ನಮ್ಮ ಕ್ಷೇತ್ರದಲ್ಲಿ ನಾನು ಯಾರಿಗೂ ಗಿಫ್ಟ್ ಕೊಟ್ಟಿಲ್ಲ. ಪ್ರತಿವರ್ಷ ಗ್ರಾಮೀಣ ಉತ್ಸವ ಆಯೋಜನೆ ಮಾಡುತ್ತಾ ಮಹಿಳೆಯರಿಗೆ ಹರಿಶಿಣ, ಕುಂಕುಮ ಕೊಡುವ ಸಂಪ್ರದಾಯ ಬೆಳೆಸಿಕೊಂಡಿದ್ದು, ಅದನ್ನೇ ಮುಂದುವರೆಸಿಕೊಂಡು ಬಂದಿದ್ದೇನೆ.
ಬೆಳಗಾವಿ (ಜ.21): ನಮ್ಮ ಕ್ಷೇತ್ರದಲ್ಲಿ ನಾನು ಯಾರಿಗೂ ಗಿಫ್ಟ್ ಕೊಟ್ಟಿಲ್ಲ. ಪ್ರತಿವರ್ಷ ಗ್ರಾಮೀಣ ಉತ್ಸವ ಆಯೋಜನೆ ಮಾಡುತ್ತಾ ಮಹಿಳೆಯರಿಗೆ ಹರಿಶಿಣ, ಕುಂಕುಮ ಕೊಡುವ ಸಂಪ್ರದಾಯ ಬೆಳೆಸಿಕೊಂಡಿದ್ದು, ಅದನ್ನೇ ಮುಂದುವರೆಸಿಕೊಂಡು ಬಂದಿದ್ದೇನೆ. ಒಂದು ವೇಳೆ ಗಿಫ್ಟ್ ಕೊಡುವುದಾಗಿದ್ದರೆ ಪುರುಷ ಮತದಾರರಿಗೂ ಕೊಡುತ್ತಿದ್ದೆನು ಎಂದು ಶಾಸಕ ರಮೇಶ್ ಜಾರಕಿಹೊಳಿ ಆರೋಪಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಮಾಡಿದ್ದರೆ ಗಿಫ್ಟ್ ಏಕೆ ಹಂಚುತ್ತಿದ್ದೀರಿ ಎಂದು ಜಾರಕಿಹೊಳಿ ಅವರು ಪ್ರಶ್ನೆ ಮಾಡಿದ್ದಾರೆ. ಆದರೆ, ಇದಕ್ಕೆ ನಾನು ಇನ್ನೊಂದು ಸಂದರ್ಭದಲ್ಲಿ ಉತ್ತರ ಕೊಡುತ್ತೇನೆ. ಆದರೆ, ಈಗನಾನು ಯಾರಿಗೂ ಗಿಫ್ಟ್ ಅಂತಾ ಏನು ಕೊಡ್ತಿಲ್ಲ. ನಾನು ಮುಂಚೆಯಿಂದ ರಂಗೋಲಿ, ಹಳದಿ ಕುಂಕುಮ ಕಾರ್ಯಕ್ರಮ ಮಾಡ್ತಿದೀನಿ. ಒಬ್ಬ ಮಹಿಳೆಯಾಗಿ ಮಹಿಳೆಯರ ಜೊತೆ ಪ್ರೀತಿ ವಿಶ್ವಾಸ ಬಾಂಧವ್ಯ ಅಂತಾ ಮಾಡಿದೀನಿ. ಗಿಫ್ಟ್ ಅಂತಾ ಆಗಿದ್ರೆ ನಾನು ಪುರುಷರಿಗೂ ಕೊಡಬೇಕಾಗಿತ್ತಲ್ವಾ? ಮತದಾರರು ಕೇವಲ ಮಹಿಳೆಯರಷ್ಟೇ ಇಲ್ಲ ಪುರುಷರು ಇದ್ದಾರೆ. ಆದರೆ ಒಬ್ಬಳು ಮನೆ ಮಗಳು ಅಂತಾ ನಾನಿವತ್ತು ಕರೆಸಿಕೊಳ್ಳುತ್ತೇನೆ. ಕ್ಷೇತ್ರದಲ್ಲಿ ನನ್ನ ಗಿಫ್ಟ್ ಅಷ್ಟೇ ಏಕೆ ನೋಡ್ತೀರಾ.? ನಾನು ಮಾಡಿದ ಒಳ್ಳೆಯ ಕಾರ್ಯಗಳನ್ನು ನೋಡಿ. ಗುಡಿಗಳನ್ನು, ಜೈನ ಬಸದಿಗಳನ್ನು ಕಟ್ಟಿಸಿದ್ದು ನೋಡಿ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Belagavi: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಸಮಾವೇಶ
