ಬಂಗಾರಪ್ಪ ಅವರಿಂದ ಸ್ವಾಭಿಮಾನದ ರಾಜಕಾರಣ ಕಲಿತಿರುವೆ: ಮಧು ಬಂಗಾರಪ್ಪ

By Kannadaprabha News  |  First Published Apr 18, 2023, 2:20 AM IST

ತಂದೆ ಬಂಗಾರಪ್ಪ ಅವರಿಂದ ಸ್ವಾಭಿಮಾನದ ರಾಜಕಾರಣ ಕಲಿತಿರುವ ನನಗೆ ಕೊಡುವ ಸಂಸ್ಕೃತಿಯನ್ನು ಕಲಿಸಿದ್ದಾರೆಯೇ ವಿನಃ, ಬೇಡುವ ಸಂಸ್ಕೃತಿ ಕಲಿಸಿಲ್ಲ. ತಾವು ಎಂದಿಗೂ ಜನಪರವಾದ ಕೆಲಸಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ವಿರೋಧಿಗಳಿಗೆ ತಾಲೂಕಿನ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು. 


ಸೊರಬ (ಏ.18): ತಂದೆ ಬಂಗಾರಪ್ಪ ಅವರಿಂದ ಸ್ವಾಭಿಮಾನದ ರಾಜಕಾರಣ ಕಲಿತಿರುವ ನನಗೆ ಕೊಡುವ ಸಂಸ್ಕೃತಿಯನ್ನು ಕಲಿಸಿದ್ದಾರೆಯೇ ವಿನಃ, ಬೇಡುವ ಸಂಸ್ಕೃತಿ ಕಲಿಸಿಲ್ಲ. ತಾವು ಎಂದಿಗೂ ಜನಪರವಾದ ಕೆಲಸಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ವಿರೋಧಿಗಳಿಗೆ ತಾಲೂಕಿನ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು. ಸೋಮವಾರ ಸೊರಬ ಪಟ್ಟಣದಲ್ಲಿ ವಿಧಾನಸಭಾ ಚುನಾವಣೆಗೆ ಸೊರಬ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. 

ಜನಪರ ಕಾಳಜಿ, ನಿರಂತರ ಜನ ಸಂಪರ್ಕ ಹಾಗೂ ಉತ್ತಮ ಬಾಂಧವ್ಯ ಬಂಗಾರಪ್ಪ ಅವರು ಹಾಕಿಕೊಟ್ಟಹಾದಿಯಾಗಿದ್ದು, ಅದೇ ಹಾದಿಯಲ್ಲಿ ಸಾಗುತ್ತಿರುವ ನಾನು ರಾಜ್ಯದಲ್ಲಿ ಒಬ್ಬ ನಾಯಕನಾಗಿ ಬೆಳೆಯಲು ಉತ್ತಮ ಅವಕಾಶ ಲಭಿಸಿದೆ. ಇದಕ್ಕೆಲ್ಲ ಕಾರಣ ತಾಲ್ಲೂಕಿನ ಮತದಾರರು. ಅವರಿಗೆ ನಾನು ಹಾಗೂ ನನ್ನ ಕುಟುಂಬ ಚಿರಋುಣಿ ಎಂದ ಅವರು, ಇಂದು ಎಸ್‌. ಬಂಗಾರಪ್ಪನವರೇ ನಾಮಪತ್ರ ಸಲ್ಲಿಸಿದಂತಹ ಅನುಭವ ನನಗಾಗಿದೆ ಎಂದರು. ಈ ಹಿಂದೆ ನೀರಾವರಿಗಾಗಿ ಮತ್ತು ಬಗರ್‌ಹುಕುಂ ಸಾಗುವಳಿದಾರರ ಹಕ್ಕುಪತ್ರಕ್ಕಾಗಿ ಪಾದಯಾತ್ರೆ ಮಾಡಿದ್ದೇನೆ. ಕಚವಿ ಏತ ನೀರಾವರಿ ಯೋಜನೆಗೆ .16 ಕೋಟಿ ಮಂಜೂರು ಮಾಡಿಸಿದ್ದೇನೆ. 

Tap to resize

Latest Videos

ಸಚಿವೆ ಶಶಿಕಲಾ ಜೊಲ್ಲೆ ಆಸ್ತಿ 68.58 ಕೋಟಿ: ನಿಪ್ಪಾಣಿ ಶಾಸಕಿಯ ವರ್ಷದ ಆದಾಯ ಎಷ್ಟು ಗೊತ್ತಾ?

