಿದರೆ ಮತ ಬರಲ್ಲ: ನಾನು ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ. ಒಕ್ಕಲಿಗ ಮತಗಳು ಕಡಿಮೆ ಇವೆ. ಬೇರೆ ಜಾತಿಗಳನ್ನು ಒಗ್ಗೂಡಿಸಬೇಕು ಎಂದು ಹೇಳುತ್ತಾರೆ. ಅದಕ್ಕೆ ನಮ್ಮ ಸಹಮತವು ಇದೆ. ಆದರೆ, ಒಂದು ಜಾತಿಗೆ ಸೀಮಿತವಾಗಿ ಯಾರು ಕೆಲಸ ಮಾಡಬಾರದು. ಈ ವ್ಯಕ್ತಿ ಗೆದ್ದು ಈಗ ಅವರಿಗೆ ದೇವೇಗೌಡರ ಹೆಸರು ಹೇಳಿದರೆ ಮತ ಬರಲ್ಲ ಅಂತಾರೆ. ದೇವೇಗೌಡರು, ಕುಮಾರಸ್ವಾಮಿ ಅವರ ಹೆಸರು ಹೇಳಿದರೆ ಮತ ಹಾಕುತ್ತಾರಾ ಎಂದು ಹೇಳುತ್ತಾರೆ. ಹೌದು ನಮ್ಮಿಂದ ನೀವು ಗೆದ್ದಿದಿರಾ ಎಂದು ಹೇಳಿಲ್ಲ. ನಿಮ್ಮ ಗೆಲುವಿಗೆ ನಮ್ಮ ಸಹಕಾರ ಇರಲಿಲ್ಲವೇ ಎಂದು ಗುಡುಗಿದರು. 

ರಾಣಿ ಅಬ್ಬಕ್ಕ- ಟಿಪ್ಪು ಇಬ್ಬರೂ ಬೇಕು: ನಿನ್ನೆ ಅಮಿತ್ ಶಾ ಒಂದು ಮಾತು ಹೇಳಿದ್ದಾರೆ. ಟಿಪ್ಪು ಓಲೈಕೆ ಮಾಡುವ ಜೆಡಿಎಸ್- ಕಾಂಗ್ರೆಸ್ ಬೇಕೋ ಅಥವಾ ರಾಣಿ ಅಬ್ಬಕ್ಕನನ್ನು ಓಲೈಸುವ ಬಿಜೆಪಿ ಬೇಕೋ ಅಂತಾ ಕೇಳಿದ್ದಾರೆ. ನಮಗೆ ರಾಣಿ ಅಬ್ಬಕ್ಕ ಕೂಡಾ ಬೇಕು, ಟಿಪ್ಪು ಕೂಡಾ ಬೇಕು. ಶೃಂಗೇರಿ ಚಂದ್ರಮೌಳೇಶ್ವರ ದೇವಾಲಯದ ಮೇಲೆ ಪೇಶ್ವೆಗಳು ದಾಳಿ ಮಾಡಿದ್ದರು. ಆಗ ಅದನ್ನು ಕಾಪಾಡಿದ್ದು ಟಿಪ್ಪು. ಇದನ್ನು ಯಾರೂ ಹೇಳಲ್ಲ ಎಂದರು.

click me!