ಮಹಿಳೆಯರ ಮಾತಿಗೆ ನನ್ನ ಧನ್ಯವಾದ: ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರಾದ ಮೇಲೆ ಅವರ ಚೇಲಾಗಳಿಂದ ಬಾರ್, ಕ್ಲಬ್‌ಗಳು ಜಾಸ್ತಿ ಆಗಿವೆ ಎಂದು ಹೇಳುತ್ತಿದ್ದಾರೆ. ಮೇಲಿನಿಂದ ಕೆಳಗಿನವರೆಗೂ ಅವರದ್ದೇ ಸರ್ಕಾರಗಳಿವೆ ಈ ಬಗ್ಗೆ ಅವರೇ ಅನುಮತಿ ನೀಡಿದ್ದು, ಸಮೀಕ್ಷೆ ಮಾಡಲಿ. ಇನ್ನು ರಮೇಶ್ ಜಾರಕಿಹೊಳಿ ಅವರ ಸಮಾವೇಶದಲ್ಲಿ ಮಹಿಳೆಯರು ನನ್ನ ಬಗ್ಗೆ ಧನಾತ್ಮಕ ಮಾತುಗಳನ್ನು ಹೇಳಿದ್ದಾರೆ. ನನ್ನ ಕ್ಷೇತ್ರಕ್ಕೆ ನನ್ನ ಕುಟುಂಬಕ್ಕೆ ನಾನು ಏನು ಅಂತಾ ಗೊತ್ತಿದೆ. ನಾನು ಏನು ಕೆಲಸ ಮಾಡಿದ್ದೀನಿ ಗೊತ್ತಿದೆ. ಪಾಪ ನನ್ನ ಕೆಲಸ ನೆನೆಸಿಕೊಂಡ ಮಹಿಳೆಯರಿಗೆ ಧನ್ಯವಾದ ಹೇಳುವೆ ಎಂದು ತಿಳಿಸಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಯಾರೂ ಇರಲಿಲ್ಲ: ಈಗ ನಾನು ಗಿಫ್ಟ್ ಕೊಡುತ್ತಿದ್ದೇನೆ ಎಂದು ಹೇಳಲು ಬಂದಿರುವ ಇವರು ಕೋವಿಡ್ ಸಂದರ್ಭದಲ್ಲಿ ಇಡೀ ಕ್ಷೇತ್ರಕ್ಕೆ ಕಿಟ್ ಕೊಟ್ಟಿರುವುದನ್ನು ಏಕೆ ನೋಡಲಿಲ್ಲ. ಕೋವಿಡ್ ವೇಳೆ ಇವರೆಲ್ಲಾ ಯಾರು ಬಂದಿದ್ದರು. ಈಗ ಫ್ಲೆಕ್ಸ್ ಹಾಕಿ ನನ್ನ ಬಗ್ಗೆ ಮಾತನಾಡ್ತಾ ಇದ್ದಾರಲ್ಲ ಇವರಿಗೆ ಏನು ನೈತಿಕತೆ ಇದೆಯೇ.? ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇವರು ಎಲ್ಲಿದ್ದರು? ಯಾರಿಗೆ ಸಹಾಯ ಮಾಡಿದ್ದಾರೆ ತಿಳಿದುಕೊಳ್ಳಬೇಕು. ಆಸ್ಪತ್ರೆಯಲ್ಲಿದ್ದ ರೋಗಿಗಳ ಸಹಾಯಕ್ಕೆ ಬಂದಿದ್ದರಾ.? ಎಷ್ಟು ಆಕ್ಸಿಜನ್ ಮತ್ತು ಎಷ್ಟು ರೆಮ್ಡಿಸೀವಿಯರ್ ಇಂಜೆಕ್ಷನ್ ಕೊಡಿಸಿದ್ದಾರೆ. ಪ್ರವಾಹ ವೇಳೆ ನನ್ನ ಕ್ಷೇತ್ರದಲ್ಲಿ ಮನೆಗಳು ಬಿದ್ದಾಗ ಎಲ್ಲಿ ಇದ್ದರು. ಒಳ್ಳೆಯ ಕೆಲಸ ಏಕೆ ನೆನೆಸಿಕೊಳ್ಳುತ್ತಿದ್ದ ಎಂದು ಕಿಡಿಕಾರಿದರು.