ನನ್ನ ಅವಧಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಬಗರ್‌ಹುಕುಂ ಹಕ್ಕುಪತ್ರಗಳನ್ನು ವಿತರಿಸಿ ಹೆಗ್ಗಳಿಕೆ ಇದೆ. ಡಬಲ್‌ ಎಂಜಿನ್‌ ಸರ್ಕಾರದಿಂದ ರೋಸಿ ಹೋಗಿರುವ ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಲಕ್ಷ್ಮಣ ಸವದಿ ಮತ್ತು ಜಗದೀಶ್‌ ಶೆಟ್ಟರ್‌ ಪಕ್ಷ ಸೇರ್ಪಡೆಯಿಂದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ. ರಾಹುಲ್‌ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿದ ಫಲದಿಂದಾಗಿ ಕಾಂಗ್ರೆಸ್‌ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಪಡೆಯವುದರ ಮೂಲಕ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಬೆಳಗ್ಗೆ 12 ಗಂಟೆಗೆ ಶ್ರೀ ರಂಗನಾಥಸ್ವಾಮಿ ದೇವಾಲಯದಿಂದ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಸುಮಾರು 10 ಸಾವಿರಕ್ಕೂ ಹೆಚ್ಚಿನ ಕಾಂಗ್ರಸ್‌ ಕಾರ್ಯಕರ್ತರು ಮುಖಂಡರು ಪಾಲ್ಗೊಂಡು, ಮಧು ಬಂಗಾರಪ್ಪ ಅವರ ಉಮೇದುದಾರಿಕೆಗೆ ಸಾಥ್‌ ನೀಡಿದರು. ಮೆರವಣಿಗೆಯಲ್ಲಿ ಸಹೋದರಿ ಸುಜಾತಾ ತಿಲಕ್‌ಕುಮಾರ್‌, ಪತ್ನಿ ಅನಿತಾ ಮಧು ಬಂಗಾರಪ್ಪ, ಪುತ್ರ ಸೂರ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಮುಖಂಡರಾದ ತಬಲಿ ಬಂಗಾರಪ್ಪ, ಎಚ್‌.ಗಣಪತಿ, ಕೆ. ಮಂಜುನಾಥ, ಕೆಪಿ ರುದ್ರಗೌಡ, ಶಿವಲಿಂಗೇಗೌಡ, ಸದಾನಂದಗೌಡ, ಸುರೇಶ್‌ ಹಾವಣ್ಣನವರ್‌, ಎಂ.ಡಿ.ಶೇಖರ್‌, ನಾಗಪ್ಪ ಮಾಸ್ತರ್‌, ಕೆ.ವಿ. ಗೌಡ, ಸುಜಾತ ಜೋತಾಡಿ, ತಾರಾ ಸತೀಶ್‌ ಮೊದಲಾದವರು ಇದ್ದರು.

ಮಧು 69.50 ಕೋಟಿ ರು. ಒಡೆಯ: ಮಾಜಿ ಶಾಸಕ ಮಧು ಬಂಗಾರಪ್ಪ ಅವರು .69.50 ಕೋಟಿ ಆಸ್ತಿ ಹೊಂದಿದ್ದು, 2018ರ ಬಳಿಕ ಇಲ್ಲಿವರೆಗೆ 3 ಕೋಟಿ ಆಸ್ತಿ ಹೆಚ್ಚಳವಾಗಿದೆ. ನಗದು, ವಾಹನ, ಚಿನ್ನಾಭರಣ ಚರಾಸ್ತಿ 27.80 ಕೋಟಿ, ಮನೆ, ನಿವೇಶನ, ತೋಟ, ಜಮೀನು ಸೇರಿ 41.50 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಇವರು ಹಿಂದಿನ ಚುನಾವಣೆಯಲ್ಲಿ 66 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಆದರೆ, ಇವರ ಸಾಲದ ಮೊತ್ತ 16.38 ಕೋಟಿಯಿಂದ .26 ಕೋಟಿಗಳಿಗೆ ಹೆಚ್ಚಾಗಿದೆ. ಇವರ ಬಳಿ 1.37 ಕೋಟಿ ಇದೆ. 3.75 ಕೆ.ಜಿ. ಚಿನ್ನಾಭರಣ, 25 ಕೆಜಿ ಬೆಳ್ಳಿ ಆಭರಣಗಳು ಇವೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ 10 ಸೀಟು ಹೆಚ್ಚು ಗೆಲುವು: ಡಿ.ಕೆ.ಶಿವಕುಮಾರ್

ತಂದೆ ಎಸ್‌. ಬಂಗಾರಪ್ಪ ಅವರಂತೆಯೇ ನನ್ನ ತಮ್ಮ ಮಧು ಬಂಗಾರಪ್ಪ ಸದಾ ರೈತರ ಮತ್ತು ಜನಪರ ಕಾಳಜಿಯುಳ್ಳವರಾಗಿದ್ದಾರೆ. ರೈತರ ಸಂಕಷ್ಟದ ಸಮಯದಲ್ಲಿ ಹೋರಾಟದ ಮೂಲಕ ನ್ಯಾಯ ಒದಗಿಸಲು ಎಂಥಹಾ ಹೋರಾಟಕ್ಕೂ ಸಿದ್ಧರಿರುವ ಮಧು ಬಂಗಾರಪ್ಪ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಜನತೆ ಬೆಂಬಲ ಸೂಚಿಸುವ ಮೂಲಕ ಕ್ಷೇತ್ರದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಜಾರಿಗೆ ತರಲು ಮುಂದಾಗಬೇಕು. ಶಿವರಾಜ್‌ಕುಮಾರ್‌ ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ
- ಗೀತಾ ಶಿವರಾಜ್‌ಕುಮಾರ್‌, ಸಹೋದರಿ

click me!