ಅಭಿವೃದ್ಧಿ ಮಾಡಿದ್ದರೆ ಪ್ಯಾಕೇಜ್ ಘೋಷಣೆ ಏಕೆ? : ಚುನಾವಣೆ ಮುಂಚೆ ರಾಜ್ಯದಲ್ಲಿ ಅಭಿವೃದ್ಧಿ ಮಾಡಿದ್ದರೆ, ಈಗ ಚುನಾವಣೆ ಹೊತ್ತಿನಲ್ಲಿ ಪ್ಯಾಕೇಜ್ ಏಕೆ ಘೋಷಣೆ ಮಾಡಡುತ್ತಾರೆ. ಒಂದು ಲಕ್ಷ ಕೋಟಿ, ಎರಡು ಲಕ್ಷ ಕೋಟಿ ಪ್ಯಾಕೇಜ್ ಏಕೆ ಘೋಷಣೆ ಮಾಡುತ್ತಿದ್ದಾರೆ.? ಬಿಹಾರ, ಪಶ್ಚಿಮ ಬಂಗಾಳ, ಗುಜರಾತ್‌ನಲ್ಲಿ ಏಕೆ ಘೋಷಣೆ ಮಾಡಿದರು. ಆ ಬಗ್ಗೆ ಚರ್ಚೆ ಕೂತರೆ ಸಾವಿರಾರು ವಿಚಾರ ಬರುತ್ತವೆ. ನಾನು ಬಹಳ ಶಾಂತ ರೀತಿಯಿಂದ ಚುನಾವಣೆ ಮಾಡಲು ಬಯಸುವೆನು. ಕ್ಷೇತ್ರದ ಜನ ನನ್ನ ಮನೆ ಮಗಳು ಅಂತಾ ಒಪ್ಪಿಕೊಂಡಿದ್ದಾರೆ. ನಾನು ಮಾಡಿದ ಅಭಿವೃದ್ಧಿ ನೋಡಿ ಅಪ್ಪಿಕೊಂಡಿದ್ದಾರೆ. ಆ ಒಂದು ದೃಷ್ಟಿಕೋನದಲ್ಲಿ ನಾನು ಎಲೆಕ್ಷನ್ ಹೋಗಬೇಕು ಅಂತಿದೀನಿ. ಈ ಮಾತಿನ ಬಗ್ಗೆ ರಿಯ್ಯಾಕ್ಟ್ ಮಾಡಲು ಟೈಮೂ ಇಲ್ಲ, ನಾನು ಡೈವರ್ಟ್ ಮಾಡಕ್ಕೂ ಇಚ್ಚೆ ಪಡಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ: ಶಾಸಕಿ ಹೆಬ್ಬಾಳಕರ ಎದುರೇ ತೆಂಗಿನಕಾಯಿ ಒಡೆದು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು
ನನ್ನನ್ನು ಗೆಲ್ಲಿಸಲು ಲಕ್ಷ ಜನರಿದ್ದಾರೆ: ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಖರ್ಚು ಮಾಡಿದ್ದಕ್ಕಿಂತ ಹತ್ತು ಕೋಟಿ ರೂ. ಹೆಚ್ಚು ಖರ್ಚು ಮಾಡ್ತೀನಿ ಎಂದು ರಮೇಶ್ ಜಾರಕಿಹೊಳಿ ಹೇಳಿರುವುದರ ಬಗ್ಗೆ ನಾನು ರಿಯ್ಯಾಕ್ಟ್ ಮಾಡಲ್ಲ. ಚುನಾವಣೆಗೆ ನಿಲ್ಲೋರು ಯಾರೇ ಇದ್ದರೂ ಅವರು ಶಕ್ತಿಶಾಲಿ. ಎದುರಾಳಿ ಯಾರಾದರೂ ಆಗಲೇಬೇಕಲ್ಲ, ನಾಮಪತ್ರ ತುಂಬಲೇಬೇಕಲ್ಲ. ನಾನು ಇವರೇ ಇವರೇ ಅಂತಾ ವೈಯಕ್ತಿಕವಾಗಿ ಎದುರಾಳಿ ಅಂತಾ ಹೇಳಲ್ಲ. ನಾನು ಗೆಲ್ಲೋಕೆ ಚುನಾವಣೆ ನಿಲ್ಲುತ್ತೇನೆ. ಸೋಲಿಸಲು ಪ್ರಯತ್ನ ಮಾಡೋರು ಸೋಲಿಸೋಕೆ ಪ್ರಯತ್ನ ಮಾಡ್ತಾರೆ. ಗೆಲ್ಲಿಸೋಕೆ ಲಕ್ಷ ಜನ ಪ್ರಯತ್ನ ಮಾಡುತ್ತಿದ್ದಾರೆ ಎಮದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.